Bhagyalakshmi: ಭಾಗ್ಯ ಕೇಳುತ್ತಿರುವ ಪ್ರಶ್ನೆಗೆ ತಾಂಡವ್ ತಬ್ಬಿಬ್ಬು: ಭಾವನ ಮೇಲೆ ಪೂಜಾಗೆ ಅನುಮಾನ!
ಕೊನೆಗೂ ಕುಸುಮಾ ಮನೆಯಲ್ಲಿ ಸುಂದರಿ ಕದ್ದಿದ್ದ ಬೆಳ್ಳಿ ಸಾಮಾನು ಹಾಗೂ ಒಂದು ಚಿನ್ನದ ನೆಕ್ಲೆಸ್ ಭಾಗ್ಯಳ ಕೈ ಸೇರಿದೆ. ಸುಂದರಿ, ತಾಂಡವ್ ಬಳಿ ನಾನು ಜೈಲಿನಲ್ಲಿ ಇರುವಷ್ಟು ದಿನವೂ ಸಹ ನೀನು ಹಣದ ಸಹಾಯ ಮಾಡಲೇಬೇಕು ಎಂದು ಹೇಳಿದ್ದಾಳೆ. ತಾಂಡವ್ ತನ್ನ ಗುಟ್ಟಲ್ಲ ರಟ್ಟಾಗಿ ಹೋಗುತ್ತದೆ ಎಂದು ಸುಂದರಿ ಹೇಳಿದಂತೆ ಕೇಳಲು ಒಪ್ಪಿಕೊಂಡಿದ್ದಾನೆ.
ಭಾಗ್ಯ ಎಲ್ಲಾ ಸಾಕ್ಷಿಗಳನ್ನು ತೋರಿಸಿದ ಮೇಲೆ ಪೊಲೀಸರು ಎಲ್ಲಾ ಬೆಳ್ಳಿ ಸಾಮಾನುಗಳು ಕುಸುಮಾರದ್ದೇ ಎಂದು ವಾಪಸ್ ನೀಡಿದ್ದಾರೆ. ಭಾಗ್ಯಗೆ ತಮ್ಮ ಎಲ್ಲಾ ವಸ್ತುಗಳು ವಾಪಸ್ ಸಿಕ್ಕಿದ್ದಕ್ಕೆ ಬಹಳ ಸಂತಸವಾಗಿದೆ. ತಾಂಡವ್ ತನ್ನ ಹೆಂಡತಿ ಭಾಗ್ಯಳನ್ನು ಪೆದ್ದು ಎಂದು ಕೊಂಡಿದ್ದನು. ಆದರೆ ಭಾಗ್ಯ ಅತಿ ಬುದ್ಧಿವಂತಿಕೆಯಿಂದ ತನಗೆ ಸೇರಬೇಕಾದ ವಸ್ತುಗಳನ್ನ ಪೊಲೀಸರ ಕೈಯಿಂದ ಪಡೆದಿದ್ದಾಳೆ.

ತಾಂಡವ್ ಭಾಗ್ಯಾಳ ಬುದ್ಧಿವಂತಿಕೆಯನ್ನ ನೋಡಿ ನಿಬ್ಬರಗಾಗಿದ್ದಾನೆ. ಕೊನೆಗೂ ಕುಸುಮಾ ತನ್ನ ಬೆಳ್ಳಿ ಸಾಮಾನುಗಳು ಸಿಕ್ಕಿದವು ಎಂದು ಖುಷಿ ಪಟ್ಟಿದ್ದಾಳೆ. ವಿಘ್ನ ನಿವಾರಕ ಗಣಪತಿ ಹೇಗೋ ಹೋಗಿದ್ದ ಸಾಮಾನುಗಳೆಲ್ಲ ಸಿಗುವಂತೆ ಮಾಡಿದ ಎಂದು ಕೈ ಮುಗಿದಿದ್ದಾಳೆ. ಭಾಗ್ಯಗೆ ತನ್ನ ಗಂಡನ ಮೇಲೆ ಅನುಮಾನ ಶುರುವಾಗಿದೆ. ಈ ರೀತಿ ಯಾಕೆ ತಾಂಡವ್ ಆಡುತ್ತಿದ್ದಾರೆ ಒಂದು ತಿಳಿಯುತ್ತಿಲ್ಲ. ಎಲ್ಲವನ್ನು ಕ್ಲಾರಿಟಿ ಮಾಡಿಕೊಳ್ಳಬೇಕು ಎಂದು ಭಾಗ್ಯ ಅಂದುಕೊಂಡಿದ್ದಾಳೆ.
