Kavya Gowda: ಪ್ರೇಕ್ಷಕರಿಂದ ಹಿಡಿಶಾಪ ಹಾಕಿಸಿಕೊಂಡ ನಟಿ ದೂಧ್ ಸಾಗರ್‌ನಲ್ಲಿ ಏನ್ ಮಾಡ್ತಿದ್ದಾರೆ ನೋಡಿ..
ಕನ್ನಡ ಕಿರುತೆರೆಯಲ್ಲಿ ಕೆಲವೇ ದಿನಗಳಿದ್ದು, ಬಳಿಕ ಪರಭಾಷೆಗೆ ಹಾರಿದ ನಟಿ, ಪುನಃ ಆಗಮಿಸಿದ್ದಾರೆ. ಆದರೆ, ಈಗ ಈ ನಟಿಗೆ ಹೊಸ ಪಾತ್ರ ಒಳ್ಳೆಯ ಬ್ರೇಕ್ ನೀಡಿದೆ. ಈಗಂತೂ ಈ ನಟಿ ದಿನವೂ ಸುದ್ದಿಯಲ್ಲಿರುತ್ತಾರೆ. ಪ್ರೇಕ್ಷಕರು ಈ ನಟಿಯ ಪಾತ್ರವನ್ನು ನೋಡಿ ನಿತ್ಯ ಬೈಯುತ್ತಾರೆ. ಆದರೆ, ಈ ನಟಿ ಈಗ ಹಾಲಿನ ಸಾಗರದಲ್ಲಿ ಮೀಯುತ್ತಿದ್ದಾರೆ.
ಈ ನಟಿಯ ಹೆಸರು ಕಾವ್ಯ ಗೌಡ. ಕನ್ನಡ ಕಿರುತೆರೆಯಿಂದ ಕಳೆದ ಆರೇಳು ವರ್ಷದಿಂದ ದೂರವಿದ್ದ ಇವರು ಈಗ ಮರಳಿ ಬಂದಿದ್ದಾರೆ. ಇಷ್ಟು ದಿನ ಪರಭಾಷೆಯಲ್ಲಿ ನಟಿಸುತ್ತಿದ್ದರೂ ಕೂಡ ಕನ್ನಡದ ಮೇಲಿನ ಒಲವು ಮತ್ತೆ ರಾಜ್ಯಕ್ಕೆ ಕರೆ ತಂದಿದೆ. ಬೆಂಗಳೂರಿನವರಾದ ಕಾವ್ಯ ಗೌಡ ಅವರು ಬಿಕಾಂ ಓದಿದ್ದಾರೆ.

ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್ಸಸ್ ರಂಗೇಗೌಡ' ಧಾರಾವಾಹಿಗೆ ಕಾವ್ಯ ಗೌಡ ಅವರು ಮೊದಲು ಬಣ್ಣ ಹಚ್ಚಿದ್ದರು. ಇದರಲ್ಲಿ ಲೀಡ್ ರೋಲ್‌ನಲ್ಲಿ 100 ಎಪಿಸೋಡ್‌ಗಳಲ್ಲಿ ನಟಿಸಿದ್ದರು. ಅರ್ಧಕ್ಕೆ ಧಾರಾವಾಹಿಯನ್ನು ಬಿಟ್ಟ ನಟಿ ಪರಭಾಷೆಯಲ್ಲಿ ಸಕ್ರಿಯರಾದರು.
ಮರಳಿ ಬಂದ ನಟಿ ಕಾವ್ಯ
ಐದು ವರ್ಷಗಳ ಕಾಲ ಕಾವ್ಯ ಗೌಡ ತೆಲುಗು ಧಾರಾವಾಹಿಯಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಈಗ ಮತ್ತೆ ಕನ್ನಡಕ್ಕೆ ಬಂದಿರುವುದಕ್ಕೆ ಬಹಳ ಖುಷಿಯಾಗಿದ್ದಾರೆ. 2 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ 'ದೇವಯಾನಿ' ಧಾರಾವಾಹಿಯಲ್ಲಿ ನಟಿಸಿದ್ದರು. ಇನ್ನು ವಿಜಯ್ ರಾಘವೇಂದ್ರ ನಟನೆಯ 'ರಿಂಗ ರಿಂಗ ರೋಸ್' ಎಂಬ ಸಿನಿಮಾಗೂ ಬಣ್ಣ ಹಚ್ಚಿದ್ದಾರೆ. ಇದರೊಂದಿಗೆ ಹೊಸಬರೇ ಇರುವ 'ಶೋಧ' ಎಂಬ ಚಿತ್ರದಲ್ಲೂ ನಟಿಸಿದ್ದು, ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಎಲೆ ಮರೆ ಕಾಯಿಯಂತೆ ಇದ್ದ ಕಾವ್ಯ ಅವರಿಗೆ ಈಗ ನಟಿಸುತ್ತಿರುವ ಧಾರಾವಾಹಿ ದೊಡ್ಡ ಬ್ರೇಕ್ ನೀಡಿದೆ.
ಪ್ರೇಕ್ಷಕರಿಂದ ಶಾಪ ಹಾಕಿಸಿಕೊಂಡ ನಟಿ!
ಸದ್ಯ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ನಟಿ ಕಾವ್ಯ ಗೌಡ ಅವರು ನಟಿಸುತ್ತಿದ್ದಾರೆ. ಇದರಲ್ಲಿ ಶ್ರೇಷ್ಠ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರೇಕ್ಷಕರು ನಿತ್ಯ ಕಾವ್ಯ ಅವರ ನಟನೆಯನ್ನು ನೋಡಿ ಬೈಯುವುದೇ ಆಗಿದೆ. ಭಾಗ್ಯಳ ಪತಿ ತಾಂಡವ್‌ನನ್ನು ಪ್ರೀತಿಸುತ್ತಿರುವ ಶ್ರೇಷ್ಠ ಅವರು ಈಗ ಮದುವೆಯನ್ನೂ ಆಗಿದ್ದಾರೆ. ಪ್ರೇಕ್ಷಕರೆಲ್ಲಾ ಶ್ರೇಷ್ಠ, ಭಾಗ್ಯಳಿಗೆ ತೊಂದರೆ ಕೊಡುತ್ತಿರುವದಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಂದರೆ ಆ ಆಕೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನು ಕಾವ್ಯಗೆ ಟ್ರಾವೆಲ್ ಮಾಡುವುದು ಎಂದರೆ ಬಹಳ ಇಷ್ಟವಂತೆ.
ಹಾಲಿನ ಸಾಗರದಲ್ಲಿ ಮಿಂದೆದ್ದ ನಟಿ
ಕಾವ್ಯ ಗೌಡ ಅವರು ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸದ್ಯ ಆಕೆ ಹಾಲಿನ ಸಾಗರದಲ್ಲಿ ಮಿಂದಿದ್ದು, ಇದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಧೂದ್ ಸಾಗರ್‌ಗೆ ಭೇಟಿ ಕೊಟ್ಟಿದ್ದಾರೆ. ಟ್ರೈನ್‌ನಲ್ಲಿ ಟ್ರಾವೆಲ್ ಮಾಡಿದ್ದು, ಅಲ್ಲಿನ ಸುಂದರವಾದ ಪರಿಸರವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋ ಹಾಗೂ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.


Click it and Unblock the Notifications











