BhagyaLakshmi : ತಾಂಡವ್ ಶ್ರೇಷ್ಠ ಮಧ್ಯೆ ಫುಲ್ ಫೈಟ್, ಕತ್ತು ಹಿಡಿದು ರೂಮಿಂದ ಹೊರದಬ್ಬಿದ ತಾಂಡವ್
ತಾಂಡವ ಹಾಗೂ ಶ್ರೇಷ್ಠ ಕಿತ್ತಾಟ ನಡೆಸುತ್ತಿದ್ದಾರೆ. ತಾಂಡವ್ ಗೆ ಭಾಗ್ಯಾಳದ್ದೆ ಚಿಂತೆ. ಆಕೆಯನ್ನು ಹೇಗಾದರೂ ಮಾಡಿ ಮನೆಯಿಂದ ಓಡಿಸಬೇಕು ಇಲ್ಲವಾದರೆ ತಾನು ಅಂದುಕೊಂಡಿರುವುದು ಯಾವುದು ಆಗುವುದಿಲ್ಲ ಎಂಬ ಚಿಂತೆ. ಶ್ರೇಷ್ಠ ಗೆ ತಾಂಡವ್ ಮನೆಯ ಸೊಸೆ ಆಗಬೇಕು ಎನ್ನುವ ಆಸೆ. ಆದರೆ ಮನೆ ಕೆಲಸ ಎಲ್ಲಾ ಆಕೆಯ ಹೆಗಲಿಗೆ ಬಂದಾಗ ಅದನ್ನು ಶ್ರೇಷ್ಠ ಗೆ ತಡೆದುಕೊಳ್ಳಲು ಆಗಲೇ ಇಲ್ಲ. ಬಟ್ಟೆ ಒಗೆಯುವ ಕೆಲಸ, ತಿಂಡಿ ಮಾಡುವ ಕೆಲಸ ಇದ್ಯಾವುದು ಶ್ರೇಷ್ಠ ಬಳಿ ಮಾಡಲು ಆಗದೆ ಏನೇನೋ ಕಿತಾಪತಿ ಮಾಡಿ ಎಲ್ಲರ ಬಾಯಲ್ಲಿ ಅನ್ನಿಸಿಕೊಂಡು ಇರುತ್ತಾಳೆ.
ಭಾಗ್ಯ ತನ್ನ ಮಾವನಿಗೆ ಹೊಸ ಕಾರು ತೆಗೆದು ಕೊಡಲು ನಿರ್ಧಾರ ಮಾಡುತ್ತಾಳೆ. ಮಾವನನ್ನು ಬಹಳಷ್ಟು ಕೇರ್ ಮಾಡುತ್ತಾಳೆ ಭಾಗ್ಯ. ತನ್ನ ಮಾವ ಬಹಳ ಕುಶಿಯಿಂದ ಇರಲಿ ಎನ್ನುವ ಕಾರಣಕ್ಕೆ ಮಾವನಿಗೆ ಒಳ್ಳೆಯ ಕಾರು ಗಿಫ್ಟ್ ನೀಡಲು ನಿರ್ಧಾರ ಮಾಡಿದ್ದಾಳೆ. ಇದೆಲ್ಲವನ್ನೂ ನೋಡಿದ ತಾಂಡವ ನಿಗೆ ಶಾಕ್ ಆಗಿದೆ. ಮನೆಯಲ್ಲಿ ಪಾತ್ರೆ ತೊಳೆದುಕೊಂಡು ತಾನು ಹೇಳಿದ ಹಾಗೆ ಮಾಡಿಕೊಂಡು ಬಿದ್ದಿರುತ್ತಿದ್ದಳು. ಆದರೆ ಇದೀಗ ಭಾಗ್ಯ ಕೂಡ ಉತ್ತಮವಾದ ಕೆಲಸಕ್ಕೆ ಹೋಗುತ್ತಾಳೆ. ಆಕೆಯೂ ದುಡಿಯುತ್ತಾಳೆ ಎಂದಾಗ ತಾಂಡವನಿಗೆ ಅದೆಲ್ಲವನ್ನೂ ಸಹಿಸಲು ಸಾಧ್ಯ ಆಗುತ್ತಿಲ್ಲ.

ಕುಸುಮ ಗೆ ಇರುವುದು ಒಂದೇ ಒಂದು ಗುರಿ ಹೇಗಾದರೂ ಮಾಡಿ ಶ್ರೇಷ್ಠನನ್ನು ಈ ಮನೆಯಿಂದ ಓಡಿಸಿ ಬಿಡಬೇಕು ಆಕೆಗೆ ಏನು ಸಿಗದ ರೀತಿಯಲ್ಲಿ ಮಾಡಬೇಕು ಎನ್ನುವುದು ಕುಸುಮ ಉದ್ದೇಶ ಅದಕ್ಕಾಗಿ ಕುಸುಮ ಯಾವ ಹಂತಕ್ಕೆ ಹೋಗಲು ಬೇಕಾದರೂ ರೆಡಿ ಇರುತ್ತಾಳೆ. ತನ್ನ ಸೊಸೆ ಬಂಗಾರದಂತವಳು ಈ ಶ್ರೇಷ್ಠನಿಂದ ನನ್ನ ಮಗ ಬಹಳಷ್ಟು ಸೊರಗಿ ಹೋಗಿದ್ದಾರೆ. ಹೇಗಾದರೂ ಮಾಡಿ ನನ್ನ ಮಗ ಹಾಗೂ ಸೊಸೆಯನ್ನು ಒಂದು ಮಾಡಬೇಕು ಎಂದು ಕೊಂಡಿರುತ್ತಾರೆ. ತಾಂಡವ್ ರೂಮ್ ಒಳಗೆ ಕುಳಿತುಕೊಂಡು ಏನೋ ಯೋಚನೆ ಮಾಡುತ್ತಿರುತ್ತಾನೆ.
