Bhagyalakshmi:ಅಮ್ಮನಿಗೆ ಸಹಾಯ ಮಾಡಲು ಶೂ ಪಾಲಿಶ್‌ಗೆ ಇಳಿದ ಮಗ; ಭಾಗ್ಯಗೆ ಗೊತ್ತಾದರೆ..?

By ಪೂರ್ವ

ಗುಂಡಣ್ಣಗೆ ತನ್ನ ತಾಯಿ ಕಷ್ಟಪಡುತ್ತಿರುವ ವಿಚಾರವನ್ನು ಕಣ್ಣಾರೆ ಕಂಡು ಬಹಳಷ್ಟು ನೊಂದುಕೊಂಡಿದ್ದಾನೆ. ಹೇಗಾದರೂ ಮಾಡಿ ತನ್ನ ತಾಯಿಯ ನೋವಿಗೆ ತಾನು ಹೆಗಲಾಗಬೇಕು ಎಂದುಕೊಳ್ಳುತ್ತಾನೆ. ಭಾಗ್ಯ ತನ್ನ ಮನೆಯಲ್ಲಿ ಎಲ್ಲರ ಜೊತೆಗೂ ಸುಳ್ಳು ಹೇಳಿ ಜೋಕರ್ ವೇಷ ಧರಿಸಿ ಕೆಲಸ ಮಾಡುತ್ತಿರುತ್ತಾಳೆ. ಈ ವಿಚಾರ ಮನೆಯವರಿಗೆ ತಿಳಿದರೆ ಖಂಡಿತವಾಗಿ ಮನೆಯವರು ಸಹಿಸುವುದು ಇಲ್ಲ ಎನ್ನುವ ವಿಚಾರ ಭಾಗ್ಯಗೆ ತಿಳಿದಿದೆ. ಮನೆಯಲ್ಲಿ ಸುಳ್ಳು ಹೇಳಿ ಜೋಕರ್ ಆಗಿ ಕೆಲಸವನ್ನು ತನ್ನ ತಾಯಿ ಮಾಡುತ್ತಿದ್ದಾಳೆ ಎಂದು ಅರಿತುಕೊಂಡ ಗುಂಡಣ್ಣ ಮೌನಿಯಾಗುತ್ತಾನೆ.

ಗುಂಡಣ್ಣನಿಗೆ ಬಹಳ ನೋವಾಗುತ್ತದೆ. ಯಾರ ಜೊತೆಯೂ ಆ ನೋವನ್ನು ಹೇಳಿಕೊಳ್ಳಲು ಆಗದೆ ಬಹಳ ಸಂಕಟಪಡುತ್ತಾನೆ. ಗುಂಡಣ್ಣ ಮೌನಿಯಾಗಿರುವುದನ್ನು ಕಂಡ ಮನೆ ಮಂದಿ ಯಾಕೆ ಗುಂಡಣ್ಣ ಇಷ್ಟೊಂದು ಸೈಲೆಂಟ್‌ ಆಗಿದ್ದಾನೆ. ಅಷ್ಟಕ್ಕೂ ಇವನಿಗೆ ಏನಾಯಿತು ಎಂದು ಆಲೋಚನೆ ಮಾಡುತ್ತಿರುತ್ತಾರೆ. ಆದರೆ, ಗುಂಡಣ್ಣ ಮಾತ್ರ ಮನೆಯವರ ಯಾವ ಪ್ರಶ್ನೆಗೂ ಉತ್ತರವನ್ನು ನೀಡುವುದಿಲ್ಲ. ಮರುದಿನ ಭಾಗ್ಯ ಕೆಲಸಕ್ಕೆ ಹೋಗಬೇಕಾದರೆ ಮಗನನ್ನು ಶಾಲೆಯ ಬಳಿ ಬಿಟ್ಟು ಹೋಗುತ್ತಾಳೆ. ಗುಂಡಣ್ಣ ಶಾಲೆ ಬಿಟ್ಟ ಬಳಿಕ ತನ್ನ ತಾಯಿಗೆ ಹೇಗಾದರೂ ಹಣದ ವಿಚಾರದಲ್ಲಿ ಸಹಾಯ ಮಾಡಬೇಕು ಎಂದುಕೊಂಡು ಶೂ ಪಾಲೀಶ್ ಮಾಡುವ ಕೆಲಸ ಮಾಡತೊಡಗುತ್ತಾನೆ. ಆದರೆ ಭಾಗ್ಯಗೆ ಗುಂಡಣ್ಣ ಶೂ ಪಾಲೀಶ್ ಮಾಡುವ ಕೆಲಸ ಮಾಡುತ್ತಾನೆ ಎನ್ನುವುದು ಗೊತ್ತಿರುವುದಿಲ್ಲ.

