Bhagyalakshmi Serial:ಭಾಗ್ಯಾಗೆ ಮಹಾ ಮೋಸ ಮಾಡಿದ ತಾಂಡವ; ಅತ್ತೆ- ಮಾವನಿಗೆ ಸೊಸೆ ಕ್ಲಾಸ್
ಭಾಗ್ಯಾಗೆ ತನ್ನ ಗಂಡ ಮಾಡಿದ ಮೋಸ ಮನಸ್ಸಿಗೆ ಅದೆಷ್ಟು ನೋವು ನೀಡಿತ್ತು ಅನ್ನೋದು ವರ್ಣಿಸಲಾಗದು. ಹದಿನೆಂಟು ವರುಷ ಸಂಸಾರ ಮಾಡಿದ ಗಂಡನನ್ನು ಬೇರೆಯವಳಿಗೆ ಬಿಟ್ಟು ಕೊಡುವ ನೋವು ಆ ಹೆಣ್ಣಿಗೆ ಮಾತ್ರ ಗೊತ್ತು. ಭಾಗ್ಯಾಗೆ ತನ್ನ ಕುಟುಂಬ ಎಂದರೆ ಜೀವ. ತನ್ನ ಫ್ಯಾಮಿಲಿಗೋಸ್ಕರ ಏನು ತ್ಯಾಗ ಮಾಡುವುದಕ್ಕೂ ಭಾಗ್ಯಾ ತಯಾರಾಗಿ ಇರುತ್ತಾಳೆ. ಆದರೆ ಭಾಗ್ಯಾಳನ್ನು ಈ ಮನೆಯಲ್ಲಿ ಉಳಿಸಿಕೊಳ್ಳಬೇಕು ಎಂದು ಭಾಗ್ಯಾ ಅತ್ತೆ ಮಾವ ಯೋಚನೆ ಮಾಡುತ್ತಿರುತ್ತಾರೆ. ತಾಂಡವ ಮಾಡುತ್ತಿರುವ ಕೆಟ್ಟ ಕೆಲಸ ಈ ಮೊದಲೇ ಕುಸುಮಾಗೆ ತಿಳಿದಿರುತ್ತದೆ.
"ಈ ವಿಚಾರ ಭಾಗ್ಯಾ ತನಕ ಹೋಗಬಾರದು. ನಾನು ನಿನಗೆ ಹೇಗೆ ಬೇಕೋ ಹಾಗೆ ಆಕೆಯ ಆಲೋಚನೆಯನ್ನು ಬದಲಿಸುತ್ತೇನೆ. ಭಾಗ್ಯಾ ಅವಳ ಕಾಲ ಮೇಲೆ ನಿಲ್ಲುವ ಹಾಗೆ ಮಾಡುತ್ತೇನೆ. ಆಗಲಾದರೂ ಅವಳನ್ನು ನೀನು ಒಪ್ಪಿಕೊಳ್ಳಬೇಕು" ಎಂದು ಮಗನಿಗೆ ಕುಸುಮಾ ಹೇಳಿದ್ದರು. ಆದರೆ, ಪಾಪ ಕುಸುಮಾಗೆ ತಾಂಡವನ ಅಸಲಿ ಮುಖ ತಿಳಿದಿರಲಿಲ್ಲ. ಮಗ ಚೆನ್ನಾಗಿ ಇರಲಿ ಎನ್ನುವ ಕಾರಣಕ್ಕೆ ಕುಸುಮಾ ಏನೆಲ್ಲ ಪ್ರಯತ್ನ ಮಾಡಿದರೂ ತಾಂಡವನ ಮನಸ್ಸಿನಲ್ಲಿ ಶ್ರೇಷ್ಠಾ ಮಾತ್ರ ಮರೆಯಾಗಿರುವುದಿಲ್ಲ. ಆತನಿಗೆ ಅವನ ಮಕ್ಕಳು ಕೂಡ ಕಣ್ಣಿಗೆ ಬೀಳುವುದಿಲ್ಲ. ತಾಂಡವ್‌ಗೆ ಮನೆಯವರು ಯಾರು ಬೇಡ. ಶ್ರೇಷ್ಠಾ ಒಬ್ಬಳೇ ತನ್ನ ಜೊತೆ ಇರುವ ಹಾಗೆ ಆಗಲಿ ಎನ್ನುವ ಯೋಚನೆ.

