Bhagyalakshmi: ಫಂಕ್ಷನ್‌ಗೆ ಬಂದೆ ಬಿಟ್ರು ಭಾಗ್ಯ-ಕುಸುಮಾ: ನಕಲಿ ಅಮ್ಮ-ಅಸಲಿ ಅಮ್ಮನ ನಡುವೆ ಲಾಕ್ ಆದ ತಾಂಡವ್..!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮೀ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಸಾಗುತ್ತಾ ಬರುತ್ತಿದೆ. ಶ್ರೇಷ್ಠಾ ಹಾಗೂ ತಾಂಡವ್ ಬಾಸ್ ಕರೆದಿರುವ ಫಂಕ್ಷನ್‌ಗೆ ಚನ್ನಾಗಿ ರೆಡಿಯಾಗಿ ಬಂದಿದ್ದಾರೆ. ಪಂಜಾಬಿ ಶೈಲಿಯಲ್ಲಿ ಭೋಗಿ ಹಬ್ಬ ಮಾಡಲಾಗುತ್ತಿದೆ. ತಾಂಡವ್‌ಗೆ ಬಾಸ್ ಹೆಂಡತಿ ಪ್ರಶ್ನೆಯ ಮೇಲೆ ಪ್ರಶ್ನೆಯನ್ನ ಕೇಳುತ್ತಾ ಇದ್ದಾರೆ. ನಾವು ನಿಮ್ಮ ಮನೆಗೆ ಹೋಗಿ ಅವರನ್ನು ಇನ್ವೈಟ್ ಮಾಡಿ ಬಂದಿದ್ದೇವೆ ಅವರು ಖಂಡಿತವಾಗಿಯೂ ಬರುತ್ತೇನೆ ಎಂದಿದ್ದಾರೆ ಎಂಬ ಮಾತು ಕೇಳಿದ ತಾಂಡವ್‌ಗೆ ಶಾಕ್ ಆಗಿದೆ.

ಇನ್ನು ಇದೇ ವೇಳೆ ಕುಸುಮಾಗೆ ಫೋನ್ ಮಾಡಲು ತಾಂಡವ್ ಟ್ರೈ ಮಾಡಿದ್ದಾನೆ ಈ ವೇಳೆ ಕುಸುಮ ಮಗನ ಫೋನನ್ನು ತೆಗೆದಿಲ್ಲ. ಬಾಸ್ ಹಾಗೂ ಬಾಸ್ ಹೆಂಡತಿ ಅಧಿಕ ಪ್ರಸಂಗಿತನ ಮಾಡಿದ್ದಾರೆ ಎಂದು ಕೋಪ ಮಾಡಿಕೊಂಡಿದ್ದಾನೆ. ನಾನು ಮನೆಯಲ್ಲಿ ಯಾರು ಇಲ್ಲ ಹಳ್ಳಿ ಮನೆಗೆ ಹೋದ್ದಾರೆ ಎಂದರು ಕೂಡ ಕೇಳದೆ ಮನೆಗೆ ಹೋಗಿ ಎಲ್ಲರನ್ನೂ ಇನ್ವೈಟ್ ಮಾಡಿ ಬಂದಿದ್ದಾರೆ ಎಂದು ಶ್ರೇಷ್ಠಾ ಬಳಿ ಅಸಮಾಧಾನ ಹೊರಹಾಕಿದ್ದಾನೆ.

Bhagyalakshmi kannada serial January 23rd episode details

ತಾಂಡವ್ ಅಮ್ಮ ಫೋನ್ ಪಿಕ್ ಮಾಡದ ಕಾರಣ ಅಮ್ಮ ಬರುವುದಿಲ್ಲ ಎಂದು ಅಂದುಕೊಂಡಿದ್ದಾನೆ. ಇನ್ನು, ಸುಂದರಿ ಕೂಡ ಪಂಜಾಬಿ ಶೈಲಿಯಲ್ಲಿಯೇ ರೆಡಿಯಾಗಿ ಬಂದಿದ್ದಾಳೆ. ಸೊಸೆ ಮುದ್ದು ಎಂದು ಜೋರಾಗಿ ಕರೆದು ಅಲ್ಲಿಂದ ಎಲ್ಲರ ಗಮನವನ್ನು ತನ್ನ ಕಡೆಗೆ ತಿಳಿದುಕೊಂಡಿದ್ದಾಳೆ. ತಾಂಡವ್ ಅಂತೂ ಸುಂದರಿಯ ವೇಷ ಭೂಷಣವನ್ನು ನೋಡಿ ಕೋಪ ಬಂದಿದೆ ಆದರೂ ಕೂಡ ಏನು ಮಾತನಾಡದ ಪರಿಸ್ಥಿತಿಯಲ್ಲಿ ಇದ್ದಾನೆ.

ಅಮ್ಮ ನನ್ನ ನೋಡಿ ಶಾಕ್‌ ಆದ ತಾಂಡವ್, ನಕಲಿ ಅಸಲಿ ಅಮ್ಮ ಇಬ್ಬರು ಕೂಡ ಒಟ್ಟೊಟ್ಟಿಗೆ!

