Bhagya Lakshmi Serial:ತಾಂಡವನಿಗೆ ಕುಂತ್ರೆ ನಿಂತ್ರೆ ಭಾಗ್ಯದ್ದೆ ಚಿಂತೆ; ಶ್ರೇಷ್ಠಾಗೆ ಗೊತ್ತಾದರೆ?

By ಪೂರ್ವ

ಭಾಗ್ಯಾ ತಾಂಡವನಿಂದ ದೂರ ಆದರೂ ಕೂಡಾ ಆತನಿಗೆ ಹೆಂಡತಿಯ ನೆನಪು ಕಾಡುತ್ತಲೇ ಇದೆ. ಮನೆಯೊಳಗೆ ಇದ್ದ ಭಾಗ್ಯಗೆ ಅಷ್ಟೊಂದು ಧೈರ್ಯ ಬರಲು ಹೇಗೆ ಸಾಧ್ಯ? ಭಾಗ್ಯಾ ಹಳ್ಳಿಯ ಗುಗ್ಗು. ಆಕೆಗೆ ನಾನು ಕಟ್ಟಿದ ತಾಳಿಯನ್ನು ನನಗೆ ಕೊಡುವಷ್ಟು ಧೈರ್ಯ ಬಂದಿದ್ದಾದರೂ ಹೇಗೆ? ಹೀಗೆಲ್ಲಾ ತಾಂಡವ್ ಭಾಗ್ಯಾ ಬಗ್ಗೆ ಯೋಚಿಸುತ್ತಾನೆ.

ಭಾಗ್ಯಾಗೆ ಇನ್ನಷ್ಟು ಕಷ್ಟ ಕೊಡಬೇಕು. ಗಂಡನ ಬೆಲೆ ಏನು ಎನ್ನುವುದು ಭಾಗ್ಯಾಗೆ ಅರ್ಥ ಆಗಬೇಕು ಎಂದು ತಾಂಡವ್ ಯೋಚನೆ ಮಾಡುತ್ತಿರುತ್ತಾನೆ. ಗಂಡನೇ ಬೇಡ ಎಂದುಕೊಂಡ ಭಾಗ್ಯಾ ಗಂಡನಿಂದ ಬಹಳ ದೂರ ಬಂದಿದ್ದಾಳೆ. ಆತ ಕಟ್ಟಿದ ಮಾಂಗಲ್ಯವನ್ನು ಆತನ ಕೈಗಿತ್ತು ಆತನ ಲವರ್ ಕುತ್ತಿಗೆಗೆ ಕಟ್ಟಲು ಹೇಳಿ ಅಲ್ಲಿಂದ ಹೊರಟು ಬಂದಿದ್ದಾಳೆ. ಪಾಪ ತಾಂಡವನ ಹೆತ್ತವರು ಮಾತ್ರ ಇದೆಲ್ಲವನ್ನೂ ನೋಡಿ ಸಿಕ್ಕಾಪಟ್ಟೆ ನೊಂದುಕೊಂಡಿದ್ದಾರೆ.

Bhagya Lakshmi serial March 2nd episode about Thandav remembering his first wife

ಕುಸುಮಾ ಹಾಗೂ ಆಕೆಯ ಗಂಡ ಸೊಸೆಯ ಹಿಂದೆಯೇ ಹೋಗುತ್ತಾರೆ. ಇನ್ಮೇಲೆ ನನ್ನ ಮಗ ಸತ್ತ ಎಂದು ಮೈ ಮೇಲೆ ನೀರು ಎರೆದುಕೊಂಡು ಶೋಕಾಚರಣೆ ಮಾಡುತ್ತಾರೆ. ತಾಂಡವ್ ತಂದೆ ತಾಯಿಗೆ ಬಹಳಷ್ಟು ನೋವನ್ನು ಕೊಟ್ಟಿದ್ದಾನೆ. ತಾಂಡವನನ್ನು ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡುವ ತಾಯಿಯ ಬಗ್ಗೆಯೇ ತಾಂಡವ್ ಬಹಳ ತುಚ್ಛವಾಗಿ ಮಾತನಾಡಿದ್ದ.

