Bhagyalakshmi Serial: ತನ್ವಿ ಮುಂದಿಟ್ಟು ಆಟ ಶುರು ಮಾಡಿದ ಶ್ರೇಷ್ಠಾ? ಇನ್ನೇನು ನಡೆಯುತ್ತೋ?

By ಪೂರ್ವ

ಭಾಗ್ಯ ತಾನು ಬೆಳೆಯಬೇಕೆಂದು ಸಿಕ್ಕಾಪಟ್ಟೆ ಕಷ್ಟ ಪಟ್ಟು ಕೆಲಸ ಮಾಡುತ್ತಿರಬೇಕಾದರೆ ಆಕೆಗೆ ನೂರಾರು ತೊಂದರೆಗಳು ಎದುರಾಗುತ್ತಿವೆ. ಏನಾದರೂ ಮಾಡಿ ತನ್ನ ಬದುಕನ್ನು ಕಟ್ಟಿಕೊಳ್ಳಬೇಕೆಂದು ಭಾಗ್ಯ ಹರಸಾಹಸ ಮಾಡುತ್ತಿರುತ್ತಾಳೆ. ಆದರೆ ಆಕೆಗೆ ಸಹಾಯ ಮಾಡುವವರು ಯಾರು ಇಲ್ಲ. ಆಕೆಗೆ ಎಲ್ಲರೂ ಕೂಡ ಸಲಹೆಯನ್ನು ನೀಡುತ್ತಾರೆ ಹೊರತು, ಸಹಾಯ ಮಾಡುವುದಕ್ಕೆ ಯಾರೂ ಇಲ್ಲ. ಹೀಗಾಗಿ ಭಾಗ್ಯ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಆದರೂ ಎಲ್ಲರ ಮಾತುಗಳನ್ನು ಕೇಳಿಸಿಕೊಂಡು ಕೆಲವರ ಜೊತೆ ಅನ್ನಿಸಿಕೊಂಡು, ಜೀವನದಲ್ಲಿ ಒಂಟಿಯಾಗಿಯೇ ಮುನ್ನುಗ್ಗುತ್ತಿದ್ದಾಳೆ.

ಇತ್ತ ಖಾಲಿ ಕೈಯಲ್ಲಿ ಮನೆಗೆ ಬಂದ ಭಾಗ್ಯಗೆ ಸುನಂದಾ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಯಾಕೆ ಹೀಗೆ ಮಾಡಿದೆ ಭಾಗ್ಯ. ನೀನು ಇವತ್ತು ಮಾಡಿದ್ದು ನನಗೆ ಸ್ವಲ್ಪವೂ ಸರಿ ಕಾಣಿಸಲಿಲ್ಲ. ನೀನು ಈ ರೀತಿ ಮಾಡಿದ್ದು ತಪ್ಪು. ಮನೆಯಲ್ಲಿ ಇಷ್ಟೊಂದು ಕಷ್ಟಗಳು ಇರಬೇಕಾದರೆ, ನೀನು ಅಲ್ಲಿ ಹೋಗಿ ಫ್ರೀ ಆಗಿ ಊಟ ಕೊಟ್ಟು ಬಂದಿದ್ದೀಯ. ಇದು ನಿನಗೆ ಸರಿ ಕಾಣಿಸುತ್ತಿದೆಯಾ? ಎಂದು ಹೇಳಿದಾಗ ಭಾಗ್ಯ ಅದರಲ್ಲೂ ಒಂದು ಲಾಜಿಕ್ ಇದೆ ಎಂದು ಮಾತನಾಡಲು ಪ್ರಯತ್ನ ಪಡುತ್ತಾಳೆ. ಆದರೆ ಇದನ್ನು ಕೇಳಿದ ಕುಸುಮಾಗೆ ಸುನಂದಾ ಮಾತು ಸತ್ಯ ಎಂದು ಅನಿಸುತ್ತದೆ.

