Bhagya Lakshmi Serial:ಭಾಗ್ಯಾಗೆ ಸೋಲುತ್ತೇನೆ ಅನ್ನೋ ಭಯ, ಸಹಾಯಕ್ಕೆ ಕಲರ್ಸ್ ಕನ್ನಡದ ನಟಿಯರು!
ಭಾಗ್ಯಾ ಅಡುಗೆ ಕೆಲಸ ಮಾಡಲು ಸಾಕಷ್ಟು ಕಷ್ಟ ಪಾಡುತ್ತಿರುತ್ತಾಳೆ. ಆಕೆಗೆ ತಾನೆಲ್ಲಿ ಸೋತು ಬಿಡುತ್ತೇನೆ ಎನ್ನುವ ಆತಂಕ ಕಾಡುತ್ತಿರುತ್ತದೆ. ಭಾಗ್ಯಗೆ ಮನದಲ್ಲಿ ಬಹಳಷ್ಟು ಆತಂಕ ಮನೆ ಮಾಡಿದೆ. ಅತ್ತೆಗೆ ಬಹಳ ನೋವನ್ನು ಮಾಡಿದೆ ಪಾಪ ವಯಸ್ಸಾದ ಸಮಯದಲ್ಲಿ ಅತ್ತೆಗೆ ಬಹಳ ಕಷ್ಟ ಕೊಟ್ಟುಬಿಟ್ಟೆ ಎಂದು ಬಹಳಷ್ಟು ನೊಂದುಕೊಳ್ಳುತ್ತಾಳೆ. ಆದರೆ, ಇದೀಗ ಭಾಗ್ಯಾಗೆ ಸಹಾಯ ಮಾಡಲು ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯರು ಬಂದಿದ್ದಾರೆ. ಆದರೆ ಭಾಗ್ಯಾ ತಂಗಿ ಲಕ್ಷ್ಮೀ ಅಕ್ಕನಿಗೆ ಸಹಾಯ ಮಾಡಲು ಬಂದೆ ಇಲ್ಲ.
'ದೃಷ್ಟಿ', ಹಾಗೆಯೇ 'ರಾಮಾಚಾರಿ' ತಾಯಿ, 'ವಧು' ಧಾರಾವಾಹಿಯ ನಟಿ, ಲಕ್ಷ್ಮೀ ಅತ್ತೆ, ಹಾಗೆಯೇ ಪುಷ್ಪ ಹೀಗೆ ಸ್ತ್ರೀ ಶಕ್ತಿಯೇ ಒಂದಾಗಿ ಬಿಟ್ಟಿದೆ. ಅವರೆಲ್ಲರನ್ನು ನೋಡಿ ಭಾಗ್ಯಾ ಸಿಕ್ಕಾಪಟ್ಟೆ ಖುಷಿ ಪಡುತ್ತಾಳೆ. ಆದರೆ ವಿಪರ್ಯಾಸ ಎಂದರೆ ಭಾಗ್ಯಾ ತಂಗಿ ಲಕ್ಷ್ಮೀ ಬಂದಿರುವುದಿಲ್ಲ.. ಭಾಗ್ಯಾಗೆ ಸಹಾಯ ಮಾಡಲು ಅವರೆಲ್ಲರೂ ಬಂದಿದ್ದಾರೆ. ಇವರು ಬಂದಿದ್ದನ್ನು ನೋಡಿ ಭಾಗ್ಯಾ ಅವರೆಲ್ಲರನ್ನೂ ತಬ್ಬಿ ಖುಷಿ ಪಡುತ್ತಾಳೆ. ತಾನು ಎಲ್ಲಿ ಸೋತು ಬಿಡುತ್ತೇನೆ ಎನ್ನುವ ಆತಂಕ ಆಕೆಯ ಮುಖದಲ್ಲಿ ಕಾಣಿಸುತ್ತಿತ್ತು.

