Bhagya Lakshmi Serial:ಭಾಗ್ಯ ವಿರುದ್ಧ ಕೇಕೆ ಹಾಕುತ್ತಿರೋ ತಾಂಡವ್; ಮಾಜಿ ಗಂಡನಿಗೆ ಪಾಠ ಕಲಿಸುತ್ತಾಳಾ?
ಭಾಗ್ಯಗೆ ಕಷ್ಟಗಳು ಎಷ್ಟೇ ಎದುರಾದರೂ ಕೂಡ ಅದೆಲ್ಲವನ್ನೂ ತಡೆದುಕೊಂಡಿದ್ದಳು. ತನಗೆ ಎಷ್ಟೇ ಕಷ್ಟ ಬಂದರೂ ಸರಿ ಅದೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆ ಎನ್ನುವ ಆತ್ಮಸ್ಥೈರ್ಯ ಇಟ್ಟುಕೊಂಡಿದ್ದಾಳೆ. ಭಾಗ್ಯಗೆ ತಾಂಡವ್ ಅದೇಷ್ಟೇ ಕಾಟ ಕೊಟ್ಟರು ಕೂಡ ಆಕೆ ಮಾತ್ರ ಅದೆಲ್ಲವನ್ನು ಸಹಿಸಿಕೊಳ್ಳುತ್ತಿದ್ದಾಳೆ. ತಾಂಡವ್‌ಗೆ ಆತನ ಹೆಂಡತಿ ಶ್ರೇಷ್ಠಾಳನ್ನು ಬಿಟ್ಟು ಯಾವುದೇ ಜಗತ್ತೇ ಇಲ್ಲ ಎನ್ನುವ ಮೂಡ್‌ನಲ್ಲಿದ್ದಾನೆ.
ಭಾಗ್ಯ ತನ್ನ ಹೆಂಡತಿಯಾಗುವುದಕ್ಕೆ ಲಾಯಕ್ಕು ಇಲ್ಲ ಅಂದುಕೊಂಡಿದ್ದಾನೆ. ಆದರೆ ಭಾಗ್ಯ ಛಲಗಾತಿ. ಅಂತಹ ಹೆಣ್ಣು ಸಿಕ್ಕಿರುವುದು ತಾಂಡವನ ಪುಣ್ಯ. ಆದ್ರೀಗ ಅಂತಹ ಹೆಣ್ಣಿನ ಕಣ್ಣಲ್ಲಿ ಕಣ್ಣೀರನ್ನು ತರಿಸಿದ್ದಾನೆ. ಆದರೆ ತಾಂಡವನಿಗೆ ಇಷ್ಟಕ್ಕೆ ಸಮಾಧಾನ ಆಗಬೇಕಲ್ಲ? ಭಾಗ್ಯಾಗೆ ಕಷ್ಟದ ಮೇಲೆ ಕಷ್ಟ ಕೊಟ್ಟು ಆಕೆಯ ಬದುಕಲ್ಲಿ ಚೆಲ್ಲಾಟವಾಡುತ್ತಿದ್ದಾನೆ. ಭಾಗ್ಯ ಏನೇ ಕಷ್ಟ ಇದ್ದರೂ ಅದೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ನೋವು ನುಂಗುತ್ತಾ ದಿನ ದೂಡುತ್ತಿದ್ದಾಳೆ.

