ತಾಂಡವ್‌ ಬಿಟ್ಟು ಹೊರಟ ಭಾಗ್ಯಾ; ಮನೆಯಲ್ಲಿಯೇ ಇದ್ದು ಗಂಡನಿಗೆ ಬುದ್ದಿ ಕಲಿಸಬೇಕಿತ್ತು ಎಂದ ಫ್ಯಾನ್ಸ್

By ಪೂರ್ವ

ತಾಂಡವ್ ಆಡಿದ ಆಟಗಳನ್ನು, ನಾಟಕಗಳನ್ನು ಸಹಿಡಿಕೊಂಡು ಇದ್ದ ಭಾಗ್ಯಾ ಇದೀಗ ತಾಂಡವ್ ಕೆನ್ನೆಗೆ ಹೊಡೆದು ಪಾಠ ಕಲಿಸಿದ್ದಾಳೆ. ಆದರೂ ಕೂಡಾ ತಾಂಡವ್‌ಗೆ ಕೊಂಚವೂ ಮಾನ ಮರ್ಯಾದೆ ಎನ್ನುವುದಿಲ್ಲ. ಭಾಗ್ಯಾಗೆ ತನ್ನ ಗಂಡ ಎಂದರೆ ಪ್ರೀತಿ. ಆದರೆ ತಾಂಡವ್ ತಾಳಿಯ ಬಗ್ಗೆ ಬಹಳ ಕೀಳಾಗಿ ಮಾತಾನಾಡಿದ ಕಾರಣಕ್ಕೆ ಭಾಗ್ಯಾ ತಾಂಡವ್‌ ಕೆನ್ನೆಗೆ ಹೊಡೆಯುತ್ತಾಳೆ. ಇದನ್ನು ನೋಡಿದ ಮನೆ ಮಂದಿಗೆ ಏನೂ ಆಶ್ಚರ್ಯ ಆಗುವುದಿಲ್ಲ. ಯಾಕೆಂದರೆ, ತಾಂಡವ್ ಭಾಗ್ಯಾಗೆ ಮಾಡಿದ ಮೋಸಕ್ಕೆ ಆತನಿಗೆ ಇನ್ನೂ ದೊಡ್ಡ ಶಿಕ್ಷೆಯೇ ಆಗಬೇಕಿತ್ತು ಎನ್ನುತ್ತಿದ್ದಾರೆ ವೀಕ್ಷಕರು.

ಕುಸುಮಾ ತಾನು ಕೂಡ ನನ್ನ ಸೊಸೆಯ ಜೊತೆಯೇ ಹೋಗುತ್ತೇನೆ ಎಂದು ಹೊರಟು ನಿಂತಾಗ ತಾಂಡವ್ ತಂದೆ ಕೂಡ ಸೊಸೆಯ ಜೊತೆಯೇ ಹೋಗುವುದು ಉತ್ತಮ ಎಂದು ನಿರ್ಧಾರ ಮಾಡುತ್ತಾರೆ. ಇದೆಲ್ಲವನ್ನೂ ನೋಡಿ ತಾಂಡವ್ ತನ್ನ ಮಕ್ಕಳಿಬ್ಬರೂ ನನ್ನ ಜೊತೆಯೇ ಇರುತ್ತಾರೆ ಎಂದು ಅವರಿಬ್ಬರನ್ನು ಬಲವಂತವಾಗಿ ಮನೆಯೊಳಗೆ ಕರೆದುಕೊಂಡು ಹೋಗುತ್ತಾನೆ. ತಡೆಯಲು ಬಂದ ಭಾಗ್ಯಾಳನ್ನೂ ತಳ್ಳಿ ಕೆಳಗೆ ಬೀಳಿಸುತ್ತಾನೆ. ಆದರೂ ಧೃತಿಗೆಡದ ಭಾಗ್ಯಾ ತನ್ನ ಇಬ್ಬರು ಮಕ್ಕಳನ್ನು ತಾಂಡವ್‌ನ ತೆಕ್ಕೆಯಿಂದ ಬಿಡಿಸಿಕೊಳ್ಳುತ್ತಾಳೆ. ತನಗೆ ಎಲ್ಲರನ್ನೂ ಸಾಕುವಷ್ಟು ತಾಕತ್ತಿದೆ ಎನ್ನುವುದನ್ನು ತೋರಿಸುತ್ತೇನೆಂದು ತಾಂಡವ್‌ಗೆ ಸವಾಲು ಎಸೆಯುತ್ತಾಳೆ.