ಈ ಕಡೆ ಕಾವ್ಯ ಹೇಳಿದ್ದಕ್ಕೆ ರಾಘು ಎಚ್ಚೆತ್ತುಕೊಂಡಿದ್ದಾನೆ. ಶ್ರೇಷ್ಠಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಿ ವಾಪಸ್ ಊರಿಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡು ಹುಡುಕಿಕೊಂಡು ಬಂದಿದ್ದಾನೆ. ಶ್ರೇಷ್ಠ, ತಾಂಡವ್ ಮನೆಯ ಬಳಿ ಇದ್ದು ರಾಘು ಅಲ್ಲಿಗೆ ಬಂದಿದ್ದಾನೆ. ಶ್ರೇಷ್ಠಾ ಇನ್ನೂ ರಾಘುವನ್ನು ನೋಡಿಲ್ಲ. ಕಾವ್ಯ, ಶ್ರೇಷ್ಠಗೆ ಫೋನ್ ಮಾಡಿ ಎಲ್ಲಿಗೆ ಹೋಗಿದ್ದೀಯಾ? ಎಂದು ಕೇಳಿದ್ದಾಳೆ. ಇದಕ್ಕೆ ಶ್ರೇಷ್ಠ ನಾನು ತಾಂಡವ್ ಮನೆ ಬಳಿ ಇದ್ದೇನೆ ಎಂದು ಹೇಳಿದ್ದಾಳೆ. ಎಷ್ಟು ಹೇಳಿದರು ನೀನು ಕೇಳೋದಿಲ್ಲ ಹಬ್ಬದ ದಿನ ಯಾಕೆ ಅಲ್ಲಿಗೆ ಹೋದೆ ಎಂದು ಕಾವ್ಯ ಬೈದಿದ್ದಾಳೆ.
ಕೊನೆಗೂ ಸಿಕ್ಕವು ಬೆಳ್ಳಿ ಸಾಮಾಗ್ರಿ
ಭಾಗ್ಯದ ಚಾಣಾಕ್ಷತನದಿಂದ ಬೆಳ್ಳಿ ಸಾಮಾನು ಕೈ ಸೇರಿವೆ. ಪೊಲೀಸ್ ಠಾಣೆಯಿಂದ ಹೊರಗಡೆ ಬಂದ ಮೇಲೆ ಭಾಗ್ಯ ಗರಂ ಆಗಿದ್ದಾಳೆ. ನಾನು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟರೆ ಮಾತ್ರ ಈಗ ಮನೆಗೆ ಹೋಗಲು ಸಾಧ್ಯ ಎಂದು ಹೇಳಿದ್ದಾಳೆ. ತಾಂಡವ್, ಭಾಗ್ಯಳ ಮಾತುಗಳನ್ನ ಕೇಳಿ ಕೊಂಚ ಗಲಿಬಿಲಿಗೊಂಡಿದ್ದಾನೆ. ನೀವು ಅವಳಿಗೆ ನೀಉ ಎಲ್ಲಿಂದ ತಂದುಕೊಟ್ರಿ? ಅಡುಗೆ ಮನೆಯಿಂದ ತಾನೇ. ಅಷ್ಟರಲ್ಲಿ ಅವಳು ಈ ಎಲ್ಲಾ ವಸ್ತುಗಳನ್ನ ಹೇಗೆ ಕದಿಯಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾಳೆ.

