ಭಾಗ್ಯಾಗೆ ಬುದ್ದಿ ಹೇಳಿದ ಕುಸುಮ; ತಾಂಡವ್‌ ಮಾತಿಗೆ ಶ್ರೇಷ್ಠ ಸಿಡಿಮಿಡಿ

By ಪೂರ್ವ

ಕುಸುಮನಿಂದ ಭಾಗ್ಯಾ ಕಲಿಯೋದು ಬಹಳಷ್ಟು ಇದೆ. ತಾಂಡವ್, ಭಾಗ್ಯಾ ಮನೆಗೆ ಬಂದಿರುವುದನ್ನು ನೋಡಿ ಜೋರಾಗಿ ಬಯ್ಯುತ್ತಾನೆ. ಗುಂಡಣ್ಣ ಮಾತ್ರ ಅಮ್ಮ ಮನೆಗೆ ಬಂದಿರುವುದನ್ನು ನೋಡಿ ಬಹಳಷ್ಟು ಖುಷಿ ಪಡುತ್ತಾನೆ. "ಅಮ್ಮ ನಿನಗೆ ಈಗಲಾದರೂ ನಮ್ಮ ನೆನಪು ಆಯಿತು ಅಲ್ವಾ" ಎಂದು ಹೇಳುತ್ತಾನೆ. ಮಗನ ಮಾತಿಗೆ ಬೆಲೆ ಕೊಟ್ಟು ಬಂದ ಭಾಗ್ಯಾಗೆ ಮಾತ್ರ ಅವಮಾನವೇ ಆಗಿ ಬಿಡುತ್ತದೆ. ಅದು ಅಲ್ಲದೆ ಮಕ್ಕಳಿಗಾಗಿ ಕ್ಯಾರಿಯರ್ ತೆಗೆದುಕೊಂಡು ಬಂದಿದ್ದಾಳೆ. ಆದರೆ, ತಾಂಡವ್ ಮಾತ್ರ "ಒಂದು ವಾರ ಗಡುವು ಕೊಟ್ಟಿದ್ದೇನೆ ನಾನು.. ಯಾಕೆ ನೀನು ಈಗಲೇ ಮನೆಗೆ ಬಂದಿದ್ದೀಯಾ... ಈ ಒಂದು ವಾರ ಮನೆಯ ಕಡೆ ತಲೆ ಹಾಕಿ ಮಲಗಬೇಡ" ಎಂದು ಜೋರಾಗಿ ಹೇಳುತ್ತಾನೆ ತಾಂಡವ್.

ಗಂಡನ ಮಾತಿಗೆ ಬೆಲೆ ಕೊಟ್ಟು ಅಲ್ಲಿಂದ ವಾಪಸ್ ತವರು ಮನೆಗೆ ಹೊರಡಲು ಅನುವಾಗುತ್ತಾಳೆ. ಇನ್ನೂ ಸೊಸೆ ಮನೆಯಿಂದ ಹೊರಗೆ ಹೋಗುವುದನ್ನು ನೋಡಿ ಕುಸುಮಾ ಹಾಗೂ ಪೂಜಾ ಭಾಗ್ಯಾ ಹಿಂದೆ ಓಡಿ ಬರುತ್ತಾರೆ. ಭಾಗ್ಯಾ ಅತ್ತೆಯನ್ನು ನೋಡಿ ಅತ್ತೆ ಎಂದು ಮೆತ್ತಗೆ ಹೇಳುತ್ತಾಳೆ. ಕುಸುಮಾ ಮಾತ್ರ ತಾವು ಪಡುತ್ತಿರುವ ಕಷ್ಟದ ಬಗ್ಗೆ ಭಾಗ್ಯಾ ಬಳಿ ಹೇಳುತ್ತಾಳೆ. ತಾಂಡವ್ ಸೋಲಲಿ ಎಂದು ನಾವು ಅದೆಷ್ಟು ಪ್ಲಾನ್ ಮಾಡುತ್ತಾ ಇದ್ದೇವೆ. ಆದರೆ ನಿನಗೆ ಇದ್ಯಾವುದರ ಬಗ್ಗೆಯೂ ಅರಿವು ಇಲ್ಲ ..

