ಪ್ರೇಯಸಿ ಜೊತೆ ನಿಶ್ಚಿತಾರ್ಥ, ಹೆಂಡತಿ ಜೊತೆ ಮತ್ತೆ ಮದುವೆ; ಏನಪ್ಪ ನಿನ್ನ ಅವಸ್ಥೆ ಎನ್ನುತ್ತಿರೋ ನೆಟ್ಟಿಗರು

By ಪೂರ್ವ

ಭಾಗ್ಯಾ ಹಾಗೂ ತಾಂಡವ್ ಮಕ್ಕಳಿಗಾಗಿ ಮರು ಮದುವೆ ಆಗಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಮನೆಯವರ ಸಮ್ಮತಿ ಕೂಡ ಇದೆ. ಮನೆಯವರೆಲ್ಲ ಸೇರಿ ತಾಂಡವ್ ಹಾಗೂ ಭಾಗ್ಯಾಗೆ 2ನೇ ಮದುವೆ ಮಾಡುವ ಸಂಭ್ರಮದಲ್ಲಿದ್ದಾರೆ. ಭಾಗ್ಯಾ ಹಾಗೂ ತಾಂಡವ್ ವಿಚ್ಛೇದನ ತನಕ ಹೋಗಿದ್ದ ಕಾರಣಕ್ಕೆ ಮನೆಯವರೆಲ್ಲ ಬಹಳ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮಕ್ಕಳಿಗೋಸ್ಕರ ತಾಂಡವ್ ಆತನಿಗೆ ಇಷ್ಟ ಇಲ್ಲದಿದ್ದರೂ ಭಾಗ್ಯಾ ಜೊತೆ ಮದುವೆ ಆಗಲು ಹೊರಟಿದ್ದಾನೆ. ಆದರೆ. ಈ ಮದುವೆ ಕಾರ್ಯಕ್ರಮಕ್ಕೆ ಶ್ರೇಷ್ಠಾ ಕೂಡ ಬಂದಿದ್ದಾರೆ. ಶ್ರೇಷ್ಠಾಗೆ ಕೋಪ ಬಂದು ಬಾಗಿಲಲ್ಲಿ ಹಾಕಿದ್ದ ತೋರಣವನ್ನು ಕಿತ್ತು ಹಾಕುತ್ತಾರೆ.

ಇದರಿಂದ ಕೋಪಗೊಂಡ ಕುಸುಮ ಮನೆಯಲ್ಲಿದ್ದ ಹೂವು ಹಾಗೂ ಮಾವಿನ ಎಲೆಯನ್ನು ಶ್ರೇಷ್ಠಾಗೆ ಕೊಟ್ಟು ತೋರಣ ಕಟ್ಟಲು ಹಾಗೆಯೇ ಬಾಗಿಲಿಗೆ ಹೂವನ್ನು ಕಟ್ಟಲು ಹೇಳುತ್ತಾಳೆ. ಇನ್ನು ಶ್ರೇಷ್ಠಾ ಬಾಗಿಲಿಗೆ ತೋರಣವನ್ನು ಕಟ್ಟುತ್ತಿರಬೇಕಾದರೆ ತಾಂಡವು ಬರುತ್ತಾನೆ. ತಾಂಡವನನ್ನು ನೋಡಿ ಶ್ರೇಷ್ಠಾಗೆ ಬಹಳ ಕೋಪ ಬರುತ್ತದೆ. "ನನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ಭಾಗ್ಯಾಗಳನ್ನು ಪುನಃ ಮದುವೆಯಾಗಲು ಹೊರಟಿದ್ದಾರಲ್ಲ. ಇದು ಸರಿನಾ ಇರಲಿ, ನಾನು ನಿನ್ನ ಮದುವೆಯಾದ ಬಳಿಕ ಇದನ್ನೆಲ್ಲ ನೋಡಿಕೊಳ್ಳುತ್ತೇನೆ." ಎಂದು ಮನದಲ್ಲಿ ಅಂದುಕೊಂಡು ಇರುತ್ತಾಳೆ.

Bhagya Lakshmi kannada serial update on march 18th episode

ತಾಂಡವ್ ಮುಂದೆ ಬಂದಾಗ ಶ್ರೇಷ್ಠಾ ಇಳಿದು ತಾಂಡವನ ಜೊತೆ ಮಾತಿಗೆ ಮುಂದಾಗುತ್ತಾಳೆ. ತಾಂಡವ್ ಎಂದು ಕರೆಯುವಾಗಲೇ ಅಲ್ಲಿಗೆ ತನ್ವಿ ಬರುತ್ತಾಳೆ. ಶ್ರೇಷ್ಠಾ ಆಂಟಿ ಏನು ನೀವು ನನ್ನ ತಂದೆಯನ್ನು ನೋಡುತ್ತಾ, ಇದ್ದೀರಾ ಬೇಗ ಬೇಗ ತೋರಣ ಕಟ್ಟಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶ್ರೇಷ್ಠಾ ಕುರ್ಚಿ ಹತ್ತಿ ತೋರಣ ಕಟ್ಟುತ್ತಿರುತ್ತಾಳೆ.

