Bhagyalakshmi:ಭಾಗ್ಯಾ ಗಂಡ ತಾಂಡವ್‌ಗೆ ಏನಾಗಿದೆ ? ಶ್ರೇಷ್ಠಾಗಾಗಿ ಹೀಗೆ ಮಾಡೋದಾ?
ಶ್ರೇಷ್ಠಾ ಮಾತು ಕೇಳಿದ ತಾಂಡವ್ ಮನೆ ಮಂದಿಯನ್ನೆಲ್ಲ ಎದುರು ಹಾಕಿಕೊಂಡು ನಾನು ಬೇಕಾ ಅಥವಾ ಭಾಗ್ಯಾ ಬೇಕಾ ಅಂತ ಪ್ರಶ್ನೆಯನ್ನು ಕುಸುಮ ಮುಂದೆ ಇಡುತ್ತಾನೆ. ಕುಸುಮಾಗೆ ತನ್ನ ಮಗ ಎಂದರೆ ಪಂಚ ಪ್ರಾಣ. ಆತನನ್ನು ಯಾರಿಗೂ ಬಿಟ್ಟುಕೊಡುವ ಮಾತೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ತಾಂಡವ್ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದ ಕುಸುಮಾಗೆ ನಡುಕ ಹುಟ್ಟಿದೆ. ಹೆತ್ತವರನ್ನು ಬಿಟ್ಟು ಹೋಗುವಷ್ಟು ತಾಂಡವ್‌ಗೆ ಶ್ರೇಷ್ಠಾ ಮೇಲೆ ಮನಸ್ಸು ಆಗಿದೆ. ಆಕೆ ಹೇಳುವ ಎಲ್ಲ ವಿಚಾರವನ್ನು ತಾಂಡವ್ ಕಣ್ಣು ಮುಚ್ಚಿಕೊಂಡು ಮಾಡುತ್ತಾನೆ. ಆದರೆ ಹೆತ್ತವರು ಹೇಳುವ ಬುದ್ಧಿವಾದ ತಾಂಡವನ ಕಿವಿಯ ಬಳಿ ಕೂಡ ಸೋಕುವುದಿಲ್ಲ.
ಇದೀಗ ಹೆತ್ತಮ್ಮನಿಗೆ ತಾಂಡವ್ ಪ್ರಶ್ನೆಯನ್ನು ಮಾಡಿದ್ದಾನೆ. ನನಗೆ ಒಂದು ದಿನವೂ ಕೂಡ ನೀವು ಸಪೋರ್ಟ್ ಮಾಡಿ ಮಾತನಾಡಲಿಲ್ಲ. ನಮ್ಮ ಬಳಿ ಯಾವತ್ತೂ ಚರ್ಚೆ ಕೂಡ ಮಾಡುತ್ತಿರಲಿಲ್ಲ. ಶ್ರೇಷ್ಠಾ ಮನೆಗೆ ಬಂದಿದ್ದಾಳೆ. ಆದರೆ, ನೀವು ಕೇಳುವುದು ಭಾಗ್ಯಾ ಮಾತನ್ನು ಮಾತ್ರ . ಈಗಲೇ ಹೇಳಿ ಈ ಮನೆಯಲ್ಲಿ ಭಾಗ್ಯಾ ಇರಬೇಕೋ.. ನಾನು ಇರಬೇಕೋ? ಎಂದು ಪ್ರಶ್ನೆಯನ್ನು ಕುಸುಮಾ ಮುಂದೆ ಇಟ್ಟಾಗ, ಕುಸುಮಾ ಬಹಳಷ್ಟು ಬೇಸರ ಪಡುತ್ತಾಳೆ. ನನಗೆ ಭಾಗ್ಯಾ ಮುಖ್ಯ ಎಂದು ಗಟ್ಟಿಯಾಗಿ ಹೇಳುತ್ತಾಳೆ. ಈ ಮಾತನ್ನು ಕೇಳಿದ ತಾಂಡವ್ ಕೂಡಲೇ ಮನೆಯಿಂದ ಹೊರಗೆ ನಡೆಯುತ್ತಾನೆ.

ಹೆತ್ತ ತಂದೆ ತಾಯಿಗೆ ನಾನು ಬೇಡ. ಇರಲಿ ನನ್ನ ಮನೆಯಿಂದ ನಾನೇ ಹೋಗುತ್ತೇನೆ. ಭಾಗ್ಯಾ ನಿಮ್ಮನ್ನೆಲ್ಲ ಹೇಗೆ ನೋಡಿಕೊಳ್ಳುತ್ತಾಳೆ ಎನ್ನುವುದನ್ನು ನಾನು ನೋಡುತ್ತೇನೆ ಎಂದು ಹೇಳಿ ಅಲ್ಲಿಂದ ಶ್ರೇಷ್ಠಾ ಜೊತೆ ಮನೆಯಿಂದ ಹೊರಟು ಹೋಗುತ್ತಾನೆ. ಆ ಕೂಡಲೇ ಭಾಗ್ಯಾ ತನ್ನ ಅತ್ತೆಯ ಜೊತೆ ಯಾಕೆ ಹೀಗೆ ಮಾಡಿದಿರಿ. ನಾನು ನಿಮ್ಮ ಮನೆಗೆ ಮೂರನೆಯವಳಾಗಿ ಬಂದಿದ್ದೇನೆ. ಆದರೆ ನಿಮ್ಮ ಮಗ ಇಲ್ಲಿಯೇ ಹುಟ್ಟಿ ಬೆಳೆದವರು. ನೀವು ಹೀಗೆ ಮಾಡಬಾರದಾಗಿತ್ತು ಅತ್ತೆ ಎಂದು ಹೇಳುತ್ತಾಳೆ. ಆದರೆ, ಕುಸುಮಾ ಮಾತ್ರ ನನ್ನ ಮಗ ಶ್ರೇಷ್ಠಾ ಸಹವಾಸ ಬಿಟ್ಟು ಖಂಡಿತವಾಗಿಯೂ ಬಂದೆ ಬರುತ್ತಾನೆ ಎನ್ನುವ ಭರವಸೆಯಲ್ಲಿದ್ದಾರೆ.
