Asha Ayyanar: ಅಭಿಮಾನಿಗಳಿಗಾಗಿ ಹೊಸ ಹೆಜ್ಜೆಯಿಟ್ಟ ನಟಿ ಆಶಾ ಅಯ್ಯನರ್

By ಪ್ರಿಯಾ ದೊರೆ

ನಟಿ ಆಶಾ ಅಯ್ಯನರ್ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಸೊಗಸಾಗಿ ನಟಿಸುತ್ತಿದ್ದಾರೆ. ಪೂಜಾ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಪೂಜಾ ಕತೆಯಲ್ಲಿ ಭಾಗ್ಯಳ ತಂಗಿ ಆಗಿದ್ದು, ಲಕ್ಷ್ಮೀ ದೊಡ್ಡಪ್ಪನ ಮಗಳು. ಸದಾ ಲಕ್ಷ್ಮೀ ಮೇಲೆ ಕಿಡಿಕಾರುವ ಪೂಜಾಗೆ ಈಗ ಕುಸುಮಾ ಅತ್ತೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಆಶಾ ನಿಜ ಜೀವನದ ಬಗ್ಗೆ ಹಲವರಿಗೆ ಕುತೂಹಲವಿದೆ. ಹಾಗಾದರೆ, ಆಶಾ ಅವರು ಓದಿದ್ದು, ಬೆಳೆದಿದ್ದು ಎಲ್ಲಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಆಶಾ ಅಯ್ಯನರ್ 'ಮೂರುಗಂಟು' ಹಾಗೂ 'ರಾಧಾರಮಣ' ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಆದರೆ ಈಗ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀಬಾರಮ್ಮ' ಧಾರಾವಾಹಿ ಒಳ್ಳೆ ಹೆಸರು ತಂದುಕೊಟ್ಟಿದೆ.

asha-ayyanar-launch-youtube-channel

ಕೆಲವೇ ಕೆಲವು ಧಾರಾವಾಹಿಗಳಲ್ಲಿ ನಟನೆ

ಸದಾ ಲಕ್ಷ್ಮೀ ಅನ್ನು ಪೂಜಾ ಗೋಳಾಡಿಸುತ್ತಿರುತ್ತಾರೆ. ಇದರಿಂದ ಅಭಿಮಾನಿಗಳು ನೇರವಾಗಿ ಆಶಾಗೆ ಬೈಯುತ್ತಾರಂತೆ. ಇದು ಆಕೆಗೂ ಖುಷಿ ಕೊಟ್ಟಿದೆ. ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಪ್ಲೇ ಮಾಡುತ್ತಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ಸದ್ಯ ಆಶಾಗೆ ದೊಡ್ಡ ಬ್ರೇಕ್ ತಂದುಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದ್ದಾರೆ.

ದಾವಣಗೆರೆ ಬೆಣ್ಣೆ ದೋಸೆಯಂತಿರುವ ನಟಿ

ಆಶಾ ಮೂಲತಃ ದಾವಣಗೆರೆಯವರೇ. ಸೆಂಟ್ ಜಾನ್ಸ್ ಹೈ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಆಶಾ ಅಯ್ಯನರ್ ಸಕ್ರಿಯರಾಗಿದ್ದಾರೆ. ಸೀರೆಯಲ್ಲಿ ವಿವಿಧ ರೀತಿಯಲ್ಲಿ ಮೇಕಪ್ ಮಾಡಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಈಗಂತೂ ಧಾರಾವಾಹಿ ತಂಡದೊಂದಿಗೆ ಅತಿ ಹೆಚ್ಚು ರೀಲ್ಸ್ ಮಾಡುತ್ತಿರುತ್ತಾರೆ. ಹಲವು ಥೀಮ್‌ಗಳಲ್ಲಿ ರೀಲ್ಸ್ ಮಾಡುವ ಆಶಾ ಅಯ್ಯನರ್, ಸಕತ್ ಕಾಮಿಡಿ ಮಾಡುತ್ತಾರಂತೆ. ಪೂಜಾ ಪಾತ್ರಕ್ಕೂ ಆಶಾಗೂ ಅಜಗಜಾಂತರ ವ್ಯತ್ಯಾಸವಿದೆ.

ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಶಾ

ಸದಾ ಹೊಸ ಹೊಸ ಬಗೆಯ ಉಡುಗೆಯಲ್ಲಿ ಮಿಂಚುವ ಆಶಾ ಅಯ್ಯನಾರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಹೊಸ ಹೊಸ ರೀತಿಯಲ್ಲಿ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ತುಂಬಾ ರೀಲ್ಸ್ ಕೂಡ ಮಾಡುತ್ತಿರುತ್ತಾರೆ. ಇದೀಗ ಅಭಿಮಾನಿಗಳ ಬೇಡಿಕೆ ಮೇರೆಗೆ ಆಶಾ ತಮ್ಮದೇ ಸ್ವಂತ ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಈ ಬಗ್ಗೆ ಮೊದಲ ವೀಡಿಯೋ ಮಾಡಿರುವ ಆಶಾ, ಶೂಟಿಂಗ್ ಬಗ್ಗೆ, ತಮ್ಮ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ನೇರವಾಗಿ ಕೇಳಬಹುದು

ಆಶಾ ಬಗ್ಗೆ ಯಾವುದೇ ವಿಚಾರ ತಿಳಿಯಬೇಕಿದ್ದರೂ, ಅಭಿಮಾನಿಗಳು ಇನ್ಮುಂದೆ ನೇರವಾಗಿ ಪ್ರಶ್ನೆ ಕೇಳಿ ಉತ್ತರ ಪಡೆಯಲು ಈ ಯೂಟ್ಯೂಬ್ ಚಾನೆಲ್ ಸಹಕಾರಿಯಾಗಿದೆ. ಪ್ರತಿಯೊಂದು ವಿಚಾರವನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಶೇರ್ ಮಾಡಿಕೊಳ್ಳುವುದಾಗಿ ಆಶಾ ಹೇಳಿದ್ದಾರೆ. AshaDPU ಎಂದು ಆಶಾ ಅವರು ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಇದಕ್ಕೆ ಹಲವರು ವಿಶ್ ಮಾಡಿ ಕಮೆಂಟ್ ಮಾಡಿದ್ದಾರೆ.

More from Filmibeat

English summary
Bhagya lakshmi serial actress asha ayyanar launch youtube channel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X