Bhagya Lakshmi serial:ಹೆಂಡತಿ ದೂರ ಇದ್ದರೆ ಬೆಲೆ ಗೊತ್ತಾಗುತ್ತೆ ಎಂದ ಲಕ್ಷ್ಮೀ? ಪೆಚ್ಚಾದ ತಾಂಡವ್

By ಪೂರ್ವ

ಭಾಗ್ಯಾ ತನ್ನ ಗಂಡನಿಂದ ದೂರ ಇರಲು ನಿರ್ಧಾರ ಮಾಡುತ್ತಾಳೆ. ಆಕೆಗೆ ತನ್ನ ಗಂಡನಿಗೋಸ್ಕರ ತನ್ನನ್ನು ತಾನೇ ಬಹಳಷ್ಟು ಬದಲಾವಣೆ ಮಾಡಿಕೊಳ್ಳಲು ತೊಡಗುತ್ತಾಳೆ. ಇದರಿಂದಾಗಿ ತನ್ನ ಗಂಡ ನನ್ನನ್ನು ಇಷ್ಟ ಪಡುತ್ತಾನೇನೋ ಎನ್ನುವ ಭರವಸೆ ಆಕೆಗೆ. ಆದರೆ ತಾಂಡವ ಮಾತ್ರ ಆಕೆಯನ್ನು ದೂರ ಮಾಡುತ್ತಾನೆ. ಹೆಂಡತಿ ಹತ್ತಿರವಿರಬೇಕಾದರೆ ಆಕೆಗೆ ತನ್ನ ಬೆಲೆ ಅರ್ಥ ಆಗುವುದಿಲ್ಲ. ಇದೀಗ ಶ್ರೇಷ್ಠಾಳ ಮೋಹಕ್ಕೆ ಒಳಗಾಗಿ ಆಕೆಯನ್ನು ತಾಂಡವ ಮದುವೆ ಆಗಿದ್ದಾನೆ.

ಅದೆಲ್ಲವನ್ನು ತಡೆದುಕೊಂಡು ಆತನ ಜೊತೆ ನಿನ್ನ ಮುಖ ಇನ್ಮೇಲೆ ನನಗೆ ತೋರಿಸಬೇಡ. ಖಂಡಿತವಾಗಿಯೂ ನಿನ್ನ ಮುಖ ನೋಡುವುದಿಲ್ಲ ಏನು ಬೇಕಾದರೂ ಮಾಡಿಕೋ ಎಂದು ಹೇಳಿ ಭಾಗ್ಯಾ ಅಲ್ಲಿಂದ ಹೊರಟು ಹೋಗುತ್ತಾಳೆ. ಭಾಗ್ಯಾಗೆ ಅಂತಹ ಗಂಡ ಬೇಡವಾಗಿದೆ. ಯಾಕೆಂದರೆ ಉಸಿರಿಗೆ ಉಸಿರಾಗಿರುವ ಗಂಡ ಭಾಗ್ಯಾಗೆ ಬೇಕಿತ್ತು. ಆದರೆ ತಾಂಡವ್‌ಗೆ ಎರಡು ಮಕ್ಕಳಾದ ಬಳಿಕ ಹೆಂಡತಿಯೇ ಬೇಡವಾಯಿತು. ಭಾಗ್ಯಾಳನ್ನು ಬಿಟ್ಟು ಶ್ರೇಷ್ಠಾ ಬಳಿಗೆ ತಾಂಡವ್ ಹೋದಾಗಲೇ ಭಾಗ್ಯಾ ಮೇಲೆ ಇದ್ದ ಪ್ರೀತಿ ಹೋಯಿತು. ತನ್ನ ಮಕ್ಕಳಿಗೆ ತಂದೆ ಬೇಕು ಎನ್ನುವ ದೃಷ್ಟಿಯಿಂದ ಭಾಗ್ಯಾ ತನ್ನ ಗಂಡನ ಜೊತೆ ಬದುಕು ನಡೆಸಲು ಮುಂದಾಗುತ್ತಾಳೆ.

Bhagya Lakshmi serial February 27th episode

ಆದರೆ ತಾಂಡವ್ ಆಕೆಯ ಮೇಲೆ ಹಗೆ ಸಾಧಿಸುತ್ತಾನೆ. ಭಾಗ್ಯಾಳನ್ನು ಎಮ್ಮೆ ಎಂದೆಲ್ಲ ಕರೆಯುತ್ತಾನೆ. ಆದರೂ ಭಾಗ್ಯಾ ಮಾತಾಡಲಿಲ್ಲ. ತಾಂಡವ್‌ನನ್ನು ಯಾವಾಗ ಶ್ರೇಷ್ಠಾ ಮಾದುವೆಯಾದಳೋ ಅವತ್ತೇ ಭಾಗ್ಯಾ ತಾಂಡವ್ ಕಟ್ಟಿದ ತಾಳಿಯನ್ನು ಆತನ ಕೈ ಗೆ ಕೊಟ್ಟು ಹೊರಟು ಹೋಗಿದ್ದಳು. ಸಮಾಜ ಏನು ಹೇಳುತ್ತೋ ಎನ್ನುವ ಕಾರಣಕ್ಕೆ ಭಾಗ್ಯಾ ತಾಂಡವ್ ಏನೇ ಮಾಡಿದರೂ ಸಹಿಸಿಕೊಂಡು ಹೋಗುತ್ತಿದ್ದಳು. ಸಮಾಜಕ್ಕೆ ಹೆದರಿ, ಹಾಗೆಯೇ ಗಂಡ ಬಿಟ್ಟವಳು ಎನ್ನುವ ಪಟ್ಟ ನನಗೆ ಸಿಗಬಾರದು ಎಂದುಕೊಂಡು ಭಾಗ್ಯಾ ತನ್ನ ಗಂಡನ ಜೊತೆಗೆ ಬದುಕಲು ಶುರುಮಾಡಿದಳು. ಆದರೆ ಇದೀಗ ಅದೆಲ್ಲ ತಪ್ಪು ಎನ್ನುವುದು ಆಕೆಗೆ ಅರಿವಾಗಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಯಾವತ್ತೂ ಕೂಡ ಗಂಡಿನ ದಬ್ಬಾಳಿಕೆಗೆ ಒಳಗಾಗಬಾರದು. ಆಕೆ ಇಂಡಿಪೆಂಡೆಂಟ್ ಆಗಿ ಇರಬೇಕು ಎಂದು ಭಾಗ್ಯಾ ನೋಡಿ ಹಲವಾರು ಹೆಣ್ಣು ಮಕ್ಕಳು ಕಲಿಯಬೇಕಿದೆ.

