Bhagya Lakshmi;ತಾಂಡವ್ ಮನೆಗೆ ಲಕ್ಷ್ಮೀ ಎಂಟ್ರಿ; "ಲಕ್ಷ್ಮಕ್ಕ ನಿಂದೇ ಎಡವಟ್ಟಾಗಿದೆ ಇಲ್ಯಾಕೆ ಬಂದೆ" ಎಂದು ನೆಟ್ಟಿಗರು?
ಭಾಗ್ಯ ತನ್ನ ಗಂಡ ತಾಂಡವ ನ ಕೈ ಗೆ ಆತ ಕಟ್ಟಿದ ತಾಳಿಯನ್ನು ಕೊಟ್ಟು ನೀವಿನ್ನೂ ನೆಮ್ಮದಿಯಿಂದ ನಿಮ್ಮ ಭಾವಿ ಹೆಂಡತಿಯ ಜೊತೆ ಆನಂದದಿಂದ ಇರಬಹುದು. ನಿಮಗೆ ಹಾಗೂ ನಿಮ್ಮ ಹೆಂಡತಿಗೆ ನಮ್ಮ ಮನೆಯವರ ಕಡೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಆ ರೀತಿ ಆಗದೆ ಇರುವ ಹಾಗೆ ನಾನೇ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ತಾಂಡವ್‌ಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಜೊತೆಗ ಆಶ್ಚರ್ಯನೂ ಆಗುತ್ತೆ. ಏನು ಗೊತ್ತಿಲ್ಲದ ಈ ಎಮ್ಮೆ ನನ್ನ ಎದುರೇ ಇಷ್ಟು ಧೈರ್ಯದಿಂದ ಮಾತನಾಡುತ್ತಾಳಲ್ಲ ಎಂದು ಮನಸ್ಸಿನಲ್ಲಿಯೇ ಕಿಡಿಕಾರುತ್ತಾನೆ.
ಇನ್ನು ಕುಸುಮಾ ತನ್ನ ಮಗ ಮಾಡಿದ ಕೆಲಸಕ್ಕೆ ಆತನಿಗೆ ಹಿಡಿ ಶಾಪ ಹಾಕುತ್ತಾರೆ. ಇನ್ನು ಮುಂದೆ ನನಗೂ ನಿನಗೂ ಯಾವುದೇ ತರಹದ ಸಂಬಂಧವಿಲ್ಲ. ಯಾವಾಗ ನನ್ನ ಸೊಸೆ ನಿನ್ನ ಸಂಬಂಧವೇ ಬೇಡ ಎಂದು ಕುತ್ತಿಗೆಯಲ್ಲಿದ್ದ ತಾಳಿಯನ್ನು ತೆಗೆದು ನಿನ್ನ ಕೈಯ ಮೇಲೆ ಇಟ್ಟಳೋ ಆಗಲೇ ನಮ್ಮಿಬ್ಬರ ಸಂಬಂಧ ಸತ್ತು ಹೋಯಿತು. ಇನ್ನು ಮೇಲೆ ನಾನು ನಿನಗೆ ತಾಯಿ ಅಲ್ಲ. ನೀನು ನನಗೆ ಮಗನಲ್ಲ ಎಂದು ಬಹಳ ಜೋರಾಗಿ ಹೇಳುತ್ತಾಳೆ. ತಾಯಿಯ ಮಾತು ಕೇಳಿ ತಾಂಡವ್ ಅವಕ್ಕಾಗಿ ನಿಲ್ಲುತ್ತಾನೆ.

