Bhagyalakshmi Serial:ಬೀದಿಯಲ್ಲಿ ಮನೆಯೂಟ ಮಾರಲು ನಿಂತ ಭಾಗ್ಯಗೆ ಕನ್ನಿಕಾ ಕಿಂಡಲ್; ಕ್ಯಾರೆ ಅನ್ನಲಿಲ್ಲ
ಭಾಗ್ಯ ಕೈ ತುತ್ತು ಎನ್ನುವ ಕಾನ್ಸೆಪ್ಟ್ ಮೂಲಕ ಎಲ್ಲರ ಮನವನ್ನು ಗೆಲ್ಲಲು ತಯಾರಾಗಿದ್ದಾಳೆ. ಭಾಗ್ಯ ಎಲ್ಲರಿಗೂ ಮನೆಯ ಊಟವನ್ನು ಕೊಡುವ ನಿಟ್ಟಿನಲ್ಲಿ ಕೈ ತುತ್ತು ಎನ್ನುವ ಶೀರ್ಷಿಕೆಯನ್ನು ತಾನು ನಡೆಸುವ ಬ್ಯುಸಿನೆಸ್‌ಗೆ ಕೊಟ್ಟಿದ್ದಾಳೆ. ಮನೆಯಿಂದಲೇ ಈ ಬ್ಯುಸಿನೆಸ್ ಅನ್ನು ಶುರು ಮಾಡಬೇಕೆಂದು ಅಂದುಕೊಂಡಿರುತ್ತಾಳೆ. ಆದರೆ ಯಾರು ಕೂಡ ಕರೆ ಮಾಡದ ಕಾರಣ. ಹೊರಗಡೆ ತಾನೆ ಹೋಗಿ ಮಾಡಿದ ಊಟವನ್ನೆಲ್ಲ ಸೇಲ್ ಮಾಡೋಣ ಎಂದು ಕೊಂಡಿರುತ್ತಾಳೆ. ಭಾಗ್ಯ ಮಾಡಿದ ಊಟವನ್ನೆಲ್ಲ ಬಾಯ್ಸ್ ಹಾಸ್ಟೆಲ್ ಬಳಿ ಹೋಗುತ್ತಾಳೆ. ಭಾಗ್ಯಗಳನ್ನು ಹಿಂಬಾಲಿಸಿಕೊಂಡು ಪೂಜಾ ಹಾಗೂ ಭಾಗ್ಯ ಗೆಳತಿ ಸುಂದರಿ ಕೂಡ ಹೋಗುತ್ತಾರೆ.
ಬಾಯ್ಸ್ ಹಾಸ್ಟೆಲ್ ಬಳಿಯಿಂದ ಭಾಗ್ಯ ಬಹಳ ಜೋರಾಗಿ ಮನೆ ಊಟ ಸಿದ್ದವಾಗಿದೆ ಬನ್ನಿ ಎಂದು ಕರೆಯುತ್ತಿರುತ್ತಾಳೆ. ಭಾಗ್ಯ ಮಾಡುತ್ತಿರುವ ಕೆಲಸವನ್ನು ನೋಡಿ ಪೂಜಾಗೆ ಶಾಕ್ ಆಗುತ್ತದೆ. ಇದೇನಪ್ಪಾ ಅಕ್ಕ ಇಂಥ ಕೆಲಸ ಮಾಡುತ್ತಿದ್ದಾಳೆ ಎಂದು ಯೋಚನೆ ಮಾಡುತ್ತಾಳೆ. ಕೂಡಲೇ ಅಕ್ಕನ ಜೊತೆ ಇದೇನು ಅಕ್ಕ ನೀನು ಮಾಡುತ್ತಿದ್ದೀಯಾ ಎಂದಾಗ ನಾವು ಮನೆಯಲ್ಲಿ ಮನೆ ಊಟ ತಯಾರಿಸಿದ್ದೆವು. ಆದರೆ ಯಾರೂ ಬರಲಿಲ್ಲ. ಯಾರು ಕರೆ ಕೂಡ ಮಾಡಲಿಲ್ಲ. ಆದಕಾರಣ ಜನರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಬ್ಯುಸಿನೆಸ್ ಮಾಡುವುದು ಸರಿ ಎನ್ನಿಸಿ ಇಲ್ಲಿಗೆ ಬಂದೆ ಎಂದು ಹೇಳುತ್ತಾಳೆ.