Bhagyalakshmi Kannada serial March 28th full episode highlights

ಭಾಗ್ಯ ನೀನು ಮಾಡಿದ್ದು ಇವತ್ತು ನನಗೂ ಕೂಡ ಸರಿ ಕಾಣಿಸಲಿಲ್ಲ. ಇವತ್ತು ನೀನು ತಪ್ಪು ಮಾಡಿಬಿಟ್ಟೆ ಎಂದು ನನಗೆ ಅನಿಸಿತು. ನೀನು ಹಣವನ್ನು ತೆಗೆದುಕೊಂಡು ಊಟ ಕೊಟ್ಟಿದ್ದರೆ. ಇವತ್ತು ಹೀಗೆಲ್ಲ ಆಗುತ್ತಿರಲಿಲ್ಲ. ನನಗೆ ಅದ್ಯಾಕೋ ಸರಿ ಕಾಣಲಿಲ್ಲ ಎಂದು ಹೇಳುತ್ತಾರೆ. ಆಗ ಭಾಗ್ಯ ಮಾತ್ರ ಸುಮ್ಮನಿರುತ್ತಾಳೆ. ಅತ್ತೆಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಾಳೆ. ಆದರೆ ಹಾಗೆಯೇ ತಾನು ಏನು ಮಾತನಾಡದೆ ತನ್ನ ಕೆಲಸದ ಗುರಿಯತ್ತ ಮುಂದಿನ ಹೆಜ್ಜೆ ಇರುತ್ತಾಳೆ . ಕುಸುಮಾಗೆ ತನ್ನ ಸೊಸೆ ಭಾಗ್ಯ ಖಂಡಿತವಾಗಿಯೂ ಒಳ್ಳೆಯವಳು. ಆಕೆ ಯಾವತ್ತೂ ಕೂಡ ಯಾರಿಗೂ ಕೆಟ್ಟದು ಬಯಸಲ್ಲ ಅನ್ನೋದು ಗೊತ್ತಿದೆ.

ಶ್ರೇಷ್ಠಾ ಜೊತೆ ಮಾತನಾಡಲು ಮುಂದಾದ ತನ್ವಿ

ಇತ್ತ ಪೂಜಾ ಮಹಡಿ ಮೇಲೆ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಾಳೆ. ಆಗ ತನ್ವಿ ಮೆತ್ತಗೆ ಪೂಜಾ ಬಳಿ ಮಾತನಾಡಲು ಯತ್ನಿಸುತ್ತಾಳೆ. ತನ್ವಿ ಶ್ರೇಷ್ಠಾ ಬಳಿ ಮಾತನಾಡಬೇಕೆಂದು ಮಹಡಿ ಮೇಲೆ ಬರುತ್ತಾಳೆ. ಕೊನೆಗೆ ಪೂಜಾ ಬಳಿ ಏನೋ ಒಂದು ನೆಪ ಹೇಳಿ ಅಲ್ಲಿಂದ ಮನೆಯೊಳಗೆ ಹೋಗುವಂತೆ ಮಾಡುತ್ತಾಳೆ. ಇನ್ನು ತನ್ವಿ ಮೆತ್ತಗೆ ಶ್ರೇಷ್ಠಾಗೆ ಕರೆ ಮಾಡಿ ರೆಸಾರ್ಟ್ ಬಗ್ಗೆ ಹೇಳುತ್ತಾಳೆ. ನನಗೆ ಯಾರೂ ಕೂಡ ಸಹಾಯ ಮಾಡುತ್ತಿಲ್ಲ. ನೀವಾದರೂ ಸಹಾಯ ಮಾಡಿದರೆ ನನಗೆ ಬಹಳ ಖುಷಿ ಆಗುತ್ತದೆ ಎಂದು ಬೇಡಿಕೊಳ್ಳುತ್ತಾಳೆ.

