ನೀವು ಬಾಲ್ಯದ 'ಭಾಗ್ಯಲಕ್ಷ್ಮಿ'ಯನ್ನು ನೋಡಿದ್ದೀರಾ? ನಿಮ್ಮೆ ನೆಚ್ಚಿನ ನಟಿ ಹೇಗಿದ್ದಾರೆ ನೋಡಿ!
ಕಿರುತೆರೆ ನಟಿ ಸುಷ್ಮಾ ಕೆ ರಾವ್ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದರೆ ಒಂದು ಕ್ಷಣ ನಿಮಗೆ ಗೊಂದಲವಾಗಬಹುದು. ಯಾರಪ್ಪಾ ಈಕೆ? ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬ ಗೊಂದಲ ನಿಮ್ಮ ಮನದಲ್ಲಿ ಖಂಡಿತಾ ಮೂಡಿಯೇ ಮೂಡುತ್ತದೆ. ಯಾಕೆಂದರೆ ಕಿರುತೆರೆಯಲ್ಲಿ ಆಕೆ ಭಾಗ್ಯಳಾಗಿ ಫೇಮಸ್ಸು! ಹೌದು, ಭಾಗ್ಯ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಸುಷ್ಮಾ ಕೆ ರಾವ್ ಅವರು ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ.
ಮಾತ್ರವಲ್ಲ ಸುಷ್ಮಾ ರಾವ್ ಅವರು ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಎಂಬುದಕ್ಕೆ ಅವರು ಈ ವರ್ಷ ಪಡೆದ 'ಮನೆ ಮೆಚ್ಚಿದ ಸೊಸೆ' ಪ್ರಶಸ್ತಿಯೇ ಪ್ರಸಕ ಸಾಕ್ಷಿ. ಆಶ್ಚರ್ಯದ ಸಂಗತಿಯೆಂದರೆ ಕಳೆದ ವರ್ಷವೂ ಕೂಡಾ ಮನೆ ಮೆಚ್ಚಿದ ಸೊಸೆ ಪ್ರಶಸ್ತಿಯನ್ನು ಸುಷ್ಮಾ ಕೆ ರಾವ್ ಪಡೆದುಕೊಂಡಿದ್ದರು. ಅಂದ ಹಾಗೇ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸುಷ್ಮಾ ರಾವ್ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಅಂದ ಹಾಗೇ ಸುಷ್ಮಾ ಕೆ ರಾವ್ ಅವರು ಹಳೆಯ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸುಷ್ಮಾ "ಸಂತೋಷವು ನಿಮಗೆ ಬೇಕಾದುದನ್ನು ಪಡೆಯುವುದಲ್ಲ. ಬದಲಿಗೆ ಅದು ನಿಮ್ಮಲಿ ಏನಿದೆಯೋ ಅದನ್ನು ಆನಂದಿಸುವುದರಲ್ಲಿದೆ. ಸಂತೋಷವಾಗಿರಿ" ಎಂದು ಬರೆದುಕೊಂಡಿದ್ದಾರೆ.
ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಷ್ಮಾ ಕೆ ರಾವ್ ಇಂದು ಭಾಗ್ಯಳಾಗಿ ಫೇಮಸ್ಸು. 'ಭಾಗೀರಥಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ 'ಸ್ವಾತಿಮುತ್ತು', 'ಬಿದಿಗೆ ಚಂದ್ರಮ', 'ಯಾವ ಜನ್ಮದ ಮೈತ್ರಿ', 'ಗುಪ್ತಗಾಮಿನಿ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

'ಗುಪ್ತಗಾಮಿನಿ' ಧಾರಾವಾಹಿಯ ಭಾವನಾ ಪಾತ್ರ ಆಕೆಗೆ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು. ಜೊತೆಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೊಡುವ ಬೆಸ್ಟ್ ನಟಿ ಪ್ರಶಸ್ತಿಯನ್ನು ಆಕೆ ಪಡೆದುಕೊಂಡಿದ್ದರು.
'ತರ್ಲೆ ನನ್ ಮಕ್ಳು' ಶೋ ನಿರೂಪಣೆ ಮಾಡುವ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದ ಈಕೆ ನಂತರ ಹಿಂತಿರುಗಿ ನೋಡಿದ್ದಿಲ್ಲ. 'ಜೀನ್ಸ್', 'ಮನೆ ಮನೆ ಮಹಾಲಕ್ಷ್ಮಿ', 'ಸೀರಿಯಲ್ ಸಂತೆ', 'ಅವಾರ್ಡ್ ಕಾರ್ಯಕ್ರಮ', 'ಹಾಡು ಹರಟೆ' ಕಾರ್ಯಕ್ರಮಗಳ ಜೊತೆಗೆ 'ನನ್ನಮ್ಮ ಸೂಪರ್ ಸ್ಟಾರ್'ನ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ.
ನಟಿ, ನಿರೂಪಕಿಯ ಹೊರತಾಗಿ ಸುಷ್ಮಾ ಅವರು ಭರತನಾಟ್ಯ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಬೆಡಗಿ. ಮಾತ್ರವಲ್ಲ 'ಆರ್ಯಭಟ ಪ್ರಶಸ್ತಿ'ಯನ್ನು ಪಡೆದುಕೊಂಡಿರುವ ಈಕೆ ಮಲೆನಾಡ ಬೆಡಗಿ. ದೆಹಲಿ, ಮುಂಬೈ, ಜೈಪುರ, ತಿರುವನಂತಪುರ ಜೊತೆಗೆ ಹಂಪಿ ಉತ್ಸವದಲ್ಲೂ ನೃತ್ಯ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಮಗ್ತು ಕೇಂದ್ರ ಸರ್ಕಾರದಿಂದ ಕೊಡುವ ಸ್ಕಾಲರ್ ಶಿಪ್ ಅನ್ನು ಕೂಡಾ ಈಕೆ ಪಡೆದುಕೊಂಡಿರುತ್ತಾರೆ.
ಚಿಕ್ಕಮಗಳೂರಿನ ಕೊಪ್ಪದವರಾದ ಈಕೆ ಬಿ.ಎಸ್ಸಿ ಪದವೀಧರೆ ಹೌದು. ಇದರ ಜೊತೆಗೆ ಮದ್ರಾಸ್ ಯೂನಿವರ್ಸಿಟಿಯಿಂದ ಹಿಂದಿ ಭಾಷೆಯಲ್ಲಿ ಪದವಿಯನ್ನು ಕೂಡಾ ಈಕೆ ಪಡೆದುಕೊಂಡಿದ್ದಾರೆ. ವೈಜಯಂತಿ ಕಾಶಿ ಅವರ ಬಳಿ ಕೂಚಿಪುಡಿ ನೃತ್ಯವನ್ನು ಕೂಡಾ ಕಲಿತಿರುವ ಸುಷ್ಮಾ ರಾವ್ ಎಸ್. ನಾರಾಯಣ್ ನಿರ್ದೇಶನದ 'ಭಾಗೀರಥಿ' ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ತಂಗಿ ವೀಣಾ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿರುವ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.


Click it and Unblock the Notifications











