ಹೊಸ ಬ್ಯುಸಿನೆಸ್ ಮಾಡಲು ಹೊರಟ ಭಾಗ್ಯ; ಈ ಬಾರಿನಾದರೂ ಗೆಲ್ಲುತ್ತಾಳಾ ಭಾಗ್ಯ?

By ಪೂರ್ವ

ಭಾಗ್ಯ ಮನೆಯಲ್ಲಿ ಎಲ್ಲರೂ ಕುಳಿತು ಊಟವನ್ನು ಮಾಡುತ್ತಿದ್ದಾರೆ. ಈಗ ತನ್ವಿಗೆ ಬಹಳಷ್ಟು ಹೊಟ್ಟೆ ಹಸಿದಿದೆ. ಆದರೆ ತಾನು ಕೂಡ ನಿಮ್ಮ ಜೊತೆ ಕುಳಿತು ಊಟ ಮಾಡುತ್ತೇನೆ ಎಂದು ಹೇಳಿದರೆ, ಆಕೆಯ ಅಹಂಕಾರಕ್ಕೆ ಪೆಟ್ಟು ಬೀಳುತ್ತದೆ ಎಂದು ಸುಮ್ಮನೆ ಕುಳಿತು ಕೊಂಡಿದ್ದಾಳೆ. ಆಕೆಗೆ ಅಮ್ಮನ ಕಷ್ಟ ಮನೆಯ ಸಂಕಷ್ಟಗಳು ಇದ್ಯಾವುದೂ ಕೂಡ ಬೇಡ. ಆಕೆಗೆ ಬೇಕಾಗಿರುವುದು ಒಂದೇ ತನ್ನ ಗೆಳತಿಯರ ಜೊತೆ ಮೋಜು-ಮಸ್ತಿ ಮಾಡಿಕೊಂಡು ಇರುವುದು.

ಯಾಕೆಂದರೆ, ಕೆಲವೊಂದು ವಿಚಾರದಲ್ಲಿ ತಾಯಿಯನ್ನು ಅರ್ಥ ಮಾಡಿಕೊಂಡರು ಇನ್ನು ಕೆಲವೊಂದು ವಿಚಾರಗಳಲ್ಲಿ ತನ್ವಿ ತನ್ನದೇ ಆದ ಆಲೋಚನೆಗಳಲ್ಲಿ ಮುಳುಗಿ ಹೋಗಿದ್ದಾಳೆ. ಆದರೆ, ಭಾಗ್ಯ ಮಾತ್ರ ಮಗಳ ಮಾತಿಗೆ ಕಿವಿ ಕೊಡದೆ ಅತ್ತೆ ಹೇಳಿದಂತೆ ನಡೆದುಕೊಳ್ಳುತ್ತಿದ್ದಾಳೆ. ಆಕೆಗೆ ತನ್ನ ಅತ್ತೆ ಏನೇ ಹೇಳಿದರೂ ಅದು ಸರಿಯಾಗಿರುತ್ತದೆ ಎನ್ನುವ ನಂಬಿಕೆ. ಆದ್ದರಿಂದ ಆಕೆ ಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತನ್ವಿ ಮಾತ್ರ ತನ್ನ ಕಡೆ ಯಾರೂ ಕೂಡ ನೋಡುತ್ತಿಲ್ಲ ಎಂದು ಬಹಳ ಬೇಸರ ವ್ಯಕ್ತಪಡಿಸುತ್ತಾಳೆ.