ಲಕ್ಷ್ಮೀ ಮಾತಿಗೆ ಕೋಪಗೊಂಡ ಶ್ರೇಷ್ಠಾ

ಶ್ರೇಷ್ಠಾ ಹಾಗೂ ತಾಂಡವ್‌ನ ಮನೆಗೆ ಲಕ್ಷ್ಮೀ ಆಗಮಿಸಿ ಆರತಿ ಎತ್ತಿ ನವ ವಧು ವರರನ್ನು ಹಾರೈಸುತ್ತಾಳೆ. ಹಾಗೆಯೇ ತನ್ನ ಅಕ್ಕನ ಜೀವನದಲ್ಲಿ ಇಂತಹ ಘಟನೆ ನಡೆದು ಬಿಟ್ಟಿತಲ್ಲ ಎಂದು ನೊಂದುಕೊಳ್ಳುತ್ತಾಳೆ. ಆಕೆಗೆ ಮನೆಯಲ್ಲಿ ಒಳ್ಳೆಯ ಹೆಂಡತಿ ಇಟ್ಟುಕೊಂಡು, ಬೇರೆ ಹುಡುಗಿಯ ಪ್ರೇಮ ಪಾಶಕ್ಕೆ ಸಿಲುಕಿ ಅಕ್ಕನ ಜೀವನವನ್ನು ಹಾಳು ಮಾಡಿಬಿಟ್ಟನಲ್ಲ ಎನ್ನುವ ಬೇಸರ ಇದ್ದರೂ ಅದನ್ನು ತೋರಿಸುವುದಿಲ್ಲ. ತನ್ನ ಅಕ್ಕ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಆಕೆಗೆ ಇನ್ಯಾವತ್ತೂ ನೀನು ಡಿಸ್ಟರ್ಬ್ ಮಾಡಬೇಡ. ನಿನಗಾಗಿ ಅಕ್ಕ ಮಾಡದ ಕೆಲಸವಿಲ್ಲ. ಆಕೆಯ ಕನಸುಗಳನ್ನೆಲ್ಲ ನಿನಗಾಗಿ ಬಲಿ ಕೊಟ್ಟಿದ್ದಾಳೆ ಎಂದು ಕೋಪ ಹೊರ ಹಾಕುತ್ತಾನೆ.

Bhagya Lakshmi serial February 27th episode

ಅಕ್ಕಮ್ಮನನ್ನು ನೋಡಿ ಖುಷಿಪಟ್ಟ ಲಕ್ಷ್ಮೀ

ನಿನಗೆ ಒಂದಲ್ಲ ಒಂದು ದಿನ ಆಕೆಯ ಬೆಲೆ ತಿಳಿಯುತ್ತದೆ. ಆಕೆಯ ಜೀವನವನ್ನು ನೀನು ಹಾಳು ಮಾಡಬೇಡ ಎಂದು ಹೇಳಿ ಅಲ್ಲಿಂದ ಹೊರಟು ಅಕ್ಕನ ಬಳಿಗೆ ಬರುತ್ತಾಳೆ . ಲಕ್ಷ್ಮೀ ಮುಖ ನೋಡಿ ಭಾಗ್ಯಾಗೆ ಅರ್ಧ ಕಷ್ಟವೇ ಹೋದ ಹಾಗೆ ಅನ್ನಿಸುತ್ತದೆ. ಅಕ್ಕಮ್ಮನ ಗಟ್ಟಿ ನಿರ್ಧಾರವನ್ನು ಲಕ್ಷ್ಮೀ ಗೌರವಿಸುತ್ತಾಳೆ. ಅಕ್ಕನಿಗೆ ಧೈರ್ಯ ನೀಡುತ್ತಾಳೆ. ಲಕ್ಷ್ಮೀ ಜೀವನದಲ್ಲಿ ಕೂಡ ಸಾಕಷ್ಟು ಕಷ್ಟಗಳು ಎದುರಾಗಿದೆ. ಆದರೆ ಅಕ್ಕನ ಜೀವನ ಹೀಗಾಗಿ ಬಿಟ್ಟಿತಲ್ಲಾ ಎನ್ನುವ ನೋವು ಆಕೆಗೆ ಕಾಡುತ್ತದೆ.

More from Filmibeat

English summary
Bhagya Lakshmi serial February 27th 2025 episode about Lakshmi and Tandav conversation.
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X