ಈಗ ಮನೆಯ ಇಎಂಐ ಕಟ್ಟಲು ಭಾಗ್ಯಗೆ ಹಣ ಬೇಕಿರುತ್ತದೆ. ಕೈಯಲ್ಲಿ ಕೆಲಸ ಇಲ್ಲದ ಭಾಗ್ಯಗೆ ಇಎಂಐ ಕಟ್ಟಲು ದಾರಿಯೇನೋ ಸಿಕ್ಕಿದೆ. ಆದರೆ ಆ ಪಾರ್ಟಿ 32 ಸಾವಿರ ರೂಪಾಯಿಯನ್ನು ಕೊಟ್ಟು ಅಲ್ಲಿಂದ್ದ ಹೋಗಿರುತ್ತಾನೆ. ಇದರಿಂದ ಆತಂಕಕ್ಕೇ ಒಳಗಾದ ಭಾಗ್ಯಗೆ ಇನ್ನೂ 8,000ಕ್ಕೆ ನಾನೇನು ಮಾಡಲಿ ಎಂದು ದೇವರ ಮೊರೆ ಹೋಗುತ್ತಾಳೆ. ಅದು ಹೇಗೋ ಹಣವನ್ನು ಹೊಂದಿಸಿ ಭಾಗ್ಯ ಮನೆಗೆ ಬರುತ್ತಾಳೆ. ಮನೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೆ ಮನೆ ಸೀಜ್ ಮಾಡುವವರೆಲ್ಲ ಬಂದಿರುತ್ತಾರೆ. ಬ್ಯಾಂಕ್ ಮ್ಯಾನೇಜರ್ ಬಳಿ ಹಣವನ್ನು ನೀಡುತ್ತಾಳೆ ಭಾಗ್ಯ. ಆಗ ತಾಂಡವ್ ಹಿಂದಿನಿಂದ ಹಾಕಿ ಕೊಡ್ತಾ ಹಣವನ್ನು ಹಾಗೆ ಸ್ವೀಕರಿಸಬೇಡಿ ಆ ಹಣದಲ್ಲಿ ಎಷ್ಟು ರೂಪಾಯಿ ಇದೆ ಎನ್ನುವುದನ್ನು ಲೆಕ್ಕ ಹಾಕಿ. ಫುಲ್ ಮೌಂಟ ಅನ್ನು ಭಾಗ್ಯ ಕೊಡಲು ಸಾಧ್ಯವೇ ಇಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಬಳಿ ತಾಂಡವ್ ಹೇಳುತ್ತಾನೆ.
ತಾಂಡವ್ ಮಾತು ಕೇಳಿ ನಕ್ಕ ಭಾಗ್ಯ
ತಾಂಡವ್ ಮಾತಿಗೆ ಭಾಗ್ಯ ಮುಗುಳು ನಗುತ್ತಲೇ ಏನು ಮಾತನಾಡುವುದಿಲ್ಲ. ಕೊನೆಗೆ ಬ್ಯಾಂಕ್ ಅಧಿಕಾರಿಗಳ ಹತ್ತಿರ ಈ ಹಣವನ್ನು ನೀವೇ ಎಣಿಸಿ ನೋಡಿ ಎಂದು ಹೇಳುತ್ತಾಳೆ. ಆಗ ತಾಂಡವ್ ಕೂಡ ಈ ಹಣವನ್ನು ಎಣಿಸಿ ನೋಡಲೇಬೇಕು. ಹಣ ಎಷ್ಟಿದೆ ಎನ್ನುವುದು ನಮಗೆ ಕೂಡ ತಿಳಿಯಬೇಕು ಎಂದು ಹೇಳುತ್ತಾನೆ. ಬ್ಯಾಂಕ್ ಅಧಿಕಾರಿ ಹಣ ಲೆಕ್ಕ ಹಾಕಲು ಶುರು ಮಾಡುತ್ತಾರೆ. ತಾಂಡವ್ ಭಾಗ್ಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಲೇ ಇರುತ್ತಾನೆ. ಆತನಿಗೆ ಭಾಗ್ಯ ಮೇಲೆ ಅಷ್ಟೊಂದು ಸೇಡು.
