Bhagya Lakshmi:ಶ್ರೇಷ್ಠಾಗೆ ಬೆವರಿಳಿಸಿದ ಪೂಜಾ; ತಾಂಡವ್ ಕಂಡ ಕನಸು ನನಸಾಗುತ್ತಾ?
ಭಾಗ್ಯಾ ಇಲ್ಲದ ಮನೆ ಬಿಕೋ ಎನ್ನುತ್ತಿದೆ. ಆದರೆ, ತಾಂಡವ್‌ಗೆ ಮಾತ್ರ ತನ್ನ ಜೊತೆ ಇದ್ದ ಪೀಡೆ ತೊಲಗಿದೆ ಎಂಬ ಖುಷಿ. ಯಾಕೆಂದರೆ ಅಷ್ಟರ ಮಟ್ಟಿಗೆ ಭಾಗ್ಯಾಳನ್ನು ತಾಂಡವ್ ದ್ವೇಷ ಮಾಡುತ್ತಾನೆ. ಇನ್ನು ತಾಂಡವ ಬೆಡ್ ರೂಂಗೆ ಬಂದು ಒಬ್ಬನೇ ಮಲಗಿ ಮೆತ್ತಗೆ ಹೇಳುತ್ತಾನೆ. "ಇನ್ನೂ ಮುಂದೆ ಈ ಬೆಡ್ ರೂಂ ನನ್ನದೇ.. ನಾನು ಈ ರೂಂಗೆ ಇವತ್ತೇ ಇಷ್ಟು ಖುಷಿಯಲ್ಲಿ ಬರುತ್ತಿರೋದು.. ಇಲ್ಲವಾದರೆ ಇಲ್ಲಿಗೆ ಬರಬೇಕಲ್ವಾ ಎಂದು ಬರುತ್ತಿದ್ದೆ" ಎಂದು ಹೇಳಿಕೊಳ್ಳುತ್ತಾನೆ.
"ಇನ್ನೂ ಮುಂದೆ ನಾನು ಮಾತ್ರ ಈ ರೂಮ್‌ನಲ್ಲಿ.. ನನಗೆ ಬಹಳ ಖುಷಿ ಆಗುತ್ತಿದೆ" ಎಂದು ಕಬೋರ್ಡ್ ನೋಡುತ್ತಾನೆ. ಭಾಗ್ಯಾ ಆಕೆಯ ಬಟ್ಟೆಯನ್ನು ಎಲ್ಲವನ್ನೂ ಎತ್ತಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗಿರುತ್ತಾಳೆ. ಇದನ್ನು ನೋಡಿದ ತಾಂಡವ್ ಆಕೆ ಈ ಮನೆಯಲ್ಲಿ ಏನೇನೋ ಇಟ್ಟಿದ್ದಾಳೆ ಅದೆಲ್ಲವನ್ನೂ ಆಕೆಯ ಮನೆಗೆ ವಾಪಸ್ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಹಾಗೆಯೇ ಅಮ್ಮ ಅಪ್ಪ ಮಕ್ಕಳ ಮನಸ್ಸನ್ನೂ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ.