Bhagyalakshmi Kannada serial March 25th 2025 full episode highlights

ತನ್ವಿಗೆ ಹೊಟ್ಟೆ ಹಸಿವಾಗುತ್ತಿದ್ದರು ಆಕೆ ಮೆತ್ತಗೆ ಬಂದು ಡೈನಿಂಗ್ ಹಾಲ್‌ನಲ್ಲಿ ನಿಂತಿರುತ್ತಾಳೆ. ಎಲ್ಲರೂ ಭಾಗ್ಯ ಕೈ ತುತ್ತಿನ ಬಗ್ಗೆ ಮಾತನಾಡುತ್ತಿದ್ದರೆ, ತನ್ವಿಗೆ ಬಹಳ ಸಿಟ್ಟೇರುತ್ತಿತ್ತು. ಆಕೆ ಏನು ಮಾತನಾಡದೆ ವಾಪಸ್ ರೂಮ್‌ಗೆ ಹೋಗುತ್ತಾಳೆ. ತನ್ವಿಗೆ ಆಕೆಯ ಗೆಳತಿ ಕರೆ ಮಾಡಿ ತಾಯಿಯ ಬಳಿ ನಿಜ ವಿಚಾರವನ್ನು ಹೇಳಿದೆಯಾ? ನಿನ್ನ ಅಮ್ಮ ಪರ್ಮಿಷನ್ ಕೊಟ್ರಾ ಎಂದು ಕೇಳುತ್ತಾಳೆ. ಆಗ ತನ್ವಿ ಬಹಳ ಬೇಸರದಿಂದ ನಾನು ರೆಸಾರ್ಟ್‌ಗೆ ಬರುವುದಿಲ್ಲ. ಅಮ್ಮ ಅದ್ಯಾಕೋ ಒಪ್ಪುತ್ತಿಲ್ಲ ಎಂದು ತನ್ವಿ ತನ್ನ ಗೆಳತಿಗೆ ಹೇಳುತ್ತಾಳೆ.

ರೆಸಾರ್ಟ್‌ಗೆ ಹೋಗಲು ತನ್ವಿ ಸ್ಕೆಚ್

ತನ್ವಿ ನೀನು ಇಲ್ಲದೆ ನಮಗೆಲ್ಲರಿಗೂ ಬಹಳ ಬೋರ್ ಆಗುತ್ತೆ. ಪ್ಲೀಸ್ ನೀನು ನಮ್ಮ ಜೊತೆಗೆ ಬಾ ಎಂದು ಗೆಳತಿ ಬಹಳ ಬೇಸರದಿಂದ ಹೇಳುತ್ತಾಳೆ. ಇದನ್ನು ಕೇಳಿದ ತನ್ವಿ ತಾನು ಇನ್ನೊಂದು ಬಾರಿ ಅಮ್ಮನ ಬಳಿ ಮಾತನಾಡಿ ನಿನಗೆ ಹೇಳುತ್ತೇನೆ ಎಂದು ಹೇಳುತ್ತಾಳೆ. ತನ್ವಿಗೆ ಹೇಗಾದರೂ ಮಾಡಿ ತಾನು ರೆಸಾರ್ಟ್‌ಗೆ ಹೋಗಲೇಬೇಕೆಂದು ಅಂದುಕೊಳ್ಳುತ್ತಾಳೆ. ಭಾಗ್ಯ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಳೆ. ಆದರೆ ಇದೀಗ ಆಕೆಗೆ ಮತ್ತೊಂದು ಸವಾಲು ಎದುರಾಗಿದೆ. ಮನೆಯಲ್ಲಿ ಸಣ್ಣ ಮೆಸ್ ಮಾಡಿ ಜನರಿಗೆ ಊಟ ಸಪ್ಲೈ ಮಾಡುವ ಕೆಲಸ ಮಾಡಬೇಕೆಂದು ಭಾಗ್ಯ ಅಂದುಕೊಳ್ಳುತ್ತಾಳೆ.