ರೆಸಾರ್ಟ್‌ಗೆ ಹೋಗಲು ಪರ್ಮಿಷನ್ ಕೊಟ್ಟ ಶ್ರೇಷ್ಠಾ

ದಯವಿಟ್ಟು ನನಗೆ ಈ ವಿಚಾರದಲ್ಲಿ ಸಹಾಯ ಮಾಡಿ ಎಂದು ತನ್ವಿ ಅಂಗಲಾಚುತ್ತಾಳೆ. ನನಗೆ ಯಾರು ಕೂಡ ರೆಸಾರ್ಟ್‌ಗೆ ಹೋಗಲು ಬಿಡುತ್ತಿಲ್ಲ ಎಂದು ನೊಂದುಕೊಳ್ಳುತ್ತಾಳೆ. ಇತ್ತ ಶ್ರೇಷ್ಠಾ ನಿನ್ನ ತಂದೆ ಈ ವಿಚಾರ ನನ್ನ ಬಳಿ ಹೇಳಿ ಗರಂ ಆಗಿದ್ದಾರೆ ಎಂದು ತನ್ವಿ ಬಳಿ ಹೇಳುತ್ತಾಳೆ. ತನ್ವಿಗೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಮೆತ್ತಗೆ ಶ್ರೇಷ್ಠಾ ತನ್ವಿ ಜೊತೆ ಮೀಟ್ ಆಗುವಂತೆ ಹೇಳುತ್ತಾಳೆ. ತನ್ವಿ ಜೊತೆ ಶ್ರೇಷ್ಠಾ ಮಾತನಾಡಲು ಶುರು ಮಾಡುತ್ತಾಳೆ. ಶ್ರೇಷ್ಠಾ ನಯವಾಗಿ ಮಾತನಾಡಿ ತನ್ವಿಯಿಂದ ಹೇಗಾದರೂ ಮಾಡಿ ಭಾಗ್ಯಳನ್ನು ದೂರ ಮಾಡ್ಬೇಕು ಎಂದುಕೊಂಡಿರುತ್ತಾಳೆ. ರೆಸಾರ್ಸ್‌ಗೆ ಹೋಗು ತನ್ವಿ. ನಾನು ನಿನಗೆ ಹಣ ನೀಡುತ್ತೇನೆ ಎಂದು ಹೇಳುತ್ತಾಳೆ. ಶ್ರೇಷ್ಠಾ ಮಾತು ಕೇಳಿದ ತನ್ವಿಗೆ ಖುಷಿ ಆಗುತ್ತೆ.

ತನ್ವಿ ಖುಷಿಗೆ ಪಾರವೇ ಇಲ್ಲ

ರೆಸಾರ್ಟ್‌ಗೆ ಹೋಗಲು ಪರ್ಮಿಷನ್ ಕೊಟ್ಟಿರುವುದು ತನ್ವಿಗೆ ಬಹಳ ಖುಷಿ ಆಗುತ್ತೆ. ತನ್ವಿ ಮಾತಿಗೆ ಶ್ರೇಷ್ಠಾ ಖುಷಿ ಆದವರ ಹಾಗೆ ನಟನೆ ಮಾಡುತ್ತಾಳೆ. ಶ್ರೇಷ್ಠಾಗೆ ಭಾಗ್ಯಳಿಂದ ಎಲ್ಲರನ್ನೂ ದೂರ ಮಾಡಬೇಕು. ತನ್ವಿಗೆ ಶ್ರೇಷ್ಠಾ ಎಂದರೆ ಮೊದಲೇ ಆಗುವುದಿಲ್ಲ. ಶ್ರೇಷ್ಠಾಳನ್ನು ಕಂಡರೆ ಮೊದಲೇ ಕಿರಿ ಕಿರಿ. ಆದರೆ ಇದೀಗ ರೆಸಾರ್ಟ್‌ಗೆ ಶ್ರೇಷ್ಠಾ ಒಪ್ಪಿಗೆ ನೀಡಿದ್ದಾಳೆ ಎಂದು ತಿಳಿದು ತನ್ವಿ ಖುಷಿ ಪಟ್ಟಿದ್ದಾಳೆ. ಈ ವಿಚಾರ ಭಾಗ್ಯಗೆ ತಿಳಿದರೆ ಖಂಡಿತವಾಗಿಯೂ ತನ್ವಿ ಚಳಿ ಜ್ವರ ಬಿಡಿಸುತ್ತಾಳೆ.

More from Filmibeat

English summary
Bhagyalakshmi Kannada serial March 28th full episode highlights:
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X