Bhagya Lakshmi: ಮತ್ತೆ ಹಳೆ ಲವ್ವರ್ ಹಿಂದೆ ಓಡಿದ ತಾಂಡವ್; ಸರಿಯಾಗಿ ಬುದ್ಧಿ ಕಲಿಸುತ್ತಾಳಾ ಭಾಗ್ಯಾ?
ತಾಂಡವ್‌ಗೆ ಭಾಗ್ಯಾ ಅದೆಷ್ಟು ಬಾರಿ ಬುದ್ಧಿ ಹೇಳಿದಳು ಗೊತ್ತಿಲ್ಲ. ಆದರೆ ಚಿನ್ನದಂತಹ ಹೆಂಡತಿಯನ್ನು ಬಿಟ್ಟು ಬೇರೆ ಹುಡುಗಿಯ ಹಿಂದೆ ತಾಂಡವ್ ಸೂರ್ಯವಂಶಿ ಹೋಗಿದ್ದಾರೆ. ಇದೀಗ ಮತ್ತೆ ಶ್ರೇಷ್ಠಾ ಹಿಂದೆನೇ ಹೋಗಿದ್ದಾನೆ. ತಾಂಡವ್‌ಗೆ ಎಲ್ಲರಿಗಿಂತ ಶ್ರೇಷ್ಠಾನೇ ಮುಖ್ಯ ಎನಿಸಿದ್ದಾಳೆ. ಹುಟ್ಟಿಸಿದ ತಂದೆ ತಾಯಿಗಿಂತ ಶ್ರೇಷ್ಠಾನೇ ಮಿಗಿಲು ಎನಿಸಿದೆ.
ಇಂತಹ ಸ್ಥಿತಿಯಲ್ಲಿ ಹೆಂಡತಿ ಭಾಗ್ಯಾ ಏನು ಮಾಡಲು ಸಾಧ್ಯ? ಅದೆಷ್ಟೋ ಬಾರಿ ಭಾಗ್ಯಾಗೆ ವೀಕ್ಷಕರು ಡಿವೋರ್ಸ್ ನೀಡಲು ಹೇಳಿದ್ದರು. ಆದರೆ, ಭಾಗ್ಯಾ ಆ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಕೊನೆಗೆ ಡಿವೋರ್ಸ್ ನೋಟಿಸ್ ಅನ್ನು ತಾಂಡವ್ ಮುಖದ ಮೇಲೆ ಎಸೆಯುತ್ತಾಳೆ. ಆತನಿಗೆ ಇದನ್ನು ನೋಡಿ ಮತ್ತೆ ಖುಷಿ ಆಗುತ್ತದೆ. ಶ್ರೇಷ್ಠಾ ಜೊತೆ ಖುಷಿಯಾಗಿ ಕಾಲ ಕಳೆಯಬಹುದು ಅಂದುಕೊಂಡು ಆಸೆಗೆ ನೀರೆರೆದು ಬಿಡುತ್ತಾನೆ.

ಆತ ಏನೇ ಮಾಡಿದರು ಅದನ್ನು ನೋಡಿಕೊಂಡು ಸುಮ್ಮನೆ ಕೂರುವವಳು ಭಾಗ್ಯಾ ಅಲ್ಲವೇ ಇಲ್ಲ. ಭಾಗ್ಯಾ ಹೇಳಿದ್ದೆ ಮಾತು ನಡೆಯಬೇಕು. ತಾಂಡವ್‌ಗೆ ಏನು ಮಾತನಾಡಬೇಕು ಎಂದು ದಿಕ್ಕು ತೋಚದೆ ತೆಪ್ಪಗೆ ನಿಂತಿರುತ್ತಾನೆ. ಅದೆಷ್ಟೇ ಹಾರಾಟ ನಡೆಸಿರೂ ಭಾಗ್ಯಾ ಮುಂದೆ ಮಾತ್ರ ನಡೆಯಲ್ಲ. ತಾಂಡವ್ ಕೈಗೆ ಸಿಗದೇ ಇರುವುದನ್ನು ನೋಡಿದ ಶ್ರೇಷ್ಠಾ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಎಲ್ಲರನ್ನೂ ಬೆದರಿಸಿದ್ದಾಳೆ.
ಯಾವಾಗಲೂ ಶ್ರೇಷ್ಠಾಳದ್ದು ಇದೇ ಗೋಳು. ನೀನು ಸತ್ತು ಹೋಗು ಎಂದು ನೆಟ್ಟಿಗರು ಶಾಪ ಹಾಕುತ್ತಿದ್ದಾರೆ. ನೀನು ಸತ್ತರೆ ಭಾಗ್ಯಾಗೆ ಸ್ವಲ್ಪ ನೆಮ್ಮದಿಯಾದರೂ ಸಿಗುತ್ತೆ. ಬೇರೆ ಗಂಡನ ಮೇಲೆ ಆಸೆ ಪಡುವ ನೀನು ಎಂತಹ ಹೆಣ್ಣು ಎಂದು ಅನೇಕ ಜನರು ಶ್ರೇಷ್ಠಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಭಾಗ್ಯಾ ಇದೀಗ ಮುಂಚಿನ ಹಾಗೆ ಇಲ್ಲ. ಬಹಳಷ್ಟು ಬದಲಾಗಿದ್ದಾಳೆ. ಪ್ರಸ್ತುತ ಇರುವ ರೀತಿ ಭಾಗ್ಯಾ ಮೊದಲೇ ಇದ್ದಿದ್ದರೆ ಶ್ರೇಷ್ಠಾ ಎನ್ನುವ ಹುಡುಗಿ ತಾಂಡವನ ಜೀವನಕ್ಕೆ ಬರುತ್ತಿರಲಿಲ್ಲ. ಆದ್ರೀಗ, ಕಾಲ ಮಿಂಚಿ ಹೋಗಿದೆ.

