Bhagyalakshmi: ಆಫ್ ಸ್ಕ್ರೀನ್ ತಾಂಡವ್‌ಗೆ ಮಹಿಳಾ ಫ್ಯಾನ್ಸ್ ಫಿದಾ; ತಾಂಡವ್ ಆಗಿ ಬದಲಾದ್ರು ಭಾಗ್ಯಾ!
ಕಲಾವಿದರೇ ಹಾಗೇ ತಮ್ಮ ರಿಯಲ್ ಕ್ಯಾರೆಕ್ಟರ್‌ಗೆ ತದ್ವಿರುದ್ಧವಾದ ಪಾತ್ರವನ್ನೇ ತೆರೆಮೇಲೆ ಮಾಡುತ್ತಾರೆ. ಈಗ ತಾಂಡವ್‌ದು ಹಾಗೇ. ಭಾಗ್ಯಲಕ್ಷ್ಮೀ ಸೀರಿಯಲ್ ನೋಡಿದವರಿಗೆ ಇಂಥ ಗಂಡ ಯಾವತ್ತಿಗೂ ಬೇಡ ಅನ್ನಿಸದೇ ಇರುವುದಿಲ್ಲ. ಯಾವಾಗಲೂ ಸಿಡುಕುತ್ತಾ ಇರುತ್ತಾನೆ. ಭಾಗ್ಯಾಳನ್ನ ಮೊದಲು ಬಿಟ್ಟು ಶ್ರೇಷ್ಠಾಳನ್ನ ಮದುವೆಯಾಗಿ ಬಿಡಬೇಕೆಂದೇ ಯೋಜನೆ ಹಾಕಿಕೊಳ್ಳುತ್ತಿದ್ದಾನೆ.
ಶ್ರೇಷ್ಠಾಳಿಂದಾನೇ ಸಾಕಷ್ಟು ತೊಂದರೆಗಳು ಎದುರಾಗಿವೆ. ಈಗ ದೆವ್ವ ಬಂದವಳಂತೆ ಬೇರೆ ಆಡುತ್ತಿದ್ದಾಳೆ. ಇದೆಲ್ಲ ನೋಡಿದರು ಸಹ ತಾಂಡವ್ ಶ್ರೇಷ್ಠಾನೆ ಬೇಕು. ಆದ್ರೆ ಭಾಗ್ಯಾ ಮುಂದೆ ಬಂದರೆ ಶ್ರೇಷ್ಠಾಳ ವಿಚಾರ ಹೇಳುವುದಕ್ಕೇನೆ ಹೆದರಿ ಬಿಡುತ್ತಾನೆ. ತೆರೆಮೇಲಿನ ತಾಂಡವ್‌ಗೂ ತೆರೆ ಹಿಂದಿನ ಸುದರ್ಶನ್ ರಂಗಪ್ರಸಾದ್‌ಗೂ ಎಷ್ಟೆಲ್ಲಾ ವ್ಯತ್ಯಾಸವಿದೆ ಗೊತ್ತಾ..? ಮುಂದೆ ಓದಿ. ರಿಯಲ್ ತಾಂಡವ್‌ಗೆ ಮಹಿಳೆಯರೇ ಫ್ಯಾನ್ಸ್ ಆಗೋಗಿದ್ದಾರೆ.

ನಕ್ಕು ನಕ್ಕು ಸುಸ್ತು
ಸೀರಿಯಲ್ ಕಲಾವಿದರು ಕ್ಯಾಮೆರಾ ಆಫ್ ಆದಾಗ ಹೇಗೆಲ್ಲಾ ಇರ್ತಾರೆ ಅನ್ನೋದನ್ನ ಈಗಾಗಲೇ ನೀವೆಲ್ಲಾ ನೋಡಿದ್ದೀರಾ. ಯಾಕಂದ್ರೆ ಸೋಷಿಯಲ್ ಮೀಡಿಯಾ ಸ್ಟ್ರಾಂಗ್ ಇರೋದ್ರಿಂದ, ಶೂಟಿಂಗ್ ಸ್ಪಾಟ್‌ನಲ್ಲಿ ಗ್ಯಾಪ್ ಸಿಕ್ಕಿದ್ರೆ ಸಾಕು ವಿಲನ್ಸ್-ಹೀರೋಯಿನ್ ಸೇರಿ ರೀಲ್ಸ್ ಮಾಡ್ತಾರೆ. ಇನ್ನು ಟ್ರಿಪ್ ಅದು ಇದು ಅಂತ ಜೊತೆಗೆ ಹೋಗುವಷ್ಟು ಒಳ್ಳೆಯ ಬಾಂಡಿಂಗ್ ಬೆಳೆಸಿಕೊಂಡಿರುತ್ತಾರೆ. ಅದೇ ಥರ ತಾಂಡವ್ ಹಾಗೂ ಭಾಗ್ಯ ನಡುವೆ ಒಂದೊಳ್ಳೆ ಬಾಂಧವ್ಯ ಇದೆ ಅನ್ನೋದಕ್ಕೆ ಭಾಗ್ಯಾ ಹಂಚಿಕೊಂಡಿರುವ ವಿಡಿಯೋ ಸಾಕ್ಷಿ.
