BhagyaLakshmi ; ಭಾಗ್ಯ ಮೇಲೆ ಮುನಿಸಿಕೊಂಡ ಶ್ರೇಷ್ಠ ಮಾಡಿದ್ದಾದರೂ ಏನ್ಗೊತ್ತಾ ?
ಶ್ರೇಷ್ಠ ಗೆ ಭಾಗ್ಯ ಜೀವನದಲ್ಲಿ ಬರಬಾರದು ಎನ್ನುವ ಬುದ್ದಿ ಮಾತುಗಳನ್ನು ಅದೆಷ್ಟೇ ಜನ ಹೇಳಿದರು ಕೂಡ ಆಕೆ ಆ ಮಾತುಗಳನ್ನು ಕೇಳುವ ಗೋಜಿ ಗೆ ಹೋಗುತ್ತಿಲ್ಲ. ಭಾಗ್ಯ ಗೆ ಮುರಿದು ಹೋದ ಸಂಬಂಧವನ್ನು ಹೇಗೆ ಸರಿಪಡಿಸುವುದು ಎನ್ನುವ ವಿಚಾರ ಅರ್ಥ ಆಗುತ್ತಿಲ್ಲ. ಗಂಡ ಇದ್ದರೂ ಇಲ್ಲದ ಹಾಗೆ. ಬೇರೆ ಹುಡುಗಿಯನ್ನು ಪ್ರೀತಿ ಮಾಡಿ ಕಟ್ಟಿಕೊಂಡ ಹೆಂಡತಿಯನ್ನೇ ದೂರ ಮಾಡಲು ಆಕೆ ಮುಂದಾಗುತ್ತಾಳೆ. ಭಾಗ್ಯ ಗೆ ತನ್ನ ಗಂಡ ಮೇಲೆ ಕೊಂಚ ಮಟ್ಟಿಗೆ ಪ್ರೀತಿ ಇತ್ತು. ಆದರೆ ಇದೀಗ ಆತನ ಮೇಲಿನ ಪ್ರೀತಿ ಸತ್ತು ಹೋಯಿತು. ತನ್ನ ಇಬ್ಬರು ಮಕ್ಕಳಿಗಾಗಿ ಭಾಗ್ಯ ಅದೆಲ್ಲವನ್ನೂ ಸಹಿಸಿಕೊಂಡಿದ್ದಾಳೆ.
ಆದರೆ ಭಾಗ್ಯ ಅತ್ತೆ ಮಾವನಿಗೆ ಭಾಗ್ಯ ಮನೆಗೆ ಮಾತ್ರ ಸೀಮಿತ ಆಗಬಾರದು ಆಕೆ ಯಾವತ್ತೂ ಏನಾದರು ಒಂದು ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರ ಆಗಬೇಕು. ಹೆಂಡತಿ ಅಡುಗೆ ಮಾಡಲು ಮಾತ್ರ ಅಲ್ಲ. ಬೇರೆ ಎಲ್ಲ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರೆ ಮಾತ್ರ ಆಕೆ ಖುಷಿಯಲ್ಲಿ ಇರಲು ಸಾಧ್ಯ . ಹಾಗೆಯೇ ಗಂಡನಿಗೆ ಆತನ ಹೆಂಡತಿಯ ಬೆಲೆ ತಿಳಿಯಲು ಸಾಧ್ಯ ಎನ್ನುವುದು ಭಾಗ್ಯ ಮಾವನ ವಾದ. ಭಾಗ್ಯ ಅದೆಷ್ಟೇ ಕೆಲಸ ಮಾಡಿದರು ತಾಂಡವ ಮಾತ್ರ ಆಕೆಯನ್ನು ಎಮ್ಮೆ ಎಂದೇ ಕರೆಯುತ್ತಾನೆ. ಆತನಿಗೆ ಭಾಗ್ಯ ಎಮ್ಮೆ ಗೆ ಸಮ. ಇದನ್ನು ಕೇಳಿದ ಸೀರಿಯಲ್ ಪ್ರೇಮಿಗಳು ಮಾತ್ರ ಸಖತ್ ಗರಂ ಆಗಿದ್ದಾರೆ. ಇನ್ನೂ ಶ್ರೇಷ್ಠ ತಾನು ಸಾಯುತ್ತೇನೆ ಎಂದು ಆಗಾಗ ತಾಂಡವನನ್ನು ಬ್ಲಾಕ್ ಮೇಲ್ ಮಾಡುತ್ತಲೇ ಇರುತ್ತಾಳೆ.

