Bhagyalakshmi: ಪತ್ನಿ ಮುಂದೆ ತಾಂಡವ್-ಶ್ರೇಷ್ಠಾ ಫೋಟೋಶೂಟ್; ರಿಸೆಪ್ಷನ್‌ಗೆ ಬಂದ ಭಾಗ್ಯಾ ಏನ್ ಮಾಡ್ತಾಳೆ?

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಸಿಕ್ಕಾಪಟ್ಟೆ ಮುಂದುವರೆದಿದ್ದಾರೆ. ಮನೆಯಲ್ಲಿ ಅಷ್ಟೊಂದು ರಾದ್ಧಾಂತ ನಡೆಯುತ್ತಿದ್ದರು, ತಾಂಡವ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಶ್ರೇಷ್ಠಾಳ ಪ್ರೀತಿಯಲ್ಲಿ ತೇಲಾಡುತ್ತಿದ್ದಾನೆ. ಈಗ ಮದುವೆಯ ತಯಾರಿಯೂ ನಡೆಯುತ್ತಿದೆ. ಇನ್ನು ಕೆಲವೇ ದಿನದಲ್ಲಿ ಮದುವೆಯೂ ಆಗಲಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸುಷ್ಮಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಮದುವೆ ಹೇಗೆ ನಡೆಯುತ್ತೆ ನಾನು ನೋಡ್ತೀನಿ ಅಂತ ಪೂಜಾ ಹಠ ಮಾಡಿ ಶ್ರೇಷ್ಠಾ ಮನೆಗೆ ಹೋಗಿದ್ದಾಳೆ. ಆದರೆ ಪ್ರಯೋಜನ ಏನು. ಶ್ರೇಷ್ಠಾ ಅವಳ ಕಣ್ತಪ್ಪಿಸಿ ಲಗ್ನಪತ್ರಿಕೆಯ ಪೂಜೆಯನ್ನು ಮುಗಿಸಿ ಆಗಿದೆ. ಈಗ ಮದುವೆಗೂ ತಯಾರಿ ಮಾಡಿಕೊಂಡಿದ್ದು, ರಿಸೆಪ್ಶನ್ ಕೂಡ ನಡೆಯುತ್ತಿದೆ. ಮುಂದಿದೆ ಮಾರಿ ಹಬ್ಬ ಅನ್ನೋದಂತು ವಿಡಿಯೋ ಒಂದರಿಂದ ಅರ್ಥವಾಗಿದೆ‌.

BhagyaLakshmi Fame Actress Sushma Shares their serial Funny BTS video

ಫೋಟೋಶೂಟ್‌ನಲ್ಲಿ ಲವ್ ಬರ್ಡ್ಸ್ ಬ್ಯುಸಿ

ತಾಂಡವ್ ಹಾಗೂ ಶ್ರೇಷ್ಠಾಳ ಕನಸಿನ ದಿನ ಬಂದೇ ಬಿಟ್ಟಿದೆ. ಆ ಕಡೆ ಮನೆಯಲ್ಲಿ ಸಮಸ್ಯೆಯಲ್ಲಿಯೇ ಅತ್ತೆ ಸೊಸೆ ಮುಳುಗಿ ಹೋಗಿದ್ದಾರೆ. ಮನೆಯನ್ನು ನಡೆಸುವುದು ಹೇಗಪ್ಪ ಎಂದು ಇಬ್ಬರು ಕೆಲಸದ ದಾರಿ ಹಿಡಿದಿದ್ದಾರೆ. ಮಗ ನೋಡಿಕೊಳ್ಳದಿದ್ದರೇ ಏನು ಅಮ್ಮ ನಾನಿನ್ನು ಗಟ್ಟಿಯಾಗಿದ್ದೀನಿ ಅಂತ ಕುಸುಮಾ ಕೆಲಸಕ್ಕೆ ಸೇರಿದ್ದಾಳೆ. ಭಾಗ್ಯಾನು ಕಷ್ಟಪಡುವಾಗ ತಾಂಡವ್ - ಶ್ರೇಷ್ಠಾ ಜೊತೆಗೆ ಫೋಟೋಶೂಟ್ ಮಾಡಿಕೊಂಡು ಆಯಾಗಿದ್ದಾನೆ. ಅದು ಅಂತಿಂಥ ಫೋಟೋಶೂಟ್ ಅಲ್ಲ ರೊಮ್ಯಾಂಟಿಕ್ ಫೋಟೋಶೂಟ್.

