Bhagyalakshmi: ಅಡುಗೆ ಮನೆಯಲ್ಲಿ ತಾಂಡವ್ ಪೇಚಾಟ; ಭಾಗ್ಯ ಕಷ್ಟ ಗೊತ್ತಾಗುತ್ತಾ?
ಭಾಗ್ಯ ಪಡುತ್ತಿದ್ದ ಪಾಡು ತಾಂಡವ್‌ಗೆ ಒಂದೊಂದಾಗಿ ತಿಳಿಯುತ್ತಿದೆ. ಹೌದು ಬೆಳಗ್ಗೆ 4 ಗಂಟೆಗೆ ಕುಸುಮಾ ಬಂದು ತಾಂಡವ್ ರೂಮ್ ಬಾಗಿಲು ತಟ್ಟುತ್ತಾಳೆ. ತಾಂಡವ್ ನಿದ್ದೆ ಕಣ್ಣಿನಲ್ಲಿ ಬಂದು ಬಾಗಿಲು ತೆಗೆದು ನೋಡುತ್ತಾನೆ. ತಾಯಿಯನ್ನು ಕಂಡು ಅಮ್ಮ ಎನು ಇಷ್ಟು ಹೊತ್ತಲ್ಲಿ ಬಾಗಿಲು ಬಡಿಯುತ್ತಿದ್ದೀಯಾ, ಯಾಕೆ ? ಏನಾಯಿತು ಎಂದು ಕೇಳುತ್ತಾನೆ.
ಮುಂಜಾನೆ 4 ಗಂಟೆ ಆಯಿತು. ಇನ್ನೂ ನಿದ್ದೆಯಿಂದ ಏಳುವ ಲಕ್ಷಣಗಳು ಕಾಣುತ್ತಾ ಇಲ್ಲ. ನೀನು ಬೆಳಗ್ಗೆ ತಿಂಡಿ ಮಾಡುವ ಅಂದಾಜಲ್ಲಿ ಇಲ್ಲವೇ ಎಂದು ಕೇಳುತ್ತಾಳೆ. ಅಮ್ಮ ಬೆಳಗ್ಗೆ ಆಗಲಿ ಆ ಬಳಿಕ ಎಲ್ಲಾ ನೋಡಿಕೊಂಡರೆ ಆಯಿತು ಎನ್ನುತ್ತಾನೆ. ಆಗ ಕುಸುಮಾಗೆ ಬಹಳ ಕೋಪ ಬರುತ್ತದೆ. ನನಗೆ ಕೊಂಚ ಬಿಸಿ ನೀರು ಬೇಕು ಎಂದಾಗ ತಾಂಡವ್ ಶಾಕ್ ಆಗುತ್ತಾನೆ. ಈಗ ಬಿಸಿ ನೀರು ಕೇಳುತ್ತಿದ್ದೀಯಾ, ಬೆಳಗ್ಗೆ ಕಾಯಿಸಿಕೊಡುತ್ತೇನೆ ಎಂದಾಗ ಕುಸುಮಾ ಗರಂ ಆಗುತ್ತಾಳೆ.

ಭಾಗ್ಯ ಆದರೆ ಎಲ್ಲಾ ಕೆಲಸ ಮಾಡುತ್ತಾ ಇದ್ದಳು. ಆಕೆಗೆ ಇದು ಯಾವುದನ್ನು ಹೇಳುವ ಅಗತ್ಯ ಇರಲಿಲ್ಲ. ಆದರೆ ಇದೀಗ ಈ ಎಲ್ಲಾ ವಿಚಾರ ಹೇಳುವ ಪ್ರಮೇಯ ಬಂದಿದೆ ಎಂದು ನೊಂದು ಹೇಳುತ್ತಾಳೆ. ಇದನ್ನು ನೋಡಿದ ತಾಂಡವ್ ಸರಿ ನೀರು ಬೇಕು ತಾನೇ ತರುತ್ತೇನೆ ಎಂದು ಅಡುಗೆ ಮನೆಗೆ ಹೋಗಲು ಮುಂದಾದಾಗ ಮಗನನ್ನು ತಡೆಯುತ್ತಾಳೆ.
