ಭಾಗ್ಯಳ ಪತಿ ತಾಂಡವ್ ಪಾತ್ರದಲ್ಲಿ ನಟಿಸುತ್ತಿರುವ ಸುದರ್ಶನ್ ಬಗ್ಗೆ ನಿಮಗೆಷ್ಟು ಗೊತ್ತು?

By ಪ್ರಿಯಾ ದೊರೆ

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಒಂದೊಂದು ಡೈಲಾಗ್‌ಗಳು ಕೂಡ ಪ್ರೇಕ್ಷಕರ ಮನ ಮುಟ್ಟುವಂತಿದೆ. ಇದರಲ್ಲಿ ಭಾಗ್ಯ ಹಾಗೂ ಕುಸುಮಳನ್ನು ಜನ ಮೆಚ್ಚಿಕೊಂಡಿದ್ದಾರೆ. ಅತ್ತೆ ಮಾವ ಎಂದರೆ ಹೀಗಿರಬೇಕು ಎಂದು ಮಾತನಾಡಿಕೊಂಡವರೂ ಇದ್ದಾರೆ. ಆದರೆ, ಭಾಗ್ಯಳಲ್ಲಿ ಮುಗ್ಧತೆ ಸ್ವಲ್ಪ ಜಾಸ್ತಿ ಇದೆ. ಈ ಕಾಲದಲ್ಲಿ ಇಷ್ಟೊಂದು ಒಳ್ಳೆಯತನದಿಂದ ಇರುವುದು ಬಹಳ ಕಷ್ಟ ಎಂದು ಹೇಳುತ್ತಾರೆ.

ಧಾರಾವಾಹಿಯಲ್ಲಿರುವ ತಾಂಡವ್‌ನನ್ನು ಮಹಿಳಾ ಮಣಿಯರು ಬೈದುಕೊಳ್ಳುತ್ತಿದ್ದಾರೆ. ಮುದ್ದಾದ ಹೆಂಡತಿ ಮನೆಯಲ್ಲಿರುವಾಗ ಶ್ರೇಷ್ಠ ಬೇಕಿತ್ತಾ..? ಮನೆಯವರಿಗೋಸ್ಕರ 15 ವರ್ಷ ಭಾಗ್ಯಳ ಜೊತೆಗೆ ಸಂಸಾರ ಮಾಡಿ ಈಗ ಭಾಗ್ಯಳಿಗೆ ಮೋಸ ಮಾಡುತ್ತಿರುವುದು ತಪ್ಪಲ್ವಾ ಎಂದು ಹೇಳುತ್ತಿದ್ದಾರೆ.

Bhagya Lakshmi Serial Fame Actor Sudarshan Rangaprasad Personal life and other details

ಅಷ್ಟಕ್ಕೂ ಈ ಭಾರ್ಗವ್ ಪಾತ್ರ ಮಾಡಿದವರು ಮನೆಯಲ್ಲೂ ಕೂಡ ಹೀಗೆ ಕೋಪಿಷ್ಠನಾಗಿದ್ದಾನಾ..? ತಮ್ಮ ಪತ್ನಿಗೂ ಮೋಸ ಮಾಡಿದ್ದಾರಾ ಎಂಬೆಲ್ಲಾ ಪ್ರಶ್ನೆಗಳನ್ನು ಮಾಡುತ್ತಿದ್ದು, ತಾಂಡವ್ ಪಾತ್ರಧಾರಿಗೆ ಖುಷಿ ಪಡಬೇಕೋ ಇಲ್ಲ, ಬೇಸರ ಮಾಡಿಕೊಳ್ಳಬೇಕೋ ಗೊತ್ತಾಗುತ್ತಿಲ್ಲವಂತೆ. ಇನ್ನು ತಾಂಡವ್ ಪಾತ್ರದಲ್ಲಿ ನಟಿಸಿರುವ ಈ ಹೊಸ ಪ್ರತಿಭೆ ಯಾರೆಂದು ಕೇಳುವುದಾದರೆ, ಇವರು ಮತ್ಯಾರೂ ಅಲ್ಲ ನಟಿ ಸಂಗೀತಾ ಭಟ್ ಅವರ ಪತಿ.

ಕಳೆದ ಏಳು ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿ ಈ ತಿಂಗಳೇ ವಿವಾಹ ವಾರ್ಷಕೋತ್ಸವ ಆಚರಣೆ ಸಂಭ್ರಮದಲ್ಲಿದ್ದಾರೆ. ಸಂಗೀತಾ ಭಟ್ ಪತಿ ಅಲಿಯಾಸ್ ತಾಂಡವ್ ನಿಜವಾದ ಹೆಸರು ಸುದರ್ಶನ್ ರಂಗಪ್ರಸಾದ್. ಈ ಹಿಂದೆ ಸುದರ್ಶನ್ ರಂಗಪ್ರಸಾದ್ ಅವರು ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು.