ಅಧಿಕಾರಿಗಳ ಮಾತಿಗೆ ಸುಮ್ಮನಾದ ತಾಂಡವವ್
ತಾಂಡವ್ ಹೇಗಾದರೂ ಮಾಡಿ ಭಾಗ್ಯಳನ್ನು ಮಟ್ಟ ಹಾಕಲೇಬೇಕು ಎಂದು ಅಂದುಕೊಂಡಿರುತ್ತಾನೆ. ಆತನಿಗೆ ಬೇಕಾಗಿದ್ದು ಕೂಡ ಅದೇ. ಭಾಗ್ಯಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕು. ಹಾಗೆಯೇ ಗಂಡ ಇಲ್ಲದೆ ಏನು ಇಲ್ಲ ಎನ್ನುವುದನ್ನು ಆಕೆಗೆ ತಿಳಿಯಬೇಕು ಅಂತ ಪಣ ತೊಟ್ಟಿದ್ದಾನೆ. ಹಾಗೆಯೇ ಭಾಗ್ಯಗೆ ಒಂದು ಆಫರ್ ಕೂಡ ತಾಂಡವ್ ನೀಡುತ್ತಾನೆ. ಅದೇನೆಂದರೆ ಭಾಗ್ಯ ಮಂಡಿಯೂರಿ ತಾಂಡವ್‌ನ ಕಾಲು ಹಿಡಿದು ಬೇಡಬೇಕು. ತನ್ನ ಸೋಲನ್ನು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಭಾಗ್ಯ ಮಾವನಿಗೆ ಕೋಪ ಉಕ್ಕಿ ಬಂದಿತ್ತು. ಭಾಗ್ಯ ಮಾತ್ರ ಏನು ಉತ್ತರಿಸುವುದಿಲ್ಲ. ಆಗ ತಾಂಡವ್ ಜೋರಾಗಿಯೇ ಬ್ಯಾಂಕ್ ಅಧಿಕಾರಿಗಳ ಬಳಿ ಈ ಮನೆನಾ ಸೀಸ್ ಮಾಡಿ ಎಂದು ಹೇಳುತ್ತಾನೆ. ಆಗ ಬ್ಯಾಂಕ್ ಅಧಿಕಾರಿಯೊಬ್ಬರು "ಸರ್ ಅದು ಸಾಧ್ಯವಿಲ್ಲ. ಇವರು ಸರಿಯಾಗಿ ಹಣವನ್ನು ನೀಡಿದ್ದಾರೆ" ಎನ್ನುತ್ತಾರೆ.

ತಾಂಡವ್ ಶಾಕ್
ತಾಂಡವ್ ಬಾಯಿಗೆ ಬೀಗ ಬೀಳುತ್ತದೆ. ತಾಂಡವ್‌ಗೆ ಆಶ್ಚರ್ಯವಾಗುತ್ತೆ. ಭಾಗ್ಯ ಹೇಗೆ ಇಷ್ಟೊಂದು ಹಣವನ್ನು ಆರೆಂಜ್ ಮಾಡಿದಳು. ಇದು ಭಾಗ್ಯ ಕೈಯಿಂದ ಹೇಗೆ ಸಾಧ್ಯವಾಯಿತು ಎಂದು ಆಲೋಚನೆ ಮಾಡುತ್ತಾನೆ. ಭಾಗ್ಯ ಹಣ ತೆಗೆದುಕೊಂಡು ಬಂದಿರುವುದನ್ನು ನೋಡಿದ ತಾಂಡವ್‌ಗೆ ಶಾಕ್ ಆಗುತ್ತೆ. ಹಾಗೆಯೇ ಆತನ ಸೊಕ್ಕಿನ ಮಾತಿಗೆ ಫುಲ್ ಸ್ಟಾಪ್ ಬೀಳುತ್ತೆ. ಸಪ್ಪೆ ಮುಖ ಮಾಡಿ ತಾಂಡವ್ ಮನೆಯಿಂದ ಹೊರ ಹೋಗುತ್ತಾನೆ. ಬಹಳ ದೊಡ್ಡ ಗಂಡಾಂತರದಿಂದ ಭಾಗ್ಯ ಪಾರಗುತ್ತಾಳೆ. ಆದರೆ ಉಳಿದ ಎಂಟು ಸಾವಿರ ಹಣವನ್ನು ಹೇಗೆ ಹೊಂದಿಸಿದಳು ಭಾಗ್ಯ ಎನ್ನುವುದು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.


Click it and Unblock the Notifications











