Bhagyalakshmi: ಮಗನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ಕುಸುಮಾ: ಮಾಸ್ಟರ್ ಪ್ಲ್ಯಾನ್ ಏನು?

By ಶೃತಿ ಹರೀಶ್ ಗೌಡ

ತಾಂಡವ್‌ಗೆ ಈಗ ಶ್ರೇಷ್ಠಾ ಹೇಳಿದ ಮಾತುಗಳೆಲ್ಲವೂ ವೇದವಾಕ್ಯವಾಗುತ್ತಿವೆ. ತಾಂಡವ್ ತನ್ನ ಮನೆಯಿಂದ ಬಂದವನೇ ಶ್ರೇಷ್ಠಾಗೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದ್ದಾನೆ. ತನ್ವಿಗೆ ಮೆಸೇಜ್ ಕಳುಹಿಸಿದವರು ಯಾರು ಎಂದು ಕೇಳಿದ್ದಕ್ಕೆ ಶ್ರೇಷ್ಠಾ ಭಾಗ್ಯ ಮೇಲೆ ತಿರುಗಿಸಿದ್ದಾಳೆ. ತಾಂಡವ್ ಮಾತನಾಡುವ ಮುಂಚಿಯೇ ಶ್ರೇಷ್ಠಾ ತನ್ನ ಮಾತಿನ ಮೋಡಿಯಿಂದ ತಾಂಡವನನ್ನೇ ಕಟ್ಟಿ ಹಾಕಿದ್ದಾಳೆ. ಅದು ಭಾಗ್ಯ ಕೆಲಸ ಮಕ್ಕಳನ್ನು ನಿನ್ನ ಮೇಲೆ ದ್ವೇಷ ಬರುವಂತೆ ಮಾಡಿ ತನ್ನ ಕಡೆಗೆ ಸೆಳೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾಳೆ.

ಶ್ರೇಷ್ಠಾ ಆಡುತ್ತಿರುವ ಮಾತಿನ ಮೇಲೆ ತಾಂಡವ್‌ಗೂ ನಂಬಿಕೆ ಬಂದಿದ್ದು ನನ್ನ ಜೀವನದಿಂದಲೇ ಭಾಗ್ಯಗೆ ಗೇಟ್ ಪಾಸ್ ನೀಡುತ್ತೇನೆ. ನಾನು ಡಿವೋರ್ಸ್ ಮಾಡುತ್ತೇನೆ ಎಂದೆಲ್ಲಾ ಮಾತನಾಡುತ್ತಾ ಇದ್ದಾನೆ. ಆದರೆ ಇದೆಲ್ಲವೂ ಸಾಧ್ಯವಾ ಎಂದು ಶ್ರೇಷ್ಠಾ ಅಂದುಕೊಂಡಿದ್ದಾಳೆ. ಕುಸುಮಾ ಆಂಟಿಗೆ ಏನಾದರೂ ಈ ವಿಚಾರ ತಿಳಿದುಬಿಟ್ಟರೆ ಸುಮ್ಮನೆ ಇರೋದಿಲ್ಲ ಎಂಬುವುದು ಶ್ರೇಷ್ಠಾಳ ಯೋಚನೆ. ಆದರೆ ತಾಂಡವ್‌ಗೆ ಭಾಗ್ಯ ಮಾತಿನಿಂದಲೇ ನನ್ನ ತಂದೆ ತಾಯಿ ಮಕ್ಕಳು ನನ್ನಿಂದ ದೂರವಾಗಿದ್ದಾರೆ ಎಂಬ ಕಲ್ಪನೆ ಹುಟ್ಟಿಕೊಂಡಿದ್ದು ಈಗ ಭಾಗ್ಯಾಗೆ ಡಿವೋರ್ಸ್ ಕೊಡಲು ಯೋಚಿಸುತ್ತಿದ್ದಾನೆ.

