'ಭಾಗ್ಯಲಕ್ಷ್ಮಿ' ಧಾರಾವಾಹಿ ನಟ ಆಕಾಶ್ ಕಾರು ಅಪಘಾತ; ಫೋಟೊಸ್ ವೈರಲ್!

ಹಿಂದಿಯ ಭಾಗ್ಯಲಕ್ಷ್ಮಿ ಎಂಬ ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದ ನಟ ಆಕಾಶ್ ಚೌಧರಿ ವೀಕ್ಷಕರಿಂದ ಈಗಲೂ ಸಹ ಭಾಗ್ಯಲಕ್ಷ್ಮಿ ಆಕಾಶ್ ಚೌಧರಿ ಎಂದೇ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆಕಾಶ್ ಚೌಧರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾಲು ಸಾಲು ಪೋಸ್ಟ್ ಹಾಗೂ ಸ್ಟೋರಿಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಹೀಗೆ ಯಾವಾಗಲೂ ಸಂತಸದ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದ ಆಕಾಶ್ ಚೌಧರಿ ಇದೀಗ ಬೇಸರದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಹೌದು, ಆಕಾಶ್ ಚೌಧರಿ ತಮ್ಮ ಕಾರು ಅಪಘಾತಕ್ಕೀಡಾದದ್ದನ್ನು ಪೋಸ್ಟ್ ಮಾಡಿದ್ದಾರೆ. ಯಾವಾಗಲೂ ವೀಕೆಂಡ್ ಪಾರ್ಟಿ ಮಾಡಲು ಇಚ್ಛಿಸುವ ಪಾರ್ಟಿ ಪ್ರಿಯ ಆಕಾಶ್ ಚೌಧರಿ ಪ್ರತೀ ವಾರದಂತೆ ಈ ವಾರಾಂತ್ಯವೂ ಸಹ ಪಾರ್ಟಿ ಮಾಡಲು ತೆರಳುವ ವೇಳೆ ಈ ಘಟನೆ ನಡೆದಿದೆ.

Bhagyalakshmi fame Serial actor Akash Choudhary met with car accident in Lonavala

ಮುಂಬೈನಲ್ಲಿ ನೆಲೆಸಿರುವ ಆಕಾಶ್ ಚೌಧರಿ ತಮ್ಮ ಬೆನ್ಜ್‌ ಕಾರಿನಲ್ಲಿ ಮಹಾರಾಷ್ಟ್ರದ ಲೊನಾವಾಲಾಗೆ ತೆರಳಿದ್ದರು. ಈ ಸಮಯದಲ್ಲಿ ಹಿಂದಿನಿಂದ ಬಂದ ಟ್ರಕ್ ಒಂದು ಆಕಾಶ್ ಚೌಧರಿ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಹಿಂದಿನಿಂದ ಲಾಡಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಚೂರು ಹಾನಿಗೊಳಗಾಗಿದೆ.

ಇನ್ನು ಆಕಾಶ್ ಚೌಧರಿಗೆ ಹೆಚ್ಚೇನೂ ಹಾನಿ ಉಂಟಾಗದೇ ಇದ್ದು ಕೈ ಮತ್ತು ಕಾಲಿನಲ್ಲಿ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಆಕಾಶ್ ಚೌಧರಿ ಜತೆ ಕಾರಿನಲ್ಲಿ ಅವರ ಪ್ರೀತಿಯ ಸಾಕು ನಾಯಿ ಹೇಜಲ್ ಸಹ ಇತ್ತು, ಈ ನಾಯಿಗೂ ಸಹ ಯಾವುದೇ ಹಾನಿ ಸಂಭವಿಸಿಲ್ಲ. ಹೀಗೆ ತಮ್ಮ ಕಾರು ಅಪಘಾತಕ್ಕೀಡಾಗಿದ್ದರ ಬಗ್ಗೆ ಫೋಟೊಗಳನ್ನು ಹಂಚಿಕೊಂಡಿರುವ ಆಕಾಶ್ ಚೌಧರಿ ಟ್ರಕ್ ಚಾಲಕನ ಬೇಜವಾಬ್ದಾರಿತನದಿಂದ ಈ ಅಪಘಾತ ಸಂಭವಿಸಿದೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ತನ್ನ ಸ್ನೇಹಿತರಾದ ವೈಷ್ಣವಿ ಉಪಾಧ್ಯಾಯ ಹಾಗೂ ದೇವರಾಜ್ ಪಾಟೀಲ್ ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ತಾನು ಕಾರು ಚಲಾಯಿಸಲು ತುಂಬಾ ಹೆದರುತ್ತಿದ್ದೆ ಎಂಬುದನ್ನು ತಿಳಿಸಿದ ಆಕಾಶ್ ಚೌಧರಿ ಜಾಗರೂಕತೆಯಿಂದ ಕಾರು ಚಲಾಯಿಸಿ ಎಂದು ತಮ್ಮ ಅನುಯಾಯಿಗಳಿಗೆ ಸಂದೇಶ ರವಾನಿಸಿದ್ದಾರೆ.

ಇನ್ನು ಈ ಪೋಸ್ಟ್ ಕಂಡ ಆಕಾಶ್ ಚೌಧರಿ ಅಭಿಮಾನಿಗಳು ಜೋಪಾನವಾಗಿ ಕಾರು ಚಲಾಯಿಸಿ, ಚಿಂತಿಸಬೇಡಿ, ವಿಶ್ರಾಂತಿ ಪಡೆದುಕೊಂಡು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ನೀವು ಪಾರ್ಟಿ, ಪಬ್, ಮದ್ಯ ಸೇವನೆಯನ್ನು ತುಸು ಕಡಿಮೆ ಮಾಡಿ, ಪ್ರತೀ ವೀಕೆಂಡ್ ಪಾರ್ಟಿ ಎಂದು ಸುತ್ತಾಡುತ್ತಿದ್ದರೆ ಈ ರೀತಿ ಅಪಘಾತ ಸಂಭವಿಸುವುದು ಖಚಿತ. ನೀವೇನೋ ಲಾರಿ ಚಾಲಕನದ್ದು ತಪ್ಪು ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡುಬಿಟ್ರಿ, ಆದರೆ ಆ ಚಾಲಕ ಏನು ನಡೆಯಿತು ಎಂಬ ಸತ್ಯವನ್ನು ಹೇಳಲು ಆತ ಸ್ಟಾರ್ ಅಲ್ಲ ಹಾಗೂ ಆತ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಅಲ್ಲ. ಇಲ್ಲಿ ಯಾರ ತಪ್ಪೋ ಗೊತ್ತಿಲ್ಲ, ಆದರೆ ಪಾರ್ಟಿ ಮಾಡಿ ಗಾಡಿ ಚಲಾಯಿಸಬೇಡಿ ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Serial actor Akash Choudhary met with car accident in Lonavala. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X