Bhagya Lakshmi: ಕಲಿತ ಹೆಣ್ಣು ಮಕ್ಕಳು ಮನೆ ನಡೆಸಲ್ವಾ..? ತಾಂಡವ್ ಅಜ್ಜಿಯ ಮಾತಿನ ಅರ್ಥವೇನು..?
ಭಾಗ್ಯಾಳಿಗೆ ಆಗುತ್ತಿದ್ದ ಅವಮಾನ ಕಂಡು ಕುಸುಮಾ ಒಂದು ನಿರ್ಧಾರಕ್ಕೆ ಬಂದಿದ್ದಳು. ಸೊಸೆಗೂ ಅವಮಾನ ಆಗೋದು ಬೇಡ. ಅವಳನ್ನು ಓದಿಸುವ ಕೆಲಸ ಮಾಡೋಣಾ ಎಂದು ನಿರ್ದಾರ ಮಾಡಿದಳು. ಅದಕ್ಕೆ ತಕ್ಕನಾಗಿ ಎಲ್ಲಾ ತಯಾರಿಯನ್ನು ಮಾಡಿಕೊಂಡಳು. ಆದರೆ ಇದು ತಾಂಡವ್‌ಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಬೇಡ ಅಂದ ಕುಸುಮಾ ಮಾತು ಕೇಳಲಿಲ್ಲ. ಮನೆ ಬಿಟ್ಟು ಹೊರಟು ನಿಂತ ಕುಸುಮಾ ತಲೆ ಕೆಡಿಸಿಕೊಳ್ಳಲಿಲ್ಲ.
ಇದೆಲ್ಲವನ್ನು ನೋಡಿದ ತಾಂಡವ್ ಸುಮ್ಮನೆ ಇದ್ದರೆ ಆಗಲ್ಲ ಎಂದು ಹೊಸದಾಗಿ ಪ್ಲ್ಯಾನ್ ಮಾಡಿದ. ನಾಟಕ ಶುರು ಮಾಡಿಕೊಂಡ. ಪ್ರೀತಿಯಿದೆ ಎಂದು ಹೇಳಿದ. ಭಾಗ್ಯಾಳಿಗೆ ಮಂಕು ಬೂದಿ ಎರಚಿದ. ಈಗ ದೊಡ್ಡ ಸೀನ್ ಕ್ರಿಯೇಟ್ ಮಾಡಿಸಿ, ತನಗೇನು ಗೊತ್ತಿಲ್ಲ ಎಂಬಂತೆ ನಿಂತಿದ್ದಾನೆ.

