ತಾಂಡವ್‌ಗೆ ವಾರ್ನಿಂಗ್ ಕೊಟ್ಟು ಮನೆ ಬಿಟ್ಟು ಬಂದಾಯ್ತು; ಅಕ್ಕ ಪಕ್ಕದವರನ್ನು ಹೇಗೆ ಎದುರಿಸುತ್ತಾಳೆ ಭಾಗ್ಯಾ?
ಗಂಡನ ಮನೆ ಬಿಟ್ಟು ತವರು ಮನೆಗೆ ಬಂದ ಭಾಗ್ಯಾಗೆ ಅಕ್ಕ ಪಕ್ಕದವರ ಮನೆಯವರ ಕಾಟ. ಭಾಗ್ಯಾಗೆ ಗಂಡ ಬಿಟ್ಟು ಬಂದವಳು ಎನ್ನುವ ಪಟ್ಟ ಬೇರೆ ಕೊಟ್ಟಿದ್ದಾರೆ. ತಾಂಡವ್ ಹಾಗೂ ಶ್ರೇಷ್ಠಾ ಜೊತೆ ಬದುಕಬೇಕು ಎಂದು ಯಾವಾಗ ಹೇಳಿದನೋ ಆವತ್ತಿನಿಂದ ಭಾಗ್ಯಾಗೆ ತಾನು ಗಂಡನಿಂದ ದೂರ ಇದ್ದು ನನ್ನ ಅತ್ತೆ ಮಾವ ಹಾಗೆಯೇ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಠ ಬಂದು ಬಿಟ್ಟಿದೆ.
"ಇಲ್ಲಿವರೆಗೆ ಭಾಗ್ಯಾ ಬೇರೆಯವರು ಹೇಳಿದ ಮಾತು ಕೇಳುತ್ತಿದ್ದಳು. ಆದರೆ, ಇನ್ನೂ ಮುಂದೆ ಭಾಗ್ಯಾ ಹೇಳಿದ್ದೆ ಮಾತು ನಡೆಯುತ್ತದೆ" ಎಂದು ತಾಂಡವ್‌ಗೆ ಖಡಕ್ ವಾರ್ನಿಂಗ್ ಕೊಟ್ಟಿ ಬಂದಿದ್ದಾರೆ. ಮನೆಯವರನ್ನು ಕರೆದುಕೊಂಡು ಭಾಗ್ಯಾ ತನ್ನ ತವರು ಮನೆಗೆ ಬರುತ್ತಾಳೆ. ಭಾಗ್ಯಾ ಹಾಗೂ ಆಕೆಯ ಅತ್ತೆ ಮಾವ ಬರುವಾಗಲೇ ಪಕ್ಕದ ಮನೆಯಾಕೆ ಸುನಂದಾ ಜೊತೆ ಬಹಳ ಕೆಟ್ಟದಾಗಿಯೇ ಮಾತನಾಡುತ್ತಾರೆ. ಆದರೆ, ಸುನಂದಾಗೆ ಏನೋ ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ.

