Bhagyalakshmi: ಅಡುಗೆ ಮನೆಯಲ್ಲಿ ತಾಂಡವ್ ಪರದಾಟ; ಮಗನ ದರ್ಪದ ಮಾತಿಗೆ ನೊಂದ ತಂದೆ

By Poorva

ತಾಂಡವ್ ಭಾಗ್ಯ ಇಲ್ಲದೆ ಮನೆಯನ್ನು ನಿಭಾಯಿಸುತ್ತೇನೆ ಎಂದೆಲ್ಲ ಹೇಳುತ್ತಾನೆ. ಆದರೆ ಭಾಗ್ಯ ಇಲ್ಲದೇ ಒಂದು ಕೆಲಸವನ್ನು ನೆಟ್ಟಗೆ ಮಾಡಲು ತಾಂಡವನಿಗೆ ಆಗುತ್ತಿಲ್ಲ. ಮನೆಯವರೆಲ್ಲ ಹಸಿದುಕೊಂಡಿದ್ದಾರೆ. ಭಾಗ್ಯ ಆಗಿದ್ದರೆ ಎಲ್ಲರಿಗೂ ಬಗೆ ಬಗೆಯ ಪಲ್ಯ ಮಾಡಿ ಬಡಿಸುತ್ತ ಇದ್ದಳು. ಆದರೆ ತಾಂಡವ ಮಾತ್ರ ಇದ್ದ ಪಲ್ಯವನ್ನು ಕೆಡಿಸಿಬಿಟ್ಟಿದ್ದಾನೆ.

ಅಡುಗೆ ಕೋಣೆಗೆ ಬಾರದೇ ಇರುವವನು ಅಡುಗೆ ಮಾಡಲು ಸಾಧ್ಯವೇ? ತಾಂಡವ ಅಡುಗೆ ಮಾಡುತ್ತಾನೆ ಎಂದು ಭಾಗ್ಯಗೆ ನಂಬಿಕೆ ಇಲ್ಲ. ಆದರೆ ನಾನಿಲ್ಲದೇ ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಿಲ್ಲ ಎಂಬುದನ್ನು ಮಾತ್ರ ಅರಿತಿದ್ದಾಳೆ. ಭಾಗ್ಯ ಏನೇ ಮಾಡಿದರೂ ಅದಕ್ಕೊಂದು ಕಾರಣ ಹುಡುಕಿ ಆಕೆಯನ್ನು ತರಾಟೆಗೆ ತೆಗೆದುಕೊಂಡು ಬಿಡುತ್ತಿದ್ದ ತಾಂಡವ್. ಇದೀಗ ಒಂದು ಕೆಲಸ ಮಾಡಲು ಆಗುತ್ತಿಲ್ಲ.

Bhagya Lakshmi Kannada serial written update 16th February

ಕುಸುಮಾ ಮಾತ್ರ ಕೊಂಚ ಜೋರಾಗಿಯೇ ಭಾಗ್ಯ ಇದ್ದಿದ್ದರೆ ಹೀಗೆಲ್ಲ ಆಗುತ್ತಾ ಇರಲಿಲ್ಲ. ಆಕೆ ನಮ್ಮನ್ನು ಒಂದು ಹೊತ್ತು ಉಪವಾಸ ಕೆಡವುತ್ತಿರಲಿಲ್ಲ. ಆದರೆ ಈ ತಾಂಡವ್ ಮಾಡಿದ ಕೆಲಸಕ್ಕೆ ಮನೆಯವರೆಲ್ಲರೂ ಉಪವಾಸ ಇರುವ ಹಾಗೆ ಆಗಿದೆ. ಗುಂಡಣ್ಣನಿಗೆ ಇರುವ ಪರಿಜ್ಞಾನ ತಾಂಡವನಿಗೆ ಇಲ್ಲವಾಗಿದೆ ಎನ್ನುತ್ತಾಳೆ.

ತಾಂಡವ್‌ಗೆ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರೆಲ್ಲರ ಜೊತೆ ಬೆರೆಯಬೇಕು ಎನ್ನುವ ಆಸೆ. ಆದರೆ ಭಾಗ್ಯ ಕಂಡರೆ ಸ್ವಲ್ಪವೂ ಇಷ್ಟ ಇಲ್ಲ. ಆಕೆ ಪೆದ್ದಿ, ಆಕೆಗೆ ಬುದ್ದಿ ಇಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಮನೆಯಿಂದ ಆಚೆ ಕಳುಹಿಸುತ್ತಾನೆ. ಆದರೆ ಈ ವಿಚಾರ ಮಕ್ಕಳಿಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಶ್ರೇಷ್ಠ , ಭಾಗ್ಯ ಗಂಡನ ವಿರುದ್ದ ಭಾಗ್ಯ ನನ್ನೆ ಎತ್ತಿ ಕಟ್ಟುವ ಕೆಲಸ ಮಾಡಿದ್ದಾಳೆ ಎಂದು ಹೇಳಿದರೆ ತಪ್ಪಾಗದು.

