'ಭಾಗ್ಯಲಕ್ಷ್ಮಿ' ಸಹೋದರಿಗೆ 'ಮನೆ ಮೆಚ್ಚಿದ ಸಹೋದರಿ' ಪ್ರಶಸ್ತಿ; ಆಶಾ ಅಯ್ಯನರ್‌ಗೆ ಮೊದಲ ಪ್ರಶಸ್ತಿ

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಪೈಕಿ 'ಅನುಬಂಧ ಅವಾರ್ಡ್ಸ್' ಕೂಡಾ ಒಂದು. ಪ್ರತಿ ವರ್ಷದಂತೆ ಈ ವರ್ಷವೂ ಅನುಬಂಧ ಅವಾರ್ಡ್ಸ್ ನಡೆಯುತ್ತಿದೆ. ಅಂದ ಹಾಗೇ ಈ ಅನುಬಂಧಕ್ಕೆ ಇದೀಗ ಹನ್ನೊಂದರ ಹರೆಯ. ಮೂರು ದಿನಗಳ ಕಾಲ ಪ್ರಸಾರವಾಗುತ್ತಿರುವ ಈ ಅನುಬಂಧ ಅವಾರ್ಡ್ಸ್ ನಲ್ಲಿ ಈ ಬಾರಿಯ ಪ್ರಶಸ್ತಿ ವಿಭಾಗದಲ್ಲಿ 'ಮನೆ ಮೆಚ್ಚಿದ ಸಹೋದರಿ' ಪ್ರಶಸ್ತಿಯನ್ನು ಆಶಾ ಅಯ್ಯನರ್ ಪಡೆದುಕೊಂಡಿದ್ದಾರೆ.

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳ ತಂಗಿ ಪೂಜಾ ಆಗಿ ಅಭಿನಯಿಸುತ್ತಿದ್ದಾರೆ ಆಶಾ ಅಯ್ಯನರ್. ಆರಂಭದ ದಿನಗಳಲ್ಲಿ ಸಂಪೂರ್ಣ ನೆಗೆಟಿವ್ ಶೇಡ್ ಹೊಂದಿದ್ದ ಪೂಜಾ ಪಾತ್ರ ದಿನಕಳೆದಂತೆ ಪಾಸಿಟಿವ್ ಆಗಿ ಹೊರಹೊಮ್ಮಿತ್ತು. ಸದಾ ಕಾಲ ಲಕ್ಷುರಿ ಜೀವನವನ್ನೇ ಸಾಗಿಸುವ ಪೂಜಾಗೆ ತನ್ನ ಚಿಂತೆ ಮಾತ್ರ. ಧಾರಾವಾಹಿಯ ಆರಂಭದ ದಿನಗಳಲ್ಲಿ ತನಗೆ ಬೇಕಾದುದನ್ನು ಪಡೆಯುವುದಕ್ಕೆ ಅವಳು ಲಕ್ಷ್ಮಿಯನ್ನು ಅಸ್ತ್ರವನ್ನಾಗಿ ಬಳಸುತ್ತಿದ್ದಳು. ಲಕ್ಷ್ಮಿ ಮದುವೆ ಆಗಿ ಹೋದ ಮೇಲೆಯೂ ಅವಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಳು ಪೂಜಾ.

Bhagyalakshmi actress Asha Ayyanar won Colors Kannada Mana Mecchida Sahodari Award

ಅಕ್ಕ ಭಾಗ್ಯಳ ಒಳಿತಿಗಾಗಿ ಭಾವ ಹಾಗೂ ಆತನ ಪ್ರೇಯಸಿ ಶ್ರೇಷ್ಠಾಳನ್ನು ಎದುರು ಹಾಕಿಕೊಂಡಿರುವ ಪೂಜಾ ಸದಾ ಕಾಲ ಅಕ್ಕನ ಹಿತವನ್ನೇ ಬಯಸುವ ಹುಡುಗಿ. ಇದೀಗ ಸಂಪೂರ್ಣ ಪಾಸಿಟಿವ್ ಆಗಿ ಬದಲಾಗಿರುವ ಪೂಜಾ ಬಯಸುವುದು ಅಕ್ಕನ ಒಳಿತನ್ನು ಮಾತ್ರ. ಅದಕ್ಕಾಗಿ ಆಕೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾಳೆ. ಹೀಗಿರುವಾಗ ಪೂಜಾ ಆಲಿಯಾಸ್ ಆಶಾ ಅಯ್ಯನರ್ ಇದೀಗ ಈ ವರ್ಷದ 'ಮನೆ ಮೆಚ್ಚಿದ ಸಹೋದರಿ' ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಂದ ಹಾಗೇ ಆಶಾ ಅಯ್ಯನರ್ ಅವರು ಜೀವ ತುಂಬುತ್ತಿರುವ ಪೂಜಾ ಪಾತ್ರವನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬುದಕ್ಕೆ ಇದುವೇ ಪ್ರಸಕ್ತ ಉದಾಹರಣೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯ ಮೂಲಕ ಬಣ್ಣದ ಲೋಕ ನಂಟು ಬೆಳೆಸಿಕೊಂಡರು ಆಶಾ ಅಯ್ಯನರ್.

Bhagyalakshmi actress Asha Ayyanar won Colors Kannada Mana Mecchida Sahodari Award

ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂರುಗಂಟು' ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಆಶಾ ಅಯ್ಯನರ್ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿಯೂ ತಂಗಿಯಾಗಿ ಮೋಡಿ ಮಾಡುತ್ತಿದ್ದಾರೆ. ಪೋಷಕ ಪಾತ್ರಗಳ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಈಕೆ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋನಲ್ಲಿ ಈಕೆ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಅಂದ ಹಾಗೇ ಆಶಾ ಅವರು ಈ ಶೋ ಆರಂಭವಾದಾಗಿನಿಂದ ಸ್ಪರ್ಧಿಯಾಗಿ ಕಾಣಿಸಿಕೊಂಡಿರಲಿಲ್ಲ. 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಅನಂತಕೃಷ್ಣ 18ನೇ ವಾರದಲ್ಲಿ ಕಾರಣಾಂತರಗಳಿಂದ ಶೋವಿನಿಂದ ಹೊರಬಂದಿದ್ದರು. ಚಂದನಾ ಅವರ ಜಾಗಕ್ಕೆ ಆಶಾ ಅಯ್ಯನರ್ ಬಂದಿದ್ದು, ರುದ್ರ ಮಾಸ್ಟರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು.

More from Filmibeat

English summary
Bhagyalakshmi actress Asha Ayyanar won Colors Kannada Mana Mecchida Sahodari Award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X