Bhagya Lakshmi Serial:ಭಾಗ್ಯಾಳ ನೆಮ್ಮದಿ ಕೆಡಿಸಿದ ತಾಂಡವ್; ಬಾಳಲ್ಲಿ ಮೂಡುತ್ತಾ ಭರವಸೆಯ ಬೆಳಕು?
ಭಾಗ್ಯಾಗೆ ಸಾಲ ತೀರಿಸುವ ಚಿಂತೆ. ತನ್ನ ಕುಟುಂಬ ಮಕ್ಕಳು ಸದಾ ಖುಷಿಯಲ್ಲಿ ಇರಲಿ ಎಂಬ ಆಸೆ. ಹೇಗಾದರೂ ನಲವತ್ತು ಸಾವಿರ ಸಾಲವನ್ನು ತೀರಿಸಿ ಬಿಡಬೇಕು. ಇಲ್ಲವಾದರೆ ಖಂಡಿತವಾಗಿಯೂ ತನ್ನ ಕುಟುಂಬ ಖುಷಿಯಲ್ಲಿರಲು ಸಾಧ್ಯವೇ ಇಲ್ಲ ಅನ್ನೋದು ಗೊತ್ತಿದೆ. ಇತ್ತ ತಾಂಡವ್‌ಗೆ ಭಾಗ್ಯಾಗೆ ಕಷ್ಟ ಕೊಡುವುದೊಂದೇ ಕೆಲಸ. ಭಾಗ್ಯಾ ಕಷ್ಟದಲ್ಲಿದ್ದರೆ ತಾಂಡವನಿಗೆ ಬಹಳ ಖುಷಿ.
ಭಾಗ್ಯಾ ಇಎಂಐ ಕಟ್ಟಲು ಇನ್ನೇನು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮನೆಗೆ ಕಾಲಿಡುತ್ತಾರೆ. ಈ ಮೊದಲೇ ಭಾಗ್ಯಾ ತಂಗಿ ಲಕ್ಷ್ಮೀ ತಾಂಡವನಿಗೆ ಒಂದು ವಾರ್ನಿಂಗ್ ಕೊಟ್ಟಿರುತ್ತಾಳೆ. ನೀನು ನನ್ನ ಅಕ್ಕನಿಂದ ಬಹಳ ದೂರ ಹೋಗಿದ್ದಿಯಾ. ನಿನ್ನ ಜೊತೆ ಇದ್ದ ಸಂಬಂಧವನ್ನು ಅಕ್ಕ ಕಡಿದುಕೊಂಡಿದ್ದಾಳೆ. ದಯವಿಟ್ಟು ನನ್ನ ಅಕ್ಕನಿಂದ ಆದಷ್ಟು ದೂರ ಇದ್ದು ಬಿಡಿ. ಇನ್ನು ಮೇಲಾದರೂ ಅಕ್ಕ ಖುಷಿಯಾಗಿ ಇರಲಿ. ಆಕೆಯ ನೆಮ್ಮದಿಗೆ ಅಡ್ಡಿಪಡಿಸಬೇಡಿ ಎಂದು ಹೇಳಿರುತ್ತಾಳೆ.

ಆದರೆ ತಾಂಡವ ಅದ್ಯಾಕೋ ಲಕ್ಷ್ಮೀ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಭಾಗ್ಯಾ ತನ್ನ ಅತ್ತೆ ಮಾವನ ಜೊತೆಗೆ ಖುಷಿಯಾಗಿಯೇನೋ ಕಾಲ ಕಳೆಯುತ್ತಿರುತ್ತಾರೆ. ಆದರೆ ಆಕೆಗೆ ತನ್ನ ಅತ್ತೆ ಮಾವನ ಜೊತೆಗೆ ಹೆಚ್ಚು ದಿನ ಆ ಖುಷಿಯ ಜೀವನ ಇರುವುದಿಲ್ಲ. ತಾಂಡವನ ಬಳಿ ಭಾಗ್ಯಾ ತಾಳಿ ಕೊಟ್ಟು ಬಂದಾಗಿನಿಂದ ತಾಂಡವ್‌ಗೆ ಸಿಟ್ಟು ಬಂದಿರುತ್ತದೆ. ಆಗಲೇ ತಾಂಡವ್ ಡಿಸೈಡ್ ಮಾಡುತ್ತಾನೆ. ಭಾಗ್ಯಾ ಯಾವತ್ತೂ ಖುಷಿಯಾಗಿರಬಾರದು. ಆಕೆಗೆ ನಾನು ಖಂಡಿತವಾಗಿಯೂ ಸಖತ್ ಟಾರ್ಚರ್ ನೀಡುತ್ತೇನೆ ಎಂದು ಕೊಳ್ಳುತ್ತಾನೆ.
