Bhagyalakshmi: ತಂದೆಯ ಕೂಗಾಟಕ್ಕೆ ಬೆಚ್ಚಿದ ಗುಂಡಣ್ಣ; ಭಾಗ್ಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಗ
ಗುಂಡಣ್ಣ ಶೂ ಪಾಲೀಶ್ ಮಾಡುತ್ತಿರುವುದನ್ನು ನೋಡಿದ ತಾಂಡವ್ ಮಾತ್ರ ಬಹಳ ಕೋಪಗೊಳ್ಳುತ್ತಾನೆ. ಗುಂಡಣ್ಣ ಯಾಕೆ ಹೀಗೆಲ್ಲ ಮಾಡುತ್ತಿದ್ಧಿಯಾ ಎಂದು ಬಹಳ ಕೋಪದಿಂದ ಮಗನನ್ನು ಪ್ರಶ್ನೆ ಮಾಡುತ್ತಾನೆ. ಶಾಲೆಗೆ ಹೋಗುವುದನ್ನು ಬಿಟ್ಟು ಯಾಕಾಗಿ ಈ ಶೂ ಪಾಲೀಶ್ ಮಾಡುವ ಕೆಲಸವನ್ನು ಮಾಡುತ್ತಿದ್ದೀಯಾ. ಈ ರೀತಿಯ ಕೆಲಸ ಮಾಡುವುದು ನಿನಗೆ ಶೋಭೆ ತರುತ್ತಾ ಎಂದು ತಾಂಡವ್ ಮಗನ ಮೇಲೆ ಕೋಪ ಹೊರ ಹಾಕುತ್ತಾನೆ. ಮಗನಿಗೆ ಬಹಳ ಭಯವಾಗುತ್ತೆ. ಇನ್ನು ನನ್ನ ಕಥೆ ಮುಗಿದ ಹಾಗೆಯೇ ಎಂದು ಅಂದುಕೊಳ್ಳುತ್ತಾನೆ.
ತಾಂಡವ್‌ನನ್ನು ಕಂಡರೆ ಗುಂಡಣ್ಣಗೆ ಕೋಪ, ಭಯ ಎರಡು ಇದೆ. ಭಯ ಯಾಕೆಂದರೆ ತನ್ನ ತಂದೆ ಕೋಪದಿಂದ ತಾಯಿಗೆ ಬಯ್ಯುತ್ತಾರೆ ಎನ್ನುವ ಭಯ. ಇದೇ ವೇಳೆ ಕೋಪ ಮಾಡಿಕೊಂಡಿರುವ ತಾಂಡವ್‌ಗೆ ಏನು ಮಾಡಬೇಕು ಅಂತಾನೇ ಗೊತ್ತಾಗುವುದಿಲ್ಲ. ಕೊನೆಗೆ ತನ್ನ ಮಗನ ಬಳಿ ಇದೆಲ್ಲ ಮಾಡಲು ಹೇಳಿದ್ದು ಯಾರು ಹೇಳು? ಭಾಗ್ಯ ತಾನೇ? ಭಾಗ್ಯಗೆ ಮಕ್ಕಳನ್ನು ಸಾಕಲು ಯೋಗ್ಯತೆ ಇಲ್ಲ. ಆದರೂ ಕೂಡಾ ನಾನೇ ಮಕ್ಕಳನ್ನು ಸಾಕುತ್ತೇನೆ ಎಂದು ಬಿಲ್ಡಪ್ ನೀಡುತ್ತಾಳೆ. ಆಕೆಗೆ ಬಾಯಿ ಬಿಟ್ಟು ಹೇಳಿದರೆ ನಾನೇ ಎಲ್ಲಾ ಮಾಡುತ್ತಿದ್ದೇನಲ್ಲ ಎಂದು ಕಿರುಚಾಡುತ್ತಾ ಹೇಳುತ್ತಾನೆ.

ಆಗ ಗುಂಡಣ್ಣ ತನ್ನ ತಂದೆಯ ಬಳಿ ಹೇಳುತ್ತಾನೆ. ಇಲ್ಲ ಅಮ್ಮ ಈ ಕೆಲಸ ಮಾಡಲು ಹೇಳಿಲ್ಲ. ಆಕೆ ಯಾವತ್ತೂ ಈ ರೀತಿ ಕೆಲಸ ಮಾಡಲು ಹೇಳುವುದಿಲ್ಲ. ನನ್ನ ತಾಯಿ ಬಹಳ ಒಳ್ಳೆಯವಳು. ಆಕೆಗೆ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದಾಗ ತಾಂಡವ್ ಕೋಪ ಮತ್ತಷ್ಟು ಹೆಚ್ಚಾಗುತ್ತೆ. ಗುಂಡಣ್ಣನ ಬಾಯಿ ಮುಚ್ಚಿಸಿಬಿಡುತ್ತಾನೆ. ತಾಂಡವ್ ಭಾಗ್ಯಗೆ ಕರೆ ಮಾಡುತ್ತಾನೆ. ಆ ವೇಳೆ ಭಾಗ್ಯ ಜೋಕರ್ ವೇಷ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರುತ್ತಾಳೆ. ಆದ ಕಾರಣ ಯಾರ ಫೋನ್ ಬಂದರು ಆಕೆ ಪಿಕ್ ಮಾಡುವುದಿಲ್ಲ. ತಾಂಡವ ಬಿಡದೆ ಕಾಲ್ ಮಾಡುತ್ತಿರುವುದನ್ನು ಕಂಡು ಭಾಗ್ಯ ಕಾಲ್ ಪಿಕ್ ಮಾಡುತ್ತಾಳೆ. ಗುಂಡಣ್ಣನ ಬಗ್ಗೆ ಭಾಗ್ಯ ಬಳಿ ಎಲ್ಲ ವಿಚಾರ ಹೇಳಿದ ತಾಂಡವ್ ಗುಂಡಣ್ಣ ಇರುವ ಜಾಗಕ್ಕೆ ಬರುವಂತೆ ಖಡಕ್ ಆಗಿ ಹೇಳುತ್ತಾನೆ. ಭಾಗ್ಯಗೆ ಮಗ ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿ ಶಾಕ್ ಆಗುತ್ತೆ.