ಆದರೆ ಇದೀಗ ಭಾಗ್ಯಾ ಗಂಡನಿಲ್ಲದೆ ಹೆಂಡತಿ ಏನು ಬೇಕಾದರೂ ಮಾಡುತ್ತಾಳೆ ಎಂದು ಸಾರಿ ಸಾರಿ ಹೇಳುತ್ತಿದ್ದಾಳೆ. ಆ ಪ್ರಕಾರ ನಡೆದುಕೊಳ್ಳುತ್ತಿದ್ದಾಳೆ. ತನ್ನ ಗಂಡನನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದ ಭಾಗ್ಯಾಗೆ ತಾಂಡವ್ ಬಹಳ ದೊಡ್ಡ ಏಟನ್ನು ಕೊಟ್ಟಿದ್ದ. ಇತ್ತ ಭಾಗ್ಯಾ ಮನೆಗೆ ಬಂದ ತಾಂಡವ್, ಇಎಂಐ ಭಾರವನ್ನು ಹಾಕಿದ್ದಾನೆ. ಮನೆಯಲ್ಲಿ ನೀವೆಲ್ಲಾ ಇದ್ದೀರಾ ನೀವೇ ಇಎಂಐ ಕಟ್ಟಿ. ಇನ್ನು ಮೇಲೆ ನನಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದಾಗ ಭಾಗ್ಯಾಗೆ ಇನ್ನೊಂದು ದೊಡ್ಡ ತಲೆ ನೋವು ಎದುರಾಗುತ್ತದೆ.

Bhagya Lakshmi serial March 2nd episode about Thandav remembering his first wife

ಇಎಂಐ ಕಟ್ಟಲು ಭಾಗ್ಯಾ ಪರದಾಟ

ಹೇಗಪ್ಪಾ ನಾನು ಇದೆಲ್ಲವನ್ನೂ ಕಟ್ಟುವುದು. ಕೈಯಲ್ಲಿ ಕಾಸಿಲ್ಲ. ದುಡಿಮೆ ಇಲ್ಲ, ಇದೆಲ್ಲವನ್ನೂ ಹೇಗೆ ನಾನು ಸಂಭಾಳಿಸಲಿ ಎನ್ನುವ ಬೇಸರ ಮನದಲ್ಲಿ ಬಹಳಷ್ಟಿದ್ದರು ಕೂಡ ಭಾಗ್ಯಾ ತಾಂಡವ್‌ಗೆ ನಾನೇ ಇಎಂಐ ಕಟ್ಟುತ್ತೇನೆ ಎಂದು ಹೇಳುತ್ತಾಳೆ. ತಾಂಡವ್ ಅಲ್ಲಿಂದ ಹೊರಟು ಹೋದ ಬಳಿಕ ಇಎಮ್ಐ ಹೇಗೆ ಕಟ್ಟುವುದು ಎನ್ನುವ ಚಿಂತೆಗೆ ಬೀಳುತ್ತಾಳೆ. ಆಗ ಅಲ್ಲಿಗೆ ಬಂದ ಕುಸುಮಾ ಭಾಗ್ಯಾ ಕೈಗೆ ಒಂದಷ್ಟು ಚಿನ್ನ ಕೊಟ್ಟು ಇದನ್ನು ಮಾರಿ ಈ ಮನೆಯ ಸಾಲ ತೀರಿಸು ಮಗಳೆ. ನಮಗೆ ಇರುವ ಒಂದು ಸೂರನ್ನು ಉಳಿಸಿಕೊಳ್ಳೋಣ. ಆ ಮೇಲೆ ಚಿನ್ನ. ಮನೆಗೆ ಇಲ್ಲಾಂದರೆ ಚಿನ್ನ ಹಾಕಿಕೊಂಡು ನಾನೇನು ಮಾಡಲಿ ಎಂದು ಭಾಗ್ಯಾ ಬಳಿ ಹೇಳಿ ಸಮಾಧಾನ ಮಾಡುತ್ತಾಳೆ.