 Bhagyalakshmi kannada serial: Kusuma Planing something big against Tandav

ತಾಂಡವ್ ಕೆಲಸ ಮಾಡುತ್ತಿರುವ ಕಂಪನಿಯ ಬಾಸ್ ಯಾವುದೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದಕ್ಕೆ ಎಲ್ಲರನ್ನೂ ಇನ್ವೈಟ್ ಮಾಡಿದ್ದಾರೆ. ಇದೇ ವೇಳೆ ತಾಂಡವ್‌ಗೆ ನಿನ್ನ ಫ್ಯಾಮಿಲಿಯನ್ನು ಕರೆದುಕೊಂಡು ನೀನು ಬರಬೇಕು ಎಂದು ಹೇಳಿದ್ದಕ್ಕೆ ತಾಂಡವ್ ನನ್ನ ಫ್ಯಾಮಿಲಿ ಹಳ್ಳಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಆ ರೀತಿ ಹೇಳಿದ ಸುಳ್ಳೇ ಈಗ ತಾಂಡವ್ ಪಾಲಿಗೆ ಮುಳುವಾಗಿ ಪರಿಣಮಿಸಲಿದೆ. ತಾಂಡವ್‌ನ ಬಾಸ್ ಅವರ ಫ್ಯಾಮಿಲಿ ಅವರನ್ನು ಇನ್ವೈಟ್ ಮಾಡಲು ಖುದ್ದಾಗಿ ಕುಸುಮಾ ಮನೆಗೆ ಬಂದಿದ್ದಾರೆ. ಮಗನಿಗೆ ಬುದ್ಧಿ ಕಲಿಸಲು ಚಾನ್ಸ್ ಸಿಕ್ಕರೆ ಕುಸುಮಾ ಸುಮ್ಮನೆ ಇರೋದಿಲ್ಲ ಇದೇ ಅವಕಾಶ ಎಂದುಕೊಂಡು ನಾವು ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.

ತಾಂಡವ್‌ಗೆ ಬುದ್ಧಿ ಕಲಿಸಲು ಕುಸುಮಾ ಪ್ಲಾನ್

ತಮ್ಮ ಮಗ ಎಲ್ಲೋ ಎಡವಟ್ಟು ಮಾಡುತ್ತಾ ಇದ್ದಾನೆ ಎಂದು ಕುಸುಮಾಗೆ ಅನಿಸುತ್ತಿದೆ. ಇದಕ್ಕಾಗಿ ಮಗನಿಗೆ ಬುದ್ಧಿ ಕಲಿಸಲೇಬೇಕು ಎಂದು ನಿರ್ಧಾರ ಮಾಡಿದ್ದರು. ಆದರೆ ಅದಕ್ಕೆ ಚಾನ್ಸ್ ಸಿಗಲಿ ಎಂದು ಕಾಯುತ್ತಿದ್ದರೂ ಈಗ ತಾಂಡವ್ ಕೆಲಸ ಮಾಡುವ ಆಫೀಸ್‌ನ ಬಾಸ್ ಒಂದು ಕಾರ್ಯಕ್ರಮವನ್ನು ಏರ್ಪಾಟು ಮಾಡಿದ್ದು ಎಲ್ಲರನ್ನೂ ಕೂಡ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ತಾಂಡವ್‌ಗೆ ತಮ್ಮ ಫ್ಯಾಮಿಲಿಯನ್ನು ಕರೆದುಕೊಂಡು ಬರಬೇಕು ಎಂದು ಹೇಳಿದ್ದರು. ಆದರೆ ತಾಂಡವ್ ನನ್ನ ತಂದೆ ತಾಯಿ ಊರಿನಲ್ಲಿ ಇಲ್ಲ ಅವರು ಹಳ್ಳಿಗೆ ಹೋಗಿದ್ದಾರೆ ಎಂದು ಹೇಳಿದ್ದರು. ಆದರೆ ಯಾಕೋ ಬಾಸ್‌ ಮನಸ್ಸು ತಡೆದಿಲ್ಲ ಖುದ್ದಾಗಿ ಕುಸುಮಾ ಅವರನ್ನೇ ಭೇಟಿಯಾಗಲು ತಾಂಡವ್ ಮನೆಗೆ ಬಂದಿದ್ದು ಕುಸುಮಾಗೆ ಬಹಳ ಸಂತಸವಾಗಿದೆ.

