Bhagyalakshmi:ಭಾಗ್ಯ ಸ್ಥಿತಿ ಕಂಡು ಮರುಗಿದ ಮಗ; ಕೈತುತ್ತು ಕೊಟ್ಟು ಕಣ್ಣೀರು ಒರೆಸಿದ ಗುಂಡಣ್ಣ?
ಭಾಗ್ಯ ಪಡುತ್ತಿರುವ ಪಾಡು ಗುಂಡಣ್ಣಗೆ ತಿಳಿದು ಹೋಗಿದೆ. ಗುಂಡಣ್ಣ ತನ್ನ ತಾಯಿಯನ್ನು ಬಹಳಷ್ಟು ಪ್ರೀತಿ ಮಾಡುತ್ತಾನೆ. ಆತನಿಗೆ ತಾಯಿ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಆತನಿಗೆ ತಾಯಿಯೇ ಎಲ್ಲಾ. ಆಕೆಗೆ ಏನಾದರೂ ಸ್ವಲ್ಪವೂ ಹೆಚ್ಚು ಕಮ್ಮಿ ಆದರೂ ಅದನ್ನು ಗುಂಡಣ್ಣ ತಡೆದುಕೊಳ್ಳುವುದಿಲ್ಲ. ಗುಂಡಣ್ಣಗೆ ತನ್ನ ತಂದೆ ಕಂಡರೆ ಅಷ್ಟೊಂದು ಇಷ್ಟವೇ ಇಲ್ಲ. ಯಾಕೆಂದರೆ ಮನೆಯವರ ಆಸೆಗೆ ಮಣ್ಣು ಎರಚುವ ಕೆಲಸವನ್ನು ಮಾಡುತ್ತಲೇ ಬಂದಿರುವ ಕಾರಣ ಗುಂಡಣ್ಣಗೆ ಅಪ್ಪನ ಬಗ್ಗೆ ಇರುವ ಪ್ರೀತಿ ಹೊರಟು ಹೋಗಿದೆ.
ತನ್ನ ತಾಯಿ ಬಹಳ ಕಷ್ಟ ಪಡುತ್ತಿದ್ದಾಳೆ. ಆಕೆ ಯಾವತ್ತೂ ಸುಖವಾಗಿರಬೇಕು ಎನ್ನುವುದು ಗುಂಡಣ್ಣನ ಆಸೆ. ಆದರೆ ಗುಂಡಣ್ಣಗೆ ತಾಯಿ ಕೆಲಸಕ್ಕೆ ಹೋಗುತ್ತಾರೆ ಎನ್ನುವುದು ಗೊತ್ತಿತ್ತು. ಆದರೆ, ತಾಯಿ ಯಾವ ಕೆಲಸಕ್ಕೆ ಹೋಗುತ್ತಾಳೆ ಎನ್ನುವುದು ಗುಂಡಣ್ಣಗೆ ಗೊತ್ತಿರುವುದಿಲ್ಲ. ಇದೀಗ ಅಮ್ಮನ ಅವಾತಾರ ಕಂಡು ಗುಂಡಣ್ಣಗೆ ಬಹಳ ಸಂಕಟವಾಗಿದೆ. ಬರ್ತ್ ಡೇ ಪಾರ್ಟಿಗೆ ಗುಂಡಣ್ಣ ಕೂಡ ಗೆಳೆಯರ ಜೊತೆಗೂಡಿ ಹೋಗುತ್ತಾನೆ. ಅಲ್ಲಿ ಎಲ್ಲರ ಜೊತೆ ಖುಷಿಯಾಗಿ ಕಳಿಯುತ್ತಾನೆ. ಆದರೆ, ಜೋಕರ್ ಆಗಿ ಪಾತ್ರ ನಿರ್ವಹಣೆ ಮಾಡುತ್ತಿರುವವರನ್ನು ನೋಡಿ ಗುಂಡಣ್ಣಗೆ ಕೊಂಚ ಅನುಮಾನ ಕಾಡುತ್ತದೆ.

