Bhagyalakshmi: ಕೆಲಸದಾಕೆ ಕಿರಿಕಿರಿ, ಗುಂಡಣ್ಣ ಹಠ; ಭಾಗ್ಯ ನಡೆಯೇನು?

By Poorva

ಭಾಗ್ಯಗೆ ಅತ್ತ ಗಂಡನ ಮನೆಯಲ್ಲಿ ಕೂಡ ನೆಮ್ಮದಿ ಇಲ್ಲ. ಇತ್ತ ತಾಯಿ ಮನೆಯಲ್ಲಿ ಕೂಡ ಅಷ್ಟೊಂದು ಸುಖ ಇಲ್ಲ. ತಾಯಿ ಮನೆಗೆ ಬಂದರೆ ಸಾಕು ಅಕ್ಕ ಪಕ್ಕದವರ ಕೊಂಕು ಮಾತುಗಳಿಗೆ ಬೇಸರ ಬಂದು ಬಿಡುತ್ತದೆ. ಅಕ್ಕ ಪಕ್ಕದ ಮನೆಯವರು ಭಾಗ್ಯ ಯಾವಾಗ ಗಂಡನ ಮನೆಗೆ ಹೋಗುತ್ತಿಯಾ? ಕೇಳುತ್ತಾರೆ.

ಯಾಕೆ ಭಾಗ್ಯ ಇನ್ನೂ ತವರು ಮನೆಯಲ್ಲಿ ಇದ್ದೀಯಾ, ಗಂಡನ ಮನೆಯಲ್ಲಿ ಕಿರಿ ಕಿರಿನಾ? ನಿನಗೂ ನಿನ್ನ ಗಂಡನಿಗೆ ಏನಾದರೂ ಜಗಳ ಆಯ್ತಾ? ಎಂದು ಕೇಳುತ್ತಲೇ ಇರುತ್ತಾರೆ. ಇದನ್ನು ನೋಡಿದ ಭಾಗ್ಯ ಮಾತ್ರ ಬೇಸರ ಮಾಡಿಕೊಳ್ಳುತ್ತಾಳೆ.

BhagyaLakshmi kannada serial written 21th February Episode

ಮದುವೆ ಆದ ಬಳಿಕ ತಾಯಿ ಮನೆಗೆ ಬಂದು ಎರಡು ದಿನ ಕೂರುವುದೇ ಬಹಳ ದೊಡ್ಡ ತಪ್ಪಾ. ಯಾಕೆ ತನ್ನ ತವರು ಮನೆಯಲ್ಲಿ ನಾನು ಇರಬಾರದಾ ಎಂದು ಪ್ರಶ್ನೆ ಮಾಡುತ್ತಾಳೆ. ಒಂದು ವಾರ ತಾಯಿ ಮನೆಯಲ್ಲಿ ಇದ್ದರೆ, ನಿಮಗೆ ಏನಾದರೂ ಕಷ್ಟನಾ ಎಂದು ಹೇಳಿದಾಗ ಅಕ್ಕಪಕ್ಕದ ಮನೆಯವರು ಒಂದು ಮಾತು ಬಾಯಿ ಮುಚ್ಚಿ ಅಲ್ಲಿಂದ ಹೋಗುತ್ತಾರೆ.

ಇನ್ನು ತಾಂಡವನ ಮನೆಗೆ ಹೊಸ ಅಡುಗೆ ಕೆಲಸದವಳು ಬಂದಿದ್ದಾಳೆ. ಆಕೆಯ ಆಟ ನೋಡಿದ ಕುಸುಮಾಗೆ ಬಹಳ ಕಿರಿ ಕಿರಿ ಆಗುತ್ತದೆ. ಆದರೆ ಕುಸುಮಾಗೆ ಒಂದು ಗ್ಯಾರಂಟಿ ಇತ್ತು. ನಾನು ಮಾತ್ರ ಈಕೆಯನ್ನು ತುಂಬಾ ದಿನ ಇಲ್ಲಿ ಇರಲು ಬಿಡುವುದು ಇಲ್ಲ ಎನ್ನುವುದು.

