Bhagyalakshmi Serial: ರೆಸಾರ್ಟ್ ಆಸೆಗೆ ತಣ್ಣೀರೆರಚಿದ ತಾಂಡವ್; ಅಪ್ಪನ ಮಾತು ಕೇಳಿ ಶಾಕ್ ಆದ ತನ್ವಿ
ಭಾಗ್ಯ ಪುತ್ರಿ ತನ್ವಿ ಮಾತಿಗೆ ಸೊಪ್ಪು ಹಾಕುವುದಿಲ್ಲ. ತನ್ನ ತಾಯಿ ತಾನು ರೆಸಾರ್ಟ್‌ಗೆ ಹೋಗಲು ಖಂಡಿತವಾಗಿಯೂ ಆಕೆ ಬಿಡುವುದಿಲ್ಲ. ಇದರಿಂದಾಗಿ ನನಗೆ ತೊಂದರೆಯಾಗುವುದಂತು ಖಚಿತ. ಇದರಿಂದ ಅಮ್ಮನನ್ನು ಕೇಳುವುದಕ್ಕಿಂತ ತಂದೆಯ ಬಳಿ ಮಾತನಾಡುವುದು ಬೆಟರ್ ಎಂದು ತನ್ವಿಗೆ ಅನ್ನಿಸುತ್ತದೆ. ಆಕೆ ತನ್ನ ತಂದೆ ತಾಂಡವ್‌ಗೆ ಕರೆ ಮಾಡುತ್ತಾಳೆ. ಅಪ್ಪ ನೀನೆಲ್ಲಿದ್ದರೂ ನನಗೆ ಈಗ ಸಿಗಬೇಕು. ನಾನು ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು. ದೇವಸ್ಥಾನದ ಬಳಿಗೆ ಬಾ ಎಂದು ಕರೆಯುತ್ತಾಳೆ.
ತನ್ವಿ ಮಾತು ಕೇಳಿ ತಾಂಡವ್‌ಗೆ ಈಗಲಾದರೂ ತನ್ನ ಮಗಳಿಗೆ ಬುದ್ಧಿ ಬಂದಿತಲ್ಲ. ನನ್ನ ಒಬ್ಬ ಮಗಳಾದರೂ ನನ್ನ ಅರ್ಥ ಮಾಡಿಕೊಂಡಳು. ಇನ್ನು ಗುಂಡಣ್ಣ ಆತ ಖಂಡಿತವಾಗಿಯೂ ನನ್ನ ಅರಸಿ ಬಂದೇ ಬರುತ್ತಾನೆ ಎನ್ನುವ ನಂಬಿಕೆ ನನಗೆ ಇದೆ ಎಂದು ಕೋಪದಿಂದ ಹೇಳುತ್ತಾನೆ. ಆಕೆಯ ಮಾತು ಕೇಳಿದ ತಾಂಡವ್‌ನ ಖುಷಿಗೆ ಪಾರವೇ ಇಲ್ಲ. ಮಗಳನ್ನು ಭೇಟಿಯಾಗುವುದಕ್ಕೆ ತಾಂಡವ್ ಹೋಗುತ್ತಾನೆ. ತನ್ವಿ ತಂದೆಯನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ತಾಂಡವ್ ತನ್ವಿ ಬಳಿಗೆ ಬಂದು ಬಹಳ ಖುಷಿಯಿಂದ ಮಾತನಾಡುತ್ತಾನೆ. ತನ್ವಿ ನಾನು ಈ ಮೊದಲೇ ನಿನಗೆ ಹೇಳಿದ್ದೆ. ಭಾಗ್ಯ ಹೇಗೆ ಅನ್ನೋದು, ಆದರೂ ಕೂಡ ತನಗೆ ಅಮ್ಮನೇ ಬೇಕು ಎಂದು ಆಕೆಯ ಬಳಿಗೆ ಹೋದೆ. ಈಗ ಅನುಭವಿಸು ಎಂದು ತಾಂಡವ್ ಕೋಪದಲ್ಲಿ ತನ್ವಿಗೆ ಹೇಳುತ್ತಾನೆ. ತನ್ವಿ ತಂದೆಯ ಮಾತಿಗೆ ಯಾವುದೇ ಉತ್ತರ ನೀಡುವುದಿಲ್ಲ. ಹಾಗೆಯೇ ತನಗೆ ಬೇಕಿದ್ದ ಬೇಡಿಕೆಯನ್ನು ತಂದೆಯ ಜೊತೆ ಈಡೇರಿಸುವಂತೆ ಪಟ್ಟು ಹಿಡಿಯುತ್ತಾಳೆ.