ಈಕೆ ನೋಡಲು ತನ್ನ ತಾಯಿಯ ಹಾಗೆ ಇದ್ದಾಳಲ್ಲ ಎಂಬ ಆಲೋಚನೆ ಆತನಿಗೆ ಮೂಡುತ್ತದೆ. ಬರ್ತ್ ಡೇ ಕಾರ್ಯಕ್ರಮ ಮುಗಿದ ಬಳಿಕ ಜೋಕರ್ ವೇಷಧಾರಿಗಳು ಹುಡುಕಿಕೊಂಡು ಗುಂಡಣ್ಣ ಹೋಗುತ್ತಾನೆ. ಆಗ ಆತನಿಗೆ ಕಂಡಿದ್ದು ತನ್ನ ಅಮ್ಮ ಭಾಗ್ಯ. ಜೋಕರ್ ವೇಷಧಾರಿಯಾಗಿ. ಭಾಗ್ಯ ತನ್ನ ಕಷ್ಟವನ್ನು ಗೆಳತಿಯ ಜೊತೆಗೆ ಹೇಳಿಕೊಳ್ಳುತ್ತಿರುತ್ತಾಳೆ. ತಾನು ಮಾಡುತ್ತಿರುವ ಕೆಲಸ ಯಾರಿಗೂ ತಿಳಿದಿಲ್ಲ. ಮನೆಯಲ್ಲಿ ಯಾರಿಗಾದರೂ ತಿಳಿದರೆ ಖಂಡಿತವಾಗಿ ನನ್ನನ್ನು ಕೆಲಸಕ್ಕೆ ಹೋಗಬೇಡ ಎಂದೇ ತಡೆಯುತ್ತಾರೆ. ಆಗ ನಾನು ನನ್ನ ಗಂಡನ ಎದುರು ಸೋತ ಹಾಗೆಯೇ ಎಂದು ಹೇಳುತ್ತಾಳೆ.
ತಾಯಿಯ ನೋವು ಕಂಡು ಮರುಕಪಟ್ಟ ಗುಂಡಣ್ಣ
ತಾಯಿಯ ಮಾತನ್ನು ಕೇಳಿ ಗುಂಡಣ್ಣಗೆ ಬಹಳ ಖುಷಿ ಆಗುತ್ತೆ. ತನ್ನ ತಾಯಿ ಕೆಲಸದ ಬಗ್ಗೆ ಮನೆಯವರಿಗೆ ಹೇಳಬಾರದು ಎಂದು ಗುಂಡಣ್ಣ ಎಂದುಕೊಂಡು ಅಲ್ಲಿಂದ ಮನೆಗೆ ಹೊರಡಲು ಅನುವಾಗುತ್ತಾನೆ. ಪೂಜಾ ಹಾಗೂ ಸುಂದರಿ ಗುಂಡನನ್ನು ಹುಡುಕಿಕೊಂಡು ಹೋಗುತ್ತಾರೆ. ಪೂಜಾಗೆ ಕೊಂಚ ಆತಂಕ ಯಾಕೆಂದರೆ ಗುಂಡಣ್ಣ ಮನೆಯಲ್ಲಿ ಹೇಳದೆ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಬಂದಿರುತ್ತಾನೆ. ಆದ ಕಾರಣ ಪೂಜಾ ಹಾಗೂ ಸುಂದರಿಗೆ ಬಹಳ ಭಯ ಕಾಡುತ್ತದೆ. ಕೊನೆಗೆ ಅವರಿಗೆ ಗುಂಡಣ್ಣ ಕಾಣ ಸಿಗುತ್ತಾನೆ.