ಅಡುಗೆ ರೂಮ್ ಗೆ ಹೋಗಲು ತಾಂಡವ್ ನನ್ನು ತಡೆದ ಕುಸುಮಾ?
ಅಡುಗೆ ಮನೆಗೆ ಹೋಗಬೇಕಾದರೆ ಮಡಿಯಿಂದ ಹೋಗಬೇಕು. ಸ್ನಾನ ಮಾಡಿ ಆಮೇಲೆ ಆಡುಗೆ ಕೋಣೆಗೆ ಹೋದರೆ ಚೆನ್ನ ಎಂದು ಕಡ್ಡಿ ಮುರಿದ ಹಾಗೆ ಹೇಳುತ್ತಾಳೆ. ಇದನ್ನು ಕೇಳಿದ ತಾಂಡವ್ ಸುಸ್ತಾಗಿ ಬಿಡುತ್ತಾನೆ. ಏನು ಸ್ನಾನ ಮಾಡಬೇಕಾ ? ಅದು ಇಷ್ಟು ಹೊತ್ತಲ್ಲಿ ಎನ್ನುತ್ತಾನೆ.ಆ ಬಳಿಕ ಸರಿ ಅಮ್ಮ ಎಂದು ಹೇಳಿ ಬಾಗಿಲು ಹಾಕಿಕೊಳ್ಳುತ್ತಾನೆ. ಭಾಗ್ಯಗೆ ಹೀಗೆ ಆಗುತ್ತಿದ್ದದ್ದು ತಾಂಡವ್‌ಗೆ ನೆನಪಾಗುತ್ತದೆ.
ಭಾಗ್ಯಳನ್ನು ಎಚ್ಚರಿಸುತ್ತಿದ್ದ ಅತ್ತೆ
ಭಾಗ್ಯ ಬಾಗಿಲು ತೆಗೆದ ಕೂಡಲೇ ಅತ್ತಿಂದ ಕುಸುಮ , ಏನೇ ಭಾಗ್ಯ ನೀನು ಇವತ್ತು ಐದು ಗಂಟೆ ಆಯಿತು. ಇನ್ನೂ ಎದ್ದೇ ಇಲ್ಲವಲ್ಲೆ? ಯಾಕೆ ಎಂದು ಕೇಳಿದಾಗ ಅಲಾರಂ ಹೊಡಿಲಿಲ್ಲ ಅತ್ತೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕುಸುಮಾ ಸರಿ ನಿನ್ನ ಮಾವನಿಗೇ ನೀರು ಬೇಕಂತೆ ಬೇಗ ಬಿಸಿ ನೀರು ಕಾಯಿಸಿಕೊಡು.. ಹೀಗೆ ಹೋಗಬೇಡ ಸ್ನಾನ ಮಾಡಿ ಆ ಬಳಿಕ ಹೋಗು ಎಂದು ಹೇಳುತ್ತಾಳೆ.

ಭಾಗ್ಯಳನ್ನು ಕಂಡು ಸಿಡುಕುತ್ತಿದ್ದ ತಾಂಡವ್
ಆಗ ಭಾಗ್ಯಗೆ ತಾಂಡವ್ ಬೈಯ್ಯುತ್ತಾನೆ. ಯಾಕೆ ಅಡುಗೆ ಮಾಡಲು ಇಷ್ಟು ಕಷ್ಟನಾ ನಿನಗೆ? ಬೇಗ ಏಳಲು ಏನು ದಾಡಿ ನಿನಗೆ ಎಂದಾಗ ನಿನ್ನೆ ಅಡಿಗೆ ಮನೆಯಲ್ಲಿ ಸ್ವಲ್ಪ ಹೆಚ್ಚು ಕೆಲಸ ಇತ್ತು. ಹಾಗೆ ಮಲಗಬೇಕಾದರೆ ಸ್ವಲ್ಪ ತಡವಾಯಿತು. ಹಾಗಾಗಿ ನಾನು ಇವತ್ತು ಏಳುವುದು ತಡ ಆಯಿತು ಎಂದಾಗ ಕೊಂಚ ಹಗುರವಾಗಿ ಮಾತನಾಡಿರುತ್ತಾನೆ ತಾಂಡವ್. ಇದನ್ನು ನೋಡಿದ ಭಾಗ್ಯ ಬಹಳ ಬೇಸರಗೊಂಡಿರುತ್ತಾಳೆ. ಆದರೆ ಇದೀಗ ಆ ಪರಿಸ್ಥಿತಿ ತಾಂಡವ್‌ಗೆ ಬಂದಿದೆ. ಭಾಗ್ಯ ಕಷ್ಟ ತಾಂಡವ್‌ಗೆ ತಿಳಿಯುತ್ತಿದೆ.
