Bhagya Lakshmi:ಪೂಜಾ ಎಂಟ್ರಿಗೆ ತಂಡಾ ಹೊಡೆದ ಶ್ರೇಷ್ಠ; ಮಕ್ಕಳಿಗಾಗಿ ಯಾವ ತ್ಯಾಗಕ್ಕೂ ಮುಂದಾದ ಭಾಗ್ಯ ?

By ಪೂರ್ವ

ತಾಂಡವ್ ಇದೀಗ ಭಾಗ್ಯ ಇಲ್ಲದ ಮನೆಗೆ ಬಂದಿದ್ದಾನೆ. ತಾಂಡವ್‌ಗೆ ಭಾಗ್ಯಳನ್ನು ಕಂಡರೂ ಆಗುತ್ತಿಲ್ಲ. ಕಾರಣ ಶ್ರೇಷ್ಠ ಹತ್ತಿಸಿದ ಬೆಂಕಿ. ಇದೀಗ ತಾಂಡವ್‌ ಮನೆಯನ್ನು ಸುಡುತ್ತಿದೆ. ಇದೀಗ ಭಾಗ್ಯ ತನ್ನ ಗಂಡನ ಮನೆಯನ್ನು ತೊರೆದು ತವರು ಮನೆ ಸೇರಿಕೊಂಡಿದ್ದಾರೆ. ಆಕೆಯ ಉದ್ದೇಶ ಒಂದೇ, ನನ್ನ ಜೊತೆ ನನ್ನ ಗಂಡ ಸರಿಯಾಗಿ ಸಂಸಾರ ನಡೆಸಲಿಲ್ಲ. ಆದರೆ ನನ್ನಿಂದಾಗಿ ನನ್ನ ಮಕ್ಕಳು ತಂದೆ ಇಲ್ಲದೆ ಬೆಳೆಯುವುದು ಇಷ್ಟ ಇಲ್ಲ. ಅವರಿಗೆ ತಂದೆಯ ಪ್ರೀತಿ ಸಿಗಲಿ ಎಂದು ಭಾಗ್ಯ ಮನೆಯಿಂದ ಆಚೆ ಬಂದಿದ್ದಾರೆ.

ಇನ್ನು ತಾಂಡವ್ ಮನೆಗೆ ಬಂದಾಗ ಗುಂಡಣ್ಣನಿಗಂತೂ ಬಹಳ ಕೋಪ ಬಂದಿದೆ. ತಂದೆ ಮಾಡಿದ ಕೆಲಸವನ್ನು ನೋಡಿ ನೋಡಿ ಬೇಸತ್ತ ಮಕ್ಕಳಿಗೆ ತಂದೆಯ ಮೇಲೆ ಪ್ರೀತಿಯೇ ಹೊರಟು ಹೋಗಿದೆ. ಮನೆಯಿಂದ ಹಿಡಿದು ಶಾಲೆಯವರೆಗೆ ಪ್ರತಿಯೊಂದು ವಿಚಾರದಲ್ಲೂ ತನ್ನ ತಾಯಿಯೇ ಮುಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಳು. ಆದರೆ, ತಾಂಡವ್ ಮಾತ್ರ ಭಾಗ್ಯಗೆ ಹಿಂಸೆ ಕೊಡುತ್ತಿರುವುದನ್ನು ನೋಡಿದ ಮಕ್ಕಳಿಗೆ ಮಾತ್ರ ತಾಂಡವ ಮೇಲೆ ಪ್ರೀತಿಯೇ ಹೊರಟು ಹೋಗಿದೆ. ಇನ್ನು ತಾಂಡವ್, ಗುಂಡಣ್ಣನ ಬಳಿಗೆ ಬಂದು "ಇನ್ಮೇಲೆ ನಾನು ನಿಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿಮಗೆ ಏನು ಬೇಕೋ.. ಅದನ್ನು ನನ್ನ ಕೇಳಿದರೆ ಸಾಕು.. ನಾನೇ ಎಲ್ಲದನ್ನು ನಿಮಗೆ ತಂದು ಕೊಡುತ್ತೇನೆ. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಎಂದು ಹೇಳುತ್ತಾನೆ. ಆದರೆ, ಇದನ್ನು ಕೇಳಿದ ತನ್ವಿ ತಂದೆಗೆ ಎದುರು ಉತ್ತರ ಕೊಡುತ್ತಾಳೆ.

Bhagya Lakshmi serial February 14th update on Bhagya and Shrestha

"ತನ್ನ ತಾಯಿ ನನಗೆ ಏನು ಮಾಡಿಲ್ಲ.. ನನಗೆ ಎಲ್ಲಾ ಕೊಟ್ಟಿದ್ದು ತಂದೆ" ಎಂದು ತನ್ವಿಗೆ ತಂದೆಯ ಮೇಲೆ ಬಹಳ ಪ್ರೀತಿ ಇತ್ತು. ಆದರೆ, ಆ ಪ್ರೀತಿಯನ್ನು ಇದೀಗ ತಾಂಡವ್ ಕಳೆದುಕೊಂಡಿದ್ದಾನೆ. "ಈ ನಾಟಕ ಎಲ್ಲಿಯ ತನಕ ನಡೆಯುತ್ತದೆ. ಹಾಗೆಯೇ ನಿಮಗೆ ಈಗ ನಾವು ಇದ್ದೇವೆ ಎನ್ನುವುದು ಜ್ಞಾಪಕ ಬಂತಾ" ಎಂದು ಹೇಳಿ ಅಲ್ಲಿಂದ ಗುಂಡಣ್ಣ ಹಾಗೂ ತನ್ವಿ ರೂಮಿಗೆ ಹೋಗುತ್ತಾರೆ. ಮಕ್ಕಳ ಮಾತನ್ನು ಕೇಳಿದ ತಾಂಡವ್‌ಗೆ ಶಾಕ್ ಆಗುತ್ತದೆ.