ಅಪ್ಪ ನಾನು ರೆಸಾರ್ಟ್‌ಗೆ ಹೋಗಲು ಹೆತ್ತವರ ಪರ್ಮಿಷನ್ ಬೇಕು. ಅದಕ್ಕಾಗಿ ನೀನು ನನಗೆ ಪರ್ಮಿಷನ್ ಕೊಡಬೇಕು. ಹಾಗೆಯೇ ನನಗೆ ಹಣವನ್ನು ಕೊಡು ಎಂದು ತನ್ವಿ ಹೇಳುತ್ತಾಳೆ. ಆಕೆ ಹೇಳಿದ್ದನ್ನು ಕೇಳಿ ತಾಂಡವ್ ಪರ್ಮಿಷನ್ ಲೆಟರ್ ಯಾಕೆ ಎಂದು ಕೇಳುತ್ತಾನೆ. ಅದಕ್ಕೆ ತನ್ವಿ ನಾನು ಗೆಳೆಯರ ಜೊತೆ ಒಂದು ದಿನ ರೆಸಾರ್ಟ್‌ಗೆ ಹೋಗಿದ್ದು ಬರೋಣ ಎಂದುಕೊಂಡಿದ್ದೇನೆ. ಅದಕ್ಕೆ ಪೇರೆಂಟ್ಸ್ ಪರ್ಮಿಷನ್ ಲೆಟರ್ ಬೇಕಂತೆ. ದಯವಿಟ್ಟು ನೀವು ಈ ಪರ್ಮಿಷನ್ ಲೆಟರ್‌ಗೆ ಸಹಿಯನ್ನು ಹಾಕಬೇಕು ಎಂದು ತನ್ವಿ ತಂದೆಯ ಕೇಳಿಕೊಳ್ಳುತ್ತಾಳೆ. ಇದಕ್ಕೆಲ್ಲ ಅಮ್ಮ ಒಪ್ಪಲಿಲ್ಲ. ಅಜ್ಜಿ ಅಂತೂ ನನ್ನನ್ನ ಬೈದೇ ಬಿಟ್ಟಳು. ಅದಕ್ಕಾಗಿ ಅವರದ್ದು ಯಾರ ಸಹಿಯು ಬೇಡ ಎಂದುಕೊಂಡು ನಿನ್ನ ಸಹಿ ಮಾತ್ರ ಸಾಕು ಎಂದು ನಿನ್ನ ಜೊತೆ ಹೇಳುತ್ತಿದ್ದೇನೆ ಎಂದು ಹೇಳುತ್ತಾಳೆ.
ಮಗಳ ಮಾತಿಗೆ ಕೋಪಗೊಂಡ ತಾಂಡವ್
ಆಕೆಯ ಮಾತು ಕೇಳಿದ ತಾಂಡವ್ ಕೋಪ ಕೊಳ್ಳುತ್ತಾನೆ. ಹಾಗೆಯೇ ಮಗಳಿಗೆ ಬುದ್ಧಿವಾದವನ್ನು ಹೇಳುತ್ತಾನೆ. ನಿನ್ನ ತಾಯಿ ಹಾಗೂ ಅಜ್ಜಿ ಹೇಳಿದ ಹಾಗೆಯೇ ನಾನು ಕೂಡ ನೀನು ಈ ರೆಸಾರ್ಟ್‌ಗೆ ಹೋಗಲು ಒಪ್ಪಿಗೆಯನ್ನು ನೀಡುವುದಿಲ್ಲ ಎಂದು ಖಡಾ ಖಂಡಿವಾಗಿ ತಾಂಡವ್ ಹೇಳುತ್ತಾನೆ. ತಂದೆಯ ಮಾತನ್ನು ಕೇಳಿದ ತನ್ವಿಗೆ ಶಾಕ್ ಆಗುತ್ತೆ. ಆಕೆಗೆ ಏನು ಮಾತನಾಡಬೇಕೆಂದು ಅರ್ಥ ಆಗದೆ ಸುಮ್ಮನೆ ಇರುತ್ತಾಳೆ. ಹಾಗೆಯೇ ತನ್ನ ತಂದೆಗೆ ಎದುರು ಮಾತಾಡದೆ ಸುಮ್ಮನಿರುತ್ತಾಳೆ.
ಮಗಳ ಮಾತಿಗೆ ಮರುಳಾಗದ ತಾಂಡವ್
ತಾಂಡವ್ ಮಾತ್ರ ತನ್ವಿ ಮಾತಿಗೆ ಮರುಳಾಗದೆ ಬಹಳ ಬುದ್ಧಿವಂತಿಕೆಯಿಂದ ಮಗಳಿಗೆ ಉತ್ತರವನ್ನು ನೀಡಿ ಆಕೆಯನ್ನು ಮನೆಗೆ ಕಳುಹಿಸುತ್ತಾನೆ. ಭಾಗ್ಯ ಮಾತ್ರ ತನ್ನ ಹೊಸ ಬ್ಯುಸಿನೆಸ್ ಕೈ ಹಿಡಿಯುತ್ತೆ ಎನ್ನುವ ಕಾತುರದಲ್ಲಿ ಇರುತ್ತಾಳೆ. ಆದರೆ ಮನೆಗೆ ಯಾವುದೇ ಕರೆಗಳು ಬಾರದೆ ಇರುವುದನ್ನು ಕಂಡ ಭಾಗ್ಯ ರಸ್ತೆ ಬದಿಯಲ್ಲಿ ನಿಂತು ಬನ್ನಿ ಬನ್ನಿ ಮನೆಯಲ್ಲಿ ಊಟ ಬಡಿಸಲಾಗುತ್ತೆ ಎಂದು ಹೇಳುತ್ತಾಳೆ. ಭಾಗ್ಯ ಮಾತಿಗೆ ಎಲ್ಲರೂ ಕೂಡ ಓಡೋಡಿ ಬಂದು ಊಟ ಮಾಡುತ್ತಾರೆ. ಭಾಗ್ಯ ಕೈ ಅಡುಗೆ ಸವಿದು ಎಲ್ಲರೂ ಮೆಚ್ಚುಗೆ ಸೂಚಿಸುತ್ತಾರೆ. ಭಾಗ್ಯಗೆ ಮನೆ ಮಂದಿ ಎಲ್ಲರೂ ಸಹಾಯವನ್ನು ಮಾಡುತ್ತಾರೆ.


Click it and Unblock the Notifications