ತಾಂಡವ್‌ಗೆ ಕ್ಲಾಸ್ ತೆಗೆದುಕೊಂಡು ಭಾಗ್ಯ
ಅವಳು ದೇವರ ಮನೆಯಲ್ಲಿದ್ದ ಬೆಳ್ಳಿ ಸಾಮಾನು ಅಡುಗೆ ಮನೆಯಲ್ಲಿದ್ದ ಬೆಳ್ಳಿ ಲೋಟ ಹಾಗೂ ನೆಕ್ಲೆಸ್ ಕದಿಯುವ ತನಕ ನೀವು ಏನು ಮಾಡುತ್ತಾ ಇದ್ರಿ? ಎಂದು ಕೇಳಿದ್ದಾಳೆ. ನಿಮ್ಮ ಕ್ಲೈಂಟ್ ಇದ್ರಾ ಅಥವಾ ಇರಲಿಲ್ವ? ನೀವು ಯಾವಾಗ ಹೊರಗಡೆ ಹೋದ್ರಿ ಎಂದೆಲ್ಲಾ ಪ್ರಶ್ನೆ ಮಾಡಿದ್ದಾಳೆ. ಭಾಗ್ಯ ಕೇಳುತ್ತಿರುವ ಪ್ರಶ್ನೆಗಳನ್ನು ನೋಡಿದ ತಾಂಡವ್ ಇವಳು ಶಾಲೆಗೆ ಕಲೆಯಲು ಹೋಗುತ್ತಾಳ ಅಥವಾ ಪತ್ತೆದಾರಿಕೆ ಮಾಡಲು ಹೋಗುತ್ತಾಳ ಎಂದುಕೊಂಡಿದ್ದಾನೆ. ನಾನು ಕೇಳುತ್ತಿರುವ ಎಲ್ಲಾ ಪ್ರಶ್ನೆಗೂ ಸಹ ಉತ್ತರ ಬೇಕಾಗಿದೆ ಹೇಳಿ ಎಂದು ತಾಂಡವ್ ಬಳಿ ಕೇಳುತ್ತಿದ್ದಾಳೆ. ತಾಂಡವ್ ಮಾತ್ರ ಏನು ಹೇಳಬೇಕೋ ತಿಳಿಯದೆ ಸುಮ್ಮನೆ ನಿಂತಿದ್ದಾನೆ.
ಪೂಜಾಗೆ ಶ್ರೇಷ್ಠ ಮೇಲೆ ಅನುಮಾನ
ಶ್ರೇಷ್ಠ ಬಂದಿದ್ದಾಳೆ. ಮನೆಯೊಳಗೆ ಬರಲಿಲ್ಲ. ಕಾರಿನ ಬಳಿಯೇ ನಿಂತುಕೊಂಡಿದ್ದಾಳೆ. ಹಾಗಾಗಿ ಪೂಜಾಗೆ ಅನುಮಾನ ಬಂದಿದೆ. ಇನ್ನು ತನ್ನ ಭಾವನ ಮೇಲೆ ಇವಳಿಗೆ ಯಾಕೆ ಇಷ್ಟು ಅಧಿಕಾರ ನನ್ನ ಭಾವ ಅಕ್ಕನ ಜೊತೆ ಹೋಗಿದ್ದಾರೆ. ಇವಳು ಯಾಕೆ ಉರಿದುಕೊಳ್ಳುತ್ತಿದ್ದಾಳೆ ಎಂದು ಯೋಚಿಸಿದ್ದಾಳೆ. ತನ್ನ ಅಮ್ಮ ಇವನು ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾನೆ ಎಂದು ಹೇಳಿದ ಮಾತು ಪೂಜಾಳಿಗೆ ನೆನಪಾಗಿದೆ. ಹೀಗಾಗಿ ಪೂಜಾ, ಶ್ರೇಷ್ಠ ಮೇಲೆ ಅನುಮಾನ ಪಟ್ಟಿದ್ದಾಳೆ.


Click it and Unblock the Notifications











