Bhagyalakshmi Serial: ಜೋಕರ್ ಕೆಲಸವನ್ನೂ ಕಳೆದುಕೊಂಡ ಭಾಗ್ಯ; ಅದೆಷ್ಟು ಕಾಟ ಕೊಡ್ತಾನೋ ತಾಂಡವ್?

By ಪೂರ್ವ

ತಾಂಡವ್ ಕರೆದ ಎಂದು ಭಾಗ್ಯ ಮಾಡುತ್ತಿದ್ದ ಕೆಲಸ ಬಿಟ್ಟು ಮಗನ ಬಳಿಗೆ ಓಡೋಡಿ ಬಂದಿದ್ದು ಆಯಿತು. ಇದೀಗ ಕೆಲಸ ಕಳೆದುಕೊಂಡಿದ್ದು ಆಯಿತು. ಭಾಗ್ಯ ತನ್ನ ಮಗ ಏನೋ ಕಷ್ಟದಲ್ಲಿದ್ದಾನೆ ಎಂದು ತಿಳಿದು ಆತನಿಗೆ ಬುದ್ದಿ ಹೇಳಲು ಬಹಳ ತರಾತುರಿಯಿಂದ ಗುಂಡಣ್ಣನ ಬಳಿಗೆ ಬರುತ್ತಾಳೆ. ಆದರೆ, ಇದರಿಂದಾಗಿ ಮನೆಯಲ್ಲಿ ಭಾಗ್ಯ ಯಾವ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಕೂಡ ತಿಳಿದು ಹೋಯಿತು. ಇದನ್ನು ಮನೆಯ ಹೊರಗಡೆ ನಿಂತು ತಾಂಡವ್‌ ಎಲ್ಲರಿಗೂ ಗೊತ್ತಾಗುವ ಹಾಗೆ ರಂಪ ಮಾಡಿದ್ದು ಆಯ್ತು. ಆದರೆ, ಇದೀಗ ಕುಸುಮಾ ಭಾಗ್ಯಗಳನ್ನು ಪ್ರಶ್ನೆ ಮಾಡಿದಾಗ ತಾನು ಈ ವಿಚಾರವನ್ನು ಮುಚ್ಚಿಡಬೇಕು ಎನ್ನುವ ದೃಷ್ಟಿಯಿಂದ ಈ ರೀತಿ ಮಾಡಿದ್ದಲ್ಲ ಎಂದು ಭಾಗ್ಯ ಹೇಳುತ್ತಾಳೆ.

ನನಗೆ ನಾನು ಕೆಲಸ ಮಾಡುತ್ತಿರುವ ಬಗ್ಗೆ ಹೆಮ್ಮೆಯಿದೆ. ಅದು ಬಿಟ್ಟು ನಾಚಿಕೆ ಇಲ್ಲ. ನನ್ನಿಂದ ಎಷ್ಟು ಸಾಧ್ಯವೊ ಅಷ್ಟು ಕೆಲಸವನ್ನು ನಾನು ಮಾಡುತ್ತೇನೆ. ನನಗೆ ಮನೆ ನಡೆಸಲು ಆ ಕೆಲಸಬೇಕು, ಈ ಕೆಲಸವೇ ಬೇಕು ಎಂದು ನಾನು ಇದ್ದರೆ ಖಂಡಿತವಾಗಿಯೂ ನನಗೆ ಇಷ್ಟು ದಿನ ಮನೆ ನಡೆಸಲು ಆಗುತ್ತಿರಲಿಲ್ಲ. ನನ್ನನ್ನು ಕುತಂತ್ರದಿಂದ ಶೇಫ್ ಕೆಲಸದಿಂದ ಕೆಳಗಿಳಿಸಲಾಯಿತು. ಆದರೆ, ನಾನು ಖಂಡಿತವಾಗಿಯೂ ಯಾರ ಎದುರು ಸೋಲುವ ಮಾತೆ ಇಲ್ಲ. ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮ ವಿಶ್ವಾಸ ನನ್ನಲ್ಲಿದೆ ಎಂದು ಹೇಳುತ್ತಾಳೆ. ಸೊಸೆಯ ಮಾತು ಕೇಳಿದ ಕುಸುಮಾಗೆ ಆಕೆಯ ಮಾತು ಹೌದು ಎನಿಸಿಬಿಟ್ಟಿತು.