ತಾಂಡವ್‌ಗೆ ತಾಯಿ ಎಂದರೆ ಬಹಳ ಇಷ್ಟ. ಆದರೆ, ಭಾಗ್ಯಾನ ಕಂಡರೆ ಬಹಳಷ್ಟು ಕೋಪ ಕಿರಿಕಿರಿಯಾಗುತ್ತೆ. ತಾಂಡವ್‌ನ ಇಬ್ಬರು ಮಕ್ಕಳಿಗೆ ತಾಯಿಯಾಗಿ, ಮನೆ ಕೆಲಸವನ್ನು ನೀಟಾಗಿ ನಿಭಾಯಿಸಿಕೊಂಡು ಅತ್ತೆ ಮಾವನನ್ನು ಚೆನ್ನಾಗಿ ನೋಡಿಕೊಂಡು ಇರುತ್ತಾಳೆ. ಹೀಗಿದ್ದರೂ ಕೂಡ ಭಾಗ್ಯಾ ಎಂದರೆ ತಾಂಡವನಿಗೆ ಇಷ್ಟವಿಲ್ಲ. ಇದೀಗ ಭಾಗ್ಯಾನೇ ತಾಂಡವ್‌ನ ಸಹವಾಸ ಬೇಡ ಎಂದುಕೊಳ್ಳುತ್ತಾಳೆ. ಹಾಗೆಯೇ ಆತ ಕಟ್ಟಿರುವ ತಾಳಿಯನ್ನು ಬಿಚ್ಚಿ ಕೊಡುತ್ತಾಳೆ. ಇನ್ನು ಸೇರು ಒದ್ದು ಬಲಗಾಲಿಟ್ಟು ಮನೆಗೆ ಬಂದ ತಾಂಡವ್ ಹಾಗೂ ಶ್ರೇಷ್ಠಾಗೆ ಆರತಿ ಮಾಡುವವರೇ ಇಲ್ಲ. ಶ್ರೇಷ್ಠಾ ಬಹಳ ಆನಂದದಿಂದ ಇದ್ದರೆ, ತಾಂಡವ್ ಮಾತ್ರ ಪೆಚ್ಚು ಮುಖ ಹಾಕಿಕೊಂಡಿರುತ್ತಾನೆ.
ಭಾಗ್ಯಾಳನ್ನೂ ಮಟ್ಟ ಹಾಕಲು ಸಿದ್ಧನಾದ ತಾಂಡವ್
ಆತನಿಗೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಅಂದರೆ ಭಾಗ್ಯಾಗೆ ಅಷ್ಟು ಧೈರ್ಯ ಹೇಗೆ ಬಂತು? ಆಕೆಯನ್ನು ಮಟ್ಟ ಹಾಕಲೇಬೇಕು. ಇಲ್ಲವಾದರೆ, ಖಂಡಿತವಾಗಿಯೂ ಒಂದಲ್ಲಾ ಒಂದು ದಿನ ನಮಗೆ ಮುಳ್ಳಾಗುತ್ತಾಳೆ ಅಂದುಕೊಳ್ಳುತ್ತಾನೆ. ಶ್ರೇಷ್ಠಾ ಬಹಳ ಖುಷಿಯಿಂದ ಗಂಡನ ಜೊತೆ ಮಾತಿಗೆ ಇಳಿಯುತ್ತಾಳೆ. ಆದರೆ, ತಾಂಡವ್ ಯಾವುದಕ್ಕೂ ರಿಯಾಕ್ಟ್ ಮಾಡದೆ ಭಾಗ್ಯಾ ಹೇಳಿದ ಮಾತುಗಳೇ ಆತನ ಮನಸ್ಸನ್ನು ಚುಚ್ಚುತ್ತಿದ್ದವು.
ಮನೆ ಹೊರಗೆ ನಿಂತಿದ್ದ ಲಕ್ಷ್ಮೀ
ಅಷ್ಟು ಹೊತ್ತಿಗೆ ಶ್ರೇಷ್ಠಾ ತಾಂಡವ್ ಮನೆಗೆ ಯಾರೋ ಬಂದ ಹಾಗೆ ಆಗುತ್ತದೆ. ಮನೆಯ ಹೊರಗೆ ತಾಂಡವ್ ಮನೆ ಇದೇನಾ ಎನ್ನುವ ಜೋರಾದ ಧ್ವನಿ ಕೇಳಿಸುತ್ತದೆ. ಈ ಧ್ವನಿ ಕೇಳಿದ ಕೂಡಲೇ ತಾಂಡವ್‌ಗೆ ಈ ಧ್ವನಿ ಭಾಗ್ಯಾ ತಂಗಿ ಲಕ್ಷ್ಮೀಯದ್ದು ಅಲ್ವಾ ಎಂದು ಅಂದುಕೊಳ್ಳುವಾಗ ಹೊರಗಿನಿಂದ ಲಕ್ಷ್ಮೀ ಮನೆ ಒಳಗೆ ಬರುತ್ತಿರುವುದು ತಾಂಡವ್‌ಗೆ ಕಾಣಿಸುತ್ತದೆ. ಲಕ್ಷ್ಮೀ ಕೇಳುವ ಪ್ರಶ್ನೆಗೆ ತಾಂಡವ್ ಈಗ ಉತ್ತರಿಸಲೇ ಬೇಕಾಗಿದೆ.

ಮಗನ ಬಗ್ಗೆ ಬೇಸರ ಪಟ್ಟುಕೊಂಡ ಕುಸುಮಾ
ಇತ್ತ ಕುಸುಮಾ ಬಹಳ ನೋವು ಪಡುತ್ತಿದ್ದಾಳೆ. ತನಗೆ ಇದ್ದ ಒಬ್ಬ ಮಗ ನನ್ನ ಜೊತೆಗೆ ಇರುತ್ತಾನೆ ಎಂದುಕೊಂಡಿದ್ದೆ. ಆದರೆ, ಆತನಿಗೆ ಹೆತ್ತವರಿಗಿಂತ ಇಟ್ಟುಕೊಂಡವಳೇ ಹೆಚ್ಚಾಗಿ ಹೋದಳು. ಎಷ್ಟೇ ಪ್ರೀತಿ ತೋರಿದರೂ ಕೂಡ ಭಾಗ್ಯಾಗೆ ಯಾವತ್ತೂ ತಾಂಡವ್ ನೋವು ನೀಡುತ್ತಿದ್ದ ಹೊರತು ಪ್ರೀತಿ ನೀಡಲೇ ಇಲ್ಲ. ಇಬ್ಬರು ಮಕ್ಕಳಿಗೆ ಬಹಳಷ್ಟು ಅನ್ಯಾಯ ಮಾಡಿ ಹೋದ ತಾಂಡವ್ ಎಂದು ಮನಸ್ಸಿನಲ್ಲಿ ಅಂದುಕೊಂಡು ಬಹಳಷ್ಟು ಬೇಸರ ಪಡುತ್ತಾರೆ. ಭಾಗ್ಯಾ ಪಡುತ್ತಿರುವ ವೇದನೆಯನ್ನು ಕುಸುಮಾ ಹಾಗೂ ಆಕೆಯ ಗಂಡನಿಗೆ ಸಹಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ.


Click it and Unblock the Notifications