Bhagyalakshmi Kannada serial December 1st episode update

ತಾಂಡವ್ ಇದೀಗ ಶ್ರೇಷ್ಠಾ ಹೇಳಿದಾಗೆಯೇ ಕೇಳುತ್ತಾನೆ. ತನ್ನ ತಾಯಿ ತಂದೆ ಎಲ್ಲರೂ ತಾಂಡವನನ್ನು ಬಿಟ್ಟು ಹೋಗಲು ನಿರ್ಧಾರ ಮಾಡಿದಾಗ ಶ್ರೇಷ್ಠಾ, ತಾಂಡವ್‌ನ ಭುಜದ ಮೇಲೆ ಕೈ ಇಟ್ಟು "ಬಿಡು ತಾಂಡವ್, ಅವರು ಹೋಗಲಿ. ನಮ್ಮ ಜೊತೆ ಇರುವಾಗ ನಮಗೆ ಇನ್ನಷ್ಟು ಹೆಚ್ಚು ಹಿಂಸೆ ಮಾಡಬಹುದು. ಅವರು ಈ ಭಾಗ್ಯ ಜೊತೆ ಹೋಗಲಿ" ಎಂದು ಹೇಳುತ್ತಾಳೆ. ಈ ಮಾತು ಕುಸುಮಾಗೆ ಬಹಳ ನೋವು ಆಗುತ್ತದೆ.

ತನ್ನ ಮಗ ಎಷ್ಟು ಬದಲಾಗಿದ್ದಾನೆ ಎನ್ನುವುದು ಕುಸುಮಾಗೆ ಬಹಳಷ್ಟು ನೋವು ನೀಡಿರುವುದು ಮಾತ್ರ ಅಕ್ಷರಶಃ ಸತ್ಯ. ಮನೆ ಮಂದಿಯೆಲ್ಲ ತಾಂಡವ್‌ನ ಮನೆಯಿಂದ ದೂರ ಹೋಗುತ್ತಾರೆ. ಭಾಗ್ಯಾ ಎಲ್ಲರನ್ನೂ ಕರೆದುಕೊಂಡು ಹೋಗಲು ತಯಾರಾಗುತ್ತಿದ್ದಾಳೆ. 18 ವರ್ಷ ಗಂಡನ ಜೊತೆ ಬಾಳಿ ಬದುಕಿ ಇದೀಗ ಮೋಸಕ್ಕೆ ಒಳಗಾದ ಭಾಗ್ಯಾಗೆ ಇರುವುದು ಒಂದೇ ಗುರಿ. ಒಂದಲ್ಲ ಒಂದು ದಿನ ನಾನು ನನ್ನ ಗಂಡನಿಗೆ ಸರಿ ಸಮವಾಗಿ ನಿಲ್ಲಬೇಕು. ಹಾಗೆಯೇ ಅವರಿಗೆ ಈ ಶ್ರೇಷ್ಠಾ ಖಂಡಿತವಾಗಿಯೂ ಸರಿಯಾದ ಪಾಠ ಕಲಿಸುತ್ತಾಳೆ" ಎಂದು ಮನದಲ್ಲಿ ಅಂದುಕೊಂಡ ಭಾಗ್ಯಾ ಹಾಗೂ ಆಕೆಯ ಅತ್ತೆ ಮಾವ ಮಕ್ಕಳು ಅಲ್ಲಿಂದ ಹೊರಟು ಹೋಗುತ್ತಾರೆ.

Bhagyalakshmi Kannada serial December 1st episode update

"ತಾಂಡವ್‌ಗೆ ಸರಿಯಾಗಿ ಬುದ್ದಿ ಕಲಿಸಿದ್ದೀರಿ ಮೇಡಂ" ಎಂದು ಭಾಗ್ಯಾ ಅಭಿಮಾನಿಗಳು ಹೇಳಿದರೆ, ಇನ್ನು ಕೆಲವರು "ಮನೆಯಲ್ಲಿಯೇ ಇದ್ದು ನೀವು ತಾಂಡವ್‌ಗೆ ಬುದ್ದಿ ಕಲಿಸಬಹುದಿತ್ತು ಮೇಡಂ" ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಭಾಗ್ಯಾ ತೆಗೆದುಕೊಂಡ ನಿರ್ಧಾರಕ್ಕೆ ಫ್ಯಾನ್ಸ್ ಬಹಳ ಖುಷಿ ಪಟ್ಟಿದ್ದಾರೆ. ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದನ್ನು ಧಾರಾವಾಹಿಯ ಮೂಲಕ ತೋರಿಸುತ್ತಿರುವುದಕ್ಕೆ ಫ್ಯಾನ್ಸ್ ಫುಲ್ ಸಂತೋಷ ಪಟ್ಟಿದ್ದಾರೆ.

More from Filmibeat

English summary
Bhagyalakshmi Kannada serial December 1st episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X