Bhagyalakshmi serial: ಭಾಗ್ಯಾ-ಕುಸುಮಾ ಕಾಂಬಿನೇಷನ್ ವರ್ಕ್ ಆಗುತ್ತಾ? ಮುಂದೇನಾಗುತ್ತೆ?
ದೇವಸ್ಥಾನಕ್ಕೆ ಬಂದ ಭಾಗ್ಯಾಗೆ ಬಿಗ್ ಆಫರ್ ಎಂದು ದೊರಕಿದೆ. ದೇವರು ಬಲಭಾಗದಲ್ಲಿ ಹೂವನ್ನು ನೀಡಿದಾಗಲೇ ಭಾಗ್ಯಾಗೆ ಬಲ ಬಂದ ಹಾಗೆ ಇರುತ್ತದೆ. ಏನೇ ಆದರೂ ನನಗೆ ದೇವರು ಏನಾದರೂ ಒಂದು ದಿಕ್ಕನ್ನ ತೋರಿಸಿ ತೋರಿಸುತ್ತಾನೆ ಎನ್ನುವ ಆತ್ಮವಿಶ್ವಾಸ ಆಕೆಗೆ ಬಂದಿದೆ. ಆ ವೇಳೆ ಅಲ್ಲಿಗೆ ಬಂದವರೊಬ್ಬರು ಅನ್ನದಾನ ನಡೆಸಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಾರೆ. ಆದರೆ ಯಾರಾದರೂ ಅಡುಗೆಯವರಿದ್ದಾರೆ ಹೇಳಿ ಎಂದು ಅರ್ಚಕರ ಬಳಿ ಕೇಳಿದಾಗ, ಭಾಗ್ಯಾಳತ್ತ ಕೈ ತೋರಿಸುತ್ತಾರೆ. ಈಕೆ ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತಾರೆ ಎಂದು ಹೇಳುತ್ತಾರೆ.
ಅಡುಗೆಯಲ್ಲಿ ಯಾವುದೇ ತರದ ಮಿಸ್ಟೇಜ್ ಆಗಿದ್ದು ನಾವಿದೂವರೆಗೂ ಕಂಡಿಲ್ಲ. ಅಷ್ಟು ರುಚಿ ಕಟ್ಟಾಗಿ ಅಡುಗೆಯನ್ನು ಮಾಡುತ್ತಾರೆ. ಆದುದರಿಂದ ಇವರಿಗೆ ಆಡುಗೆ ಕಾಂಟ್ರಾಕ್ಟ್ ಅನ್ನು ಕೊಟ್ಟುಬಿಡಿ ಎಂದು ಹೇಳುತ್ತಾರೆ. ಆ ವ್ಯಕ್ತಿ ಭಾಗ್ಯಾ ಬಳಿಗೆ ಬಂದು ನೀವು ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುವುದಾದರೆ ನಿಮಗೆ ನಾವು 50 ಸಾವಿರ ರೂಪಾಯಿಯನ್ನು ನೀಡುತ್ತೇವೆ. ಅಡುಗೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂದು ಹೇಳುತ್ತಾರೆ. ಆಗ ಭಾಗ್ಯಾಗೆ ಬಹಳ ಖುಷಿ ಆಗುತ್ತೆ. ಮನೆಯ ಇಎಂಐಯನ್ನು ಬಹಳ ಆರಾಮವಾಗಿ ಕಟ್ಟಬಹುದು ಎಂದು ಮನಸ್ಸಿನಲ್ಲಿ ಅಂದುಕೊಂಡು ಖುಷಿ ಪಡುತ್ತಾರೆ.

ಅರ್ಚಕರಿಗೆ ಧನ್ಯವಾದ ಹೇಳಿ ಈ ಕೂಡಲೇ ಅತ್ತೆಗೆ ವಿಷಯವನ್ನು ವಿಷಯವನ್ನು ಮುಟ್ಟಿಸುತ್ತಾಳೆ. ಅತ್ತೆ ನನಗೆ ಈಗ ಇನ್ನೊಂದು ಕೆಲಸ ಸಿಕ್ಕಿದೆ. ಆದರೆ ನಿಮ್ಮ ಸಹಕಾರ ನನಗೆ ಬೇಕು. ನಾವು ಐವತ್ತು ಸಾವಿರ ರೂಪಾಯಿ ಹಣವನ್ನು ಆರಾಮವಾಗಿ ಗಳಿಸಬಹುದು ಎಂದು ಕುಸುಮಾಗೆ ಹೇಳಿದಾಗ ಖುಷಿಯಾಗುತ್ತೆ. ಕುಸುಮಾಳನ್ನು ನೇರವಾಗಿ ದೇವಸ್ಥಾನಕ್ಕೆ ಬರಲು ಭಾಗ್ಯಾ ಹೇಳುತ್ತಾಳೆ. ಭಾಗ್ಯಾ ಹೇಳಿದ ಹಾಗೆಯೇ ದೇವಸ್ಥಾನಲ್ಲೆ ಹೋಗುತ್ತಿರುವಾಗ ಪೂಜಾ ಕುಸುಮಾಗೆ ಸಿಗುತ್ತಾಳೆ. ಆಕೆಯನ್ನು ಕೂಡ ಭಾಗ್ಯಾ ಬಳಿಗೆ ಕುಸುಮಾ ಕರೆದುಕೊಂಡು ಬರುತ್ತಾರೆ.