 Bhagyalakshmi kannada serial: Kusuma Planing something big against Tandav

ನಮಗೆ ಈ ಊರಿನಲ್ಲಿ ನೆಂಟರು ಎಂದು ಯಾರೂ ಇಲ್ಲ ನಿಮ್ಮ ಮನೆಗೆ ಬಂದು ಊಟ ಮಾಡಿ ಹೋದ ಮೇಲೆ ನೀವೇ ನಮ್ಮ ನೆಂಟರಾಗಿದ್ದೀರಾ ದಯವಿಟ್ಟು ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಬಾಸ್‌ನ ಹೆಂಡತಿ ಕುಸುಮಾ ಅವರಿಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಕುಸುಮ ನಾವೆಲ್ಲರೂ ಕೂಡ ಬಂದೇ ಬರುತ್ತೇವೆ ಎಂದು ಹೇಳಿದ್ದಾರೆ. ಇದಾದ ಮೇಲೆ ಭಾಗ್ಯಗೂ ಕೂಡ ತುಂಬಾ ಖುಷಿಯಾಗಿದೆ. ಬಾಸ್ ಹೆಂಡತಿ ಯಾವುದೇ ಅಹಂಕಾರ ಇಲ್ಲದೆ ನಮ್ಮನ್ನೆಲ್ಲಾ ಕಾರ್ಯಕ್ರಮಕ್ಕೆ ಎಷ್ಟು ಚೆನ್ನಾಗಿ ಕೂಗಿದರು ಎಂದು ಅತ್ತೆಯ ಬಳಿ ಹೇಳಿದ್ದಾಳೆ. ನಾವೆಲ್ಲರೂ ಕೂಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಎಂದು ಕುಸುಮ ಹೇಳಿದ್ದಾರೆ. ಮಗನಿಗೆ ಬುದ್ಧಿ ಕಲಿಸುವ ಚಾನ್ಸ್ ಸಿಕ್ಕಿರುವುದನ್ನು ಕುಸುಮ ಬಿಡೋದಿಲ್ಲ ಎಂದಿದ್ದಾರೆ.

ಶ್ರೇಷ್ಠಾನೇ ಎಲ್ಲಾ ಎಂದ ತಾಂಡವ್, ಹೆಂಡತಿಯ ಸ್ಥಾನವನ್ನು ಕೊಟ್ಟೆ ಬಿಟ್ಟ!?

ಶ್ರೇಷ್ಠಾ ಬಾಸ್ ಏರ್ಪಾಟು ಮಾಡಿರುವ ಕಾರ್ಯಕ್ರಮಕ್ಕೆ ಹೋಗಲು ರೆಡಿಯಾಗುತ್ತಿದ್ದಾಳೆ. ಈ ವೇಳೆ ತಾಂಡವ್ ಇನ್ಮುಂದೆ ಭಾಗ್ಯಾಳ ಸ್ಥಾನ ನಿನ್ನದೇ ಎಲ್ಲಿಗೂ ಕೂಡ ನೀನೇ ಬರಬೇಕು ಎಂದು ಹೇಳಿದ್ದಾನೆ. ನಾನು ಎಲ್ಲಿಗೆ ಹೋದರು ನೀನು ನನ್ನ ಜೊತೆಗೆ ಇರಬೇಕು ನನ್ನ ಕುಟುಂಬವು ಕೂಡ ನನಗೆ ಇಲ್ಲ ಎಂದು ಶ್ರೇಷ್ಠಾಗೆ ಹೆಂಡತಿಯ ಸ್ಥಾನವನ್ನೇ ತಾಂಡವ್ ಕೊಟ್ಟುಬಿಟ್ಟಿದ್ದಾನೆ. ತಾಂಡವ್‌ಗೆ ಗೊತ್ತಿಲ್ಲ ಕುಸುಮಾ ಕೂಡ ಬಾಸ್ ಕರೆದಿರುವ ಫಂಕ್ಷನ್ ಗೆ ಬರುತ್ತಾ ಇದ್ದಾರೆ ಎಂದು ಈಗ ಮಗನಿಗೆ ಕುಸುಮಾ ಯಾವ ರೀತಿ ಬುದ್ದಿ ಕಲಿಸುತ್ತಾರೆ ನೋಡಬೇಕಾಗಿದೆ.

More from Filmibeat

English summary
Bhagyalakshmi serial Written Update on january 20th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X