Bhagya Lakshmi ; ತಾಂಡವ್- ಶ್ರೇಷ್ಠಾ ಲವ್ವು, ಭಾಗ್ಯ ನೋವು, ಆಗಬಾರದ್ದು ಆಗಿ ಹೋಯ್ತು, ಮುಂದೆ..?

By ಪೂರ್ವ

ಭಾಗ್ಯಗೇ ನಿಜ ವಿಚಾರ ತಿಳಿದರೆ ಎಲ್ಲಿ ನನ್ನ ಮಗನನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಭಯ ಕುಸುಮಾಗೆ. ಆದರೆ ಭಾಗ್ಯಗೆ ಇದ್ಯಾವುದು ತಿಳಿದಿರುವುದಿಲ್ಲ. ತನ್ನ ಗಂಡ ಮತ್ತು ಸಂಸಾರ ಎಂದುಕೊಂಡಿದ್ದ ಭಾಗ್ಯ ಜೀವನದಲ್ಲಿ ಇದೀಗ ಬಿರುಗಾಳಿಯೆ ಎದ್ದುಬಿಟ್ಟಿದೆ. ಭಾಗ್ಯ ಗೆ ಕಪಲ್ಸ್ ಡಿನ್ನರ್ ಆರೆಂಜ್ ಮಾಡುವ ಕೆಲಸ ಹಾಗೆಯೇ ಯಾವ ರೀತಿ ಅವರು ಊಟ ಮಾಡಲು ಕುಳಿತುಕೊಳ್ಳುವ ಜಾಗ ಹೇಗೆ ಇರಬೇಕು ಅದೆಲ್ಲದರ ಬಗ್ಗೆ ಭಾಗ್ಯ ಡಿಸೈಡ್ ಮಾಡಿರುತ್ತಾಳೆ. ಅದೇ ರೀತಿ ಆ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿರುತ್ತಾಳೆ. ಊಟಕ್ಕೆ ಬಂದ ತಾಂಡವ ಹಾಗೂ ಶ್ರೇಷ್ಠ ಗೆ ಡಿನ್ನರ್ ಅರೆಂಜ್ಮೆಂಟ್ ನೋಡಿ ಸಖತ್ ಖುಷಿ ಆಗುತ್ತದೆ.

ತಾಂಡವ ಮಾತ್ರ ಈ ಅರೇಂಜ್ಮೆಂಟ್ ನೋಡಿ ಕಳೆದೆ ಹೋಗಿ ಬಿಡುತ್ತಾನೆ. ಆತನಿಗೆ ತನ್ನ ಜೀವದ ಗೆಳತಿಯ ಜೊತೆ ಸಮಯ ಕಳೆಯುವುದು ಎಂದರೆ ಬಹಳ ಇಷ್ಟ . ಆದರೆ ತಾಂಡವ ಗೆ ಈಗಾಗಲೇ ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಇರುವಾಗ ಇನ್ನೊಬ್ಬಳ ಮೇಲೆ ಲವ್ ಆಗುವುದು ಎಂದರೆ ಏನು ಅರ್ಥ ಎಂದು ಅನೇಕ ಜನರು ತಾಂಡವ ಗೆ ಪ್ರಶ್ನೆ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ತಾಂಡವ ನ ನಡವಳಿಕೆ ಕೊಂಚವೂ ಮೆಚ್ಚುಗೆ ಆಗುತ್ತಿಲ್ಲ. ಇತ್ತ ಭಾಗ್ಯ ತನ್ನ ಕುಟುಂಬ ಚೆನ್ನಾಗಿರಲಿ ಎಂದು ಸತತ ಪ್ರಯತ್ನ ಮಾಡುತ್ತಿರುತ್ತಾಳೆ.