ಹಾಗೆಯೇ ಹೇಗಾದರೂ ಮಾಡಿ ಮನೆ ಉಳಿಸಿಕೊಳ್ಳಬೇಕು. ಮನೆಯ ಸಾಲವನ್ನು ತೀರಿಸಬೇಕು ಎಂದುಕೊಂಡಿದ್ದಾಳೆ. ಬ್ಯಾಂಕ್‌ನವರ ಬಳಿ ಒಂದು ದಿನವಷ್ಟೇ ಟೈಮ್ ಕೇಳಿದ್ದು ಬೇರೆ. ಹೀಗೆಲ್ಲ ಇರಬೇಕಾದರೆ ಭಾಗ್ಯಾಗೆ ಆಕೆಯ ಗೆಳತಿಯರು ಸಹಾಯ ಮಾಡುತ್ತಾರೆ. ಅಡುಗೆ ಮಾಡಲು ಭಾಗ್ಯಾಗೆ ಕಷ್ಟ ಏನು ಆಗಲಿಲ್ಲ. ಭಾಗ್ಯಾ ಆಕೆಯ ಗೆಳತಿಯರಿಗೆ ಒಂದೇ ಒಂದು ಪೋನ್ ಕಾಲ್ ಮಾಡಿ ಸಹಾಯ ಕೇಳಿರುತ್ತಾಳೆ. ಭಾಗ್ಯಾ ಕಷ್ಟದಲ್ಲಿ ಇರುವಾಗ ಸಹಾಯ ಮಾಡಬೇಕು ಅಂದುಕೊಂಡು ಆಕೆಯ ಗೆಳತಿಯರು ಒಟ್ಟಾಗಿ ಬಂದು ಭಾಗ್ಯಾಗೆ ಸಹಾಯವನ್ನು ಮಾಡುತ್ತಾರೆ.
ಭಾಗ್ಯಾ ಮನೆಗೆ ಮತ್ತೆ ವಕ್ಕರಿಸಿಕೊಂಡ ತಾಂಡವ್
ಇತ್ತ ತಾಂಡವನ ನಡವಳಿಕೆ ವೀಕ್ಷಕರಿಗೆ ಮಾತ್ರ ಇಷ್ಟ ಆಗುತ್ತಿಲ್ಲ. ಭಾಗ್ಯಾ ಹಾಗೂ ಈ ಮನೆಯವರು ನಾನು ಕಟ್ಟಿದ ಮನೆಯಲ್ಲಿ ಇರಬಾರದು ಅವರನ್ನು ಬೀದಿ ಪಾಲು ಮಾಡಬೇಕು ಎಂದು ಅಂದುಕೊಂಡಿರುತ್ತಾನೆ. ಆತನಿಗೆ ಬಹಳಷ್ಟು ಖುಷಿ. ಇವತ್ತು ಭಾಗ್ಯಾ ಹೇಗೆ ಸಾಲ ತೀರಿಸುತ್ತಾಳೆ ಎಂಬುವುದನ್ನು ನಾನು ನೋಡಬೇಕು. ನನ್ನ ತಂದೆ ತಾಯಿಗೆ ನನಗಿಂತ ಆ ಭಾಗ್ಯಾ ಮೇಲೆ ಹೆಚ್ಚು ಪ್ರೀತಿ. ಹೀಗಿರುವಾಗ ನಾನು ಯಾಕೆ ಅವರಿಗೆ ಸಹಾಯ ಮಾಡಲಿ. ಭಾಗ್ಯಾ ಬೀದಿಗೆ ಬರಬೇಕು. ಆಗ ಇವರಿಗೆ ಬುದ್ದಿ ಬರುತ್ತದೆ.
