Bhagya Lakshmi Serial: ತಾಂಡವ್‌ ಹೊಟ್ಟೆ ಉರಿಸಿದ ಭಾಗ್ಯ? ಶ್ರೇಷ್ಠಾ ಗಪ್‌ ಚುಪ್ ಆಗಿದ್ದೇಕೆ?

By ಪೂರ್ವ

ಭಾಗ್ಯ ಬ್ಯಾಂಕ್ ಇಎಂಐ ಕಟ್ಟಿ ಬಿಟ್ಟಿದ್ದಾಳೆ. ಇನ್ನು ಯಾರು ಭಾಗ್ಯಗೆ ಯಾವುದೇ ತೊಂದರೆ ನೀಡಲು ಆಗುವುದಿಲ್ಲ. ತಾಂಡವ್‌ ಬೇಕೆಂದೇ ಹೀಗೆಲ್ಲ ಹುಚ್ಚಾಟ ಮಾಡಿದ್ದಾನೆ. ಆತನಿಗೆ ಆತನ ಹೆಂಡತಿ ಕಷ್ಟದಲ್ಲಿ ಬೀಳಬೇಕು. ತನ್ನ ವಿರುದ್ಧ ನಿಂತ ತನ್ನ ಕುಟುಂಬಕ್ಕೆ ಸಾಕಷ್ಟು ಕಷ್ಟ ನೀಡಬೇಕೆಂದು ತಾಂಡವ್ ಅಂದುಕೊಂಡಿದ್ದಾನೆ. ಅದಕ್ಕೆ ಶ್ರೇಷ್ಠಾ ಕುಮ್ಮಕ್ಕು ಬೇರೆ ನೀಡಿದ್ದಾಳೆ. ಶ್ರೇಷ್ಠಾಗೆ ಇದೆಲ್ಲ ಆಟ. ತಾಂಡವ್‌ಗೆ ತನ್ನ ಕುಟುಂಬವೇ ಬೀದಿ ಪಾಲು ಆಗಬೇಕು ಎನ್ನುವ ಮಹದಾಸೆ. ಆದರೆ ತಾಂಡವ್ ಅಂದು ಕೊಂಡಿದ್ದೇ ಒಂದು. ಆದರೆ ಅಲ್ಲಿ ಆಗಿದ್ದೆ ಇನ್ನೊಂದು.

ಭಾಗ್ಯಗೆ ಹಣ ಸಂಪಾದಿಸುವ ಸಾಮರ್ಥ್ಯ ಇಲ್ಲ ಎಂದು ತಾಂಡವ್ ಅಂದು ಕೊಂಡಿದ್ದ. ಆದರೆ, ಭಾಗ್ಯ ಬಹಳ ಬುದ್ಧಿವಂತೆ. ಹಾಗೆಯೇ ಉತ್ತಮ ಕೆಲಸಗಾತಿ. ಅಡುಗೆಯಲ್ಲಿ ಹೆಚ್ಚಾಗಿ ತನ್ನನ್ನು ತಾನು ತೊಡಗಿಸಿಕೊಂಡವಳು. ಕ್ಯಾಟರಿಂಗ್ ಸರ್ವಿಸ್ ಮಾಡುತ್ತಾ, ಅಡುಗೆಯನ್ನು ಮಾಡುತ್ತಾ ಅನೇಕ ಜನರ ಮೆಚ್ಚುಗೆಯನ್ನು ಭಾಗ್ಯ ಗಳಿಸಿದ್ದಾಳೆ. ಆದರೆ ಭಾಗ್ಯ ಬಗ್ಗೆ ಸ್ವತಃ ತಾಂಡವ್‌ಗೆ ಏನು ಗೊತ್ತಿಲ್ಲ. ಭಾಗ್ಯ ತನ್ನ ಮುಂದೆ ಸೋಲನ್ನು ಒಪ್ಪಿಕೊಳ್ಳಬೇಕು. ಆಕೆ ಎಲ್ಲರ ಎದುರೂ ತಾನು ಕಟ್ಟಿದ ತಾಳಿಯನ್ನು ತೆಗೆದು ಹಾಕಿದ್ದಾಳೆ. ಆದ್ದರಿಂದ ಆಕೆ ಎಲ್ಲರ ಎದುರು ತಾನು ಸೋತೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಎಂದು ತಾಂಡವ್ ಹಠಕ್ಕೆ ಬಿದ್ದಿದ್ದಾನೆ. ಭಾಗ್ಯ ಮಾತ್ರ ಅದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.