ತಾಂಡವ್‌ಗೆ ಆತನ ಫಸ್ಟ್ ನೈಟ್ ದಿನದಂದು ಕೂಡ ಆ ಭಾಗ್ಯಾದ್ದೇ ಚಿಂತೆ. ಇದು ಶೇಷ್ಠಾಗೆ ತಲೆ ಕೆಟ್ಟು ಹೋಗುತ್ತದೆ. ತಾಂಡವ್ ಶ್ರೇಷ್ಠಾಳನ್ನು ಅದು ಹೇಗೋ ನೈಸ್ ಮಾಡಿ ಪಟಾಯಿಸುತ್ತಾನೆ. ಹಾಗೆಯೇ ಭಾಗ್ಯಾಗೆ ನಾವೇ ಕಷ್ಟ ಕೊಡೋಣ ಎಂದು ಇಬ್ಬರು ಅಂದುಕೊಳ್ಳುತ್ತಾರೆ. ಭಾಗ್ಯಾ ಮನೆಗೆ ಬಂದ ತಾಂಡವ್, ಆಕೆಯ ಬಳಿ ಇರುವ ಎಲ್ಲಾ ಚಿನ್ನವನ್ನು ತೆಗೆದುಕೊಳ್ಳುತ್ತಾನೆ. ಆ ಎಲ್ಲಾ ಚಿನ್ನ ಶ್ರೇಷ್ಠಾಗೆ ಸೇರಿದ್ದು ಎಂದು ಹೇಳಿದಾಗ ಭಾಗ್ಯಾ ಯಾವ ಮಾತು ಆಡಲಿಲ್ಲ. ಕುಸುಮಾ ಅದೆಷ್ಟೇ ಭಾಗ್ಯಾ ಜೊತೆ ಮಾತನಾಡಿದರು ಕೂಡ ಆಕೆಯ ಮಾತಿಗೆ ತಾಂಡವ್ ಸೊಪ್ಪು ಹಾಕುವುದೇ ಇಲ್ಲ. ಅಮ್ಮನನ್ನು ಒಂದೇ ಮಾತಿನಲ್ಲಿಯೇ ಬಾಯಿ ಮುಚ್ಚಿಸುತ್ತಾನೆ .

ಭಾಗ್ಯಾ ಕೈಯಿಂದ ಚಿನ್ನ ಕಸಿದುಕೊಂಡ ಶ್ರೇಷ್ಠಾ
ಇನ್ನು ತಾಂಡವ್ ಹಾಗೂ ಶ್ರೇಷ್ಠಾ ಮನೆಯಿಂದ ಹೊರಗೆ ಹೋಗುತ್ತಾರೆ. ಭಾಗ್ಯಾ ಕೈಯಲ್ಲಿ ಇದ್ದ ಚಿನ್ನದೊಡವೆಗಳನ್ನ ತಾಂಡವ್ ತೆಗೆದುಕೊಂಡು ಹೋಗುತ್ತಾನೆ. ಆದರೆ ಭಾಗ್ಯಾಗೆ ಚಿನ್ನದ ಮೇಲೆ ಆಸೆ ಇಲ್ಲ. ಮುಂದೇನು ಎನ್ನುವ ಆತಂಕ ಆತನನ್ನು ಕಾಡುತ್ತಿರುತ್ತದೆ. ಇಎಂಐ ಹೇಗೆ ಕಟ್ಟುವುದು ಎನ್ನುವ ಆಲೋಚನೆ ಮಾಡುತ್ತಿದ್ದಳು. ಇತ್ತ ತಾಂಡವ್ ಹಾಗೂ ಶ್ರೇಷ್ಠಾ ಮನೆಯ ಹೊರಗೆ ಹೋಗಿ ಭಾಗ್ಯಾಳ ಪಾಡನ್ನು ನೆನೆದು ನಗುತ್ತಿರುತ್ತಾರೆ. ಭಾಗ್ಯಾ ಮಾಡಿದ್ದು ತಪ್ಪು ಎಂದು ಸುನಂದಾ ಈಗ ಕೂಡ ಹೇಳುತ್ತಿದ್ದಾರೆ.