ಗುಂಡನನ್ನು ನೋಡಿ ಖುಷಿಯಾದ ಪೂಜಾ
ಆತನನ್ನು ನೋಡಿ ಪೂಜಾಗೆ ಖುಷಿ ಆಗುತ್ತದೆ. ಹಾಗೆಯೇ ಹುಸಿ ಮುನಿಸು ಮಾಡಿಕೊಂಡು ನೀನು ಬರ್ತ್ ಡೇ ಪಾರ್ಟಿಗೆ ಹೂಗುವುದು ಹೋಗಿದ್ದೆ. ಆದರೆ ನಮ್ಮ ಬಳಿ ಹೇಳಿ ಹೋಗಬೇಕಾಗಿತ್ತು. ನಮಗೆ ಇದರಿಂದ ಬಹಳಷ್ಟು ಆತಂಕವಾಗಿತ್ತು ಎಂದು ಸುಳ್ಳು ಹೇಳುತ್ತಾಳೆ. ಇನ್ನು ಗುಂಡಣ್ಣ ಅಮ್ಮ ಇಲ್ಲಿರುವುದು ಯಾರಿಗೂ ತಿಳಿಯಬಾರದು ಎಂದುಕೊಂಡು ಪೂಜಾ ಹಾಗೂ ಸುಂದರಿ ಬಳಿ ಏನು ಹೇಳದೆ ಅಲ್ಲಿಂದ ನೇರವಾಗಿ ಮನೆಗೆ ಹೋಗುತ್ತಾನೆ.
ಅಮ್ಮನಿಗೆ ಊಟ ಮಾಡಿಸಿದ ಗುಂಡಣ್ಣ
ಭಾಗ್ಯ ಸುಸ್ತಾಗಿ ಸಂಜೆಯ ಹೊತ್ತಿಗೆ ಮನೆಗೆ ಬರುತ್ತಾಳೆ. ಆಕೆ ಮನೆಗೆ ಬಂದಿದ್ದೆ ತಡ ಕೊಂಚ ಮಟ್ಟಿಗೆ ಸುಧಾರಿಸುತ್ತಿದ್ದಳೋ ಏನೋ. ಅಷ್ಟೋತ್ತಿಗೆ ಅಲ್ಲಿಯೇ ಇದ್ದ ಅತ್ತೆ, ಭಾಗ್ಯ ಬೇಗ ಎಲ್ಲಾ ಅಡುಗೆ ಮಾಡಿ ಮುಗಿಸಿ ಬಿಡಮ್ಮ ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಗುಂಡಣ್ಣಗೆ ಬಹಳ ಬೇಸರವಾಗುತ್ತದೆ. ಬೇಡ ಅಜ್ಜಿ ಎಂದು ನೇರವಾಗಿ ತನ್ನ ತಾಯಿಯ ಬಳಿಗೆ ಬಂದ ಗುಂಡಣ್ಣ ಭಾಗ್ಯ ಊಟ ಕಲಿಸಿಕೊಂಡು ಬರುತ್ತಾನೆ. ಗುಂಡಣ್ಣಗೆ ಬಹಳ ಹಸಿವಾಗಿದೆ ಎಂದು ಭಾಗ್ಯ ಅಂದುಕೊಳ್ಳುತ್ತಾಳೆ. ಆದರೆ ಗುಂಡಣ್ಣ ತನ್ನ ತಾಯಿಗೆ ಕೈ ತುತ್ತು ನೀಡಲು ಮುಂದಾಗುತ್ತಾನೆ. ಇದನ್ನು ನೋಡಿದ ಭಾಗ್ಯಗೆ ಬಹಳ ಖುಷಿಯಾಗುತ್ತದೆ. ವೀಕ್ಷಕರಿಗೆ ಕುಸುಮಾ ಮೇಲೆ ಬಹಳ ಸಿಟ್ಟು ಬರುತ್ತದೆ. ಭಾಗ್ಯ ಕೆಲಸಕ್ಕೆ ಹೋಗಿ ಸುಸ್ತಾಗಿ ಬರುತ್ತಾಳೆ. ಮನೆಯಲ್ಲಿರುವವರು ಯಾರಾದರೂ ಅಡುಗೆ ಮಾಡಿದಬಹುದಲ್ವ ಎಂದು ಭಾಗ್ಯ ಅತ್ತೆಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ.


Click it and Unblock the Notifications