ಮನೆ ಸಾಲ ತೀರಿಸುವತ್ತ ಭಾಗ್ಯಾ ಗಮನ

ಕುಸುಮಾ ಮಾತಿಗೆ ಭಾಗ್ಯಾ ಬಹಳಷ್ಟು ನೊಂದುಕೊಳ್ಳುತ್ತಾಳೆ. ಅತ್ತೆ ಮಾವನನ್ನು ಚೆನ್ನಾಗಿ ನೋಡಿಕೊಳ್ಳಲು ನನ್ನಿಂದ ಸಾಧ್ಯ ಆಗುತ್ತಿಲ್ವಲ್ಲ ಎನ್ನುವ ಬೇಸರ ಆಕೆಯನ್ನು ಬೆಂಬಿಡದೆ ಕಾಡುತ್ತದೆ. ಇತ್ತ ತಾಂಡವ್ ಹಾಗೂ ಶ್ರೇಷ್ಠಾ ಫಸ್ಟ್ ನೈಟ್. ಶ್ರೇಷ್ಠಾಗೆ ತಾಂಡವ್‌ನ ಜೊತೆ ಇವತ್ತು ಖುಷಿ ಖುಷಿಯಿಂದ ಇರಬಹುದು ಎನ್ನುವ ಆಲೋಚನೆ. ಆದರೆ ತಾಂಡವ್‌ಗೆ ಭಾಗ್ಯದ್ದೇ ಯೋಚನೆ. ಆಕೆಗೆ ಹಣ ಹೇಗೆ ಬಂತು ಎನ್ನುವ ಯೋಚನೆ. ಹಾಗೆ ಭಾಗ್ಯಾಗೆ ಇಷ್ಟೆಲ್ಲ ಧೈರ್ಯ ಹೇಗೆ ಬಂತು ಎಂದು ತಲೆ ಕೆಡಿಸಿಕೊಂಡಿದ್ದಾನೆ.

ಶ್ರೇಷ್ಠಾ ಆಸೆ ಈಡೇರುತ್ತಾ?

ಶ್ರೇಷ್ಠಾ ರೂಮ್‌ಗೆ ಬಂದಾಗ ತಾಂಡವ್ ಏನೋ ಯೋಚಿಸುತ್ತಾನೆ. ಶ್ರೇಷ್ಠಾ ಕಾರಣ ಕೇಳಿದಾಗ ಭಾಗ್ಯಾ ಬಗ್ಗೆಯೇ ಮಾತನಾಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಶ್ರೇಷ್ಠಾ ರಾದ್ಧಾಂತ ಮಾಡುತ್ತಾಳೆ. ಶ್ರೇಷ್ಠಾ ಹಾಗೂ ತಾಂಡವ್ ಜೀವನದ ಮೊದಲ ರಾತ್ರಿಯೇ ಬಹಳ ಕೋಲಾಹಲ ಏರ್ಪಡುತ್ತದೆ. ಇನ್ನು ಮುಂಬರುವ ಸವಾಲುಗಳನ್ನು ಶ್ರೇಷ್ಠಾ ಹೇಗೆ ಎದುರಿಸುತ್ತಾಳೆ? ಹಾಗೆಯೇ ಭಾಗ್ಯಾಗೆ ಸವಾಲುಗಳ ಮೇಲೆ ಸವಾಲುಗಳು ಎದುರಾಗುತ್ತಲೇ ಇದೆ. ಇದರಿಂದ ಭಾಗ್ಯಾ ಹೊರಬರುವುದಾದರೂ ಹೇಗೆ ಎನ್ನುವುದನ್ನು ಮುಂದೆ ನೋಡಬೇಕಾಗಿದೆ.

More from Filmibeat

English summary
Bhagya Lakshmi serial March 2nd episode about Thandav remembering his first wife:
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X