BhagyaLakshmi ; ಭಾಗ್ಯ ಮನೆಗೆ ಬಂದ ಶ್ರೇಷ್ಠ, ಮುಂದಿದೆ ಮಾರಿ ಹಬ್ಬ ಎಂದ ಫ್ಯಾನ್ಸ್..!
ತಾಂಡವ ಮೋಸ ಮಾಡುತ್ತಿದ್ದಾನೆ ಎಂದು ತಿಳಿದ ಭಾಗ್ಯ ಎಚ್ಚೆತ್ತುಕೊಳ್ಳುತ್ತಾಳೆ. ಆಕೆಗೆ ಬಹಳಷ್ಟು ಬೇಸರ. ತನ್ನ ಗಂಡ ಏನೇ ಮಾಡಿದರೂ ಏನೇ ಹೇಳಿದರೂ ಅದೆಲ್ಲವನ್ನೂ ಅವುಡುಗಚ್ಚಿ ಕೇಳಿಸಿಕೊಳ್ಳುತ್ತಿದ್ದ ಭಾಗ್ಯ ಗೆ ಹೇಗಾದರೂ ತನ್ನ ಗಂಡನಿಗೆ ಒಳ್ಳೆಯ ಪಾಠ ಕಲಿಸಬೇಕು ಇಲ್ಲವಾದರೆ ಖಂಡಿತವಾಗಿಯೂ ನನಗೆ ಉಳಿಗಾಲ ಇಲ್ಲ ಎನ್ನುವುದು ತಿಳಿದಿದೆ. ಭಾಗ್ಯ ತನ್ನ ಗಂಡನನ್ನು ಅತಿಯಾಗಿ ಪ್ರೀತಿಸಿದ್ದಳು. ಎದೆ ಎತ್ತರಕ್ಕೆ ಬೆಳೆದ ಇಬ್ಬರು ಮಕ್ಕಳು ಸುಂದರವಾದ ಕುಟುಂಬ. ಆದರೆ ಅದ್ಯಾಕೋ ಭಾಗ್ಯ ನನ್ನು ನೋಡಿದರೆ ತಾಂಡವ್ ಗೆ ಕೋಪ. ಯಾವಾಗ ನೋಡಿದರೂ ಸಿಡಿ ಸಿಡಿ ಅನ್ನುತ್ತಿರುತ್ತಾನೆ.
ಅದೆಲ್ಲವನ್ನೂ ತಡೆದುಕೊಂಡ ಭಾಗ್ಯ. ಏನೇ ಆದರೂ ಗಂಡ ಹೇಳಿದ ಹಾಗೆ ಇರಬೇಕು. ಆತನ ಮನಸ್ಸನ್ನು ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂದು ಪಣ ತೊಡುತ್ತಾಳೆ. ಆದರೆ ಅಲ್ಲಿ ಕೂಡ ಭಾಗ್ಯ ಗೆ ಸೋಲೇ ಕಾಣುತ್ತದೆ. ಆದರೆ ಇತ್ತೀಚೆಗೆ ಶ್ರೇಷ್ಠ ಜೊತೆ ತನ್ನ ಪತಿರಾಯನನ್ನು ನೋಡಿದ ಭಾಗ್ಯ ಗೆ ಆಕಾಶವೇ ಕಳಚಿ ಮೇಲೆ ಬಿದ್ದ ಅನುಭವವಾಗಿದೆ. ಅದು ಬೇರೆ ಶ್ರೇಷ್ಠ ಹಾಗೆಯೇ ತಾಂಡವ ಇಬ್ಬರು ಭಾಗ್ಯ ಎದುರೆ ಸಿಕ್ಕಿ ಬಿದ್ದಿದ್ದಾರೆ. ಹೋಟೆಲ್ ನವರು ಶ್ರೇಷ್ಟಗೂ ತಾಂಡವ್ ಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಆದರೂ ತಾಂಡವ್ ಗೆ ಸ್ವಲ್ಪ ನಾಚಿಕೆ ಎನ್ನುವುದು ಇಲ್ಲ. ಕೊನೆಗೆ ಭಾಗ್ಯ ಬಂದೆ ಅವರಿಬ್ಬರನ್ನು ಬಿಡಿಸುವ ಪರಿಸ್ಥಿತಿ ಬಂದೆ ಬಿಟ್ಟಿತು.