ಮಗನ ಬಳಿಗೆ ಓಡೋಡಿ ಬಂದ ಭಾಗ್ಯ
ಕೂಡಲೇ ಅಲ್ಲಿಯೇ ಇದ್ದ ಒನರ್ ಬಳಿ ಭಾಗ್ಯ ರಜೆ ಕೇಳಿ ಅಲ್ಲಿಂದ ಹೊರಟು ಬರುತ್ತಾಳೆ. ತಾಯಿಯನ್ನು ನೋಡಿದ ಗುಂಡಣ್ಣ ಆಕೆಯನ್ನು ಬಿಗಿದು ಅಪ್ಪಿಕೊಳ್ಳುತ್ತಾನೆ. ತಾಂಡವ್ ಮಾಡಿದ ಅವಾಂತರಕ್ಕೆ ಈಗಾಗಲೇ ಗುಂಡಣ್ಣ ಭಯ ಪಟ್ಟುಕೊಂಡಿದ್ದಾನೆ. ಆದರೆ ಭಾಗ್ಯಗೆ ಗುಂಡಣ್ಣ ಮಾಡಿದ ಕೆಲಸ ಸಿಕ್ಕಾಪಟ್ಟೆ ನೋವಾಗುತ್ತೆ. ಮಗನ ಸ್ಥಿತಿ ನೋಡಿ ಯಾಕೆ ಈ ರೀತಿ ಮಾಡುತ್ತಿದ್ದಿಯಾ ಗುಂಡಣ್ಣ, ನೀನು ಕೆಲಸ ಮಾಡುವಂತಹ ಕಷ್ಟ ನಮಗೆ ಏನು ಬಂದಿದೆ. ನಿನಗೆ ನಾನು ಏನು ಕಮ್ಮಿ ಮಾಡಿದ್ದೆ ಎಂದು ಮಗನ ಬಳಿ ಕೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ತಾಂಡವ್ ಭಾಗ್ಯಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಮಗನನ್ನು ಸರಿಯಾದ ದಾರಿಯಲ್ಲಿ ನಡೆಸಲು ಆಗುತ್ತಿಲ್ಲ ಎಂದ ಮೇಲೆ ಯಾಕೆ ನೋಡಿಕೊಳ್ಳುತ್ತೇನೆ ಎಂದು ಧಿಮಾಕಿನಲ್ಲಿ ಹೇಳಬೇಕಿತ್ತು ಎಂದು ಹೇಳಿ ಕೂಗಾಡುತ್ತಾನೆ.
ಮಗನನ್ನು ಪ್ರೀತಿಯಿಂದ ಅಪ್ಪಿಕೊಂಡ ಭಾಗ್ಯ
ಇತ್ತ ಗುಂಡಣ್ಣ ಅಮ್ಮನ ಬಳಿ ಅಮ್ಮ ನೀನು ನನ್ನ ಸ್ಕೂಲ್ ಫೀಸ್ ಕಟ್ಟಲು ಬಹಳಷ್ಟು ಕಷ್ಟ ಪಡುತ್ತಿದ್ದೆ. ಅದನ್ನು ನನಗೆ ನೋಡಿಕೊಂಡು ಇರಲು ಸಾಧ್ಯ ಆಗಲಿಲ್ಲ. ಅದಕ್ಕೆ ನಾನು ಶೂ ಪಾಲಿಶ್ ಮಾಡುವ ಕೆಲಸವನ್ನು ಮಾಡಿದೆ. 250 ರೂ. ಇವತ್ತು ನಾನು ಸಂಪಾದನೆ ಮಾಡಿದೆ ಎಂದು ಹೇಳಿದಾಗ ಭಾಗ್ಯಗೆ ಅಳು ಬರುತ್ತೆ. ಗುಂಡಣ್ಣನನ್ನು ಅಲ್ಲಿಂದ ಮನೆಗೆ ನಡೆದುಕೊಂಡೇ ಕರೆದುಕೊಂಡು ಹೋದ ಭಾಗ್ಯಗೆ ಮಗ ಮಾಡಿದ ಕೆಲಸವೇ ಯೋಚನೆಗೆ ಬರುತ್ತದೆ. ತನ್ನ ಮಗ ನನಗೆ ಕಷ್ಟ ಆಗುತ್ತಿರುವುದನ್ನು ಕಂಡು ಈ ರೀತಿ ಕೆಲಸ ಮಾಡಿದ ಎಂದು ಮನಸ್ಸಿನಲ್ಲಿ ಮರುಗುತ್ತಾಳೆ. ಗುಂಡಣ್ಣ ತನ್ನ ತಾಯಿಯನ್ನು ಬಹಳ ಸಂತೈಸುತ್ತಾನೆ. ಮಗನ ಮಾತನ್ನು ಕೇಳಿ ಭಾಗ್ಯಗೆ ಬೇಸರವೇ ಮರೆತು ಹೋಗುತ್ತದೆ. ತನ್ನ ಮಗ ತನ್ನ ಕಷ್ಟಕ್ಕೆ ಸಹಾಯ ಮಾಡಲು ಬಂದಿದ್ದಾನೆ ಎಂದು ಯೋಚನೆ ಮಾಡುತ್ತಾಳೆ.


Click it and Unblock the Notifications