ಸುನಂದಾ ಮಾತಿಗೆ ತಿರುಗಿಬಿದ್ದ ಮನೆಮಂದಿ
ಗಂಡ ಒಂದು ಮಾತು ಹೇಳಿದರೆ ಆತನನ್ನು ಬಿಟ್ಟು ಬರುವಷ್ಟು ಧೈರ್ಯ ನಾವು ಮಾಡಬಾರದು. ಆತನ ಜೊತೆಗೆ ಹೊಂದಿಕೊಂಡು ಜೀವನ ನಡೆಸಬೇಕು ಎಂದು ಹೇಳುತ್ತಲೇ ಇದ್ದಾರೆ. ಆದರೆ ಭಾಗ್ಯಾಗೆ ಬಹಳ ನೋವಾಗುತ್ತದೆ. ಹೆತ್ತ ತಾಯಿಯೇ ತನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮುಂದೆ ಹೇಗೆ ಜೀವನ ಎಂದು ಯೋಚಿಸತೊಡಗುತ್ತಾಳೆ. ಮರುದಿನ ಭಾಗ್ಯಾ ಎದ್ದು ಎಲ್ಲಾ ಕೆಲಸ ಮುಗಿಸಿ ಮನೆಯಿಂದ ಹೊರಡಲು ಅನುವಾಗುತ್ತಾಳೆ. ಆ ಕೂಡಲೇ ಕುಸುಮಾ ಭಾಗ್ಯಾಳನ್ನು ತಡೆಯುತ್ತಾರೆ. ಭಾಗ್ಯಾ ತನ್ನ ಅತ್ತೆಯನ್ನು ನೋಡಿ ಅತ್ತೆ ನನ್ನನ್ನೂ ಆ ದೇವರು ಎಲ್ಲಿಗೆ ಕರೆದುಕೊಂಡು ಹೋಗುತ್ತಾನೋ ಅಲ್ಲಿಗೆ ನಾನು ಹೋಗುತ್ತೇನೆ. ಏನಾದರು ಒಂದು ದಾರಿ ಖಂಡಿತ ಸಿಗುತ್ತದೆ ಎಂದು ಮನೆಯಿಂದ ಹೊರಡುತ್ತಾಳೆ. ಭಾಗ್ಯಾಗೆ ಒಂದೇ ಯೋಚನೆ. ಹೇಗಾದರೂ ಮಾಡಿ 40 ಸಾವಿರ ಹಣವನ್ನು ಕಟ್ಟಿಬಿಡಬೇಕು. ಇಲ್ಲವಾದರೆ ಅದಕ್ಕಿಂತ ಕಷ್ಟ ಬೇರೊಂದಿಲ್ಲ ಎಂದುಕೊಳ್ಳುತ್ತಾಳೆ. ಹೇಗಾದರೂ ಆರೆಂಜ್ ಮಾಡುತ್ತೇನೆ ಎಂದು ಮನೆಯಿಂದ ಹೊರಡುತ್ತಾಳೆ.
ದೇವರ ಮುಖವನ್ನು ನೋಡಿ ಕಷ್ಟ ಮರೆತ ಭಾಗ್ಯಾ
ನೇರವಾಗಿ ದೇವಸ್ಥಾನಕ್ಕೆ ತೆರಳಿದ ಭಾಗ್ಯ ದೇವರನ್ನು ನೋಡಿದ ಕೂಡಲೇ ದು:ಖವೆಲ್ಲ ಒಮ್ಮೆಗೇ ಉಮ್ಮಳಿಸಿ ಬರುತ್ತದೆ. ಏನು ಮಾತನಾಡಬೇಕೆಂದು ಯೋಚನೆ ಬರುವುದಿಲ್ಲ. ದೇವರ ಬಳಿ ಬಂದ ಭಾಗ್ಯಾ ಒಂದು ಸಲ ದೇವರ ಮುಖವನ್ನು ಬಹಳ ಭಕ್ತಿಯಿಂದ ನೋಡಿ ಕೈ ಮುಗಿಯುತ್ತಾಳೆ. ದೇವರ ಬಳಿ ತನ್ನ ಕಷ್ಟವಲ್ಲ ಹೇಳಿಕೊಳ್ಳುತ್ತಾಳೆ. ಅದಕ್ಕೆ ಉತ್ತರವಾಗಿ ದೇವರ ಬಲಭಾಗದಿಂದ ಹೂವು ಬೀಳುತ್ತದೆ. ಇದನ್ನು ನೋಡಿದ ಭಾಗ್ಯಾಗೇ ಮತ್ತಷ್ಟು ಖುಷಿ ಆಯಿತು. ಯಾವುದೋ ಒಂದು ಎನರ್ಜಿ ಪಾಸಾದ ಹಾಗೆ ಅನ್ನಿಸುತ್ತದೆ.


Click it and Unblock the Notifications