ಭಾಗ್ಯ ಮನೆ ಊಟ ಎಂದು ಹೇಳಿದಾಗ ಅಲ್ಲಿದ್ದ ಕೆಲವು ಹುಡುಗರು ಊಟವನ್ನು ಸವಿಯಲು ಬರುತ್ತಾರೆ. ಕೂಡಲೇ ಅವರಿಗೆ ಬಹಳಷ್ಟು ಖುಷಿಯಾಗುತ್ತದೆ. ಅವರಿಗೆ ಮನೆಯ ಊಟವನ್ನು ಸವಿದ ಅನುಭವ ಆಗುತ್ತದೆ. ಆದ ಕಾರಣ ಅವರ ಫ್ರೆಂಡ್ ಹಾಗೂ ಇತರರಿಗೆ ಹೇಳಲು ಶುರು ಮಾಡುತ್ತಾರೆ. ಭಾಗ್ಯ ಎಲ್ಲರಿಗೂ ಫ್ರೀ ಊಟವನ್ನು ಕೊಡುತ್ತಾಳೆ. ಇದರಿಂದ ಪೂಜಾಗೆ ಶಾಕ್ ಆಗುತ್ತದೆ. ಇದೇನಕ್ಕ ಮಾಡುತ್ತಿದ್ದೀಯಾ.. ಫ್ರೀ ಊಟ ಕೊಟ್ಟರೆ, ಈ ದಿನ ಮಾಡಿದ ಎಲ್ಲಾ ಕೆಲಸ ವ್ಯರ್ಥ ಆಗುವುದಿಲ್ಲವೇ ಎಂದಾಗ ಭಾಗ್ಯ ಹೇಳುತ್ತಾಳೆ. ನಾವು ಮಾಡಿದ ಊಟವನ್ನು ಅವರು ಸವಿದರೆ ಖಂಡಿತವಾಗಿಯೂ ಅವರೆಲ್ಲರೂ ನಾಳೆಯೂ ನಾನು ಮಾಡಿದ ಊಟವನ್ನು ತೆಗೆದುಕೊಳ್ಳುತ್ತಾರೆ.
ಭಾಗ್ಯ ಕಾಟ ಕೊಡಲು ಕನ್ನಿಕಾ ಹೊಂಚು
ಇವತ್ತು ಭಾಗ್ಯ ಫ್ರೀಯಾಗಿ ಎಲ್ಲರಿಗೂ ಊಟವನ್ನು ಕೊಟ್ಟಿದ್ದಕ್ಕೆ ಖುಷಿಯಾಗುತ್ತಾರೆ. ಇತ್ತ ಭಾಗ್ಯಗೆ ಕಾಟ ಕೊಡಲೆಂದು ಕನ್ನಿಕಾ ಹೊಂಚು ಹಾಕುತ್ತಿರುತ್ತಾಳೆ. ಕನ್ನಿಕಾಗೆ ಭಾಗ್ಯಾಳನ್ನು ಕಂಡರೆ ಆಗುವುದಿಲ್ಲ. ಆಕೆಗೆ ಅಷ್ಟೊಂದು ಸಿಟ್ಟು. ಇದೀಗ ಭಾಗ್ಯ ರಸ್ತೆಯಲ್ಲಿ ಊಟ ಕೊಡುತ್ತಿರುವುದನ್ನು ನೋಡಿದ ಕನ್ನಿಕಾ ತನ್ನ ಡ್ರೈವರ್‌ನನ್ನು ಕಳುಹಿಸಿ ತನಗೆ ಊಟ ತರುವಂತೆ ಹೇಳುತ್ತಾಳೆ. ಕನ್ನಿಕಾ ಹೇಳಿದಂತೆ ಡ್ರೈವರ್ ಭಾಗ್ಯ ಬಳಿಗೆ ಹೋಗಿ ಮೇಡಂ ಊಟ ತರಲು ಹೇಳಿದರು. ಒಂದು ಪ್ಲೇಟ್ ಕೊಡಿ ಎಂದಾಗ ಭಾಗ್ಯ ಖುಷಿಯಿಂದ ನಿಮ್ಮ ಮೇಡಂಗೆ ನಾನೇ ಊಟ ಕೊಡುತ್ತೇನೆ ಎಂದಾಗ ಕನ್ನಿಕಾ ಕಾರಿನ ಗ್ಲಾಸ್ ಕೆಳಗಿಸುತ್ತಾಳೆ.