ಹೆತ್ತ ಅಮ್ಮನಿಗೆ ಮಗನ ಬಗ್ಗೆ ಏನೂ ತಿಳಿದಿಲ್ಲ. ಆದರೆ, ಭಾಗ್ಯಾಗೆ ತಾಂಡವನ ನಿಜ ರೂಪ ಆಕೆಯ ಕಣ್ಣ ಮುಂದೆಯೇ ಬಂದು ನಿಂತಿದೆ. ಅದಕ್ಕಾಗಿ ಮದುವೆಯ ಆನಿವರ್ಸರಿ ದಿನವೇ ಮನೆಯಲ್ಲಿ ಮರು ಮದುವೆ ಪ್ಲಾನ್ ಮಾಡಿಕೊಂಡಿರುತ್ತಾಳೆ. ಇನ್ನೇನು ತಾಳಿ ಕಟ್ಟ ಬೇಕು ಎನ್ನುವಾಗ ತಾಂಡವ ತಾಳಿಯನ್ನು ತೆಗೆದು ಬೇಸಾಕುತ್ತಾನೆ. ಭಾಗ್ಯಾಗೆ ಆಶ್ಚರ್ಯ ಆಗುವುದಿಲ್ಲ. ಆಕೆ ಅದೆಲ್ಲವನ್ನೂ ನಿರೀಕ್ಷೆ ಮಾಡಿರುತ್ತಾಳೆ. ಕೊನೆಗೆ ಭಾಗ್ಯಾ ತನ್ನ ಅತ್ತೆ ಮಾವನ ಬಳಿ ಬಂದು ನಿಮಗೆಲ್ಲ ನಿಜ ವಿಚಾರ ತಿಳಿದಿದ್ದರೂ ನನ್ನ ಬಳಿ ಯಾಕೆ ಏನೂ ಹೇಳಲಿಲ್ಲ? ಎಂದು ಪ್ರಶ್ನೆ ಮಾಡಿದಾಗ, ಪಾಪ ಕುಸುಮಾ ಹಾಗೂ ಆಕೆಯ ಗಂಡನಿಗೆ ಅಳುವುದು ಬಿಟ್ಟರೆ ಮತ್ತೇನು ಇರಲಿಲ್ಲ.
ಅದೆಲ್ಲ ನಡೆದ ಬಳಿಕ ಭಾಗ್ಯಾ "ಮಾವ ನಾನು ನಿಮ್ಮನ್ನು ಯಾವತ್ತೂ ಮಾವ ಅಂದುಕೊಂಡಿಲ್ಲ. ಅಪ್ಪ ಎಂದೇ ಭಾವಿಸಿದ್ದೆ. ಆದರೆ ನೀವೇ ನನ್ನಿಂದ ಈ ವಿಚಾರ ಮುಚ್ಚಿಟ್ಟರೆ ಹೇಗೆ? ನಾನು ಇನ್ಯಾರನ್ನು ನಂಬಲಿ?" ಎಂದು ಬಹಳ ಬೇಸರದಿಂದ ಹೇಳುತ್ತಾಳೆ. ಕೊನೆಗೆ ಕುಸುಮಾ "ನೀನು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಿಯಾ ಎನ್ನುವ ಭಯದಿಂದ ಹೀಗೆ ಮಾಡಿದೆ" ಎಂದಾಗ ಭಾಗ್ಯಾಗೆ ದುಃಖ ಆಗುತ್ತೆ.

ಹದಿನೆಂಟು ವರುಷ ಸಂಸಾರ ಮಾಡಿದ ಹೆಂಡತಿ ಬೇಡ. ಯಾರೋ ಮೂರು ವರುಷದಿಂದ ಪರಿಚಯವಾಗಿರುವ ಹುಡುಗಿ ಅವರಿಗೆ ಬೇಕಾಗಿದೆ. ನೀವು ಅದೆಷ್ಟೇ ಹೇಳಿದರೂ ಕೂಡ ಅವರು ಅದ್ಯಾವುದನ್ನೂ ಕೇಳುವುದು ಇಲ್ಲ. ಅವರಿಗೆ ನಮಗೆಲ್ಲರಿಗಿಂತ ಶ್ರೇಷ್ಠ ಬೇಕು ಎಂದಾಗ ತಾಂಡವ್ ಭಾಗ್ಯಾಗೆ ಈಗಲಾದರೂ ಗೊತ್ತಾಯಿತಲ್ಲ. ಭಾಗ್ಯ ಮೇಲೆ ನನಗೆ ಯಾವುದೇ ಪ್ರೀತಿ ಇಲ್ಲ ಎನ್ನುವುದು ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ. ಆದರೆ, ಪಾಪ ಕುಸುಮಾಗೆ ತನ್ನ ಸೊಸೆಯದ್ದೇ ಚಿಂತೆ. ಇಷ್ಟು ದಿನ ನನ್ನನ್ನು ಮಗಳಾಗೆ ನೋಡಿಕೊಂಡಳು. ಆದರೆ ಇದೀಗ ಆಕೆಗೆ ಅನ್ಯಾಯ ಆಗುತ್ತಿರುವುದನ್ನು ಹೇಗೆ ಸಹಿಸಲಿ ಎನ್ನುವುದು ಕುಸುಮಾ ಗೋಳು.


Click it and Unblock the Notifications