ತನ್ನ ಗಂಡ ಶ್ರೇಷ್ಠ ಜೊತೆ ಹೋಟೆಲ್ ಗೆ ಬಂದಿರುವುದು ಭಾಗ್ಯ ಗೆ ತಿಳಿದೆ ಇದ್ದ ಕಾರಣ ಭಾಗ್ಯ ಎನು ಮಾತನಾಡದೆ ತಾಂಡವ್ ನನ್ನು ಬಿಡಿಸಿಕೊಂಡು ಅಲ್ಲಿಂದ ನೇರವಾಗಿ ಬಟ್ಟೆ ಶಾಪಿಂಗ್ ಗೆ ಹಾಗೆ ಇನ್ನಿತರ ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಹೋಗುತ್ತಾಳೆ. ಕೇಳಿದರೆ ನಾಳೆ ನಮ್ಮಿಬ್ಬರ ಆನಿವರ್ಸರಿ ಎಂದು ಹೇಳುತ್ತಾಳೆ. ಇದೆಲ್ಲ ಕೇಳಿದ ತಾಂಡವಗೆ ಕಿರಿ ಕಿರಿ ಆದರೂ ಎಲ್ಲವನ್ನೂ ತಡೆದುಕೊಂಡು ಬಿಡುತ್ತಾನೆ. ತಾಂಡವ್ ತಾಯಿ ಈ ಮೊದಲೇ ತಾಂಡವ ಗೆ ಎಚ್ಚರಿಕೆಯನ್ನು ನೀಡಿರುತ್ತಾಳೆ. ಎಲ್ಲಾದರೂ ಭಾಗ್ಯ ಗೆ ಎಲ್ಲಾ ವಿಚಾರ ತಿಳಿದರೆ ನಿನ್ನನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ. ಇದೆಲ್ಲವನ್ನೂ ಯೋಚನೆ ಮಾಡಿದ ತಾಂಡವ್ ಸುಮ್ಮನಿದ್ದು ಬಿಡುತ್ತಾನೆ.
ಭಾಗ್ಯ ವರ್ತನೆ ಕಂಡು ಗಾಬರಿಯಾದ ತಾಂಡವ್
ಶ್ರೇಷ್ಠ ಅದೆಷ್ಟೇ ತಾಂಡವ ಗೆ ಕರೆ ಮಾಡಲು ಹೋದರು ಭಾಗ್ಯ ಬಹಳ ಕೋಪದಿಂದ ಅವರು ಬ್ಯುಸಿ ಆಗಿದ್ದಾರೆ ಶ್ರೇಷ್ಠ. ನಾಳೆ ನಮ್ಮಿಬ್ಬರ ಆನಿವರ್ಸರಿ ದಯವಿಟ್ಟು ನಾಳೆ ಮನೆಗೆ ಬಾ. ನೀನು ಮನೆಗೆ ಬರಲೇ ಬೇಕೆಂದು ಶ್ರೇಷ್ಠ ನ ಇನ್ವೈಟ್ ಮಾಡುತ್ತಾಳೆ ಭಾಗ್ಯ. ಇದೆಲ್ಲವನ್ನೂ ನೋಡಿದ ತಾಂಡವಗೆ ವಿಚಿತ್ರ ಆಗುತ್ತದೆ. ಆದರೆ ಭಾಗ್ಯಗೆ ಇಷ್ಟೊಂದು ಧೈರ್ಯ ಹೇಗೆ ಎಲ್ಲಿಂದ ಎನ್ನುವ ಆಲೋಚನೆ ಆತನಿಗೆ ಮೂಡದೇ ಇರದು. ಭಾಗ್ಯ ಮನೆಯಲ್ಲಿ ಆನಿವರ್ಸರಿ ಸೆಲೆಬ್ರೇಟ್ ಮಾಡಲು ಇದ್ದ ಕಾರಣ ಎಲ್ಲಾ ಲಘುಬಗೆಯಿಂದ ಕೆಲಸ ಮಾಡುತ್ತಿರುತ್ತಾರೆ.