Bhagyalakshmi Kannada serial March 14th full episode review

ಇತ್ತ ಗುಂಡಣ್ಣ ದಾರಿಯಲ್ಲಿ ಹೋಗುವವರನ್ನು ಕರೆದು ಅಣ್ಣ ಶೂ ಪಾಲೀಶ್ ಎಂದು ಕರೆಯುತ್ತಾನೆ. ಕೂಡಲೇ ಕೆಲವರು ಗುಂಡಣ್ಣನ ಬಳಿಗೆ ಬಂದು ಶೂ ಪಾಲೀಶ್ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ನೀನು ಶಾಲೆಗೆ ಹೋಗುವುದಿಲ್ಲವೇ ಮಗು. ನೀನು ಯಾಕೆ ಶೂ ಪಾಲೀಶ್ ಮಾಡುತ್ತೀಯಾ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದಾಗ ಗುಂಡಣ್ಣ ಒಂದು ಮಾತು ಹೇಳದೆ ಸುಮ್ಮನಿರುತ್ತಾನೆ. ಆಗ ಅಲ್ಲಿಗೆ ಶೂ ಪಾಲಿಶ್ ಮಾಡಲು ಬಂದಾತ ಗುಂಡಣ್ಣನ ತಾಯಿಗೆ ಬಯ್ಯಲು ಶುರು ಮಾಡುತ್ತಾನೆ. ಆದರೆ ತಾಯಿಗೆ ಬಯ್ಯುವುದನ್ನು ಸಹಿಸದ ಗುಂಡಣ್ಣ. ಇನ್ನೂ ಮುಂದೆ ತನ್ನ ತಾಯಿಗೆ ಬೈಯದಂತೆ ತಾಕೀತು ಮಾಡುತ್ತಾನೆ. ಹಾಗೆಯೇ ತಾನು ಕೆಲಸ ಮಾಡುತ್ತಿರುವ ವಿಚಾರ ತನ್ನ ತಾಯಿಗೆ ತಿಳಿದಿಲ್ಲ. ಸುಮ್ಮ ಸುಮ್ಮನೆ ತಾಯಿ ಬಗ್ಗೆ ತುಚ್ಛವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಬಹಳ ಕೋಪದಿಂದ ಹೇಳುತ್ತಾನೆ. ಇದನ್ನು ಕೇಳಿದಾತ ಸುಮ್ಮನಾಗುತ್ತಾನೆ .

ಗುಂಡಣ್ಣನಿಗಾಗಿ ಕಾದು ಕೂತ ಮನೆಮಂದಿ

ಗುಂಡಣ್ಣಗೆ ಕೆಲಸ ಮಾಡುತ್ತಾ ಮಾಡುತ್ತಾ ಹೊತ್ತಾಗಿದೆ ತಿಳಿಯಲಿಲ್ಲ. ಮನೆಯಲ್ಲಿ ಎಲ್ಲರೂ ಗುಂಡಣ್ಣ ಇನ್ನು ಮನೆಗೆ ಬಂದಿಲ್ಲವಲ್ಲ ಎಂದು ಗಾಬರಿ ಪಟ್ಟು ಕೊಂಡಿರುತ್ತಾರೆ. ಗುಂಡಣ್ಣ ಎಂದರೆ ಮನೆಯವರಿಗೆ ಬಹಳ ಪ್ರೀತಿ. ಶಾಲೆಗೆ ಹೋದ ಮಗು ಇನ್ನೂ ಮನೆಗೆ ಮರಳಿಲ್ಲ ಎಂದಾದರೆ ಹೇಗಾಗಬಹುದು ಎಂದು ಸ್ವಲ್ಪ ಮಟ್ಟಿಗೆ ಆಲೋಚಿಸಬೇಕಾದದ್ದೆ. ಇನ್ನು ಮನೆಯವರೆಲ್ಲ ಸಿಕ್ಕಾಪಟ್ಟು ಆತಂಕಕ್ಕೆ ಒಳಗಾಗುತ್ತಾರೆ. ಗುಂಡಣ್ಣ ಎಲ್ಲಿಗೆ ಹೋದ? ಮನೆಯಲ್ಲಿ ಬೇರೆ ಭಾಗ್ಯ ಕೂಡ ಇಲ್ಲ. ಇದೀಗ ಗುಂಡಣ್ಣ ಕೂಡ ಕಾಣಿಸುತ್ತಿಲ್ಲ. ಗುಂಡಣ್ಣ ಶಾಲೆ ಬಿಟ್ಟು ಎಲ್ಲಿಗೆ ಹೋಗಿರಬಹುದು ಎಂದು ಎಲ್ಲರೂ ಆಲೋಚನೆ ಮಾಡುತ್ತಿರುವಾಗ ಮೆತ್ತಗೆ ಮನೆಗೆ ಬರುತ್ತಾನೆ. ಗುಂಡಣ್ಣನ ಬಳಿ ಮನೆಯವರು ಲೇಟಾಗಿ ಬಂದಿದ್ದಕ್ಕೆ ಪ್ರಶ್ನೆಯನ್ನು ಮಾಡುತ್ತಾರೆ.

