Bhagya Lakshmi ; ಭಾಗ್ಯ ಕೆನ್ನೆಗೆ ಹೊಡೆದ ತಾಂಡವ್? ಧಿಮಾಕಿಗೆ ಏನು ಕಮ್ಮಿ ಇಲ್ಲ ಎಂದ ನೆಟ್ಟಿಗರು !

By ಪೂರ್ವ

ಭಾಗ್ಯ ಎಂದರೆ ತಾಂಡವ್ ಗೆ ಅಲರ್ಜಿ. ಭಾಗ್ಯ ಜೊತೆ ಜೀವನ ಮಾಡಬೇಕು. ಆಕೆಯ ಜೊತೆ ಖುಷಿಯಾಗಿ ಇರಬೇಕು ಎನ್ನುವ ಆಲೋಚನೆ ತಾಂಡವನಿಗೆ ಇಲ್ಲ. ಆದರೆ ಶ್ರೇಷ್ಠ ಎಂದರೆ ತಾಂಡವ್ ಗೆ ಬಹಳಷ್ಟು ಪ್ರೀತಿ. ಆಕೆಯ ಅಂದಕ್ಕೆ ತಾಂಡವ್ ಮರುಳಾಗಿದ್ದಾನೆ. ಆತನಿಗೆ ಇದೀಗ ಹೆಂಡತಿಯು ಬೇಡ, ಅಮ್ಮನೂ ಬೇಡ ಮಕ್ಕಳು ಕೂಡ ಬೇಡವೇ ಬೇಡ. ತಾಂಡವ್ ಗೆ ಶ್ರೇಷ್ಠ ನನ್ನು ಹೇಗಾದರೂ ಮಾಡಿ ಮದುವೆ ಆಗಬೇಕು. ಆಕೆಯ ಜೊತೆ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕು ಎನ್ನುವ ಆಸೆ. ಕೋಪದ ಭರದಲ್ಲಿ ಭಾಗ್ಯ ಡೈವರ್ಸ್ ಪೇಪರ್ ಗೆ ಸಹಿ ಹಾಕಿದ್ದೆ ಹಾಕಿದ್ದು, ತಾಂಡವ್ ಗೆ ಬಹಳ ಖುಷಿ. ಶ್ರೇಷ್ಠ ಮದುವೆ ಆಗಲು ಇನ್ನೂ ಭಾಗ್ಯ ಅಡ್ಡಿ ಇರುವುದಿಲ್ಲ.

ಭಾಗ್ಯ ಇನ್ನೂ ನನ್ನ ಬದುಕಿಗೆ ಬರುವುದು ಇಲ್ಲ. ಇನ್ನೂ ಮೇಲೆ ನಾನು ಸ್ವಾತಂತ್ರ್ಯ ದಿಂದ ಇರಬಹುದು ಅಂದುಕೊಂಡು ಶ್ರೇಷ್ಠ ನ ಮದುವೆ ಆಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಶ್ರೇಷ್ಠ ಗೆ ಬಹಳ ಖುಷಿ ತಾನು ಪ್ರೀತಿಸಿದವನ ಜೊತೆ ಹಸೆಮಣೆ ಏರುವ ತವಕ ಆಕೆಗೆ. ತಾಂಡವನ ಮನೆಯಲ್ಲಿ ಮದುವೆ ಏರ್ಪಾಡು ಮಾಡುತ್ತಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಮದುವೆ ಆಗುತ್ತೆ ಎನ್ನುವಾಗ ತಾಂಡವ್ ಮನೆಗೆ ಪೊಲೀಸರು ಎಂಟ್ರಿ ಕೊಡುತ್ತಾರೆ. ಪೊಲೀಸರನ್ನು ನೋಡಿ ತಾಂಡವ್ ಗೆ ಕೊಂಚ ಭಯ ಆಗುತ್ತದೆ. ಜೊತೆಗೆ ಭಾಗ್ಯ ಕೂಡ ಇದ್ದಿದ್ದರಿಂದ ಇದು ಭಾಗ್ಯದೆ ಕಿರಿ ಕಿರಿ ಎಂದು ಆತನಿಗೆ ಮನದಟ್ಟು ಆಗುತ್ತದೆ. ಪೊಲೀಸರ ಬಳಿ ಅದೆಷ್ಟೇ ಕನ್ವಿನ್ಸ್ ಮಾಡಲು ಬಂದರು ಪೊಲೀಸರು ತಾಂಡವನ ಮಾತನ್ನು ಕೇಳಲು ತಯಾರಿ ಇರುವುದಿಲ್ಲ.