Bhagya Lakshmi serial March 07th 2025 full episode review about Thandav and Bhagya fight

ತನಗೆ ಎಷ್ಟೇ ಕಷ್ಟ ಬಂದರೂ ಕೂಡ ಅದನ್ನ ಸಮರ್ಥವಾಗಿ ನಾನು ನಿಭಾಯಿಸಬಲ್ಲೆ ಎನ್ನುವ ಆಟಿಟ್ಯೂಡ್ ಭಾಗ್ಯಳದ್ದು. ತಾಂಡವ್ ಹಾಗೂ ಶ್ರೇಷ್ಠಾ ಮನೆಯ ಹೊರಗೆ ಬಂದು ಇಬ್ಬರು ಮಾತನಾಡಲು ತೊಡಗುತ್ತಾರೆ ಭಾಗ್ಯಗೆ ಹಣ ಸಂಪಾದಿಸಲು ಹೇಗೆ ಸಾಧ್ಯವಾಯಿತು ಎನ್ನುವುದೇ ಅವರಿಗೆ ಆಶ್ಚರ್ಯ. ಇದಕ್ಕಿಂತ ಮುಂಚಿತವಾಗಿ ತಾಂಡವನ ಗೆಳೆಯ ಭಾಗ್ಯ ಸಾಮಾನ್ಯವಾಗಿ ಹುಡುಗಿಯಲ್ಲ. ಆಕೆ ಛಲಗಾತಿ ಖಂಡಿತವಾಗಿಯೂ ಜೀವನದಲ್ಲಿ ಮುನ್ನುಗ್ಗುತ್ತಾಳೆ ಎಂದು ಹೇಳಿದ್ದಾನೆ. ಅದು ನಡೆದೇ ಹೋಗಿದೆ.

ಭಾಗ್ಯ ಮೇಲೆ ಮುನಿಸಿಕೊಂಡ ತಾಂಡವ್

ಭಾಗ್ಯ ಗೆದ್ದಿದ್ದರಿಂದ ತಾಂಡವ್‌ಗೆ ಕೊಂಚ ಬೇಸರವಾಗಿದೆ. ಭಾಗ್ಯಳನ್ನು ಸೋಲಿಸಲು ತಮ್ಮಿಂದ ಸಾಧ್ಯ ಆಗಲಿಲ್ಲ ಎನ್ನುವ ಬೇಸರ ಆತನನ್ನು ಬಹಳಷ್ಟು ಕಾಡುತ್ತದೆ. ಆ ವೇಳೆ ಭಾಗ್ಯ ಮನೆಯ ಹೊರಗೆ ಬರುತ್ತಾಳೆ. ಶ್ರೇಷ್ಠಾ ಹಾಗೂ ತಾಂಡವ್ ಮಾತನ್ನು ಕೇಳಿಸಿಕೊಳ್ಳುತ್ತಾಳೆ. ಭಾಗ್ಯ ಹಣ ಸಂಪಾದನೆ ಮಾಡಿಕೊಂಡು ಬರಲ್ಲ, ಮನೆಯವರನ್ನು ಬೀದಿಗೆ ಬಿಡುತ್ತಾಳೆ ಎಂದು ನೀವು ಅಂದುಕೊಂಡಿದ್ದೀರಾ? ಎಂದು ತಾಂಡವ್‌ಗೆ ಭಾಗ್ಯ ಪ್ರಶ್ನೆ ಮಾಡುತ್ತಾಳೆ. ಭಾಗ್ಯ ಮಾತಿಗೆ ಶ್ರೇಷ್ಠಾ ಕೋಪಿಸಿಕೊಂಡು ಕಿರುಚಾಡುತ್ತಾಳೆ.


