Bhagyalakshmi Serial: ಭಾಗ್ಯ ಜೋಕರ್ ಕೆಲಸ ಮಾಡ್ತಿರೋ ತಾಂಡವ್‌ಗೆ ಗೊತ್ತಾಯ್ತು; ಮುಂದೇನು?
ತಾಂಡವನಿಗೆ ಭಾಗ್ಯ ಯಾವ ಕೆಲಸ ಮಾಡುತ್ತಿದ್ದಾಳೆ ಅನ್ನೋದು ಈಗಾಗಲೇ ತಿಳಿದು ಹೋಗಿದೆ. ಆತನಿಗೆ ಈ ವಿಚಾರ ತಿಳಿಯಬಾರದು ಎಂದು ಅದೆಷ್ಟೇ ಮರೆಮಾಚಿದರು ಕೂಡ ತಾಂಡವ್‌ಗೆ ಹೇಗೋ ಈ ಬಗ್ಗೆ ತಿಳಿದು ಹೋಗಿವೆ. ಭಾಗ್ಯ ಮಾಡುತ್ತಿರುವ ಕೆಲಸವನ್ನು ನೋಡಿ ತಾಂಡವ್‌ಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಖಂಡಿತವಾಗಿಯೂ ಭಾಗ್ಯ ನನ್ನ ತಂದೆ ತಾಯಿಯನ್ನ ಮನೆಯಿಂದ ಹೊರಗೆ ಹಾಕುವುದಂತು ಖಚಿತ ಅಂತ ಅಂದುಕೊಂಡಿದ್ದಾನೆ.
ತಾಂಡವ್ ನೇರವಾಗಿ ಆತನ ಮನೆಗೆ ಹೋಗುತ್ತಾನೆ. ಮನೆಯ ಹೊರಗಡೆಯಿಂದಲೇ ತಂದೆ-ತಾಯಿಯನ್ನು ಜೋರಾಗಿ ಕರೆಯುತ್ತಾನೆ. ತಾಂಡವ್ ಕರೆಯುವ ಶಬ್ದಕ್ಕೆ ಮನೆಯಿಂದ ಎಲ್ಲರೂ ಹೊರಗಡೆ ಬರುತ್ತಾರೆ. ಅಕ್ಕ ಪಕ್ಕದ ಮನೆಯವರು ಕೂಡ ಜಮಾಯಿಸುತ್ತಾರೆ. ತಾಂಡವ್ ಬಹಳ ಜೋರಾಗಿಯೇ ಭಾಗ್ಯ ಬಗೆಗಿನ ವಿಚಾರವನ್ನು ಎಲ್ಲರಿಗೂ ಕೇಳಿಸುವ ಹಾಗೆ ಹೇಳುತ್ತಾನೆ. ನಿಮ್ಮ ಸೊಸೆ ಬಹಳ ದೊಡ್ಡ ಕೆಲಸಕ್ಕೆ ಹೋಗಿದ್ದಾಳೆ ಎಂದು ಅಂದುಕೊಂಡರೆ ಅದು ನಿಮ್ಮ ಭ್ರಮೆ. ಖಂಡಿತವಾಗಿಯೂ ಆಕೆಗೆ ಒಳ್ಳೆಯ ಕೆಲಸವಿಲ್ಲ. ಬೀದಿ ಬೀದಿಯಲ್ಲಿ ಬಣ್ಣ ಹಚ್ಚಿ ಅಲೆಯುತ್ತಿದ್ದಾಳೆ ಎಂದು ತಾಂಡವ್ ಹೇಳುತ್ತಾನೆ.

ತಾಂಡವನ ಮಾತು ಕೇಳಿದ ಕುಸುಮಾ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಈ ಮಾತು ಆಕೆಗೆ ಬಹಳಷ್ಟು ನೋವುಂಟು ಮಾಡುತ್ತಿದೆ. ಆದರೂ ತಾಂಡವನ ಮಾತಿಗೆ ಪ್ರತ್ಯುತ್ತರವಾಗಿ ಕುಸುಮಾ ಮಗನ ಬಳಿ ಪ್ರಶ್ನೆ ಮಾಡುತ್ತಾಳೆ. ಇದನ್ನೆಲ್ಲಾ ಬೀದಿಯಲ್ಲಿ ಹೇಳುವ ಬದಲು ಮನೆಯೊಳಗೆ ಬಂದು ಹೇಳಬಹುದಲ್ವಾ? ಭಾಗ್ಯ ಬಗ್ಗೆ ಬೀದಿಯಲ್ಲಿ ಇರುವ ಹೇಳುವ ಅಗತ್ಯವಾದರೂ ಏನಿದೆ? ಅಷ್ಟಕ್ಕೂ ಭಾಗ್ಯ ಬಗ್ಗೆ ಮಾತನಾಡಲು ನಿನಗೇನು ಅಧಿಕಾರವಿದೆ? ಎಂದು ಬಹಳ ಕಠೋರವಾಗಿ ಮಾತನಾಡುತ್ತಾಳೆ. ಹಾಗೆಯೇ ಭಾಗ್ಯ ಯಾವತ್ತೂ ಕೂಡ ನಮ್ಮನ್ನು ಮನೆಯಿಂದ ಹೊರಗೆ ಹಾಕುವ ಮಾತೇ ಇಲ್ಲ. ಆಕೆ ನನ್ನ ಸೊಸೆ. ನನ್ನ ಮಗನಲ್ಲ" ಎಂದು ಬಹಳ ಖಡಕ್ ಆಗಿ ಹೇಳುತ್ತಾಳೆ.