Bhagya Lakshmi serial 17th November written update

ಆದರೆ ಆಕೆಗೆ ಸಿಕ್ಕ ಪ್ರತಿಫಲ ಮಾತ್ರ ಸೊನ್ನೆ ಎಂದು ಹೇಳಿದರೆ ತಪ್ಪಾಗದು. ಕುಸುಮಗೆ ಮಾತ್ರ ತನ್ನ ಸೊಸೆಗೆ ಯಾವುದೇ ವಿಚಾರ ಗೊತ್ತಾಗಬಾರದು. ಆಕೆಗೆ ತಾಂಡವ ನ ವಿಚಾರಗಳು ಗೊತ್ತಾದರೆ ಖಂಡಿತವಾಗಿ ತನ್ನ ಗಂಡನನ್ನು ಆಕೆ ಬಿಟ್ಟು ಹೋಗುತ್ತಾಳೆ.ಇದಕ್ಕೆ ಆಸ್ಪದ ಮಾಡಿಕೊಡಬಾರದು ಎಂದು ದೇವರ ಪೂಜೆ ವೃತಕ್ಕೆ ಮೊರೆ ಹೋಗುತ್ತಾಳೆ. ಆದರೆ ಕೊನೆಗೆ ದೇವರಿಗೆ ಮಾಡಿದ ವ್ರತವೆಲ್ಲ ಭಂಗ ಆಗುತ್ತದೆ. ಆಗ ಅಲ್ಲಿನ ಅರ್ಚಕರು ಹೇಳುತ್ತಾರೆ. ದೇವರಿಗೆ ಮಾಡಿದ ವ್ರತ ಫಲಿಸಲಿಲ್ಲ ಎಂದು ಹೇಳಿದಾಗ ಮಾತ್ರ ಕುಸುಮ ಕೊಂಚ ಜೋರಾಗಿಯೇ ಅಳಲು ಶುರು ಮಾಡುತ್ತಾಳೆ. ಆಕೆಗೆ ತನ್ನ ಮಗ ಚೆನ್ನಾಗಿರಬೇಕು ಎನ್ನುವ ಸ್ವಾರ್ಥದ ಆಲೋಚನೆ ಅದನ್ನು ಬೇರೆಯವರು ಕುಸುಮ ಗೆ ಹೇಳಿದಾಗ ಆಕೆಗೆ ಬಹಳ ಸಿಟ್ಟು ಬರುತ್ತದೆ.

ಕುಸುಮ ಸ್ವಭಾವವನ್ನು ಬಿಡಿಸಿ ಹೇಳಿದ ಗಂಡ

ಆದ್ರೆ ಕೊನೆಗೆ ಆಕೆಗೆ ಆಕೆಯ ಗಂಡನೇ ನೀನು ಕೇವಲ ನಿನ್ನ ಮಗನ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿದ್ಧಿಯಾ ಆದರೆ ನಿನ್ನ ಸೊಸೆಯ ಬಗ್ಗೆ ನೀನು ಆಲೋಚನೆ ಮಾಡುತ್ತಿಲ್ಲ. ಆಕೆಗೆ ನಿಜ ವಿಚಾರ ತಿಳಿದರೆ ಆಕೆ ಖಂಡಿತವಾಗಿ ಬದುಕಿ ಇರುತ್ತಾಳೆ ಎಂದುಕೊಂಡು ಇದ್ದೀಯಾ. ಆಕೆಗೆ ತನ್ನ ಗಂಡ ಎಂದರೆ ಪಂಚ ಪ್ರಾಣ. ತನ್ನ ಗಂಡನಿಗಾಗಿ ಏನು ಬೇಕಾದರೂ ಮಾಡಲು ಆಕೆ ರೆಡಿ ಇರುತ್ತಾಳೆ ಆದರೆ ತಾಂಡವಗೆ ಭಾಗ್ಯ ಎಂದರೆ ಬಹಳ ತಾತ್ಸಾರ ಮನೋಭಾವ.

