ಬೆಟ್ಟದ ಹೂವಿಗೆ ಮಾರು ಹೋದ ಪ್ರೇಕ್ಷಕರು
ಕನ್ನಡ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಧಾರಾವಾಹಿಗಳ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಕೂಡ ನಡೆಯುತ್ತಿವೆ. ಹಾಗಾಗಿ ಯಾವ ರೀತಿ ವಿಭಿನ್ನವಾದ ಧಾರಾವಾಹಿಗಳನ್ನು ಪ್ರೇಕ್ಷಕರ ಮುಂದಿಡಬಹುದು ಎಂದು ಯೋಚಿಸಿ ಪ್ರೇಕ್ಷಕರ ಮನಸ್ಸಿಗೆ ಮುಟ್ಟುವ ಧಾರಾವಾಹಿಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿವೆ ವಾಹಿನಿಗಳು. ಇತ್ತೀಚಿನ ದಿನಗಳಲ್ಲಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಧಾರಾವಾಹಿಗಳಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂವು ಧಾರಾವಾಹಿ ಕೂಡ ಒಂದು.
ಬೆಟ್ಟದ ಹೂವು ಧಾರಾವಾಹಿಯಲ್ಲಿ ನಾಯಕಿ ಹೂವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಶ್ರೀವಿದ್ಯಾ. ಮೂಲತಃ ಶೃಂಗೇರಿಯವರಾದ ಶ್ರೀವಿದ್ಯಾ ಇದೀಗ ಹೂವಿಯಾಗಿ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯಗೆದ್ದಿದ್ದಾರೆ. ಸತೀಶ್ ಕೃಷ್ಣ ಧಾರಾವಾಹಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ನಾಗೇಂದ್ರ ಪ್ರಸಾದ್ ಟೈಟಲ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪ್ರವೀಣ್.ಡಿ.ರಾವ್ ಸಂಗೀತ ನೀಡಿದ್ದಾರೆ. ಶ್ರೀವಿದ್ಯಾ, ದರ್ಶಕ್, ಪ್ರಕೃತಿ ಪ್ರಸಾದ್, ಶ್ರೀನಿವಾಸ್ ಪ್ರಭು, ಪದ್ಮಜಾ ರಾವ್, ಪ್ರವೀಣ್.ಡಿ.ರಾವ್, ಸ್ವಾತಿ, ಸುನೇತ್ರ ಪಂಡಿತ್, ಅಂಬರೀಷ್ ಸಾರಂಗಿ, ನಾರಾಯಣ ಸ್ವಾಮಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಕಥಾ ನಾಯಕ ರಾಹುಲ್ ಒಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗ. 7 ವರ್ಷಗಳಿಂದ ಮಾಲಿನಿ ಎಂಬ ಹುಡುಗಿಯನ್ನು ಇಷ್ಟಪಡುತ್ತಿರುತ್ತಾನೆ. ಆ ಹುಡುಗಿ ತುಂಬಾನೆ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದು, ಇಬ್ಬರ ಮನೆಯಲ್ಲಿಯೂ ಇವರ ಪ್ರೀತಿಯನ್ನು ಒಪ್ಪಿಕೊಂಡಿರುತ್ತಾರೆ ಆದರೆ ರಾಹುಲ್ ಒಬ್ಬ ಜರ್ನಲಿಸ್ಟ್. ನಕ್ಸಲೆಟ್ ಒಬ್ಬನನ್ನು ಇಂಟರ್‌ವ್ಯೂ ಮಾಡಬೇಕು ಅನ್ನೋದು ಅವನ ಬಹಳ ವರ್ಷದ ಕನಸು. ಆ ಒಂದು ಚಾನ್ಸ್ ಸಿಕ್ಕಿದಾಗ ರಾಹುಲ್ ಕಾಡಿಗೆ ಹೋಗುತ್ತಾನೆ.

ಸಮಯದ ಕೈಗೊಂಬೆಯಾಗಿ ಹೂವಿ ಎಂಬ ಹುಡುಗಿಯನ್ನ ಮದುವೆಯಾಗುತ್ತಾನೆ. ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವ ರಾಹುಲ್ ಮನೆ ಕೆಲಸದವಳನ್ನಾಗಿ ಮಾಡಿಕೊಂಡಿದ್ದಾರೆ. ಹೂವಿ ತನ್ನ ಹೆಂಡತಿ ಎಂದು ಯಾರ ಬಳಿಯೂ ಬಹಿರಂಗ ಪಡಿಸಿಲ್ಲ. ಇದೀಗ ರಾಹುಲ್ ತಾನು ಪ್ರೀತಿಸಿದ ಮಾಲಿನಿಯನ್ನು ಮದುವೆಯಾಗುತ್ತಿದ್ದಾನೆ. ಮದುವೆ ಸಂಭ್ರಮ ಜೋರಾಗಿ ನಡೆದಿದೆ. ರಾಹುಲ್ ಪ್ರೀತಿಸಿದ ಹುಡುಗಿ ಮಾಲಿನಿಗೆ ತಾಳಿ ಕಟ್ಟುತ್ತಾನೆ, ಹೂವಿಯನ್ನೂ ಹೆಂಡತಿ ಎಂದು ಒಪ್ಪಿಕೊಳ್ಳುತ್ತಿಲ್ಲ. ಹೂವಿಯ ಒಳ್ಳೆ ಮನಸಿಗೆ ಘಾಸಿ ಮಾಡುತ್ತಲೇ ಇದ್ದಾರೆ. ಹೂವಿಯನ್ನು ತನ್ನ ಹೆಂಡತಿ ಎಂದು ಯಾವಾಗ ಒಪ್ಪಿಕೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ಅಭಿನಯಿಸಿದ ಚಿತ್ರ ಬೆಟ್ಟದ ಹೂ. ಈ ಸಿನಿಮಾದ ನಟನೆಗಾಗಿ ಅವರು ರಾಷ್ಟ್ರಪ್ರಶಸ್ತಿ ಕೂಡಾ ಪಡೆದಿದ್ದರು. ಇದೇ ಸಿನಿಮಾದ ಟೈಟಲ್‌ನಲ್ಲಿ ಧಾರಾವಾಹಿ ಮೂಡಿ ಬರುತ್ತಿದೆ.
ಬಡ ಪ್ರತಿಭಾವಂತ ಹಳ್ಳಿ ಹುಡುಗಿ ಹೂವಿ ಮತ್ತು ಹಳ್ಳಿಗೆ ಆಗಮಿಸಿ ವಿಚಿತ್ರ ಸಂಕಟಗಳಿಗೆ ಸಿಲುಕಿಕೊಳ್ಳುವ ಪತ್ರಕರ್ತ ರಾಹುಲ್ ಎಂಬ ಪಾತ್ರಗಳ ಕತೆ ಹೊಂದಿರುವ ಧಾರಾವಾಹಿ ಇದು. ವಿಶೇಷ ಎಂದರೆ ಈ ಧಾರಾವಾಹಿ ನಿರ್ಮಿಸುತ್ತಿರುವುದು 'ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಶೋಭು ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ . ಅವರ ಅರ್ಕ ಮೀಡಿಯಾ ಸಂಸ್ಥೆ ಈ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ.


Click it and Unblock the Notifications











