Bhagyalakshmi:ಗುಂಡಣ್ಣ ಮಾಡಿದ ತಪ್ಪಿಗೆ ಭಾಗ್ಯ ಬೆಲೆ ತೆರಬೇಕಾ? ಅಸ್ತ್ರ ಪ್ರಯೋಗಿಸುತ್ತಾನಾ ತಾಂಡವ್‌?

By ಪೂರ್ವ

ಭಾಗ್ಯ ಗುಂಡಣ್ಣನ ನಡವಳಿಕೆ ಬಗ್ಗೆ ಸಾಕಷ್ಟು ಅನುಮಾನ ಕಂಡು ಬಂದಿದೆ. ಆದರೂ ಗುಂಡಣ್ಣ ಮಾತ್ರ ಯಾವತ್ತೂ ತಪ್ಪು ಹೆಜ್ಜೆ ಇಡುವವನ್ನು ಅಲ್ಲ ಎಂದು ಭಾಗ್ಯ ಅಂದುಕೊಂಡಿರುತ್ತಾಳೆ. ಭಾಗ್ಯಗೆ ಗುಂಡಣ್ಣ ಮೇಲೆ ಬಹಳಷ್ಟು ಖುಷಿ ಇದೆ. ತನ್ನ ಮಗ ಮಗಳು ಬಹಳ ಉನ್ನತ ಸ್ಥಾನಕ್ಕೇರಲು ನಾನೇನು ಬೇಕಾದರು ಮಾಡುತ್ತೇನೆ ಎಂದು ಭಾಗ್ಯ ಅಂದುಕೊಂಡಿರುತ್ತಾಳೆ. ತನ್ನ ಗಂಡನಿಗೆ ತನ್ನ ವ್ಯಾಲ್ಯೂ ತಿಳಿಯದಾಯಿತು. ಆದ್ದರಿಂದ ಇನ್ನೊಬ್ಬ ಹುಡುಗಿಯ ಜೊತೆಗೆ ಪ್ರೇಮಾಂಕುರವಾಗಿ ಬಿಟ್ಟು ಹೋದ. ಆದರೆ ತಾನು ಯಾವತ್ತೂ ಹಾಗೆ ಮಾಡಲು ಸಾಧ್ಯವೇ ಇಲ್ಲ. ತನ್ನ ಮಕ್ಕಳು ಹಾಗೂ ಫ್ಯಾಮಿಲಿ ತನಗಾಗಿ ಜೀವವನ್ನು ಇಟ್ಟುಕೊಂಡಿದ್ದಾರೆ. ಅವರ ಜೊತೆ ಖುಷಿಯಾಗಿ ಕಾಲ ಕಳೆಯಬೇಕು ಅವರಿಗಾಗಿ ಬದುಕಬೇಕು ಎಂದು ಭಾಗ್ಯಗೆ ಅನಿಸಿದೆ. ಅದೇ ರೀತಿ ಭಾಗ್ಯ ಬದುಕುತ್ತಾಳೆ.

ಭಾಗ್ಯ ಏನೇ ಮಾಡಿದರೂ ಎಲ್ಲರಿಗೂ ಒಳ್ಳೆಯದೇ ಮಾಡುತ್ತಾಳೆ. ಆದರೆ ಭಾಗ್ಯಗೆ ಒಳ್ಳೆಯಾದಾಗಬೇಕು. ಆಕೆಗೆ ಸಹಾಯವಾಗಬೇಕು ಎಂದು ಗುಂಡಣ್ಣ ಪಡಬಾರದ ಕಷ್ಟ ಪಡುತ್ತಿರುತ್ತಾನೆ. ಗುಂಡಣ್ಣ ಶಾಲೆಗೆ ಹೋಗುತ್ತಲೇ ಶೂ ಪಾಲಿಶ್ ಮಾಡಿಕೊಂಡು ಇರುತ್ತಾನೆ. ಗುಂಡಣ್ಣ ಮಾಡುತ್ತಿರುವ ಕೆಲಸ ತಾಂಡವನ ಕಣ್ಣಿಗೆ ಬಿದ್ದಿದೆ. ಗುಂಡಣ್ಣ ಶಾಲೆಗೆ ಹೋಗದೇ ಇಲ್ಲೇನು ಮಾಡುತ್ತಿದ್ದಾನೆ. ಅದು ರಸ್ತೆ ಬದಿಯಲ್ಲಿ ಎಂದು ಗೊಂದಲಕ್ಕೆ ಬಿದ್ದಿದ್ದಾನೆ. ಅಷ್ಟರಲ್ಲಿ ಗುಂಡಣ್ಣ ಅಲ್ಲಿಂದ ಹೊರಟು ಹೋಗಿರುತ್ತಾನೆ.

Bhagyalakshmi Kannada serial March 15th full episode review

ತಾಂಡವ ಗುಂಡಣ್ಣನನ್ನು ಫಾಲೋ ಮಾಡಿಕೊಂಡು ಗುಂಡಣ್ಣ ಹಿಂದೆ ಹೋಗುತ್ತಾನೆ. ಅಷ್ಟರಲ್ಲಿ ಗುಂಡ ಶೋ ಪಾಲೀಶ್ ಮಾಡಲು ಕುಳಿತುಕೊಂಡಿರುತ್ತಾನೆ. ತಾಂಡವ್ ಗುಂಡನ ಫೋಟೋ ತೋರಿಸಿ ಈತನನ್ನು ಎಲ್ಲಾದರೂ ನೋಡಿದಿರಾ ಎಂದೆಲ್ಲ ಕೇಳಿಕೊಂಡು ಬರುತ್ತಿರುತ್ತಾನೆ. ಇತ್ತ ಗುಂಡಣ್ಣ ಶೂ ಪಾಲೀಶ್ ಮಾಡುವಾತನ ಬಳಿ ಬೈಗುಳ ತಿನ್ನುತ್ತಿರುತ್ತಾನೆ. ಇದನ್ನೆಲ್ಲ ನೋಡಿದ ತಾಂಡವ್‌ಗೆ ಬಹಳ ಕೋಪ ಬರುತ್ತದೆ. ಗುಂಡಣ್ಣ ಎಂದು ಜೋರಾಗಿ ಕೂಗಿ ಕರೆಯುತ್ತಾನೆ. ತಂದೆಯ ಮುಖವನ್ನು ನೋಡಿದ ಗುಂಡಣ್ಣಗೆ ಬಹಳ ಭಯವಾಗುತ್ತದೆ.