Bhagyalakshmi Kannada serial March 20th 2025 full episode highlights

ಭಾಗ್ಯ ನಿನ್ನ ಜೊತೆ ಯಾರು ನಿಲ್ಲದಿದ್ದರು ಪರವಾಗಿಲ್ಲ. ಆದರೆ ನಾನು ನಿನ್ನ ಜೊತೆಯೇ ಇರುತ್ತೇನೆ ಎಂದು ಬಹಳ ಖುಷಿಯಿಂದ ಹೇಳುತ್ತಾರೆ. ಭಾಗ್ಯ ಮನೆಗೆ ಯಾವತ್ತೂ ಕಷ್ಟ ಪಟ್ಟು ಕೆಲಸ ಮಾಡಿ ಬರುತ್ತಾಳೆ. ಆಕೆಯ ಆರೋಗ್ಯವನ್ನು ವಿಚಾರಣೆ ಮಾಡಲು ಯಾರು ಇಲ್ಲ. ಭಾಗ್ಯ ಮನೆಗೆ ಬರುವುದನ್ನೇ ಕಾಯುತ್ತಿರುತ್ತಾರೆ. ಮನೆಯ ಹೊರಗಡೆಯು ಭಾಗ್ಯ ಕೆಲಸ ಮಾಡಬೇಕು ಹಾಗೆಯೇ ಮನೆಯ ಒಳಗಡೆಯು ಭಾಗ್ಯ ಕೆಲಸ ಮಾಡಬೇಕು ಇದೆಲ್ಲವನ್ನೂ ನೋಡಿದ ವೀಕ್ಷಕರು ಬಹಳ ಬೇಸರಪಟ್ಟುಕೊಳ್ಳುತ್ತಾರೆ. ಮರುದಿನ ಭಾಗ್ಯ ಮನೆಯ ಕೆಲಸ ಮುಗಿಸಿ ಕೆಲಸಕ್ಕೆ ಹೋಗುತ್ತಾಳೆ. ಆದರೆ ಆಕೆಗೆ ಕೆಲಸ ಕೊಟ್ಟಾತ ಭಾಗ್ಯನನ್ನು ಕೆಲಸದಿಂದ ತೆಗೆದು ಹಾಕಿದ್ದ. ಯಾಕೆಂದರೆ ಭಾಗ್ಯ ಹೇಳದೆ ಕೇಳದೆ ಕೆಲಸದಿಂದ ಹೋಗಿ ಬಿಡುತ್ತಾಳೆ.

Take a Poll

ಭಾಗ್ಯ ಮಾತಿಗೆ ಕಿವಿಗೊಡದೆ ಮ್ಯಾನೇಜರ್

ಹೇಳದೆ ಕೇಳದೆ ಕೆಲಸ ಬಿಟ್ಟು ಹೋಗಿದ್ದರಿಂದ ಆತ ಕೋಪಗೊಂಡು ಭಾಗ್ಯಳನ್ನು ಕೆಲಸದಿಂದ ತೆಗೆದು ಬಿಟ್ಟಿರುತ್ತಾನೆ. ಭಾಗ್ಯ ಅದೆಷ್ಟೋ ಬಾರಿ ರಿಕ್ವೆಸ್ಟ್ ಮಾಡಿದರು ಕೂಡ ಮಾತನ್ನು ಕೇಳಲು ಮ್ಯಾನೇಜರ್ ರೆಡಿ ಇರಲಿಲ್ಲ. ಕೊನೆಗೆ ಆಕೆಗೆ ಕೊಡಬೇಕಾಗಿದ್ದ ಹಣವನ್ನು ಕೊಟ್ಟು ಇಲ್ಲಿಂದ ಹೊರಟು ಹೋಗುವಂತೆ ಹೇಳುತ್ತಾನೆ. ಭಾಗ್ಯ ಅದೆಷ್ಟೇ ಬೇಡಿದರು ಆತನ ಮನಸ್ಸು ಕರಗುವುದಿಲ್ಲ ಕೊನೆಗೆ ಮ್ಯಾನೇಜರ್ ಹೇಳುತ್ತಾನೆ "ನೀನು ಇಲ್ಲಿಂದ ಹೋಗದೆ ಇದ್ದರೆ, ಸೆಕ್ಯೂರಿಟಿಯನ್ನು ಕರೆಯುತ್ತೇನೆ" ಎಂದಾಗ ಭಾಗ್ಯ ಮೆತ್ತಗೆ ಅಲ್ಲಿಂದ ಹೊರ ಹೋಗಲು ರೆಡಿ ಆಗುತ್ತಾಳೆ.