ಮನೆಯವರ ಪ್ರಶ್ನೆಗೆ ಕಿವಿಗೊಡದೆ ಗುಂಡಣ್ಣ

ಗುಂಡಣ್ಣ ಮಾತ್ರ ಯಾವುದೇ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಸುನಂದ ಗುಂಡಣ್ಣನ ಬಟ್ಟೆಯನ್ನು ನೋಡಿ ಇದೇನು ಇಷ್ಟೊಂದು ಕೊಳೆಯಾಗಿದೆಯಲ್ಲ ಏನು ಮಾಡಿಕೊಂಡು ಬಂದೆ ಎಂದು ಗದರಿದಾಗ, ತಾನು ಆಟ ಆಡಿಕೊಂಡು ಬಂದೆ ಅದಕ್ಕೆ ಮಣ್ಣಾಯಿತು ಎಂದು ಹೇಳಿ ಅಲ್ಲಿಂದ ಮನೆಯೊಳಗೆ ಓಡಿ ಹೋಗುತ್ತಾನೆ. ಭಾಗ್ಯ ತರಾತುರಿಯಲ್ಲಿ ಮನೆಗೆ ಬರುತ್ತಾಳೆ. ಮನೆಯೊಳಗೆ ಬರುತ್ತಿದ್ದಂತೆ ಗುಂಡಣ್ಣನ ಬಗ್ಗೆ ಸುನಂದಾ ದೂರು ಹೇಳಲು ಶುರು ಮಾಡುತ್ತಾಳೆ. ಆದರೆ ಭಾಗ್ಯ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿ ನೇರವಾಗಿ ಗುಂಡಣ್ಣನ ರೂಮ್ ಕಡೆಗೆ ಹೋಗುತ್ತಾಳೆ.


ಗುಂಡಣ್ಣನ ಪಾಕೆಟ್‌ನಲ್ಲಿ ಹಣ

ಆದರೆ ರೂಮ್‌ನಲ್ಲಿ ಗುಂಡಣ್ಣ ಇರುವುದಿಲ್ಲ. ಆದರೆ, ಆತ ತೊಟ್ಟ ಯೂನಿಫಾರ್ಮ್ ಅನ್ನು ಕಳಚಿ ಎಲ್ಲೋ ಹೋಗಿರುತ್ತಾನೆ. ಭಾಗ್ಯ ಕೊಳೆಯಾದ ಯೂನಿಫಾರ್ಮ್ ನೋಡಿದಾಗ ಇದೇನು ಇಷ್ಟೊಂದು ಕೊಳೆಯಾಗಿದೆ ಎಂದು ಚಿಂತೆಗೆ ಒಳಗಾಗುತ್ತಾಳೆ. ಹಾಗೆಯೇ ಗುಂಡಣ್ಣನ ಬಟ್ಟೆಯ ಪಾಕೆಟ್ ಗೆ ಕೈ ಹಾಕಿದಾಗ ಭಾಗ್ಯ ಕೈಗೆ ಹಣ ಕೂಡ ಸಿಗುತ್ತದೆ. ಈ ಹಣ ಗುಂಡಣ್ಣ ಕಿಸೆಯಲ್ಲಿ ಹೇಗೆ ಬಂತು ಎಂದು ಭಾಗ್ಯ ಗೊಂದಲಕ್ಕೆ ಒಳಗಾಗಿದ್ದಾಳೆ.

More from Filmibeat

English summary
Bhagyalakshmi Kannada serial March 14th full episode review;
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X