ಶ್ರೇಷ್ಠಗೆ ಮಾತಿನೇಟು ಕೊಟ್ಟ ಭಾಗ್ಯ

ಶ್ರೇಷ್ಠಾ ನಿನ್ನ ಬಳಿ ನಾನು ಮಾತನಾಡಲಿಲ್ಲ. ನಾನು ಮಾತನಾಡಿದ್ದು ತಾಂಡವ್ ಸರ್ ಬಳಿ. ನೀನು ಸುಮ್ಮನೆ ಇರಲಿಲ್ಲ ಎಂದಾದರೆ ಖಂಡಿತವಾಗಿಯೂ ನಾನು ಸುಮ್ಮನೆ ಇರುವುದಿಲ್ಲ ಎಂದು ಕೈ ತೋರಿಸುತ್ತಾಳೆ. ಇನ್ನು ತಾಂಡವ್‌ಗೆ ಭಾಗ್ಯ ಅದೆಷ್ಟೇ ಬಯ್ಯಿದರು ಮಾನ ಮರ್ಯಾದೆ ಇಲ್ಲದ ಹಾಗೆ ನಿಲ್ಲುತ್ತಾನೆ. ಭಾಗ್ಯ ಮೇಲೆ ಮುನಿಸಿಕೊಂಡ ತಾಂಡವ್ ಅಲ್ಲಿಂದ ನೇರವಾಗಿ ಮನೆಗೆ ಹೋಗುತ್ತಾನೆ. ಭಾಗ್ಯ ಮೂವತ್ತೆರಡು ಸಾವಿರ ರೂಪಾಯಿಯನ್ನು ನೀಡಲಾಗಿತ್ತು. ಆದರೆ ಉಳಿದ ಎಂಟು ಸಾವಿರ ಹಣವನ್ನು ಹೇಗಾದರೂ ಮಾಡಿ ಅರೆಂಜ್ ಮಾಡಿ ಬಿಡಬೇಕು ಇಲ್ಲವಾದರೆ ಖಂಡಿತವಾಗಿಯೂ ಮನೆಯಲ್ಲಿ ಸೀಸ್ ಆಗುವುದಂತೂ ಪಕ್ಕ ಎಂದುಕೊಳ್ಳುತ್ತಿದ್ದ ವೇಳೆ ಅಲ್ಲಿಗೆ ಅಡುಗೆ ಕಾಂಟ್ರಾಕ್ಟರ್ ಬಂದು 8000 ಹಣವನ್ನು ಭಾಗ್ಯ ಕೈಗೆ ನೀಡುತ್ತಾನೆ. ನಿಮಗೆ 40,000 ಕೊಡಬೇಕಾಗಿತ್ತು. ಅದನ್ನ ಕೊಟ್ಟಿದ್ದೇನೆ ಉಳಿದಿದೆಲ್ಲವೂ ದಿನಸಿ ಸಾಮಾನಿಗೆ ಖರ್ಚಾಯಿತು. ಆ ಕಾರಣದಿಂದ ನಿಮಗೆ 50,000 ಕೊಡಲು ಆಗಲಿಲ್ಲ ಎಂದು ಹೇಳುತ್ತಾರೆ. ಭಾಗ್ಯ ಆ ಹಣವನ್ನು ತೆಗೆದುಕೊಂಡು ಮನೆಗೆ ಒಂದು ಬರುತ್ತಾಳೆ. ಹಾಗೆಯೇ ಬ್ಯಾಂಕ್ ಮ್ಯಾನೇಜರ್ ಬಳಿ ಹಣ ಕೊಡುತ್ತಾಳೆ. ಒಟ್ಟಿನಲ್ಲಿ ಭಾಗ್ಯ ಆಕೆಯ ಗಂಡನ ವಿರುದ್ಧ ನಿಂತು ಜಯ ಸಾಧಿಸಿದ್ದಾಳೆ.

More from Filmibeat

English summary
Bhagya Lakshmi serial March 07th 2025 full episode review about Thandav and Bhagya fight.
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X