ಮದುವೆಯ ವಿಡಿಯೋ ಹಂಚಿಕೊಂಡ ಸುಷ್ಮಾ

ಭಾಗ್ಯಾ ಪಾತ್ರಧಾರಿ ಸುಷ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡ್ತಾ ಇದ್ರೆ, ತಾಂಡವ್ ಹಾಗೂ ಶ್ರೇಷ್ಠಾ ಹಾಕಿರುವ ಬಟ್ಟೆ ನೋಡುತ್ತಾ ಇದ್ದರೆ ಅದು ರಿಸೆಪ್ಷನ್‌ಗೆ ರೆಡಿಯಾಗಿರುವುದು ಎಂಬುದು ಅರ್ಥವಾದಂತೆ ಇದೆ. ಅಂದ್ರೆ ಈ ವಿಡಿಯೋ ಮೂಲಕ ಆ ಇಬ್ಬರು ಮದುವೆ ಮಂಟಪದವರೆಗೂ ಅತಿ ಶೀಘ್ರದಲ್ಲಿ ಹೋಗ್ತಾರೆ ಎಂಬುದಂತು ಅರ್ಥವಾಗಿದೆ.

ನಗುತ್ತಿರುವ ಭಾಗ್ಯಾಗೆ ತಾಂಡವ್ ಮೋಸ

ಭಾಗ್ಯಾ ಪಾತ್ರಧಾರಿ ಸುಷ್ಮಾ ರಿಯಲ್ ಲೈಫ್ ಸಿಕ್ಕಾಪಟ್ಟೆ ಜಾಲಿ ಕ್ಯಾರೆಕ್ಟರ್ ಇರುವಂತಹವರು. ಈಗ ತಾಂಡವ್ ಹಾಗೂ ಶ್ರೇಷ್ಠಾ ಫೋಟೋಶೂಟ್ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಖುಷಿಯಾಗಿಯೇ ಹಂಚಿಕೊಂಡಿದ್ದಾರೆ. ಇನ್ನು ಈ ಕಣ್ಣಲ್ಲಿ ಏನೇನ್ ನೋಡ್ಬೇಕ್ರೋ ತಮ್ಮಂದಿರ. ನೋಡ್ರೋ ನೋಡ್ರೊ ಹೆಂಗೆ ಪೋಸ್ ಕೊಡ್ತಾ ಇದ್ದಾರೆ ಅಂತ ಕಾಮೆಂಟ್ರಿ ಬೇರೆ ಕೊಡ್ತಾ ಇದ್ದಾರೆ. ಜೊತೆಗೆ ತೆರೆಮೇಲಿನ ಗಂಡನ ಮದುವೆ ಆಗುತ್ತಿರುವುದಕ್ಕೆ ಖುಷಿಯಾಗಿದ್ದಾರೆ.

ಭಾಗ್ಯಾಳ ಸ್ಥಿತಿಗೆ ಏನಂದ್ರು ವೀಕ್ಷಕರು

ಭಾಗ್ಯಾ ಕೂಡ ಅದೇ ಫೋಟೋಶೂಟ್ ಸೆಟ್‌ನಲ್ಲಿ ಇರುವ ಕಾತಣ, ಗಂಡನ ಮದುವೆಗೆ ಹೋಗಿದ್ದಾರೆ ಎಂದೇ ಅರ್ಥ. ಇದು ನೋಡುಗರಿಗೂ ಅರ್ಥವಾಗಿದೆ. ಹೀಗಾಗಿಯೇ ಭಾಗ್ಯಾರ ಎನರ್ಜಿಗೆ ಪಾಸಿಟಿವಿಟಿಗೆ ಜನ ಸಲಾಂ ಅಂತಿದ್ದಾರೆ. ಈ ವಿಡಿಯೋ ಮೂಲಕ ಈ ಮದುವೆ ನಡೆಯಲ್ಲ, ಮದುವೆ ದಿನ ಒಂದೊಳ್ಳೆ ಟ್ವಿಸ್ಟ್ ಸಿಗುತ್ತೆ ಎಂಬುದಂತು ಅರ್ಥವಾಗಿದೆ. ಆ ಮದುವೆಯ ದಿನ ಬೇಗ ಬರಲಿ ಎಂದು ಕಾಯುತ್ತಿದ್ದಾರೆ. ಅದರ ಜೊತೆಗೆ ಭಾಗ್ಯಾಳ ಖುಷಿ ನೋಡಿ, ಸದಾ ಹೀಗೆ ಇರಿ ಎಂದು ಹಾರೈಸುತ್ತಿದ್ದಾರೆ.

More from Filmibeat

English summary
Bhagyalakshmi serial: Here is the details about Sushma shared Tandav and Shrestha's wedding video;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X