ಖುಷಿಯಲ್ಲಿ ತೇಲಾಡುತ್ತಿರುವ ತಾಂಡವ್

ತಾಂಡವ ಡಿನ್ನರ್ ಪಾರ್ಟಿಯಲ್ಲಿ ಜೋರಾಗಿಯೇ ಶ್ರೇಷ್ಠ ಬಳಿ ನನಗೆ ಹಲವಾರು ವರ್ಷಗಳು ಆದ ಬಳಿಕ ಸರಿಯಾದ ಪಾರ್ಟನರ್ ನನಗೆ ಸಿಕ್ಕಿದ್ದು. ನನಗೆ ಪಾರ್ಟನರ್ ಸಿಕ್ಕೆ ಇರಲಿಲ್ಲ. ಸರಿಯಾದ ಪ್ರೀತಿ ಸಿಕ್ಕಿಲ್ಲ. ಇದೀಗ ನನಗೆ ಸರಿಯಾದ ಲೈಫ್ ಪಾರ್ಟನರ್ ಸಿಕ್ಕಿದ್ದಾರೆ ಎಂದು ಹೇಳಿದಾಗ ಭಾಗ್ಯ ಇವರಿಬ್ಬರನ್ನು ನೋಡುತ್ತಾಳೆ. ಭಾಗ್ಯ ಗೆ ಒಂದೇ ಬಾರಿಗೆ ಸಿಡಿಲೆರಗಿದ ಹಾಗೆ ಆಗುತ್ತದೆ. ಭಾಗ್ಯಗೆ ನಿಂತ ನೆಲವೇ ಕುಸಿದ ಅನುಭವ ಆಗುತ್ತದೆ. ತನ್ನ ಗಂಡನನ್ನು ಬೇರೆಯವರ ಜೊತೆಯಲ್ಲಿ ನೋಡಿದಾಗ ಆಕೆಗೆ ಏನು ಮಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ.


ಶ್ರೇಷ್ಠನ ಜೊತೆ ತಾಂಡವನನ್ನು ಕಂಡು ದಂಗಾದ ಭಾಗ್ಯ

ತಾನು ಇಷ್ಟೆಲ್ಲ ಮಾಡಿದ್ದು ತನ್ನ ಗಂಡ ಹಾಗು ಶ್ರೇಷ್ಟನಿಗಾಗಿಯಾ ಎಂದು ಆಕೆ ಅಂದುಕೊಂಡು ಇರುತ್ತಾಳೆ. ಭಾಗ್ಯ ಗೆ ತಾಂಡವ ನ ಮಾತು ಕೇಳಿ ಬಹಳ ನೋವು ಆಗುತ್ತದೆ. ಶ್ರೇಷ್ಠ ತಾಂಡವಗೆ ತಾಳಿ ಕಟ್ಟಲು ಹೇಳಿದಾಗ ನಾನೇ ಇವತ್ತು ತಾಳಿ ಕಟ್ಟುತ್ತೇನೆ ಎಂದು ಹೇಳಿ ರೆಸಾರ್ಟ್ ಸರ್ವೆಂಟ್ ಬಳಿ ತಾಳಿ ತರಲು ಹೇಳುತ್ತಾನೆ. ಭಾಗ್ಯ ತಾಳಿ ತರುವಾಗ ಇಷ್ಟೆಲ್ಲ ಘಟನೆಯನ್ನು ತನ್ನ ಕಣ್ಣಾರೆ ನೋಡುತ್ತಾಳೆ ಆಘಾತಗೊಂಡು ಅಳುತ್ತಾಳೆ. ಇತ್ತ ಕುಸುಮಾ ಗೆ ಬಹಳ ಆತಂಕ ಆಗಿರುತ್ತದೆ.ತನ್ನ ಮಗನ ಜೀವನ ಹಾಳಾಗಿ ಹೋಯಿತು ಎನ್ನುವ ಆಲೋಚನೆಯಲ್ಲಿ ಇರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X