ಲವ್ವರ್ ಮಾತಿಗೆ ಮರುಳಾದ ತಾಂಡವ ಶ್ರೇಷ್ಠ ಬಳಿ ಓಡೋಡಿ ಬರುತ್ತಾನೆ. ತಾಂಡವನನ್ನು ನೋಡಿ ಶ್ರೇಷ್ಠಗೆ ಬಹಳ ಖುಷಿ. ತಾನು ಕರೆದ ತಕ್ಷಣ ಓಡಿ ಬಂದಿದ್ದಾನೆ. ಈತ ತನ್ನನ್ನು ಬಿಟ್ಟು ಎಲ್ಲಿಗೆ ಹೋಗುವುದು ಇಲ್ಲ ಎಂದುಕೊಂಡು ಬಿಡುತ್ತಾಳೆ. ಭಾಗ್ಯ ಜೀವನದಲ್ಲಿ ಬಿರುಗಾಳಿಯಾಗಿ ಬಂದ ಶ್ರೇಷ್ಠಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕು ಎಂದು ಭಾಗ್ಯ ಅಂದುಕೊಂಡು ಇರುತ್ತಾಳೆ. ತಾಂಡವ ಶ್ರೇಷ್ಠಳನ್ನು ಮನೆಗೆ ಕರೆದುಕೊಂಡು ಬರುವ ನಿರ್ಧಾರ ಮಾಡಿದ್ದಾನೆ. ನೀನು ನನ್ನನ್ನು ಮದುವೆ ಆಗದೆ ಇದ್ದರೂ ತೊಂದರೆ ಇಲ್ಲ ನಾನು ನಿನ್ನನ್ನು ಹೆಂಡತಿಯ ಹಾಗೆಯೇ ನೋಡಿಕೊಳ್ಳುತ್ತೇನೆ ಎಂದು ಶ್ರೇಷ್ಠ ಬಳಿ ಹೇಳಿದಾಗ ಆಕೆಗೆ ಮನದಲ್ಲಿ ಸಖತ್ ಖುಷಿ.
ಶ್ರೇಷ್ಠಳನ್ನು ಮನೆಗೆ ಕರೆದುಕೊಂಡು ಬಂದ ತಾಂಡವ
ನಿನ್ನನ್ನು ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ. ಯಾರು ಏನು ಮಾಡುತ್ತಾರೆ ನಾನು ನೋಡುತ್ತೇನೆಎಂದು ಖಡಕ್ ಆಗಿ ಹೇಳುತ್ತಾನೆ. ಭಾಗ್ಯ ಗೆ ಅದ್ಹೇಗೋ ತನ್ನ ಗಂಡನ ರಾಸಲೀಲೆ ಗೊತ್ತಾಗಿತ್ತು. ಶ್ರೇಷ್ಠ ಮನೆಗೆ ಬರುತ್ತಾಳೆ ಎಂದು ತಿಳಿದು ಬಹಳ ಕೋಪ ಮಾಡಿಕೊಳ್ಳುತ್ತಾಳೆ . ತಾಂಡವ ನ ತಾಯಿ ಕುಸುಮ ಬಹಳ ಅಳುತ್ತಾಳೆ. ಆಕೆಗೆ ತನ್ನ ಮೇಲೆ ಬಹಳ ನಂಬಿಕೆ ಒಂದು ಕಾಲದಲ್ಲಿ ಇತ್ತು ಆದರೆ ಇದೀಗ ಕೊಂಚವೂ ತನ್ನ ಮಗನ ಮೇಲೆ ಆಕೆಗೆ ನಂಬಿಕೆ ಉಳಿದಿಲ್ಲ. ಶ್ರೇಷ್ಠಳನ್ನು ತಾಂಡವ ಬಹಳ ಖುಷಿಯಿಂದ ಮನೆಗೆ ಕರೆದುಕೊಂಡು ಬರುತ್ತಾನೆ. ಶ್ರೇಷ್ಠ ಗೆ ಬಹಳ ಖುಷಿ. ಭಾಗ್ಯ ಶ್ರೇಷ್ಠಳನ್ನು ತನ್ನ ಕೈಯ್ಯಾರೆ ಹೊರಗಡೆ ಹಾಕಿರುತ್ತಾಳೆ.