ಭಾಗ್ಯಾ ಸಹಾಯ ಮಾಡಲು ಬಂದ ಕುಸುಮಾ
ಇನ್ನು ಭಾಗ್ಯಾಗೆ ಅಡುಗೆ ಮಾಡಲು ಪೂಜಾ ಹಾಗೂ ಕುಸುಮಾ ಸಹಾಯ ಮಾಡುತ್ತಾರೆ. ಆದರೆ ಈ ವೇಳೆ ಒಂದು ದೊಡ್ಡ ಎಡವಟ್ಟು ಆಗುತ್ತದೆ. ಭಾಗ್ಯಾ ಕುಸುಮಾ ಬಳಿ ನೀರು ಬಿಸಿ ಆಗಿದೆಯಾ ಎಂದು ನೋಡಿ ಅತ್ತೆ ಎಂದಾಗ ಕುಸುಮಾ ಎದ್ದು ನೀರು ಬಿಸಿ ಆಗಿದೆ. ಅದನ್ನು ಕೆಳಗೆ ಇಳಿಸಿ ಬಿಡುತ್ತೇನೆ ಎಂದುಕೊಂಡು ಭಾರವಾದ ಹಂಡೆಯನ್ನು ಕೆಳಗೆ ಇಳಿಸುವ ವೇಳೆ ಬಿಸಿ ನೀರು ಚೆಲ್ಲಿ ಕುಸುಮಾ ಕಾಲಿನ ಮೇಲೆ ಬೀಳುತ್ತದೆ. ಕುಸುಮಾ ನೋವಿನಿಂದ ಜೋರಾಗಿ ಚೀರುತ್ತಾಳೆ. ಅತ್ತೆಯ ನರಳಾಟ ಕಂಡು ಓಡಿ ಬಂದ ಭಾಗ್ಯಾ ಇದೇನು ಮಾಡಿಕೊಂಡಿರಿ ಅತ್ತೆ ಎಂದು ಆತಂಕ ಪಡುತ್ತಾಳೆ. ಈಗ ಮತ್ತೊಂದು ಭಾಗ್ಯಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಭಾಗ್ಯಾ ಮೇಲೆ ಹಗೆ ಸಾಧಿಸುತ್ತಿರುವ ತಾಂಡವ್
ಇನ್ನೊಂದು ತಾಂಡವ್‌ಗೆ ಹೆತ್ತವರಿಗಿಂತ ಶ್ರೇಷ್ಠಾ ಮುಖ್ಯವಾಗಿ ಹೋದಳು. ಶ್ರೇಷ್ಠಾ ಏನೇ ಮಾಡಿದರೂ ಕೂಡಾ ಸರಿ ಎನ್ನುವ ಹಾಗೆ ತಾಂಡವ್ ಮಾತನಾಡುತ್ತಾನೆ. ಭಾಗ್ಯಾ ಮೇಲೆ ಕಿಡಿ ಕಾರುತ್ತಲೇ ಇರುತ್ತಾನೆ. ಭಾಗ್ಯಾಗೆ ಕಷ್ಟ ಕೊಟ್ಟೆವು ಎಂದು ಶ್ರೇಷ್ಠಾ ನಗುತ್ತಾ ಹೇಳುತ್ತಾಳೆ. ಇನ್ನು ಮುಂದೆ ಶ್ರೇಷ್ಠಾ ಖಂಡಿತವಾಗಿಯೂ ತನ್ನ ತಂಟೆಗೆ ಬರುವುದಿಲ್ಲ ಎಂದುಕೊಳ್ಳುತ್ತಿರುವಾಗ ತಾಂಡವ್ ಯೋಚನೆ ಮತ್ತಷ್ಟು ಗಾಢವಾಗುತ್ತೆ. ಭಾಗ್ಯಾ ಸಾಮಾನ್ಯವಾದ ಹೆಣ್ಣಲ್ಲ. ಆಕೆ ಹೇಗಾದರೂ ಮಾಡಿ ಮನೆಯ ಸಾಲ ತೀರಿಸುತ್ತಾಳೆ. ಆದರೆ ನಾನು ಅದಕ್ಕೆ ಅವಕಾಶ ಕೊಡಬಾರದು. ಭಾಗ್ಯಾ ಬೀದಿಯಲ್ಲಿ ನಿಂತು ಭಿಕ್ಷೆ ಬೇಡಬೇಕು. ಗಂಡನ ಬೆಲೆ ಭಾಗ್ಯಾಗೆ ಗೊತ್ತಾಗಬೇಕು ಎಂದು ತಾಂಡವ್ ಅಂದುಕೊಳ್ಳುತ್ತಿರುವಾಗ ತಾಂಡವ್‌ನ ಗೆಳೆಯ ಭಾಗ್ಯಾ ಬಹಳ ಚಲಗಾತಿ. ಖಂಡಿತವಾಗಿಯೂ ಆಕೆಗೆ ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತೆ. ಎಷ್ಟೇ ಕಷ್ಟ ಕೊಟ್ಟರೂ ಅದೆಲ್ಲವನ್ನೂ ಸಹಿಸಿಕೊಂಡು ಜೀವನ ನಡೆಸುತ್ತಾಳೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ತಾಂಡವ್‌ಗೆ ಭಾಗ್ಯಾ ಮೇಲೆ ಮತ್ತಷ್ಟು ಕೋಪ ಹೆಚ್ಚಾಗುತ್ತೆ.


Click it and Unblock the Notifications