Bhagyalakshmi kannada serial February 23th update

ತಾಂಡವ್ ಮಾತ್ರ ನಿನ್ನ ಜೊತೆ ದುರಹಂಕಾರದಿಂದ ನಡೆದುಕೊಂಡು ಇದ್ದಾನೆ. ಇದನ್ನೆಲ್ಲ ನೋಡಿ ನೀನು ಇನ್ನೂ ಕೂಡ ತಿಂಡಿ ಮಾಡಿಕೊಂಡು ಮನೆಗೆ ತೆಗೆದುಕೊಂಡು ಬಂದಿದ್ದಿಯಲ್ಲ ಎಂದು ಗದರುತ್ತಾರೆ. ಇನ್ನು ಪೂಜಾ ಕೂಡ ಅಕ್ಕನಿಗೆ ಒಂದೆರಡು ಬುದ್ದಿ ಮಾತು ಹೇಳುತ್ತಾಳೆ. ನೀನು ಕುಸುಮಾ ಅತ್ತೆಯ ಸೊಸೆ. ಕುಸುಮಾ ಅತ್ತೆ ಮಾತಿಗೆ ಶುರು ಮಾಡಿದರು ಎಂದರೆ ಯಾರು ಅವರ ಎದುರು ನಿಲ್ಲುವುದು ಇಲ್ಲ. ಆದ ಕಾರಣ ನೀನು ಕೂಡಾ ಅವರನ್ನು ನೋಡಿ ಕಲಿಯುವುದು ಬಹಳಷ್ಟು ಇದೆ ಎಂದು ಹೇಳುತ್ತಾಳೆ. ಇದೆಲ್ಲವನ್ನೂ ಕೇಳಿದ ಕುಸುಮ ಮಾತ್ರ ಪೂಜಾ ಮಾತಿಗೆ ಬಹಳಷ್ಟು ಖುಷಿ ಪಡುತ್ತಾರೆ.

ಭಾಗ್ಯಾ ಮನಸ್ಸು ನೋಯಿಸಿದ ತಾಂಡವ್

ಭಾಗ್ಯಾ ಬಳಿ ಕುಸುಮ ಹೇಳುತ್ತಾರೆ. ಇನ್ನೂ ಮೇಲೆ ಯಾರು ಕರೆದರೂ ಎಂದು ನೀನು ಈ ಮನೆಗೆ ಬರಬೇಡ ಎಂದು ಹೇಳುತ್ತಾರೆ. ಇನ್ನೂ ಭಾಗ್ಯಾಗೆ ಆಕೆ ಮಾಡಬೇಕಾದ ಕೆಲಸದ ಬಗ್ಗೆ ಕುಸುಮಾ ಜ್ಞಾಪಿಸುತ್ತಾರೆ. ಇನ್ನು ಶ್ರೇಷ್ಠಾಗೆ ತಾಂಡವ್ ಒಂದೊಳ್ಳೆಯ ರೆಸ್ಟೋರೆಂಟ್ ಯಾವುದು ಎಂದು ತಿಳಿಸಿ ಕೊಡು ಎಂದು ಹೇಳಿರುತ್ತಾನೆ. ಆದರೆ, ಶ್ರೇಷ್ಠಾ ಅದೆಲ್ಲವನ್ನೂ ಮರೆತು ಬಿಡುತ್ತಾಳೆ.. ತಾಂಡವ ಶ್ರೇಷ್ಠಾಗೆ ಕರೆ ಮಾಡಿ ಚೆನ್ನಾಗಿಯೇ ಮಂಗಳಾರತಿ ಮಾಡುತ್ತಾನೆ..