ತಾಂಡವನ ಕೋಪಕ್ಕೆ ಬ್ರೇಕ್ ಹಾಕಿದ ಕುಸುಮಾ
ಕುಸುಮಾ ಮಾತಿಗೆ ಎಗರಾಡಿದ ತಾಂಡವ. "ಖಂಡಿತವಾಗಿಯೂ ನಿಮ್ಮ ಮಗ ಅಂತಹ ಕೆಲಸವನ್ನು ಮಾಡುವುದಿಲ್ಲ. ನಿಮ್ಮ ಸೊಸೆ ಅಂತಹ ಕೆಲಸವನ್ನು ಮಾಡುತ್ತಿದ್ದಾಳೆ" ಎಂದು ಎಲ್ಲರಿಗೂ ಕೇಳಿಸುವಂತೆ ಹೇಳುತ್ತಾನೆ. ಆ ಬಳಿಕ ಅಲ್ಲಿಂದ ಹೊರಟು ಹೋಗುತ್ತಾನೆ. ನೆರೆ ಹೊರೆಯವರು ಕುಸುಮಾ ಕಡೆಗೆ ಬೊಟ್ಟು ಮಾಡಿ ಮಾತನಾಡುತ್ತಾರೆ. ಮಗನ ವರ್ತನೆಯಿಂದ ಕುಸುಮಾಗೆ ಬಹಳಷ್ಟು ನೋವಾಗುತ್ತೆ. ಗುಂಡಣ್ಣ ಭಾಗ್ಯ ಜೊತೆಗೆ ಬಹಳಷ್ಟು ಪ್ರೀತಿಯಿಂದ ಮಾತನಾಡುತ್ತಾನೆ. ಗುಂಡಣ್ಣನ ಮಾತಿಗೆ ಕರಗಿದ ಭಾಗ್ಯಗೆ ಆಕೆಗೆ ಇದ್ದ ಬೇಸರ ಕರಗಿ ಹೋಗುತ್ತದೆ.
ಅಮ್ಮನ ಜೊತೆಗೆ ಖುಷಿಯಾಗಿ ಕಾಲ ಕಳೆದ ಮಗ
ತನ್ನ ತಾಯಿಯ ಕಷ್ಟಕ್ಕೆ ಹೆಗಲಾಗಿ ನಿಲ್ಲಬೇಕು ಎನ್ನುವ ಆಸೆಗೆ ಭಾಗ್ಯ ಬಹಳಷ್ಟು ಹೆಮ್ಮೆ ಪಡುತ್ತಾಳೆ. ಖಂಡಿತವಾಗಿಯೂ ತನ್ನ ಮಗ ಒಳ್ಳೆಯ ಸ್ಥಾನಕ್ಕೆ ಹೋಗೆ ಹೋಗುತ್ತಾನೆ ಎನ್ನುವ ಭರವಸೆ ಭಾಗ್ಯಗೆ ಮೂಡುತ್ತದೆ. ಭಾಗ್ಯ ಯಾವತ್ತೂ ತನ್ನ ಮಗ ಗುಂಡಣ್ಣನಿಗೆ ಬೈದ ಉದಾಹರಣೆಗಳೇ ಇಲ್ಲ. ಈಗ ಮಗ ಕಾಳಜಿ ಕಂಡು ಬಹಳಷ್ಟು ಖುಷಿಯಲ್ಲಿ ಇದ್ದಾಳೆ. ಭಾಗ್ಯ ಹಾಗೂ ಗುಂಡಣ್ಣ ಮನೆಗೆ ಬರುವುದನ್ನೇ ಮನೆ ಮಂದಿ ಎದುರು ನೋಡುತ್ತಿದ್ದಾರೆ. ತಾಂಡವ ಮನೆಗೆ ಬಂದು ದಾಂಧಲೆ ಮಾಡುತ್ತಿರುವುದು ಹೊಸದೇನಲ್ಲ. ಆದರೆ ಭಾಗ್ಯ ಬಗ್ಗೆ ಇಲ್ಲ ಸಲ್ಲದ ಮಾತನ್ನು ಹೇಳುವುದು ಆಕೆಗೆ ಹೊಸದೇನಲ್ಲ. ಆದರೂ ಈ ಬಾರಿ ಮನೆ ಮಂದಿ ಕೊಂಚ ಗಂಭೀರವಾಗಿ ತೆಗೆದುಕೊಂಡಿದ್ದಾರೆ. 'ಭಾಗ್ಯಲಕ್ಷ್ಮಿ' ಮುಂದಿನ ಸಂಚಿಕೆಯಲ್ಲಿ ಹೇಗೆ ಸಾಗುತ್ತೆ ಎಂದು ನೋಡಬೇಕಿದೆ.


Click it and Unblock the Notifications