ತಾಂಡವನ ವರ್ತನೆಗೆ ಬೇಸರ
ಭಾಗ್ಯಾ ಮನೆಯಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ನಾನು ಕಣ್ಣಾರೆ ನೋಡಬೇಕು ಎಂದು ತಾಂಡವ ಹಾಗೂ ಶ್ರೇಷ್ಠಾ ಮನೆಗೆ ಬರುತ್ತಾರೆ. ಅವರಿಬ್ಬರನ್ನು ನೋಡಿದ ತಾಂಡವ್‌ನ ತಂದೆ ಬಹಳ ಕೋಪದಿಂದ ಬಯ್ಯುತ್ತಾರೆ. ನೀವು ಇಲ್ಲಿಗೆ ಯಾಕೆ ಬಂದಿದ್ದು. ಈ ಮನೆಗೆ ನಿನಗೆ ಯಾವುದೇ ಸಂಬಂಧವಿಲ್ಲ. ಹಾಗೆಯೇ ನೀನು ಇಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಕಡ್ಡಿ ಮುರಿದ ಹಾಗೆ ತಾಂಡವನ ತಂದೆ ಮಗನಿಗೆ ಹೇಳಿದಾಗ ಆ ಮಾತಿಗೆ ಕ್ಯಾರೆ ಎನ್ನುವುದು ಇಲ್ಲ. ಈ ಮನೆಗೆ ಇವತ್ತು ಬೀಗ ಫಿಕ್ಸ್ ಆದ ಕಾರಣ ನಾನು ಕಟ್ಟಿದ ಮನೆಯನ್ನು ನೋಡಿಕೊಂಡು ಬರುತ್ತೇನೆ ಎಂದು ಬಹಳ ಕುಹಕ ಮಾತುಗಳನ್ನು ಹೇಳುತ್ತಾನೆ. ಇದೆಲ್ಲವನ್ನೂ ಕೇಳಿದ ತಂಡವನ ತಂದೆಗೆ ಬಹಳ ಕೋಪ ಬರುತ್ತದೆ.
ಭಾಗ್ಯಾ ಬರುವಿಕೆಗಾಗಿ ಎದುರು ನೋಡುತ್ತಿರುವ ಮಾವ
ಆ ವೇಳೆ ಬ್ಯಾಂಕ್ ನವರು ಮನೆಗೆ ಬರುತ್ತಾರೆ. ಭಾಗ್ಯಾ ಎಲ್ಲಿದ್ದಾರೆ ಎಂದು ಕೇಳುತ್ತಾರೆ. ತಾಂಡವನ ತಂದೆ ಅಧಿಕಾರಿಗಳ ಬಳಿ ನನ್ನ ಮಗಳು ಹೊರಗೆ ಹೋಗಿದ್ದಾಳೆ ಖಂಡಿತವಾಗಿಯೂ ಆಕೆ ಇದೀಗ ಬರುತ್ತಾಳೆ. ನಾನು ಆಕೆಗೆ ಕರೆ ಮಾಡುತ್ತೇನೆ ಎಂದು ಹೇಳಿ ಫೋನ್ ತೆಗೆದುಕೊಳ್ಳುವಾಗ ತಾಂಡವ ತಂದೆಯ ಬಳಿ ಹೇಳುತ್ತಾನೆ ಅಪ್ಪ ನೀನು ಟೆನ್ಶನ್ ಮಾಡಬೇಡ ನಾನೇ ಫೋನ್ ಮಾಡುತ್ತೇನೆ ಎಂದು ಖುಷಿಯಿಂದ ಭಾಗ್ಯಾಗೆ ಕರೆ ಮಾಡುತ್ತಾನೆ. ತಾಂಡವನ ಖುಷಿ ನೋಡಿ ಮನೆ ಮಂದಿಗೆ ಸಾಕಷ್ಟು ನೋವಾಗುತ್ತದೆ. ಹೆತ್ತ ತಂದೆ ತಾಯಿಯನ್ನು ಮರೆತು ಕಟ್ಟಿಕೊಂಡವಳನ್ನು ಬಿಟ್ಟು ಬೇರೆ ಹುಡುಗಿಯ ಜೊತೆ ಸಂಸಾರ ಮಾಡಲು ಹೊರಟಿರುವ ತಾಂಡವನ ಮೇಲೆ ಎಲ್ಲರಿಗೂ ಬಹಳ ಕೋಪ ಬರುತ್ತದೆ. ತಾಂಡವಗೆ ಎದೆ ಎತ್ತರ ಬೆಳೆದ ಮಕ್ಕಳಿರುತ್ತಾರೆ ಆದರೆ ಆತನಿಗೆ ಅವರೆಲ್ಲರ ಜೊತೆ ಖುಷಿಯಾಗಿ ಬದುಕುವ ಅವಕಾಶ ಮಾತ್ರ ಇಲ್ಲ.


Click it and Unblock the Notifications