ಮಗನ ಪರ ವಹಿಸದ ಕುಸುಮ
ಇನ್ನೂ ಕುಸುಮಾ ಮಾತ್ರ ಯಾವುದೇ ಕಾರಣಕ್ಕೂ ಮಗನ ಮೇಲೆ ಸಿಂಪಥಿ ತೋರಲು ಹೋಗುವುದು ಇಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ಮಗನ ಮೇಲಿರುವ ಮೋಹ ತೊರೆದು ಹೋಗಿದೆ. ಮಗ ಎಂದರೆ ಕುಸುಮಾಗೆ ಪ್ರಾಣ. ಆದರೆ ಮಗ ಮಾಡಿರುವ ಕೆಲಸಕ್ಕೆ ಆತನನ್ನು ಸುಮ್ಮಗೆ ಬಿಟ್ಟರೆ ಆಗುವುದಿಲ್ಲ ಎಂದುಕೊಂಡು ಇರುತ್ತಾಳೆ. ಸೊಸೆ ಮನೆಗೆ ಬರಬೇಕೆಂದರೆ ಮಗನಿಗೆ ಒಳ್ಳೆಯ ಪಾಠ ಕಲಿಸಬೇಕು. ಹಾಗೆಯೇ ಸೊಸೆ ಪಡುತ್ತಿದ್ದ ಕಷ್ಟ ಆತನಿಗೆ ತಿಳಿಯಬೇಕು ಎನ್ನುವುದು ಆಕೆಯ ಆಸೆ. ಇದಕ್ಕಾಗಿ ಪೂಜಾ ನನ್ನು ಕುಸುಮ ಮನೆಯಲ್ಲಿ ಇರುವಂತೆ ಹೇಳಿದ್ದಿದ್ದು. ತಾಂಡವ್ ಏನೇ ಮಾಡಿದರೂ ಪೂಜಾ ಅದಕ್ಕೆ ಒಂದೊಂದು ಕಾಮೆಂಟ್ ಮಾಡುತ್ತಾ ಇರುತ್ತಾಳೆ.
ಪೂಜಾ ಉದ್ದೇಶ ಒಂದೇ. ಹೇಗಾದರೂ ಮಾಡಿ ಅಕ್ಕನನ್ನು ಈ ಮನೆಗೆ ವಾಪಸ್ ಕರೆಯಿಸಿಕೊಳ್ಳಬೇಕು ಎನ್ನುವುದು. ಇನ್ನೂ ತಾಂಡವ್ ವಿಚಾರದಲ್ಲಿ ಶ್ರೇಷ್ಠ ಬಹಳ ಕೋಪ ಮಾಡಿಕೊಂಡಿದ್ದಾಳೆ. ಇನ್ನು ಡೂಪ್ಲಿಕೇಟ್ ಅತ್ತೆ ಮಾತುಗಳು ಶ್ರೇಷ್ಠಾಗೆ ಒರಟಾಗಿ ಇರುತ್ತದೆ. ಶ್ರೇಷ್ಠಗೆ ಆಕೆಯ ಮಾತುಗಳು ಇಷ್ಟ ಆಗುತ್ತಿಲ್ಲ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