ಇನ್ನು ಈ ಕಡೆ ಅಮ್ಮ ಹಾಗೂ ಭಾಗ್ಯ ಬರುತ್ತಿಲ್ಲ ಎಂದು ಹೇಳಿ ತಿರುಗುವಷ್ಟರಲ್ಲಿ ಕುಸುಮ ಭಾಗ್ಯ ಇಬ್ಬರೂ ಕೂಡ ತಾಂಡವ್ ಕಣ್ಣೆದುರೇ ಪ್ರತ್ಯಕ್ಷರಾಗಿದ್ದಾರೆ. ಅಮ್ಮ ಹಾಗೂ ಭಾಗ್ಯ ಇಬ್ಬರನ್ನು ನೋಡಿದ ತಾಂಡವ್‌ಗೆ ಶಾಕ್ ಆಗಿದೆ. ತಾಂಡವ್‌ನ ನಕಲಿ ಅಮ್ಮ ಸುಂದರಿ ಕೂಡ ಫಂಕ್ಷನ್‌ಗೆ ಬಂದಿದ್ದು ಏನೋ ಯಡವಟ್ಟು ಆಗುವ ಭಯ ತಾಂಡವ್‌ಗೆ.

ಮನೆಯಲ್ಲಿ ಬೆಳ್ಳಿ ಸಾಮಾಗ್ರಿಗಳು ಕಳ್ಳತನವಾದಾಗ ಭಾಗ್ಯ ಕೂಡ ಪೊಲೀಸ್ ಸ್ಟೇಷನ್ ತನಕ ಹೋಗಿ ಬಂದಿದ್ದಳು. ಈ ವೇಳೆ ಕಳ್ಳಿ ಸುಂದರೆಯ ಕಪಾಳಕ್ಕೆ ಎರಡು ಬರಿಸಿದ್ದಳು ನಮ್ಮ ಮನೆಯ ವಸ್ತುಗಳನ್ನ ಕಳ್ಳತನ ಮಾಡಿದ್ದೀಯಾ ಎಂದು ಬೈದಿದ್ದಳು. ಈಗ ಭಾಗ್ಯಗೆ ಸುಂದರಿಯ ಮುಖ ಚೆನ್ನಾಗಿ ನೆನಪಿದೆ. ಅಮ್ಮ ನನ್ನನ್ನು ಬಾಸ್ ಮುಂದೆ ಯಾವ ರೀತಿ ನಡೆಸಿಕೊಳ್ಳುತ್ತಾರೋ ಎಂಬ ಭಯ ಕೂಡ ತಾಂಡವ್‌ಗೆ ಶುರುವಾಗಿದೆ.

Bhagyalakshmi kannada serial January 23rd episode details

ಮೊಮ್ಮಕ್ಕಳಿಗೆ ಬುದ್ದಿ ಹೇಳಿದ ಕುಸುಮಾ, ಅಪ್ಪನನ್ನು ಮಾತನಾಡಿಸು ಎಂದ ಭಾಗ್ಯ!

ಫಂಕ್ಷನ್‌ಗೆ ಬರುವಾಗ ಕುಸುಮ ತಮ್ಮ ಮೊಮ್ಮಕ್ಕಳಾದ ತನ್ವಿ ಹಾಗೂ ಗುಂಡಣ್ಣ ಈಬ್ಬರಿಗೂ ಕೂಡ ಬುದ್ಧಿವಾದವನ್ನು ಹೇಳಿದ್ದಾರೆ. ಫಂಕ್ಷನ್‌ನಲ್ಲಿ ಬಂದಾಗ ಎಲ್ಲರೂ ಸುಮ್ಮನೆ ಇರಬೇಕು ಯಾವುದೇ ಚೇಷ್ಟೇ ಮಾಡಬಾರದು. ಇಬ್ಬರೂ ಕೂಡ ಒಂದೇ ಜಾಗದಲ್ಲಿ ಇರಬೇಕು ಎಂದಿದ್ದಾರೆ. ಇನ್ನು ಭಾಗ್ಯ ತನ್ವಿಗೆ ಅಪ್ಪನ ಮುಂದೆ ನೀನು ಮಾತನಾಡು ಯಾಕೆಂದರೆ ಇಲ್ಲಿ ಅಪ್ಪನ ಕೊಲಿಗ್ಸ್ ಇರುತ್ತಾರೆ ಅವರು ನಮ್ಮ ಮನೆಯಲ್ಲಿ ಇಲ್ಲ ಎಂಬ ವಿಚಾರ ಯಾರಿಗೂ ಕೂಡ ತಿಳಿಯಬಾರದು. ಆ ರೀತಿ ನಾವು ನಡೆದುಕೊಳ್ಳಬೇಕು ಎಂದು ಹೇಳಿದಾಗ ತನ್ವಿ ಹಾಗೂ ಗುಂಡಣ್ಣ ಇಬ್ಬರು ಕೂಡ ಒಕೆ ಅಂದಿದ್ದಾರೆ. ಕುಸುಮಾ ಕೂಡ ಭಾಗ್ಯ ಹೇಳಿದ ಮಾತಿಗೆ ಒಪ್ಪಿಕೊಂಡಿದ್ದಾರೆ. ಇಲ್ಲಿ ತಾಂಡವ್‌ಗೆ ಭಯ‌ ಶುರುವಾಗಿದ್ದು ಮುಂದೇನು ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

More from Filmibeat

English summary
Bhagyalakshmi serial today episode. details about tandav's problem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X