ಸೊಸೆಯ ಮಾತಿಗೆ ಕುಸುಮ ಸ್ಥಬ್ಧ
ಆದರೆ ಕುಸುಮ ಗೆ ಭಾಗ್ಯ ವರ್ತನೆ ಹೊಸತನದ ಹಾಗೆ ಕಾಣುತ್ತದೆ. ಭಾಗ್ಯ ಯಾಕೆ ಹೀಗೆ ಮಾಡುತ್ತಿದ್ದಾಳೆ ಏನಾಗಿದೆ ಇವಳಿಗೆ ಎಂದು ಯೋಚನೆ ಮಾಡುವ ವೇಳೆ ಪೂಜಾ ಕೂಡ ಅತ್ತೆಯ ಬಳಿ ಬಂದು ನಿಲ್ಲುತ್ತಾಳೆ. ಅಂತೂ ಇಂತೂ ಮದುವೆ ಆನಿವರ್ಸರಿ ದಿನ ಬಂದೇ ಬಿಟ್ಟಿತು. ಶ್ರೇಷ್ಠ ತಾಂಡವ್ ಮನೆಗೆ ಬರುತ್ತಾಳೆ. ಶ್ರೇಷ್ಠ ಮನೆಗೆ ಬಂದಿರುವುದನ್ನು ನೋಡಿದ ಕುಸುಮಗೆ ಬಹಳ ಕೋಪ ಬರುತ್ತದೆ. ನಿನ್ನನ್ನು ಯಾರು ಇಲ್ಲಿಗೆ ಕರೆದರು ಎಂದು ಕುಸುಮ ಕೇಳಿದಾಗ ಭಾಗ್ಯ ಕರೆದಿರುವ ಬಗ್ಗೆ ಶ್ರೇಷ್ಠ ಹೇಳುತ್ತಾಳೆ ಆಗ ಪೂಜಾಗೆ ಅಕ್ಕ ಮಾಡುತ್ತಿರುವ ಕೆಲಸ ನೋಡಿದರೆ ಎಲ್ಲೋ ಮಿಸ್ ಹೊಡೆಯುತ್ತಿದೆ ಎನ್ನುವುದು ಮಾತ್ರ ಅರ್ಥ ಆಗುತ್ತದೆ. ಆಕೆ ಮೆತ್ತಗೆ ಕುಸುಮ ಬಳಿ ಬಂದು ಅಕ್ಕ ಮಾಡುತ್ತಿರುವುದು ನೋಡಿದರೆ ಖಂಡಿತವಾಗಿಯೂ ಅಕ್ಕನಿಗೆ ಏನೋ ವಿಚಾರ ಗೊತ್ತಾಗಿದೆ ಎನ್ನುವ ವಿಚಾರ ಅರ್ಥ ಆಗುತ್ತಿದೆ ಎಂದು ಹೇಳುತ್ತಾಳೆ. ಪೂಜಾ ಮಾತಿಗೆ ಕುಸುಮ ನಡುಗಿ ಬಿಡುತ್ತಾಳೆ. ತನ್ನ ಸೊಸೆಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೋ ಎನ್ನುವ ಭಯ ಆಕೆಯಲ್ಲಿ ಮೂಡುತ್ತದೆ. ಆದರೆ ಭಾಗ್ಯ ಮನದಲ್ಲಿ ಮಾತ್ರ ನೂರರಷ್ಟು ನೋವು. ತರ ಜೊತೆಯೂ ಹೇಳಲು ಆಗದೆ ಒದ್ದಾಡಿ ಬಿಡುತ್ತಾಳೆ. ಎಲ್ಲಾ ವಿಚಾರ ಅತ್ತೆಗೆ ಪೂಜಾಗೆ ಗೊತ್ತಿದೆ. ಆದರೆ ನನಗೆ ಒಂದು ಮಾತು ಹೇಳಲೇ ಇಲ್ವಲ್ಲ ಎಂದು ಬೇಸರ ಪಡುತ್ತಾಳೆ.


Click it and Unblock the Notifications