ಸದಾ ಒಂದೇ ಕಡೆ ಇರುವುದಕ್ಕಿಂತಲೂ ಬ್ಯಾಕಪ್ ಅನ್ನು ಇಟ್ಟುಕೊಂಡಿರಬೇಕು ಎನ್ನುವ ಸುದರ್ಶನ್ ಅವರು ಕೆಲಸ ಮಾಡುತ್ತಲೇ ಶನಿವಾರ ಹಾಗೂ ಭಾನುವಾರ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಹಲವರನ್ನು ನಗಿಸುತ್ತಿದ್ದರು. ಸ್ನೇಹಿತರ ಜೊತೆ ಸೇರಿ ತಮ್ಮದೇ ಒಂದು ತಂಡವನ್ನು ಕಟ್ಟಿಕೊಂಡು ವೀಕೆಂಡ್ ಗಳಲ್ಲಿ ಕೆಲ ಏರಿಯಾಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಜನರಿಗೆ ಮನರಂಜನೆಯನ್ನೂ ಕೊಡುತ್ತಿದ್ದರು.

Bhagya Lakshmi Serial Fame Actor Sudarshan Rangaprasad Personal life and other details

ಇವರದ್ದೇ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದು, ಅದಕ್ಕೆ ಲೊಲ್ಭಾಗ್ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ 80ಕ್ಕೂ ಅಧಿಕ ವೀಡಿಯೋಗಳನ್ನು ಅಪ್ ಲೋಡ್ ಮಾಡಿದ್ದು, ಇದರಲ್ಲೂ ಸ್ನೇಹಿತರು ಹಾಗೂ ಸುದರ್ಶನ್ ಕನ್ನಡ ಸ್ಟ್ಯಾಂಡಪ್ ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಇವರ ವಿಡಿಯೋಗಳು ಭಾರೀ ಸದ್ದು ಮಾಡಿತ್ತು.

ಹೀಗೆ ಕಳೆದ 6-7 ವರ್ಷದಿಂದ ಸ್ಟ್ಯಾಂಡಪ್ ಕಾಮಿಡಿ ಅನ್ನು ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಅವರು ಈಗ ಕಿರುತೆರೆಯಲ್ಲಿ ತಮ್ಮ ಹೊಸ ಪಯಣವನ್ನು ಶುರು ಮಾಡಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ಸುದರ್ಶನ್ ಅವರ ಮೊದಲ ಸೀರಿಯಲ್. ಇದರಲ್ಲಿ ಭಾಗ್ಯ ಪತಿ ತಾಂಡವ್ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ ಸುದರ್ಶನ್ ರಂಗಪ್ರಸಾದ್ ಹಾಗೂ ಅವರ ಪತ್ನಿ ಇಬ್ಬರು ಪ್ರವಾಸ ಕೈಗೊಂಡಿದ್ದು, ದೆಹಲಿ, ಆಗ್ರಾ, ಜೈಪುರಗಳಿಗೆ ಭೇಟಿ ನೀಡಿದ್ದರು. ಇದರ ಫೋಟೋಗಳನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲೂ ಹಂಚಿಕೊಂಡಿದ್ದರು. ಇದೀಗ ಇಬ್ಬರೂ ಬಾಲಿಗೆ ತೆರಳಿದ್ದು, ಈ ವಿರಾಮ ಅಗತ್ಯವಿತ್ತು ಎಂದು ಸುದರ್ಶನ್ ಅವರು ಸ್ಟೇಟಸ್ ಹಾಕಿಕೊಂಡಿದ್ದಾರೆ.

ಇನ್ನು ಸಂಗೀತಾ ಭಟ್ ಚಿತ್ರರಂಗದಿಂದ ಬಹಳ ದೊಡ್ಡ ಬ್ರೇಕ್ ಪಡೆದು, ಇದೀಗ 'ಅಬ ಜಬ ದಬ' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರ ಇದೇ ತಿಂಗಳು 21ರಂದು ರಿಲೀಸ್ ಆಗಲಿದ್ದು, ಸಂಗೀತಾ ಭಟ್ ಅವರು ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Bhagya Lakshmi Serial Fame Actor Sudarshan Rangaprasad Personal life and other details. actor sudarshan rangaprasad Now acting in bhagyalakshmi serial as thandav
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X