ನಾನೇ ಗ್ರೇಟ್ ಎಂದ ತಾಂಡವ್
ಭಾಗ್ಯಾ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಇಬ್ಬರು ಕಿತ್ತಾಡುತ್ತಿದ್ದಾರೆ. ನಾನೇ ಗ್ರೇಟು, ನಾನ್ಯಾವತ್ತಾದ್ರೂ ಜಗಳ ಆಡಿದ್ದೀನಾ ಎಂಬ ವಾದ ಒ್ರತಿವಾದಗಳು ನಡೆಯುತ್ತಿವೆ. ಎದುರು ಕುಳಿತಿದ್ದವರ ಬಳಿ ಸಲಹೆಯನ್ನು ಕೇಳುತ್ತಿದ್ದಾರೆ. ಭಾಗ್ಯಾಳನ್ನೆ ಸೀನಿಯರ್ ಎಂದು ಅವರು ಹೇಳಿದಾಗ, ಆಯ್ತು ಚಿಕ್ಕವರ ಬಳಿಯೇ ಹೆಚ್ಚು ಬುದ್ದಿ ಇರುತ್ತೆ ಎಂದು ತಮ್ಮ ಸಮಸ್ಯೆಗೆ ಪರಿಹಾರ ಕೇಳುತ್ತಿದ್ದಾರೆ.
ನಾಯಿ ಬುದ್ದಿ ಎಂದ ಭಾಗ್ಯಾ
ಹೀಗೆ ಜಗಳದ ವಿಚಾರದಲ್ಲಿ ವಾದ ಪ್ರತಿವಾದ ಮಾಡುವಾಗ ತಾಂಡವ್ ನನ್ನದು ಮಗುವಿನಂತ ಮನಸ್ಸು ಎಂದಿದ್ದಾರೆ. ಆಗ ಭಾಗ್ಯಾ ಹೌದು ಮಗುವಿನಂತ ಮನಸ್ಸು ನಾಯಿ ಬುದ್ದಿ ಎಂದಿದ್ದಾರೆ. ಇದನ್ನು ಒಪ್ಪದ ತಾಂಡವ್ ಯಾವುದಾದರೂ ಒಂದೊಳ್ಳೆ ಪ್ರಾಣಿ ಹೋಲಿಕೆ ಮಾಡಿ ಎಂದಿದ್ದಾರೆ. ಆಗ ಒಂದಷ್ಟು ಕಾಮಿಡಿ ನಡೆದಿದ್ದು, ಹುಲಿಗೆ ಹೋಲಿಕೆ ಮಾಡಲಾಗಿದೆ. ಈ ವಿಡಿಯೋವನ್ನು ಸುಷ್ಮಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಿಯಲ್ ತಾಂಡವ್‌ಗೆ ಮಹಿಳಾ ಫ್ಯಾನ್ಸ್
ತಾಂಡವ್‌ಗೆ ನಗು ಎಂಬುದು ಗೊತ್ತೆ ಇಲ್ಲ ಅನ್ನಿಸುತ್ತೆ. ಸದಾ ಕಾಲ ಮುಖದಲ್ಲಿ ಕೋಪ, ಜಿಗುಪ್ಸೆ, ಅತೃಪ್ತಿಯೇ ಕಾಣಿಸುತ್ತದೆ. ಇದು ಧಾರಾವಾಹಿಯಲ್ಲಿ ಮಾತ್ರ. ಆದರೆ ರಿಯಲ್ ಆಗಿ ತಾಂಡವ್ ಇರುವ ರೀತಿಯೇ ಬೇರೆ. ಸದಾ ಕಾಲ ನಗುತ್ತಾ ಇರುತ್ತಾರೆ. ತನ್ನ ಸುತ್ತಮುತ್ತ ಇರುವವರನ್ನು ನಗಿಸುತ್ತಲೇ ಇರುತ್ತಾರೆ. ಅದರಲ್ಲೂ ಭಾಗ್ಯಾ ಹಂಚಿಕೊಂಡಿರುವ ವಿಡಿಯೋದಲ್ಲಿ ತಾಂಡವ್ ನಕ್ಕಿದ್ದು ನೋಡಿ ಮಹಿಳಾ ಅಭಿಮಾನಿಗಳು ಫಿದಾ ಆಗಿದ್ದಾರೆ. ವಾವ್ ತಾಂಡವ್ ಸರ್ ಎಷ್ಟು ಚೆನ್ನಾಗಿ ಕಾಣಿಸ್ತೀರಾ ಎಂದು ಹೊಗಳಿದ್ದಾರೆ. ಹೀಗೆ ನಗುತ್ತಾ ಇರಿ ಎಂದಿದ್ದಾರೆ.


Click it and Unblock the Notifications