ತವರು ಮನೆಗೆ ಆಗಮಿಸಿದ ಭಾಗ್ಯ

ಇನ್ನು ಭಾಗ್ಯ ತವರು ಮನೆಗೆ ಬರುತ್ತಾರೆ. ಅಲ್ಲಿ ಆಕೆಯ ತಾಯಿ ಅವಮಾನ ಮಾಡುತ್ತಾರೆ. ಆಕೆಯ ತಾಯಿ ಕೇಳಿದ ಪ್ರಶ್ನೆಗೆ ಎಲ್ಲಾ ಉತ್ತರವನ್ನು ಭಾಗ್ಯ ನೀಡುತ್ತಾರೆ. ಆದರೆ, ಸುನಂದಾಗೆ ಭಾಗ್ಯ ಮಾಡುತ್ತಿರುವ ತ್ಯಾಗ ಅರ್ಥ ಆಗುತ್ತಿಲ್ಲ. ಭಾಗ್ಯಗೆ ಆಕೆಯ ತಂದೆ ಬಹಳ ಸಪೋರ್ಟ್ ಮಾಡುತ್ತಾರೆ. ಸುನಂದನಾ ಬಾಯಿಯನ್ನು ಮುಚ್ಚಿಸಿ ಬಿಡುತ್ತಾರೆ. ಇನ್ನು ಪೂಜಾ, ಶ್ರೇಷ್ಠ ಮನೆಯಲ್ಲಿ ಇರುವುದನ್ನೂ ನೋಡಿದ ಶ್ರೇಷ್ಠಗೆ ಶಾಕ್ ಆಗುತ್ತದೆ.

Bhagya Lakshmi serial February 14th update on Bhagya and Shrestha

ಪೂಜಾ ಮಾತಿಗೆ ಶ್ರೇಷ್ಠ ಸೈಲೆಂಟ್

ಪೂಜಾಳನ್ನು ನೋಡಿದ ಶ್ರೇಷ್ಠಾ "ನೀನು ಇಲ್ಲಿ ಏನು ಮಾಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದಾಗ ಪೂಜಾ ಮೆತ್ತಗೆ ಶ್ರೇಷ್ಠಾ ಬಳಿ ಹೇಳುತ್ತಾಳೆ. "ಶ್ರೇಷ್ಠಾ ನಿನ್ನ ನಾಟಕವೆಲ್ಲ ನನ್ನ ಮುಂದೆ ಬಯಲಾಗಿದೆ. ಇನ್ನು ಯಾವುದೇ ನಾಟಕ ಮಾಡುವ ಸಂದರ್ಭ ನಿನಗೆ ಉಳಿದಿಲ್ಲ. ಹಾಗೆಯೇ ನೀನು ನಿನ್ನ ಅತ್ತೆಗೆ ಎಷ್ಟು ಗೌರವವನ್ನು ಕೊಡುತ್ತೀಯಾ ಅನ್ನುವುದು ತಿಳಿದಿದೆ " ಎಂದು ಕೊಂಕು ಮಾತುಗಳನ್ನು ಹೇಳುತ್ತಾಳೆ . ಇದನ್ನು ನೋಡಿದ ಶ್ರೇಷ್ಠಾಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದಾಗಿದೆ.

ಮಕ್ಕಳ ಪ್ರೀತಿ ಗಳಿಸುತ್ತಾನಾ ತಾಂಡವ್?

ತಾಂಡವ್ ಮಕ್ಕಳ ಪ್ರೀತಿಯನ್ನು ಗಳಿಸಲು ಹರಸಾಹಸ ಮಾಡಬೇಕಾಗಿದೆ. ಯಾಕೆಂದರೆ ಅಷ್ಟರ ಮಟ್ಟಿಗೆ ಮಕ್ಕಳ ಮನಸ್ಸಿಗೆ ಗಾಯ ಮಾಡಿದ್ದಾನೆ. ತಾಂಡವ್, ಕುಸುಮ ಮಾತ್ರ ತನ್ನ ಮುದ್ದಿನ ಸೊಸೆಯನ್ನು ಕಾಣದೆ ಬಹಳ ಬೇಸರದಲ್ಲಿ ಇರುತ್ತಾಳೆ. ತನ್ನ ಸೊಸೆಯ ಜೀವನ ತನ್ನ ಮಗನಿಂದ ಹಾಳಾಗುತ್ತಿದೆ ಎನ್ನುವುದನ್ನು ಸಹಿಸಲು ಕುಸುಮನಿಂದಾ ಆಗುತ್ತಿಲ್ಲ.

More from Filmibeat

English summary
Bhagya Lakshmi serial February 14th update on Bhagya and Shrestha;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X