ಕುಸುಮಾ ವ್ಯಂಗ್ಯ

ಇದೀಗ ಪೂಜಾ ಮಾತ್ರ ಶ್ರೇಷ್ಠಗೆ ನೀರಿಳಿಸಿದ್ದಾಳೆ. ತಾಂಡವ್ ಅಡುಗೆ ಮನೆಯಲ್ಲಿ ಕಷ್ಟ ಪಟ್ಟು ಅಡುಗೆ ಮಾಡುತ್ತಾ ಇರುತ್ತಾನೆ. ಇನ್ನು ತಾಂಡವ್ ಏನು ಮಾಡುತ್ತಿದ್ದಾನೆ ಅಡುಗೆ ಮನೆಯಲ್ಲಿ ಎಂದು ನೋಡುವುದಕ್ಕೆ ಕುಸುಮ ಬರುತ್ತಾಳೆ. ಸೀದು ಹೋಗಿರುವ ಪ್ಲಾಸ್ಟಿಕ್ ಬೌಲ್ ನೋಡಿ ಹೇಳುತ್ತಾಳೆ ಆಯ್ತಪ್ಪಾ. ಇದನ್ನು ಹಾಳು ಮಾಡಿ ಬಿಟ್ಟೆಯಲ್ಲ ಎಂದು ಬಹಳ ಬೇಸರ ಪಟ್ಟುಕೊಂಡು ಹೇಳುತ್ತಾಳೆ. ಭಾಗ್ಯ ಇರಬೇಕಾದರೆ ಹೀಗೆಲ್ಲ ಆಗುತ್ತಾ ಇರಲಿಲ್ಲ. ಆಕೆ ಬಹಳ ಅಚ್ಚುಕಟ್ಟಾಗಿ ಅಡುಗೆ ಮಾಡುತ್ತಾ ಇದ್ದಳು ..ಮನೆ ನಿಭಾಯಿಸುತ್ತ ಇದ್ದಳು ಎಂದು ಹೇಳಿ ಡೈನಿಂಗ್ ರೂಮ್ ಬಳಿ ಬರುತ್ತಾಳೆ.

Bhagya Lakshmi Kannada serial written update 16th February

ಕೋಪ ತಡೆದುಕೊಂಡ ತಾಂಡವ

ತಾಂಡವನಿಗೆ ಬಹಳ ಕೋಪವು ಬರುತ್ತದೆ. ಆದರೆ ಕೊಂಚ ಮನೆಯವರೆದುರು ತೋರಿಸಿದರು ಆ ಬಳಿಕ ಎಲ್ಲರ ಮನಸನ್ನು ಗೆಲ್ಲಬೇಕು ಎಂದು ಯೋಚನೆ ಮಾಡಿ ಅವರಿಗೆಲ್ಲ ಕೈಲಾದಷ್ಟು ಮಟ್ಟಿಗೆ ಊಟ ತಯಾರು ಮಾಡುತ್ತಾನೆ. ಇನ್ನು ಅನ್ನ ಬಡಿಸುತ್ತ ಇದ್ದ ಮಗನನ್ನು ನೋಡಿ ಕುಸುಮಾ, ಇದೇನಿದು ಅನ್ನನಾ ಅಥವಾ ಪಾಯಸನಾ? ಆ ರೀತಿ ಆಗಿ ಬಿಟ್ಟಿದೆಯಲ್ಲ ಎಂದು ಹೇಳುತ್ತಲೇ ಊಟ ಮಾಡುತ್ತಾಳೆ. ಭಾಗ್ಯ ಇಲ್ಲದೇ ಮೊದಲ ದಿನವೇ ತಾಂಡವ ಮಾತ್ರ ಪರದಾಡುತ್ತಿದ್ದಾನೆ. ಇನ್ನೂ ಕುಸುಮಾ ಮಾತ್ರ ನನ್ನ ಸೊಸೆ ಯಾವಾಗ ನನ್ನ ಮನೆಗೆ ಬರುತ್ತಾಳೆ ಎಂದು ಕಾಯುತ್ತಾ ಇರುತ್ತಾಳೆ.

ಸೊಸೆಯನ್ನು ಕಾಣುವ ತವಕದಲ್ಲಿ ಕುಸುಮಾ

ಒಂದು ವಾರ ಮನೆ ನಿಭಾಯಿಸುವ ಟಾಸ್ಕ್ ಅನ್ನು ತಾಂಡವ್ ಸಮರ್ಥವಾಗಿ ನಿಭಾಯಿಸುತ್ತಾನೆ ಎನ್ನುವ ನಂಬಿಕೆ ಯಾರಿಗೂ ಇಲ್ಲ. ಅದು ಹೇಗೋ ಎಲ್ಲರ ಕೈಯಲ್ಲೂ ಬೈಗುಳ ಕೇಳಿಕೊಂಡು ತಾಂಡವ್ ಮಾತ್ರ ಕೊಂಚ ಮೈ ಬಗ್ಗಿಸಿ ಕೆಲಸ ಮಾಡುತ್ತಾ ಇದ್ದಾನೆ. ಹೇಗಾದರೂ ಮಾಡಿ ಭಾಗ್ಯನನ್ನು ಈ ಮನೆಯಿಂದ ಪರ್ಮನೆಂಟ್ ಆಗಿ ಹೊರಗೆ ಹಾಕಲೇಬೇಕು, ಇಲ್ಲವಾದರೆ ಕಂಡಿತಾ ಉಳಿಗಾಲ ಇಲ್ಲ ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ. ಹಾಗೆಯೇ ಶ್ರೇಷ್ಠಳನ್ನು ಹೇಗಾದರೂ ಮಾಡಿ ಈ ಮನೆಗೆ ಕರೆದುಕೊಂಡು ಬರಬೇಕು ಎಂದು ಆ ಸಂದರ್ಭಕ್ಕಾಗಿ ಹೊಂಚು ಹಾಕುತ್ತಾ ಇರುತ್ತಾನೆ.

More from Filmibeat

English summary
Bhagya Lakshmi kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X