ತಾಂಡವನ ಮಾತಿಗೆ ಕ್ಯಾರೆ ಎನ್ನದ ಭಾಗ್ಯ

ಅಷ್ಟರಲ್ಲಾಗಲೇ ತಾಂಡವ್ ಹಾಗೂ ಶ್ರೇಷ್ಠಾ ನಿಂತಿರುತ್ತಾರೆ. ಅವರಿಬ್ಬರನ್ನು ನೋಡಿದ ಭಾಗ್ಯಗೆ ಏನು ಮಾತನಾಡಬೇಕು ಎಂದು ತೋಚುವುದಿಲ್ಲ. ತಾಂಡವ್ ಶ್ರೇಷ್ಠಾ ಬಳಿ "ಶ್ರೇಷ್ಠಾ ನಿನಗೆ ನಾನು ಕೋತಿ ಕುಣಿಯುವುದನ್ನು ತೋರಿಸುತ್ತಿದ್ದೆ. ಸ್ವಲ್ಪದರಲ್ಲಿ ಮಿಸ್ ಆಯಿತು" ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಭಾಗ್ಯ ಕೊಂಚ ಗಟ್ಟಿಯಾಗಿ "ನಿಮಗೆ ಏನು ನನ್ನ ಹಿಂದೆಯೇ ಸುತ್ತುವ ಚಾಳಿ ಏನಾದರು ಶುರುವಾಗಿದೆ" ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ತಾಂಡವ್ ಹಾಗೂ ಶ್ರೇಷ್ಠಾ "ಅಲ್ಲ ಭಾಗ್ಯ ನೀನು ಇಲ್ಲಿ ಈ ತರ ಕೆಲಸ ಮಾಡುತ್ತಿದ್ದಿಯ? ಇದೀಗ ಈ ಕೆಲಸವೂ ಕೂಡ ನಿನ್ನ ಕೈಯಿಂದ ಹೋಯಿತು. ಇನ್ನು ಮುಂದಿನ ಗತಿ ಏನು?" ಎಂದು ಪ್ರಶ್ನೆ ಮಾಡುತ್ತಾರೆ. ಆಗ ಭಾಗ್ಯಗೆ ಇದೀಗ ಬಹಳ ತಲೆ ಬಿಸಿ ಆಗುತ್ತದೆ. ಆದರೆ ಅದ್ಯಾವುದನ್ನೂ ತೋರಿಸಿಕೊಳ್ಳುವುದಿಲ್ಲ. ಭಾಗ್ಯ ಚೆನ್ನಾಗಿ ಅಡುಗೆ ಮಾಡುತ್ತಾಳೆ. ಆದರೆ ಆಕೆಯ ಕೈ ರುಚಿಯನ್ನು ಯಾರಿಂದಲೂ ಮೀರಿಸಲು ಸಾಧ್ಯವೇ ಇಲ್ಲ. ಇದೀಗ ಆಕೆಗೆ ಸವಾಲಿನ ಮೇಲೆ ಸವಾಲು ಎದುರಾಗುತ್ತಿದೆ. ಮುಂದೆ ಯಾವ ಕೆಲಸ ಹುಡುಕಿಕೊಳ್ಳುತ್ತಾಳೆ ಅನ್ನೋದು ಗೊತ್ತಾಗಬೇಕಿದೆ.

More from Filmibeat

English summary
Bhagyalakshmi Kannada serial March 20th 2025 full episode highlights;
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X