ಭಾಗ್ಯಗೆ ಎದುರಾಗಿದೆ ಸವಾಲುಗಳ ಸರಮಾಲೆ

ಭಾಗ್ಯಗೆ ತನ್ನ ಮನೆಯಿಂದ ಬಹಳಷ್ಟು ಸ್ಪಂದನೆ ಸಿಗುತ್ತದೆ. ಆಕೆಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ. ಭಾಗ್ಯ ಹಾಗೂ ಮನೆಯವರು ಕೇರಿ ಕೇರಿಗಳಿಗೆ ಹೋಗಿ ಪೋಸ್ಟರ್ ಕೊಡುತ್ತಾರೆ. ಯಾರಿಗಾದರೂ ಮನೆ ಊಟ ಬೇಕಾದರೆ ಕರೆ ಮಾಡುವಂತೆ ನಂಬರ್ ಕೊಟ್ಟಿರುತ್ತಾಳೆ ಭಾಗ್ಯ. ಮನೆಗೆ ಬಂದ ಭಾಗ್ಯ ಬಹಳ ರುಚಿ ರುಚಿಯಾದ ಅಡುಗೆ ಮಾಡುತ್ತಾಳೆ. ಭಾಗ್ಯಗೆ ಬಹಳ ಖುಷಿ. ಹೊಸ ಬ್ಯುಸಿನೆಸ್ ಮಾಡುವ ಹುಮ್ಮಸ್ಸು ಆಕೆಯಲ್ಲಿರುತ್ತದೆ. ಇನ್ನು ಅಡುಗೆ ಮಾಡಿದ ಕೂಡಲೇ ಫೋನ್ ಮುಂದೆ ಎಲ್ಲರೂ ಕುಳಿತುಕೊಂಡು ಬಿಡುತ್ತಾರೆ. ಆದರೆ ಇದೆಲ್ಲವೂ ಸುನಂದಾಗೆ ಕೋಪ ತರಿಸುತ್ತದೆ. ಯಾಕೆ ಹೀಗೆಲ್ಲ ಆಗುತ್ತಿದೆ ಎಂದು ಬಹಳಷ್ಟು ಕೋಪಗೊಂಡು ಬೈಯ್ಯುತ್ತಿರುತ್ತಾಳೆ.

ಸುನಂದಾ ಮಾತಿಗೆ ಸೊಪ್ಪು ಹಾಕದ ಕುಸುಮಾ

ಸುನಂದಾಗೆ ಅದೆಷ್ಟು ಬಾರಿ ಕುಸುಮಾ ಬೈದರು ಕೂಡ ಮಾನ ಮರ್ಯಾದೆ ಯಾವುದು ಇಲ್ಲ. ಪದೇ ಪದೇ ಏನಾದರೂ ಒಂದು ಹೇಳುತ್ತಲೇ ಇರುತ್ತಾಳೆ. ಆಕೆಗೆ ತನ್ನ ಮಗಳು ಕಷ್ಟಪಡುವುದು ಇಷ್ಟವಿಲ್ಲ. ಸುನಂದಾಗೆ ಆಕೆ ಖುಷಿಯಾಗಿರಬೇಕು ಎನ್ನುವ ಆಸೆ. ಹಾಗೆಯೇ ಭಾಗ್ಯ ತಾಂಡವನ ಜೊತೆಗೆ ಇರಬೇಕಿತ್ತು ಎನ್ನುವ ವಾದವನ್ನು ಮುಂದಿಡುತ್ತಾಳೆ. ಆದರೆ, ಅದಕ್ಕೆ ಭಾಗ್ಯ ತನ್ನ ತಾಯಿಗೆ ತಕ್ಕ ಉತ್ತರ ನೀಡುತ್ತಾಳೆ. ಅಷ್ಟರಲ್ಲಿ ಫೋನ್ ರಿಂಗ್ ಆಗುತ್ತೆ. ಕುಸುಮಾ ಫೋನ್ ತೆಗೆಯುತ್ತಾರೆ. ಆದರೆ ಅತ್ತ ಕಡೆಯಿಂದ ಪೂಜಾ ನಂಬರ್ ಕೇಳಲು ಒಬ್ಬ ಹುಡುಗ ಪೋನ್ ಮಾಡಿರುತ್ತೇನೆ. ಇದು ಕುಸುಮಾಗೆ ಬಹಳ ಸಿಟ್ಟು ತರಿಸುತ್ತೆ.

More from Filmibeat

Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X