ತನ್ವಿ ಶಾಲೆಯಲ್ಲಿ ಕಿರಿಕ್ ಮಾಡಿಕೊಂಡು ಸಸ್ಪೆಂಡ್ ಆಗಿದ್ದಾಳೆ. ಆಕೆಯನ್ನು ಪುನಃ ಶಾಲೆಗೆ ಕರೆದುಕೊಂಡು ಹೋಗಬೇಕು. ಪ್ರಿನ್ಸಿಪಾಲ್ ಜೊತೆ ಮಾತನಾಡಬೇಕು ಎಂದು ಭಾಗ್ಯಾ ಅಂದುಕೊಂಡರೆ, ತಾಂಡವ ಮಾತ್ರ ತನಗೆ ಮೀಟಿಂಗ್ ಇದೆ ಎಂದು ಕಥೆ ಹೇಳುತ್ತಿರುತ್ತಾನೆ. ತನ್ನ ಗಂಡನ ಮಾತು ಕೇಳದೆ ಪ್ರಾಂಶುಪಾಲರ ಬಳಿ ಹೋಗುತ್ತಾರೆ. ಅಲ್ಲಿ ತಾಂಡವ ಎಲ್ಲರೆದುರು ದುರ್ವರ್ತನೆ ತೋರುತ್ತಾನೆ. ಆತನನ್ನು ನೋಡುತ್ತಿರುವಾಗಲೇ ಪ್ರಾಂಶುಪಾಲರಿಗೆ ಅರಿವಾಗುತ್ತದೆ. ಅಪ್ಪನೇ ಸರಿ ಇಲ್ಲದಾಗ ಮಕ್ಕಳಿಗೆ ಯಾರು ತಿದ್ದಿ ಬುದ್ಧಿ ಹೇಳುತ್ತಾರೆ ಎನ್ನುವ ಆಲೋಚನೆ ಅವರಿಗೆ ಮೂಡುತ್ತದೆ.
ತಾಂಡವ ಅಲ್ಲಿಂದ ಹೋದ ಬಳಿಕ ಅಳುತ್ತಾ ತನ್ನ ಮಗಳ ಭವಿಷ್ಯದ ಬಗ್ಗೆ ಮಾತನಾಡಿದ್ದಾಳೆ. ಪ್ರಾಂಶುಪಾಲರು ತನ್ವಿ ಗೆ ಬುದ್ದಿ ಹೇಳಿ ಮತ್ತೆಂದೂ ಈ ತರ ಆಗಬಾರದು ಎಂದು ಕಿವಿ ಮಾತು ಹೇಳುತ್ತಾರೆ. ಇದೇ ವೇಳೆ ತಾಂಡವ್‌ಗೆ ಶ್ರೇಷ್ಠಾ ಮೆಸೇಜ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನ್ನ ಸಾವಿಗೆ ನೀನೇ ಕಾರಣ ಎಂದು ಹೇಳಿ ಮೆಸೇಜ್ ಮಾಡಿ ಬಿಡುತ್ತಾಳೆ. ಅದನ್ನು ನೋಡಿದ ತಾಂಡವ್ ಶ್ರೇಷ್ಠಾ ಇರುವ ಜಾಗಕ್ಕೆ ಬಂದು ನೋಡಿದಾಗ ಮಹಡಿಯ ಮೇಲೆ ನಿಂತ ಶ್ರೇಷ್ಠಾ ಸಾಯುವುದಕ್ಕೆ ಸಜ್ಜಾಗಿ ನಿಂತಿರುತ್ತಾಳೆ.
ಆದರೆ, ತಾಂಡವ್‌ನನ್ನು ನೋಡಿದ ಶ್ರೇಷ್ಠಾಗೆ ಕೊಂಚ ಮಟ್ಟಿಗೆ ದಿಗಿಲಾಗುತ್ತದೆ. ತಾಂಡವ್ ಭಯದಲ್ಲಿ ನೀನು ಏನು ಮಾಡಲು ಹೊರಟಿದ್ದಿಯಾ? ಎಂದು ಕೇಳಿದಾಗ ನೆರೆದವರೆಲ್ಲರು ತಾಂಡವ್ ಮುಖ ನೋಡುತ್ತಾರೆ.


Click it and Unblock the Notifications