ಆದರೂ ಸುನಂದಾ ತನ್ನ ಬೀಗರ ಬಳಿ ಹೇಳುತ್ತಾಳೆ. ಇದು ಇನ್ನೂ ಮುಂದೆ ನಿಮ್ಮ ಮನೆ ಎಂದುಕೊಳ್ಳಿ. ನೀವು ಏನು ಟೆನ್ಶನ್ ತೆಗೆದುಕೊಳ್ಳಬೇಡಿ ಎಂದು ಹೇಳಿದಾಗ ವಾಪಸ್ ಅಕ್ಕ ಪಕ್ಕದ ಮೂವರು ಮನೆಗೆ ಬರುತ್ತಾರೆ. ಭಾಗ್ಯಾ ಬಳಿ ಅವರೂ ಕೆಟ್ಟದಾಗಿ ಮಾತನಾಡುತ್ತಾರೆ. ಗಂಡನ ಬಿಟ್ಟು ಬಂದಿದ್ದೀಯಾ. ಅದಕ್ಕೆ ಹೇಳಿದ್ದು ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಹಾರಾಡಲು ಬಿಡಬಾರದು ಎನ್ನುತ್ತಾರೆ. ಇದನ್ನು ಕೇಳಿದ ಭಾಗ್ಯಾ ಹಾಗೂ ಕುಸುಮಾಗೆ ಬೇಸರ ಆದರೂ ಸುಮ್ಮನೆ ಇರುತ್ತಾರೆ. ಆದರೆ ಸುನಂದಾಗೆ ಸಿಟ್ಟು ಬಂದು ಅಡುಗೆ ರೂಮ್‌ಗೆ ಹೋಗಿ ತೆಂಗಿನ ಕಾಯಿ ತುರಿಯುವ ಮಣೆಯನ್ನು ತೆಗೆದುಕೊಂಡು ಬಂದು ಜೋರಾಗಿ ಹೇಳುತ್ತಾಳೆ.
ಸುನಂದಾ ಮಾತಿದೆ ಬೆಚ್ಚಿ ಬಿದ್ದ ಮನೆ ಮಂದಿ
ನನ್ನ ಮಗಳ ಮೇಲೆ ಈ ರೀತಿ ಆರೋಪ ಮಾಡಿದರೆ ನಾನು ಖಂಡಿತ ಸುಮ್ಮನೆ ಇರುವುದಿಲ್ಲ ಮನೆಯಿಂದ ಹೋದರೆ ಸರಿ. ಇಲ್ಲವಾದರೆ ಖಂಡಿತವಾಗಿಯೂ ನಾನು ಸುಮ್ಮನೆ ಇರುವುದಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಅಕ್ಕ ಪಕ್ಕದ ಮನೆಯವರು ಅಲ್ಲಿಂದ ಹೋಗುತ್ತಾರೆ. ಆದರೂ ಭಾಗ್ಯಾ ಎದೆಗುಂದದೆ ನಿಂತಿರುತ್ತಾಳೆ. ಇನ್ನೂ ಇಂತಹ ಮಾತುಗಳನ್ನು ನಾನು ಅದೆಷ್ಟು ಕೇಳಬೇಕೊ ಎನ್ನುವ ಯೋಚನೆ ಆಕೆಗೆ ಬಾರದೆ ಇರದು.

ಬಿಕೋ ಎನ್ನುತ್ತಿರುವ ತಾಂಡವ್ ಮನೆ
ಇತ್ತ ತಾಂಡವ್ ಮಾತ್ರ ತನ್ನ ಕುಟುಂಬದವರನ್ನು ಹೇಗಾದರೂ ಈ ಮನೆಗೆ ಕರೆದುಕೊಂಡು ಬರುತ್ತೇನೆ. ಆದರೆ ಆ ಎಮ್ಮೆ ಭಾಗ್ಯಾ ಮಾತ್ರ ನನ್ನ ಮನೆಗೆ ಬರಬಾರದು. ಆ ರೀತಿ ನಾನು ಮಾಡಿಯೇ ಮಾಡುತ್ತೇನೆ ಎನ್ನುವ ಕೋಪದಲ್ಲಿ ಇರುತ್ತಾನೆ. ಇತ್ತ ಭಾಗ್ಯಾ ಎಲ್ಲವನ್ನೂ ನಿಭಾಯಿಸಲು ಸನ್ನದ್ಧ. ಆದರೆ ತಾಂಡವ್‌ನ ಮನೆಗೆ ಬಂದವರೆಲ್ಲ ಭಾಗ್ಯಾ ಇಲ್ಲದ ಮನೆ ಬಿಕೋ ಎನ್ನುತ್ತಿದೆ ಎಂದು ಹೇಳಲು ಶುರು ಮಾಡಿದ್ದಾರೆ.


Click it and Unblock the Notifications











