Bhagyalakshmi:ಮನೆ ಬಿಟ್ಟು ಹೋದ ತಾಂಡವ್‌ಗೆ ಶ್ರೇಷ್ಠಾಳ ಗುಳ್ಳೆನರಿ ಬುದ್ಧಿ ಯಾವಾಗ ಅರ್ಥ ಆಗುತ್ತೋ?
ಕೆಟ್ಟ ಹೆಣ್ಣಿನ ಸಹವಾಸ ಮಾಡಿದ ತಾಂಡವನಿಗೆ ತಕ್ಕ ಶಾಸ್ತಿ ಆಗಬೇಕಾಗಿದೆ. ಕಟ್ಟಿಕೊಂಡ ಗಂಡ ಹೆಂಡತಿಯನ್ನು ಬಿಟ್ಟು ಬೇರೆ ಯುವತಿಯ ಹಿಂದೆ ಹೋಗುವ ಗಂಡ ಇದ್ದರೆ ಎಷ್ಟು ಹೋದರೆ ಎಷ್ಟು. ಪ್ರೀತಿಸುವ ಗಂಡ ಬೇರೆ ಹುಡುಗಿಯ ಜೊತೆ ಹೋದಾಗ ಆ ನೋವು ಬೇರೆ ಯಾವ ಹೆಣ್ಣಿಗೂ ಬರಬಾರದು. ಅಂತಹ ಸ್ಥಿತಿ ಭಾಗ್ಯಾಗೆ ಬಂದಿದೆ. ಭಾಗ್ಯಾ ಅದೆಷ್ಟೇ ತನ್ನ ಗಂಡನನ್ನು ಸರಿಪಡಿಸಬೇಕು ಎಂದುಕೊಂಡರು ಅದು ಸಾಧ್ಯ ಆಗುತ್ತಿಲ್ಲ. ತಾಂಡವ್ ದಿನದಿಂದ ದಿನಕ್ಕೆ ಬದಲಾಗುತ್ತಿದ್ದಾನೆ. ತನ್ನ ಮನೆಯವರಿಂದ ಬಹಳ ದೂರ ಹೋಗಿದ್ದಾನೆ.
ಶ್ರೇಷ್ಠಾ ಮಾಡುತ್ತಿರುವ ಕುತಂತ್ರದಿಂದ ತಾಂಡವ್ ಇದೀಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾನೆ. ಕುಸುಮಾ ತನ್ನ ಮಗನಿಗೆ ಅದೆಷ್ಟೇ ಬುದ್ದಿ ಹೇಳಿದರು ಅದ್ಯಾವುದನ್ನೂ ಮಗ ಕೇಳುವುದಿಲ್ಲ. ಆತನಿಗೆ ಭಾಗ್ಯಾ ಬೇಡವಾಗಿದೆ. ಕಟ್ಟಿಕೊಂಡಾಕೆ ಬೇಡ ಅಂದಿದ್ದಾನೆ. ಸುಮಾರು ವರ್ಷ ಜೊತೆಯಾಗಿ ಸಂಸಾರ ಮಾಡಿ ಇಬ್ಬರು ಮಕ್ಕಳ ತಂದೆಯಾದ ಬಳಿಕ ಭಾಗ್ಯಾ ಬೇಡ ಎಂಬ ನಿರ್ಧಾರ ಮಾಡಿದ್ದು, ತಾಂಡವ್ ಮಾಡಿದ್ದು ತಪ್ಪು. ಇದರ ಜೊತೆ ನನ್ನ ಮಗ ಬಂದೇ ಬರುತ್ತಾನೆ. ಆತ ಭಾಗ್ಯಾ ಜೊತೆ ಸಂಸಾರ ಮಾಡೇ ಮಾಡುತ್ತಾನೆ ಎನ್ನುವ ಕುಸುಮಾ ನಿಲುವು ತಪ್ಪು ಎನಿಸಿದೆ.