ತೋರಣ ಕಟ್ಟುವಾಗ ಮೇಲಿನಿಂದ ಬಿದ್ದ ಶ್ರೇಷ್ಠಾ

ಹಾಗೆಯೇ ತನ್ವಿಗೆ ಮನದಲ್ಲಿ ಬೈಯುತ್ತಾ ಇರುತ್ತಾಳೆ. ಇದನ್ನೆಲ್ಲ ನೋಡಿದ ತಾಂಡವ್ ಏನು ಮಾಡುವ ಸ್ಥಿತಿಯಲ್ಲಿ ಇರುವುದು ಇಲ್ಲ. ಇನ್ನೂ ಶ್ರೇಷ್ಠಾ ಖುರ್ಚಿಯಿಂದ ಬೀಳುವ ಹಾಗೆ ನಾಟಕ ಮಾಡುತ್ತಾಳೆ. ನಾನೇನಾದರೂ ಬಿದ್ದರೆ ನನ್ನನ್ನು ತಾಂಡವ್ ಹಿಡಿದುಕೊಳ್ಳುತ್ತಾನೆ. ಆ ಬಳಿಕ ನಾನು ನನಗೆ ಹೇಗೆ ಬೇಕೋ ಹಾಗೆ ಮಾಡಿಸಿಕೊಳ್ಳಬಹುದು. ಏನಾದರು ದೊಡ್ಡ ಸೀನ್ ಮಾಡಬಹುದು ಅಂದುಕೊಂಡು ಇರುತ್ತಾಳೆ. ಆದರೆ ಅಲ್ಲಿ ಆಗಿದ್ದೆ ಬೇರೆ ಶ್ರೇಷ್ಠಾ ಕುರ್ಚಿಯಿಂದ ದೊಪ್ಪೆಂದು ಕೆಳಗೆ ಬೀಳುತ್ತಾಳೆ .

ಶ್ರೇಷ್ಠಾ ಬಿದ್ದಿದ್ದನ್ನು ಕಂಡು ತಾಂಡವ್ ಶಾಕ್

ಇದನ್ನು ನೋಡಿದ ತನ್ವಿ ಮನೆಯವರನ್ನು ಎಲ್ಲರನ್ನೂ ಕರೆಯುತ್ತಾಳೆ. ಆಗ ಅಲ್ಲಿಗೆ ಬಂದ ಕುಸುಮಾ ಬಿದ್ದ ಶ್ರೇಷ್ಠಾನನ್ನು ಎತ್ತುತ್ತಾಳೆ. ಕೊನೆಗೆ ಶ್ರೇಷ್ಠಾ ಮೆತ್ತಗೆ ವಾಶ್ ರೂಮ್‌ಗೆ ಹೋಗುತ್ತೇನೆ ಎಂದು ಹೇಳಿ ತಾಂಡವನನ್ನು ಕರೆದುಕೊಂಡು ಮಹಡಿಗೆ ಹೋಗಿ ಮಾತುಕತೆ ಶುರು ಮಾಡುತ್ತಾಳೆ. ಆದರೆ, ತಾಂಡವ್ ಮಾತ್ರ ಏನು ಮಾಡುವ ಸ್ಥಿತಿಯಲ್ಲಿ ಇಲ್ಲ. ಕೊನೆಗೆ ತಾಂಡವ್ ಏನು ಮಾತನಾಡದೆ ಮಹಡಿ ಇಳಿದು ಬರುತ್ತಾನೆ.

Bhagya Lakshmi kannada serial update on march 18th episode

ಭಾಗ್ಯಾಳನ್ನು ಹೊಗಳಿದ ತಾಂಡವ್

ಹಾಗೆಯೇ ಭಾಗ್ಯಾಳನ್ನು ಮರು ಮದುವೆ ಆಗಲು ಮದುವೆ ಮಂಟಪದ ಒಳಗೆ ಕುಳಿತುಕೊಂಡು ಬಿಡುತ್ತಾನೆ. ಇತ್ತ ಭಾಗ್ಯಾ ಮದುಮಗಳ ರೂಪದಲ್ಲಿ ತಾಂಡವ್‌ನ ಪಕ್ಕ ಬಂದು ಕುಳಿತುಕೊಳ್ಳುತ್ತಾನೆ. ಇನ್ನೂ ಭಾಗ್ಯಾಳ ಅಂದವನ್ನು ಹಾಡಿ ಹೊಗಳುತ್ತಾನೆ. ಇದರಿಂದ ಮನೆಮಂದಿಗೆ ಬಹಳ ಖುಷಿ ಆಗುತ್ತದೆ. ಆತ ಇಷ್ಟೆಲ್ಲ ಮಾಡಿದ್ದು ತನ್ನ ಮಗಳ ಹಾಗೂ ಮಗನ ಖುಷಿಗಾಗಿ. ಇದು ಭಾಗ್ಯಾಳಿಗೆ ಕೂಡ ತಿಳಿದಿದೆ. ಆದರೆ ಶ್ರೇಷ್ಠಾ ಮಾತ್ರ ತಾಂಡವ್ ಮೇಲೆ ಬಹಳ ಕೋಪಗೊಂಡಿದ್ದಾರೆ.

More from Filmibeat

English summary
Bhagya Lakshmi kannada serial update on march 18th episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X