ಭಾಗ್ಯ ಮೇಲೆ ಹಲ್ಲು ಮಸೆಯುತ್ತಿರುವ ಶ್ರೇಷ್ಠ
ಆ ದಿನಗಳನ್ನು ನೆನಪು ಮಾಡಿಕೊಂಡ ಶ್ರೇಷ್ಠ ಗೆ ಭಾಗ್ಯ ಮೇಲೆ ಬಹಳ ಕೋಪ ಬರುತ್ತದೆ. ನಿನಗೆ ನಿನ್ನ ಗಂಡನ ಜೊತೆ ಬದುಕಲು ತಡೆಗೋಡೇ ಯಾಗಿ ನಾನೇ ನಿಂತಿದ್ದೇನೆ . ನೀನು ಏನೇ ಮಾಡಿದರೂ ಕೂಡಾ ನನ್ನ ತಾಂಡವನನ್ನು ದೂರ ಮಾಡಲು ಸಾಧ್ಯವಿಲ್ಲ ಎಂದು ಶ್ರೇಷ್ಠ ಬಹಳ ಕೋಪದಿಂದ ಹೇಳುತ್ತಾ ಮನೆ ಹೊಸ್ತಿಲ ಬಳಿ ಬರುತ್ತಾಳೆ. ತಾಂಡವ ಹಾಗು ಶ್ರೇಷ್ಠಳನ್ನು ನೋಡಿದ ಭಾಗ್ಯ ತಾಯಿ ಶಾಕ್ ಆಗುತ್ತಾರೆ. ಕುಸುಮ ಮಾತ್ರ ಬಹಳ ಕೋಪದಿಂದ ತಾಂಡವನತ್ತ ನೋಡುತ್ತಾಳೆ.
ಅಮ್ಮನ ನಡೆಗೆ ತಾಂಡವ ಫುಲ್ ಖುಷ್
ತಾಂಡವ ಹಾಗು ಶ್ರೇಷ್ಠ ಮನೆಯ ಬಾಗಿಲಿಗೆ ಬಂದಾಗ ವಿಚಿತ್ರವಾಗಿ ವರ್ತಿಸಿದ ಕುಸುಮಾ ನಡೆಯನ್ನು ನೋಡಿಅಭಿಮಾನಿಗಳೇ ಶಾಕ್ ಆಗಿದ್ದಾರೆ. ಕುಸುಮಾ ಮನದಲ್ಲಿ ಏನು ಅಂದುಕೊಂಡು ಇದ್ದಾರೆ ಎನ್ನುವುದೇ ಜನರಿಗೆ ಬಹಳ ಕಾತರವಾಗಿದೆ. ಕುಸುಮಾ ವರ್ತನೆ ನೋಡಿ ತಾಂಡವನಿಗೇ ಬಹಳ ಖುಷಿ ಆಗಿದೆ. ಅಮ್ಮ ಆ ಎಮ್ಮೆ ಭಾಗ್ಯನ ಬಿಟ್ಟು ನನ್ನನ್ನೇ ಪ್ರೀತಿ ಮಾಡುತ್ತಾಳೆ ಏನೋ ಎಂದು ಬಹಳಷ್ಟು ಖುಷಿ ಪಡುತ್ತಾನೆ. ಶ್ರೇಷ್ಠ ಗೆ ತಾಂಡವ ನ ಮನೆಯಲ್ಲಿರುವುವರನ್ನು ಹೊರಗಡೆ ಹೇಗೆ ಹಾಕುವುದು ಎನ್ನುವ ಆಲೋಚನೆ. ಈಗಾಗಲೇ ತಾಂಡವ ಹಾಗೂ ಶ್ರೇಷ್ಠಳನ್ನು ಆರತಿ ಎತ್ತಿ ಮನೆಯೊಳಗೆ ಕರೆದುಕೊಂಡು ಕುಸುಮಾ ಮಾರಿ ಹಬ್ಬ ಮಾಡುವುದಂತೂ ಖಂಡಿತ.


Click it and Unblock the Notifications