ಮನದಲ್ಲಿಯೇ ಆತಂಕ ಪಡುತ್ತಿರುವ ತಾಂಡವ
ತಾಂಡವ್ಗೆ ಭಾಗ್ಯ ತನ್ನ ತಂದೆಗೆ ಕಾರು ತೆಗೆದು ಕೊಡುತ್ತೇನೆ ಎಂದು ಹೇಳಿದ ಮಾತಿನಿಂದಾಗಿ ಆತನಿಗೆ ಇದ್ದಷ್ಟು ಆತಂಕ ಕಾಡಿದೆ. ಆದರೆ ಶ್ರೇಷ್ಠ ಗೆ ಮಾತ್ರ ಅವಳದ್ದೇ ಯೋಚನೆ. ಕುಸುಮ ಕೊಡುತ್ತೀರಾ ಟಾರ್ಚರ್ ತಡೆದುಕೊಳ್ಳಲಾಗದೆ ತಂಡ ಬಳಿ ಓಡೋಡಿ ಬರುತ್ತಾಳೆ ಶ್ರೇಷ್ಠ. ಮೊದಲೇ ಬಹಳ ಕೋಪದಲ್ಲಿದ್ದ ತಾಂಡವ್ಗೆ ಶ್ರೇಷ್ಠ ಗಳನ್ನು ನೋಡಿ ಬಹಳಷ್ಟು ಕೋಪ ಬರುತ್ತದೆ. ತಾಂಡವನ ತಾಯಿಯ ಬಗ್ಗೆ ಬಹಳ ಕೆಟ್ಟದಾಗಿ ಹೇಳಿದಾಗ ಆತನಿಗೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ.
ಶ್ರೇಷ್ಠ ಮಾತಿಗೆ ಮತ್ತಷ್ಟು ಕೋಪ ಮಾಡಿಕೊಂಡ ತಾಂಡವ್
ಶ್ರೇಷ್ಠ ತಾಂಡವನನ್ನು ಬಳಿ ತಾನು ಬಟ್ಟೆ ಒಗೆದ ಬಗ್ಗೆ ಹಾಗೆಯೇ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ ಸುಸ್ತಾಗಿರುವ ಬಗ್ಗೆ ತಾಂಡವ ನ ಬಳಿ ಹೇಳಲು ತಾಂಡವಗೆ ಬಹಳ ಕೋಪ ಬರುತ್ತದೆ. ಆತ ಹೇಳಿದ್ದು ಒಂದೇ ಮಾತು ನೀನು ಈ ಮನೆಗೆ ಸೊಸೆಯಾಗಿ ಬರುವ ಹೆಣ್ಣು. ಎಲ್ಲಾ ಕೆಲಸವನ್ನು ಚಾಚು ತಪ್ಪದೆ ಮಾಡು ಎಂದು ಖಡಕ್ಕಾಗಿ ಹೇಳುತ್ತಾನೆ. ಇದನ್ನು ಕೇಳಿ ಶ್ರೇಷ್ಠ ಗೆ ಬಹಳ ಕೋಪ ಬರುತ್ತದೆ. ನಾನು ನಿನ್ನನ್ನು ಮದುವೆಯಾಗಿ ಖುಷಿಯಾಗಿರಬೇಕು ಎಂದುಕೊಂಡರೆ ಈ ಪಾಟಿ ಕೆಲಸ ಹೇಳಿದರೆ ನನ್ನಿಂದ ಆಗದು ಎಂದು ಕೋಪದಿಂದ ಹೇಳಿದಾಗ ತಾಂಡವಗೆ ಇನ್ನಷ್ಟು ಸಿಟ್ಟೇರುತ್ತದೆ. ಆತ ಶ್ರೇಷ್ಠವಾದ ಕತ್ತು ಹಿಡಿದು ರೂಮಿನಿಂದ ತಳ್ಳಿ ಬಿಡುತ್ತಾರೆ. ನೀನು ಏನು ಬೇಕಾದರೂ ಮಾಡಿಕೊ ಶ್ರೇಷ್ಠ. ನನ್ನನ್ನು ನನ್ನ ಪಾಡಿಗೆ ಬಿಡು ಎಂದು ಖಡಕ್ ಆಗಿ ಹೇಳುತ್ತಾನೆ.


Click it and Unblock the Notifications