ಆ ಬಳಿಕ ಅಪ್ಪ ಅಮ್ಮನ ಮನವೊಲಿಸಿ ಶ್ರೇಷ್ಠಾಳನ್ನು ಮದುವೆ ಆಗಿ ಬಿಟ್ಟರೆ, ಈ ಮನೆಯಲ್ಲಿ ನಾನು, ಹನಿ ಇಬ್ಬರೇ ಇರಬಹುದು ಎಂದು ಯೋಚನೆ ಮಾಡುತ್ತಾನೆ. ಇತ್ತ ಪೂಜಾ ಮಾತ್ರ ಶ್ರೇಷ್ಠಾ ಆಟಕ್ಕೆ ಬ್ರೇಕ್ ಹಾಕುವ ಎಲ್ಲಾ ಸೂಚನೆಗಳು ಕಾಣುತ್ತಿದೆ. ಹೌದು, ಶ್ರೇಷ್ಠಾಗೆ ಪೂಜಾ ಸರಿಯಾಗಿ ನೀರಿಳಿಸಿದ್ದಾಳೆ. ನನ್ನ ಅಕ್ಕ ಬಹಳ ಮುಗ್ಧೆ. ಆದರೆ, ಆದಕ್ಕೆ ತದ್ವಿರುದ್ದ ನಾನು. ನೀನು ಅದು ಹೇಗೆ ನನ್ನ ಅಕ್ಕನ ಜೀವನದಲ್ಲಿ ಆಟ ಆಡುತ್ತಿಯಾ? ನೋಡಬೇಕು ಎಂದು ಹೇಳುತ್ತಾಳೆ.
ಶ್ರೇಷ್ಠಾಗೆ ಬುದ್ಧಿ ಹೇಳಿದ ಪೂಜಾ
ಪೂಜಾ ಮಾತು ಕೇಳಿದ ಶ್ರೇಷ್ಠಾ "ನನಗೆ ಈಗಾಗಲೇ ತಾಂಡವ್‌ನನ್ನು ಕರೆಸಿಕೊಳ್ಳುವ ತಾಕತ್ ಇದೆ" ಎಂದಾಗ, ಪೂಜಾ ಮಾತ್ರ ಸುಮ್ಮನಿರದೆ "ಮತ್ಯಾಕೆ ಸುಮ್ಮನೆ ಇದ್ದೀಯಾ..? ಆತನನ್ನು ಕರೀ.. ಆತ ಬರುತ್ತಾನೋ ಇಲ್ಲವೋ ಎಂಬುವುದನ್ನು ನೋಡಬೇಕು" ಎಂದು ಹೇಳುತ್ತಾಳೆ. ಆದರೆ, ಶ್ರೇಷ್ಠಾಗೆ ಮಾತ್ರ ಏನು ಮಾಡಬೇಕು ತಿಳಿಯದೇ ಸುಮ್ಮನಾಗುತ್ತಾಳೆ.
ಪೂಜಾಗೆ ಸವಾಲು ಎಸೆದ ಶ್ರೇಷ್ಠಾ
ಈ ಒಂದು ತಿಂಗಳಿನಲ್ಲಿ ನನ್ನ ಹಾಗೂ ತಾಂಡವ್ ಮದುವೆ ನಡೆಯುತ್ತದೆ ಎಂದು ಹೇಳಿದಾಗ ಪೂಜಾ ಕೊಂಚ ಸಿಟ್ಟಿನಿಂದ ಹೇಳುತ್ತಾಳೆ. "ನನ್ನ ಅಕ್ಕನಿಗೆ ಡಿವೋರ್ಸ್ ಆಗದೆ ಅದು ಹೇಗೆ ನೀನು ಮದುವೆ ಆಗುತ್ತಿಯಾ..? ಪೊಲೀಸ್ ಸ್ಟೇಷನ್‌ನಲ್ಲಿ ಈ ಬಗ್ಗೆ ಒಂದು ಕೇಸ್ ಹಾಕಿದರೆ ಸಾಕು" ಎಂದು ಹೇಳಿದಾಗ, ಮುಂದೆ ಶ್ರೇಷ್ಠಾ ಮಾತನಾಡಲು ಆಗದೆ ಸುಮ್ಮನೆ ಇರುತ್ತಾಳೆ.

ಶ್ರೇಷ್ಠಾ ಮಾತಿಗೆ ಬಗ್ಗದ ಪೂಜಾ
ಪೂಜಾ ಮಾತ್ರ ಶ್ರೇಷ್ಠಾಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಇತ್ತ ತಾಂಡವ್ ಮಕ್ಕಳ ಬಳಿ ಬಂದು ಪ್ರೀತಿ ನಾಟಕ ಆಡಿದಾಗ ಗುಂಡಣ್ಣ ಹೇಳುತ್ತಾನೆ. "ಸ್ಕೂಲ್‌ನಲ್ಲಿ ಅಷ್ಟೆಲ್ಲ ರಾದ್ಧಾಂತ ಆಯಿತು. ಹಾಗೆಯೇ ಅಕ್ಕನಿಗೆ ಆಕ್ಷಿಡೆಂಟ್ ಆಗಿದೆ. ಈ ವೇಳೆ ನೀವು ಎಲ್ಲಿ ಇದ್ರಿ..? ಆಗ ನಿಮಗೆ ನಾನು ಬೇಡವಾಗಿದ್ನಾ?" ಎಂದು ಹೇಳುತ್ತಾರೆ. ಇದನ್ನು ಕೇಳಿದ ತಾಂಡವ್‌ಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಬೇಸರದಲ್ಲಿ ಇರುತ್ತಾನೆ. ತಂದೆಯ ಮುಖ ನೋಡಲು ಆಗದೆ.. ಗುಂಡಣ್ಣ ಅಲ್ಲಿಂದ ಹೋಗುತ್ತಾನೆ. ಆದರೆ ತನ್ವಿ ಬಳಿ ಕೂಡ ತಾಂಡವ್ ಅದೇ ನಾಟಕ ಆಡುತ್ತಾನೆ. ಆದರೆ, ಅದನ್ನು ಒಪ್ಪುವ ಸ್ಥಿತಿಯಲ್ಲಿ ತನ್ವಿ ಇರುವುದಿಲ್ಲ.


Click it and Unblock the Notifications