ಅಪ್ಪನನ್ನು ಕಂಡು ಭಯಗೊಂಡ ಗುಂಡಣ್ಣ

ತನ್ನ ಮನೆಯಲ್ಲಿ ಎಲ್ಲಾ ವಿಚಾರವೂ ತಿಳಿಯುವುದು ಖಚಿತ ಎನ್ನುವುದು ಗುಂಡಣ್ಣಗೆ ಅರ್ಥ ಆಗುತ್ತದೆ. ಗುಂಡಣ್ಣನ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಭಾಗ್ಯ ಮನೆಗೆ ದರ ದರನೇ ಎಳೆದುಕೊಂಡು ಬರುತ್ತಾನೆ. ಗುಂಡಣ್ಣನ ಅವತಾರ ಕಂಡು ಮನೆಯವರು ಬೆಚ್ಚಿ ಬೀಳುತ್ತಾರೆ. ಗುಂಡಣ್ಣನನ್ನು ನೋಡಿ ಭಾಗ್ಯ ಏನಾಯಿತು ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ ತಾಂಡವ್ ಭಾಗ್ಯಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಮಗನನ್ನು ಕೆಲಸಕ್ಕೆ ಕಳುಹಿಸಿ ಆರಾಮಾಗಿದ್ದಿಯ? ಮಕ್ಕಳನ್ನು ಸಾಕುವ ಯೋಗ್ಯತೆ ನಿನ್ನಲ್ಲಿ ಇಲ್ಲ . ಅವರನ್ನು ನಾನಾದರೂ ನೋಡಿಕೊಳ್ಳುತ್ತೇನೆ. ನಿನಗೆ ಮಕ್ಕಳನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಜೋರಾಗಿಯೇ ಅರಚಾಡುತ್ತಾನೆ.

ಗುಂಡಣ್ಣನ ಕೆಲಸಕ್ಕೆ ಭಾಗ್ಯ ಬೇಸರ

ಮಗ ಮಾಡಿದ ಕೆಲಸ ಭಾಗ್ಯಗೆ ಬಹಳ ಬೇಸರವಾಗುತ್ತೆ. ಗುಂಡಣ್ಣಗೆ ತನ್ನ ತಾಯಿಯ ಖುಷಿಗಿಂತ ಬೇರೆ ಖುಷಿ ಇಲ್ಲ. ಆತನಿಗೆ ತನ್ನ ತಾಯಿಗಿಂತ ಮಿಗಿಲು ಯಾವುದು ಇಲ್ಲ. ಭಾಗ್ಯ ಮಾಡುವ ಕೆಲಸಗಳು ಗುಂಡಣ್ಣಗೆ ಬಹಳ ನೋವು ಕೊಡುತ್ತಿರುತ್ತೆ. ಮನೆಗಾಗಿ ಭಾಗ್ಯ ಏನು ಮಾಡಲು ಸಿದ್ಧಳಾಗಿರುತ್ತಿದ್ದಳು. ಆದರೆ, ಮಗನ ಸ್ಥಿತಿ ಕಂಡ ಭಾಗ್ಯ ಕಂಗಾಲಾಗಿದ್ದಾಳೆ. ಇದಕ್ಕಿಂತ ಮುಂಚಿತವಾಗಿ ಸೌಪರ್ಣಿಕಾಗೆ ಕರೆ ಮಾಡಿದ ತಾಂಡವ್‌ ಭಾಗ್ಯ ಕೆಲಸ ಮಾಡುತ್ತಿರುವ ಸ್ಥಳದ ಬಗ್ಗೆ ವಿಚಾರಿಸುತ್ತಾನೆ. ಭಾಗ್ಯ ಹೇಗೆ ಹಣ ಸಂಪಾದನೆ ಮಾಡುತ್ತಾಳೆ ಎಂಬುವುದೇ ಇದೀಗ ತಾಂಡವ್‌ಗೆ ಯಕ್ಷ ಪ್ರಶ್ನೆಯಾಗಿದೆ. ಭಾಗ್ಯನನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂದುಕೊಂಡಿದ್ದ ತಾಂಡವ್. ಆದರೆ ಸೌಪರ್ಣಿಕಾಗೆ ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಇದನ್ನರಿತ ತಾಂಡವ್ ಕರೆ ಕಟ್ ಮಾಡುತ್ತಾನೆ. ಇದೀಗ ತಾಂಡವ್‌ಗೆ ಗುಂಡಣ್ಣ ಕೆಲಸ ಮಾಡುತ್ತಿರುವುದನ್ನು ಬಹಳ ದೊಡ್ಡ ಅಸ್ತ್ರ ಎಂದುಕೊಂಡು ಭಾಗ್ಯ ಮೇಲೆ ಪ್ರಯೋಗಿಸಿದ್ದಾನೆ.

More from Filmibeat

English summary
Bhagyalakshmi Kannada serial March 15th full episode review
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X