Bhagya Lakshmi serial 19th December written update

ಭಾಗ್ಯ ಡೈವೋರ್ಸ್ ಪೇಪರ್ ಗೆ ಸಹಿ ಹಾಕುವುದನ್ನು ಕಾಯುತ್ತಾ ಇದ್ದೀರಾ ನೀವು, ಆಕೆ ಸಹಿ ಮಾತ್ರ ಹಾಕಿರುವುದು ನಿಮಗೆ ಇನ್ನೂ ಡೈವೋರ್ಸ್ ಆಗಿಲ್ಲ ಎಂದು ಕಟುವಾಗಿ ಪೊಲೀಸರು ಹೇಳುತ್ತಾರೆ. ತಾಂಡವ್ ನೀವು ಮಾಡುತ್ತಿರುವುದು ತಪ್ಪು, ಮೊದಲನೇ ಹೆಂಡತಿ ಇರುವಾಗಲೇ ಇನ್ನೊಂದು ಮದುವೆ ಆಗಿರುವುದು ಸರಿಯಲ್ಲ ಎಂದು ಖಡಕ್ ಆಗಿ ಹೇಳುತ್ತಾರೆ. ಆಗ ಕುಸುಮ ಹಾಗೂ ಆಕೆಯ ಗಂಡ ಎಲ್ಲರೂ ಕೂಡ ಬರುತ್ತಾರೆ. ತಾಂಡವ್ ಏನೋ ಕುಟುಂಬದವರ ಜೊತೆ ಮಾತನಾಡಬೇಕು ಎಂದು ಕರೆದುಕೊಂಡು ಹೋಗಿ ಮಾತಿನ ಭರದಲ್ಲಿ ಭಾಗ್ಯ ಗೆ ಹೊಡೆಯುತ್ತಾನೆ. ಇದನ್ನು ನೋಡಿದ ಪೊಲೀಸರು ಭಾಗ್ಯ ಬಳಿ ಹೇಳುತ್ತಾರೆ.

ಪೊಲೀಸರ ಮಾತು ಕೇಳಿ ನಡುಗಿದ ತಾಂಡವ

ತಾಂಡವ್ ಅವರ ಮೇಲೆ ಬೇರೆಲ್ಲಾ ಕೇಸ್ ಇದೆ. ಅದಕ್ಕೆ ಇನ್ನೊಂದು ಕೇಸ್ ಸೇರಿಸೋಣ, ನಿಮ್ಮ ಮೇಲೆ ಕೈ ಮಾಡಿದ್ದಾರೆ ಎಂದು ಒಂದು ಕೇಸ್ ಕೊಡಿ ಲಾಕಪ್ ನಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ ಎಂದು ಹೇಳಿದಾಗ ತಾಂಡವ ಮಾತ್ರ ಭಯದಲ್ಲಿ ನಡುಗುತ್ತಾನೆ. ಭಾಗ್ಯ ಪೊಲೀಸರಿಗೆ ಗಂಡನ ವಿರುದ್ಧ ಕಂಪ್ಲೇಂಟ್ ಕೊಡುವುದಿಲ್ಲ. ಆದರೆ ಮುಂದೆ ಈ ರೀತಿ ನಡೆದುಕೊಂಡರೆ ಕಾನೂನು ಸಮರ ಖಂಡಿತ ಎನ್ನುವ ಎಚ್ಚರಿಕೆಯನ್ನು ಗಂಡನಿಗೆ ಕೊಡುತ್ತಾಳೆ. ಭಾಗ್ಯ ಮಾತ್ರ ದರ್ಪದಿಂದ ನಾನು ಈ ಮನೆ ಬಿಟ್ಟು ಹೋಗಿದ್ದೆ ಆದರೆ ಇದೀಗ ಇರುವಷ್ಟು ದಿನ ಈ ಮನೆಯಲ್ಲಿ ನಾವೆಲ್ಲರೂ ಇರಬೇಕು ಎಂದು ನಿಶ್ಚಯ ಮಾಡಿದ್ದೇವೆ. ಈ ಮನೆಗೆ ಬೇಡದೆ ಇದ್ದವರು ಮನೆಯಿಂದ ಹೊರ ಹೋಗಬಹುದು ಎಂದು ಹೇಳಿದಾಗ ಶ್ರೇಷ್ಠ ಮಾತ್ರ ಭಾಗ್ಯ ಮಾತನ್ನು ಕೇಳುವುದು ಇಲ್ಲ.

ಗಂಡನಿಗೆ ತಾಕೀತು ಮಾಡಿದ ಭಾಗ್ಯ

ಇದನ್ನು ನೋಡಿದ ಭಾಗ್ಯ ಗೆ ಬಹಳ ಸಿಟ್ಟು ಬರುತ್ತದೆ. ತನ್ನ ಗಂಡನಿಗೆ ತಾಕೀತು ಮಾಡುತ್ತಾಳೆ. ಶ್ರೇಷ್ಟ ನನ್ನು ಆಕೆಯ ಮನೆಯಲ್ಲಿ ಬಿಡಿ ಎಂದು ಕೋಪಗೊಂಡ ಹೇಳುತ್ತಾಳೆ. ಇತ್ತ ತಾಂಡವ್ ಗೆ ಬಹಳ ಸಿಟ್ಟು ಬರುತ್ತದೆ. ಭಾಗ್ಯ ಪೊಲೀಸರನ್ನು ಕರೆತಂದು ರಾದ್ಧಾಂತ ಮಾಡುತ್ತಾರೆ ಎಂದುಕೊಂಡು ಇರಲಿಲ್ಲ. ಶ್ರೇಷ್ಠ ಸಪ್ಪಗೆ ಮುಖ ಮಾಡಿ ತಾಂಡವ್ ಮನೆಯಿಂದ ಹೊರ ನಡೆಯುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X