ಭಾಗ್ಯಳನ್ನು ಮೂದಲಿಸಿದ ಕನ್ನಿಕಾ
ಕನ್ನಿಕಾಳನ್ನು ನೋಡಿದ ಭಾಗ್ಯ ಏನು ಮಾತನಾಡದೆ ಆಕೆಯತ್ತ ನೋಡುತ್ತಾಳೆ. ಕನ್ನಿಕಾ ನಗುತ್ತಾ ಏನಿದೆಲ್ಲ ಭಾಗ್ಯ ರಸ್ತೆಯಲ್ಲಿ ಊಟ ಮಾರಾಟ ಮಾಡುತ್ತಿದ್ದಿಯಾ? ಯಾಕೆ ಭಾಗ್ಯ ಏನಾಯಿತು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿರುತ್ತಾಳೆ. ಆದರೆ ಭಾಗ್ಯ ಮಾತ್ರ ಕನ್ನಿಕಾ ಮಾತಿಗೆ ಸೊಪ್ಪು ಹಾಕುವುದಿಲ್ಲ. ಆಕೆಗೆ ಬಹಳ ಸಿಟ್ಟು ಬರುತ್ತದೆ. ಅದೇ ಕಾರಣಕ್ಕೆ ಭಾಗ್ಯ ಏನು ಮಾತನಾಡದೆ ಸುಮ್ಮನಿರುತ್ತಾಳೆ. ಭಾಗ್ಯಗೆ ಬಹಳಷ್ಟು ಕೋಪ ಬಂದರೂ ಸುಮ್ಮನೆ ಇರುತ್ತಾಳೆ. ಕನ್ನಿಕಾ ಮಾತು ಮುಂದುವರೆಸುತ್ತಾಳೆ. ಭಾಗ್ಯ ನೀನು ಯಾವಾಗ ನನ್ನ ವಿರುದ್ಧ ನಿಂತ್ಯೋ ಆವತ್ತಿನಿಂದ ನೀನು ಸಂಕಷ್ಟಗಳನ್ನು ಎದುರಿಸಲೇಬೇಕಾಗಿದೆ ಎಂದಾಗ ಭಾಗ್ಯ ನನಗೆ ಗೊತ್ತಿದೆ. ಆದರೆ ನಾನು ಯಾವತ್ತೂ ಯಾರ ತಲೆ ಒಡೆದು ಹಣ ಸಂಪಾದಿಸಲ್ಲ. ನಾನು ನಿಯತ್ತಾಗಿಯೇ ದುಡಿದು ಹಣ ಮಾಡುತ್ತಿದ್ದೇನೆ. ಈ ಕೆಲಸದಲ್ಲಿ ನನಗೆ ನಾಚಿಕೆ ಏನಿಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಕನ್ನಿಕಾಗೆ ಭಾಗ್ಯ ಮಾತು ಈಟಿಯಲ್ಲಿ ತಿವಿದ ಹಾಗಾಗುತ್ತದೆ. ಭಾಗ್ಯ ಮಾತ್ರ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ, ಆನೆ ನಡೆದದ್ದೇ ದಾರಿ ಎನ್ನುವ ಹಾಗೆಯೇ ಇದ್ದಾಳೆ. ಆದರೆ ಆಕೆಯ ಕಾಲೆಳೆಯುವವರು ಬಹಳ ಮಂದಿ ಇದ್ದಾರೆ. ಭಾಗ್ಯ ಮಾಡಿದ ಕೆಲಸಕ್ಕೆ ಆಕೆಯ ಅತ್ತೆ ಖಂಡಿತವಾಗಿಯೂ ಸಪೋರ್ಟ್ ಮಾಡಿಯೇ ಮಾಡುತ್ತಾರೆ. ಗಂಡನಿಂದ ದೂರವಾದ ಭಾಗ್ಯ ಮಾತ್ರ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರೂ ಜೀವನದುದ್ದಕ್ಕೂ ಖುಷಿಯಾಗಿದ್ದಾಳೆ.


Click it and Unblock the Notifications