ಭಾಗ್ಯಾಗೆ ತಾಂಡವನ ಮೇಲಿರುವ ಪ್ರೀತಿ ಸತ್ತು ಹೋಗಿದೆ. ತನ್ನ ಗಂಡ ಬೇರೆ ಹುಡುಗಿಯ ಸಹವಾಸ ಮಾಡಿದ್ದಾನೆ ಎಂದು ತಿಳಿದರೆ ಹೆಂಡತಿಯರು ಎದೆ ಒಡೆದುಹೋಗುತ್ತೆ. ಆದರೆ ಭಾಗ್ಯಾ ತನ್ನ ಇಬ್ಬರು ಮಕ್ಕಳಿಗಾಗಿ ಪರದಾಡುತ್ತಿದ್ದಾಳೆ. ನನ್ನ ಇಬ್ಬರು ಮಕ್ಕಳು ತಂದೆ ತಾಯಿಯ ಜಗಳದಿಂದ ಬಡವಾಗಬಾರದು. ಅದೇ ಕಾರಣಕ್ಕೆ ಭಾಗ್ಯಾ ತಾಂಡವ ಅದೆಷ್ಟೇ ನೋವು ಮಾಡಿದರೂ ಕೂಡ ಅದೆಲ್ಲವನ್ನೂ ಸಹಿಸಿಕೊಂಡು ಜೀವನ ನಡೆಸುತ್ತಾಳೆ. ಮತ್ತೆ ಖಂಡಿತವಾಗಿಯೂ ನನ್ನ ಗಂಡ ಬಂದೆ ಬರುತ್ತಾನೆ. ಆತನನ್ನು ನಾನು ಎಲ್ಲಿಯೂ ಹೋಗಲು ಬಿಡುವುದಿಲ್ಲ ಎನ್ನುವ ನಿರ್ಧಾರ ಮಾಡುತ್ತಾಳೆ.
ಇಬ್ಬರು ಮಕ್ಕಳ ಜೀವನ ರೂಪಿಸಲು ಪಣ ತೊಟ್ಟ ಭಾಗ್ಯಾ
ಭಾಗ್ಯಾಗೆ ತನ್ನ ಇಬ್ಬರು ಮಕ್ಕಳು ಎಂದರೆ ಪಂಚಪ್ರಾಣ . ಮಕ್ಕಳಿಗಾಗಿ ಏನು ಮಾಡಲು ಹಿಂಜರಿಯುವುದಿಲ್ಲ. ಆದರೆ ಭಾಗ್ಯಾ ಅತಿಯಾಗಿ ಅತ್ತೆಯ ಮಾತು ಕೇಳಿ ಕೆಟ್ಟು ಹೋಗುತ್ತಿದ್ದಾಳೆ ಎನ್ನುವ ಅಭಿಪ್ರಾಯ ಕೂಡ ವೀಕ್ಷಕರಿಂದ ಕೇಳಿ ಬರುತ್ತಿದೆ. 'ಭಾಗ್ಯಲಕ್ಷ್ಮೀ' ಧಾರಾವಾಹಿ ಎತ್ತ ಸಾಗುತ್ತಿದೆ ಎನ್ನುವುದು ವೀಕ್ಷಕರ ಪ್ರಶ್ನೆ. ಭಾಗ್ಯಾ ಮನೆಯಲ್ಲಿ ರಾದ್ಧಾಂತವೇ ನಡೆದು ಹೋಗಿದೆ. ಆಕೆಯ ಗಂಡ ಮನೆ ಬಿಟ್ಟು ಹೋಗಿದ್ದಾನೆ. ಆದರೆ ಭಾಗ್ಯಾಗೆ ತಾನು ಮಾಡಬೇಕಾದ ಕರ್ತವ್ಯ ನಿಭಾಯಿಸುವುದು ಬಹಳ ದೊಡ್ಡ ಟಾಸ್ಕ್ ಆಗಿದೆ.

ಭಾಗ್ಯಾಗೆ ಬುದ್ಧಿ ಹೇಳಿದ ಸುನಂದಾ
ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಬೇಕಾಗಿತ್ತು. ಆದರೆ ಮನೆಯಲ್ಲಿ ಬೇಸರದ ಕಾರ್ಮೋಡ ಕವಿದಿದೆ. ಹಬ್ಬ ಮಾಡುವ ಮನಸ್ಸು ಯಾರಿಗೂ ಇಲ್ಲ. ಆದರೆ ಹಬ್ಬ ಮಾಡಲೇಬೇಕಾದ ಅನಿವಾರ್ಯತೆ ಭಾಗ್ಯಾಗೆ ಇದೆ. ಮನೆಯವರೆಲ್ಲ ಖುಷಿ ಆಗಿರಬೇಕು. ಕಷ್ಟ ಯಾವತ್ತೂ ಇದ್ದಿದ್ದೆ ಎನ್ನುತ್ತಾ ಅತ್ತೆ ಮಾವ ಮನೆ ಮಂದಿಗೆಲ್ಲ ಹೊಸ ಬಟ್ಟೆಯನ್ನು ಕೊಡಿಸುತ್ತಾಳೆ. ಇದೆಲ್ಲ ನೋಡಿದ ಕುಸುಮಾ ನಮಗೆ ಹಬ್ಬ ಮಾಡುವುದು ಬೇಡ ಎಂದು ಅನ್ನಿಸುತ್ತಿದೆ ಎಂದಾಗ ಭಾಗ್ಯಾ ತನ್ನ ಅತ್ತೆಗೆ ಭರವಸೆಯ ಬಗ್ಗೆ ಮಾತು ಹೇಳುತ್ತಾಳೆ.
ಅಮ್ಮನಿಗೆ ಭರವಸೆ ನೀಡಿದ ಭಾಗ್ಯಾ
ಯಾವತ್ತೂ ಏನು ಆಗುವುದು ಇಲ್ಲ. ದೇವರು ನಮ್ಮ ಕೈ ಎಂದಿಗೂ ಬಿಡುವುದಿಲ್ಲ ಎನ್ನುವ ಮಾತನ್ನು ಹೇಳುತ್ತಾಳೆ. ಇದನ್ನು ಕೇಳಿ ಸುನಂದಾಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ. ಮನೆಯಲ್ಲಿ ಸೂತಕದ ಛಾಯೆ ಇದೆ. ನೀನು ನೋಡಿದರೆ ಹೀಗೆ ನಡೆದುಕೊಳ್ಳುತ್ತಿದ್ದಿಯಾ ನನಗೆ ಇದ್ಯಾವುದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದಾಗ ಭಾಗ್ಯಾ ಅಮ್ಮನಿಗೆ ಸುಮ್ಮನಿರುವಂತೆ ತಾಕೀತು ಮಾಡುತ್ತಾಳೆ. ಇತ್ತ ತಾಂಡವ್ ಭಾಗ್ಯಾಳ ನೆಮ್ಮದಿ ಹೇಗಾದರೂ ಮಾಡಿ ಹಾಳು ಮಾಡಿಯೇ ತಿರುತ್ತೇನೆ ಎಂದು ಪಣ ತೊಟ್ಟಿದ್ದಾನೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ತಂದಿಟ್ಟು ಶ್ರೇಷ್ಠಾ ತಮಾಷೆ ನೋಡುತ್ತಿದ್ದಾಳೆ.


Click it and Unblock the Notifications