ಶ್ರೇಷ್ಠಾ ಮಾತು ಕೇಳಿ ಹಾಳಾದ ತಾಂಡವ್
ಇತ್ತ ಶ್ರೇಷ್ಠಾ ತನ್ನ ಗೆಳೆಯನಿಗೆ ಸಮಾಧಾನ ಮಾಡುವ ಹಾಗೆ ನಟನೆ ಮಾಡಿ ಆತನ ಗಾಯಕ್ಕೆ ಇನ್ನಷ್ಟು ಬರೆ ಎಳೆಯುವ ಪ್ರಯತ್ನ ಮಾಡುತ್ತಿರುತ್ತಾಳೆ. ಶ್ರೇಷ್ಠಾಗೆ ಬುದ್ದಿ ಕಲಿಸಬೇಕು ಎಂದುಕೊಂಡ ಕುಸುಮಾ ಪ್ಲಾನ್ ಉಲ್ಟಾ ಆಗಿದೆ. ಆದರೂ ಕುಸುಮಾ ಭರವಸೆಯನ್ನು ಬಿಟ್ಟಿಲ್ಲ. ಇತ್ತ ತಾಂಡವ್ ಮನೆಯಿಂದ ಹೊರಗೆ ಹೋಗಿದ್ದಾಯಿತು. ಆತನ ಗೆಳೆಯನ ಮನೆಯನ್ನು ಸೇರಿದ್ದಾಯಿತು. ಭಾಗ್ಯಾಗೆ ತನ್ನ ಗಂಡ ಮಾಡಿರುವ ಅವಾಂತರವನ್ನು ನೋಡಿ ಮನಸ್ಸೆ ಮುರಿದು ಹೋಯಿತು.
ಗಂಡನನ್ನು ನೆನೆದು ಮರುಗಿದ ಭಾಗ್ಯಾ
ಗಂಡ ಇನ್ನೊಬ್ಬಳ ಜೊತೆ ಹೋದರು ಕೂಡ ಭಾಗ್ಯಾ ನನಗೆ ತಂಡವ್ ಬೇಕು ಎಂದು ಹಠ ಹಿಡಿದು ಕುಳಿತಿದ್ದಳು. ಆದರೆ ತಾಂಡವನಿಗೆ ಭಾಗ್ಯಾನ ಕಂಡರೆ ಆಗುವುದಿಲ್ಲ. ಮಕ್ಕಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ತಾಂಡವ್ ಮನೆ ಬಿಟ್ಟು ಇಟ್ಟುಕೊಂಡವಳ ಜೊತೆ ಹೋಗಿದ್ದಾನೆ. ಶ್ರೇಷ್ಠಾಗೆ ತಾಂಡವ ಮಾಡುತ್ತಿರುವ ಪ್ರತಿ ಕೆಲಸವೂ ಬಹಳ ಸಮಾಧಾನ ನೀಡುತ್ತಿತ್ತು. ಭಾಗ್ಯಾ ತಾನಿಲ್ಲದೆ ಹೇಗೆ ಜೀವನ ನಡೆಸುತ್ತಾಳೆ ಎನ್ನುವುದನ್ನು ನಾನು ನೋಡಬೇಕು ಎಂದು ತಾಂಡವ್ ಅಂದುಕೊಂಡಿರುತ್ತಾನೆ. ಆದರೆ, ಭಾಗ್ಯಾಗೆ ಆಕೆಯ ಜೀವನವನ್ನು ಚೆನ್ನಾಗಿಯೇ ಕಟ್ಟಿಕೊಳ್ಳುವ ಭರವಸೆ ಇದೆ ಎನ್ನುವ ವಿಚಾರ ಮಾತ್ರ ತಾಂಡವನಿಗೆ ತಿಳಿದಿಲ್ಲ. ಶ್ರೇಷ್ಠಾ ಜೊತೆ ಇಷ್ಟು ಮೆರೆಯುತ್ತಿಯೋ ಮೆರಿ. ಆದರೆ ನಿನಗೆ ಬೇಕಾದ್ದು ಕೊನೆಗೆ ಭಾಗ್ಯಾ ಎಂದು ಅಭಿಮಾನಿಗಳು ಅಂದಿನಿಂದಲೂ ತಾಂಡವ್‌ಗೆ ಬುದ್ದಿ ಹೇಳುತ್ತಾ ಬಂದಿದ್ದಾರೆ.


Click it and Unblock the Notifications