ತಾಂಡವ್ ಪ್ಲ್ಯಾನ್ ಅದೇ ಆಗಿದೆ. ಭಾಗ್ಯಾಳಿಗೆ ಕ್ಷಣ ಕ್ಷಣಕ್ಕೂ ಅವಮಾನ ಮಾಡಬೇಕು ಎಂಬುದು. ಅದಕ್ಕೆ ಅಂತಾನೇ ಸಿಕ್ಕ ಅವಕಾಶಗಳನ್ನೆಲ್ಲಾ ಚೆನ್ನಾಗಿಯೇ ಬಳಸಿಕೊಳ್ಳುತ್ತಾನೆ. ಆದರೆ ಬೇರೆ ಅವಕಾಶಗಳು ತಾಂಡವ್ ನಿರೀಕ್ಷೆ ಮಾಡಿದ ಲೆವೆಲ್ ಗೆ ವರ್ಕೌಟ್ ಆಗಲಿಲ್ಲ. ಈಗ ಅದಕ್ಕೆಂದೇ ಮಾಸ್ಟರ್ ಪ್ಲ್ಯಾನ್ ಮಾಡಿ, ಅಜ್ಜಿಯನ್ನು ಕರೆಸಿದ್ದಾನೆ. ಬೇಕಾಂತಾನೆ ಅಜ್ಜಿಗೆ ಅವಮಾನ ಮಾಡಿದ್ದಾನೆ.
ಮನೆ ಬಿಟ್ಟು ಹೋಗುತ್ತೀನಿ ಎಂದು ನಿಂತ ಅಜ್ಜಿ
ಅಜ್ಜಿ ದೊಡ್ಡವರು. ಕುಸುಮಾನೆ ಹೆದರುತ್ತಾಳೆ. ಇನ್ನು ತಾಂಡವ್ ಅವಮಾನ ಮಾಡಿದರೆ ಸಹಿಸಿಕೊಳ್ಳುತ್ತಾರಾ ಅಜ್ಜಿ. ಬಂದಿದ್ದಕ್ಕೆ ಒಳ್ಳೆ ಮರ್ಯಾದೆನೆ ಸಿಕ್ತು ಎಂದು ಬೇಸರ ಮಾಡಿಕೊಂಡಿದ್ದಾರೆ. ಭಾಗ್ಯಾ ಸಮಾಧಾನ ಮಾಡಿದ್ದಾಳೆ. ಕುಸುಮಾ ಕ್ಷಮೆ ಕೇಳುವುದಕ್ಕೆ ಹೇಳಿದ್ದಾಳೆ. ಆದರೆ ತಾಂಡವ್ ಒಪ್ಪುತ್ತಿಲ್ಲ. ನಾನು ಹೇಳಿದ್ದರಲ್ಲಿ ತಪ್ಪೇನು ಇದೆ ಅಂತ ಮತ್ತೆ ತಾಂಡವ್ ಎದುರಾಡಿದ್ದಾನೆ. ಇದರಿಂದ ಅಜ್ಜಿಗೆ ಇನ್ನಷ್ಟು ಅವಮಾನ ಆಗಿದೆ. ನಾನು ಇನ್ಯಾವತ್ತು ನಿಮ್ಮ ಮನೆಗೆ ಕಾಲಿಡಲ್ಲ ಎಂದು ಶಪಥ ಮಾಡಿದ್ದಾರೆ. ಈ ಮಾತು ಕೇಳಿ ಒಂದು ಕ್ಷಣ ಮನೆಯವರೆಲ್ಲ ಶಾಕ್ ಆಗಿದ್ದಾರೆ.
ಭಾಗ್ಯಾಳಿಂದ ಕ್ಷಮೆಯಾಚನೆ
ಅಜ್ಜಿಯ ಕೋಪ ತಣ್ಣಗೆ ಆಗಲೇ ಇಲ್ಲ. ಕಡೆಗೆ ಭಾಗ್ಯಾ ತುಂಬಾ ವಿನಯತೆಯಿಂದ ಮಾತನಾಡುವುದಕ್ಕೆ ಶುರು ಮಾಡಿದ್ದಾಳೆ. "ಇದು ಅತ್ತೆಯ ಕನಸು. ನಿಮಗೆ ಬೇಜಾರಾಗಿದ್ರೆ ದಯವಿಟ್ಟು ಕ್ಷಮೆ ಇರಲಿ. ಏನೋ ಗೊತ್ತಿಲ್ಲದೆ ನಡೆದು ಹೋಯ್ತು. ನಿಮ್ಮ ಆಶೀರ್ವಾದ ನಮಗೆ ಬೇಕು. ಪೂಜೆ ಮುಗಿಯುವ ತನಕ ಇಲ್ಲಿಯೇ ಇರಿ" ಎಂದು ಕೇಳಿಕೊಂಡಿದ್ದಾಳೆ. ಇದರ ನಡುವೆ ಪೂಜಾ ಬೇರೆ, ಈ ಮುದುಕಿ ಕುಸುಮಾ ಅತ್ತೆಗಿಂತ ಜೋರು ಎಂದಿದ್ದಾಳೆ. ಅದು ಕೇಳಿಸಿ, ಇನ್ನಷ್ಟು ಕೋಪ ಹೆಚ್ಚಾಗಿದೆ. ಎಲ್ಲದಕ್ಕೂ ಒಟ್ಟುಗೂಡಿಸಿ ಭಾಗ್ಯಾ ಕ್ಷಮೆ ಕೇಳಿದ್ದಾಳೆ.

ಅಜ್ಜಿಯ ಮಾತಿನಿಂದ ಭಾಗ್ಯಾಳಿಗೆ ನೋವು
ಅಜ್ಜಿಯ ಮಾತು ಏನೇ ಮಾಡಿದರೂ ನಿಲ್ಲುವಂತೆ ಕಾಣಲಿಲ್ಲ. ಕಡೆಗೆ ಕುಸುಮಾಳ ಬುಡಕ್ಕೂ ಬಂದಿದೆ. "ಅಲ್ಲವೇ ಕುಸುಮಾ ಇವಳಿಗಂತು ಬುದ್ದಿ ಇಲ್ಲ, ನಿಂಗು ಇಲ್ವಾ. ಅಲ್ಲ ಕಣೇ ಕಲಿತ ಹೆಣ್ಣು ಮಕ್ಕಳು ಮನೆ ನಡೆಸಲ್ಲ, ಒಡೆಯುತ್ತವೆ. ಹಾಳಾಗುತ್ತೆ. ನಿನ್ನ ಕಾಲ ಮೇಲೆ ನೀನೆ ಚಪ್ಪಡಿ ಕಲ್ಲನ್ನ ಹಾಕಿಕೊಳ್ಳುತ್ತಾ ಇದ್ದೀಯಾ" ಅಂತ ಜೋರು ಮಾಡಿದ್ದಾರೆ. ಅದೇ ಸಮಯಕ್ಕೆ ಅಂಕಿತಾ ಎಂಟ್ರಿಯಾಗಿದೆ. ಅಜ್ಜಿಯ ಮಾತಿಗೆ ಬುದ್ದಿ ಹೇಳಿದ್ದಾರೆ. ಈ ಮೂಲಕ ಭಾಗ್ಯಾಳ ಓದುವ ವಿಚಾರದಲ್ಲಿ ಗೊಂದಲದಲ್ಲಿರುವ ಕಾವೇರಿಗೆ ಅಂಕಿತಾರ ಮಾತು ಸಲಹೆಯಾಗಬಹುದು.


Click it and Unblock the Notifications