Bhagyalakshmi kannada serial February 23th update

ತಾಂಡವ್ ಮಾತಿಗೆ ಕೋಪಗೊಂಡ ಶ್ರೇಷ್ಠಾ

"ನಾನು ನನ್ನ ಮಕ್ಕಳು ಒಂದೊಳ್ಳೆಯ ರೆಸ್ಟೋರೆಂಟ್‌ಗೆ ಹೋಗುತ್ತೇವೆ. ಈಗಾಗಲೇ ನಾನು ಹೋಟೆಲ್ ಬುಕ್ ಮಾಡಿದ್ದೇನೆ. ನೀನು ಮರೆತು ಹೋಗಿರಬಹುದು. ನಾನು ಮರೆತಿಲ್ಲ. ನನ್ನ ಮಕ್ಕಳ ಜೊತೆ ನಾನು ಖುಷಿಯಾಗಿ ಎಂಜಾಯ್ ಮಾಡಬೇಕು. ಇವತ್ತು ಆಫೀಸ್‌ಗೆ ರಜೆ ಹಾಕಿದ್ದೇನೆ" ಎಂದು ಹೇಳುತ್ತಾನೆ. ಬಳಿಕ ಫೋನ್ ಕಾಲ್ ಕಟ್ ಮಾಡುತ್ತಾನೆ. ಇದರಿಂದ ಶ್ರೇಷ್ಠಾಗೆ ಕಿರಿ ಕಿರಿ ಆಗುತ್ತೆ. ಇತ್ತ ಸುಂದರಿ ಮಾತ್ರ ಜೋರಾಗಿ ನಗುತ್ತಾ ಇರುತ್ತಾಳೆ. ಆತ ಖಂಡಿತ ನಿನಗೆ ಮೋಸ ಮಾಡುತ್ತಾನೆ ಎಂದು ಸುಂದರಿ ಮೆತ್ತಗೆ ಹೇಳುತ್ತಾಳೆ.

ಶ್ರೇಷ್ಠಾಗೆ ಬುದ್ದಿ ಹೇಳಿದ ಸುಂದರಿ

"ಮದುವೆ ಆದವರನ್ನು ಯಾವತ್ತೂ ನಂಬಬಾರದು ಶ್ರೇಷ್ಠಾ. ಆತನ ಬಗ್ಗೆ ನಿನಗೆ ತಿಳಿದಿಲ್ಲ. ನಿಜವಾಗಿಯೂ ಆತ ಮಕ್ಕಳಿಗಾಗಿ ಎಷ್ಟೆಲ್ಲ ತ್ಯಾಗ ಮಾಡುತ್ತಿದ್ದಾನೆ. ನೀನು ಆತನ ಜೀವನಕ್ಕೆ ಎಂಟ್ರಿ ಆಗುತ್ತಿಯಾ, ಎಂದರೆ ಅದನ್ನು ನಂಬುವುದು ಹೇಗೆ?" ಎಂದು ಆಲೋಚನೆ ಮಾಡುತ್ತಿತ್ತಾರೆ. ಇನ್ನೂ ಸುಂದರಿ, ಶ್ರೇಷ್ಠಾನ ಬಳಿ "ತಾಂಡವ್ ಮನೆ ಕೆಲಸ ಮಾಡಿ ಕೆಲಸವನ್ನು ಕಳೆದುಕೊಳ್ಳುವ ಸಂದರ್ಭ ಕೂಡ ಬರಬಹುದು" ಎಂದು ಹೇಳುತ್ತಾಳೆ. ಆದರೆ ಇದೆಲ್ಲವನ್ನೂ ಆಲೋಚನೆ ಮಾಡಿದ ಶ್ರೇಷ್ಠಾಗೆ ಶಾಕ್ ಆಗುತ್ತದೆ. ಏನು ಮಾಡುವುದು ಎಂದು ತಿಳಿಯದೇ ಬಹಳ ನೋವು ಅನುಭವಿಸುತ್ತಾಳೆ. ತಾಂಡವ್‌ಗೆ ಮದುವೆ ಆಗಿ ಮಕ್ಕಳಿದ್ದರು ಶ್ರೇಷ್ಠಾ ಮಾತ್ರ ತಾಂಡವ್‌ನನ್ನು ಬಿಡುವ ಮಾತೇ ಇಲ್ಲ ಎಂದು ಹಠ ಹಿಡಿದಿದ್ದಾಳೆ.

More from Filmibeat

English summary
kannada serial Bhagya Lakshmi written 23 th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X