ಮನೆಯವರಿಗೆ ಎಲ್ಲಾ ತಿಂಡಿ ಮಾಡಿ ಬಿಡುತ್ತಾಳೆ ಮನೆ ಕೆಲಸದಾಕೆ. ಆ ಬಳಿಕ ತಾಂಡವ್ ಕೆಲಸದಾಕೆಯ ಬಳಿ ಬಂದು ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡು ಎಂದಾಗ ಅದಕ್ಕೂ ಹಣ ಕೊಡಬೇಕಾಗುತ್ತದೆ. ನಾನು ಅಡುಗೆ ಕೆಲಸ ಮಾಡಲು ಇಲ್ಲಿಗೆ ಬಂದಿರುವುದು ಎಂದು ಹೇಳುತ್ತಾಳೆ . ಇದನ್ನು ಕೇಳಿದ ತಾಂಡವ್ ಸರಿ ಆಯಿತು ಎಂದೂ ಹೇಳುತ್ತಾನೆ. ಆ ಬಳಿಕ ಗುಂಡ ಹಾಗೂ ತನ್ವಿ ಸ್ಕೂಲ್‌ಗೆ ಹೊರಡುತ್ತಾಳೆ. ಎಲ್ಲರೂ ತಿಂಡಿ ಮಾಡಲು ಡೈನಿಂಗ್ ರೂಮ್‌ಗೆ ಬರುತ್ತಾರೆ.

BhagyaLakshmi kannada serial written 21th February Episode

ಕೆಲಸದಾಕೆಯ ಮಾತಿಗೆ ಕುಸುಮಾ ಗರಂ

ಕೆಲಸದಾಕೆ ಎರಡೆರಡು ಇಡ್ಲಿ ಮಾತ್ರ ಮಾಡಿರುತ್ತಾಳೆ. ಆದರೆ ಗುಂಡಣ್ಣಗೆ ಕೊಂಚ ಹಸಿವು ಜಾಸ್ತಿ. ಆತ ಇನ್ನೊಂದು ಇಡ್ಲಿ ಕೇಳಿದಾಗ ಇಡ್ಲಿ ಎಲ್ಲಾ ಖಾಲಿ ನಾನು ಜಾಸ್ತಿ ಇಡ್ಲಿ ಮಾಡಿಲ್ಲ ಎಂದು ಹೇಳುತ್ತಾಳೆ. ಬಳಿಕ ನಾನು ಈ ಮನೆಯ ಕೆಲಸ ಮುಗಿಸಿ ಆಯಿತು. ಇನ್ನೂ ಬೇರೆ ಮನೆಯಲ್ಲಿ ನನಗೆ ಕೆಲಸ ಇದೆ. ನಾಳೆ ಸಿಗುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ.. ಆದರೆ ಆಕೆಯ ಈ ನಡೆಯ ಬಗ್ಗೆ ಕುಸುಮಾಗೆ ಬಹಳ ಕೋಪ ಬರುತ್ತದೆ. ಇನ್ನು ಗುಂಡಣ್ಣ ಮಾತ್ರ ಬಹಳ ಬೇಸರದಿಂದ ಭಾಗ್ಯಗೆ ಕರೆ ಮಾಡುತ್ತಾನೆ.

ಮಗನ ಧ್ವನಿ ಕೇಳಿ ಖುಷಿ ಪಟ್ಟ ಭಾಗ್ಯ

ಭಾಗ್ಯ ಕರೆ ಸ್ವೀಕರಿಸಿ ಮಾತನಾಡಿದಾಗ ಗುಂಡಣ್ಣನ ಧ್ವನಿ ಕೇಳಿ ಮತ್ತಷ್ಟು ಖುಷಿ ಆಗುತ್ತದೆ. ಆದರೆ ಅತ್ತ ಕಡೆಯಿಂದ ಗುಂಡ ಅಳುತ್ತಾ ಇರುತ್ತಾನೆ. ಅಮ್ಮ ನೀನು ಎಷ್ಟೊತ್ತಿಗೆ ಬರುತ್ತೀಯಾ ಎಂದು ನಾನು ಕಾಯುತ್ತಿದ್ದೇನೆ. ನನಗೆ ಇಲ್ಲಿ ಬಹಳ ಬೇಸರ ಆಗಿದೆ. ನನಗೆ ಇಲ್ಲಿ ಇಡ್ಲಿ ಕೂಡ ಕೊಡುತ್ತಿಲ್ಲ ಎಂದು ಮನೆ ಕೆಲಸದಾಕೆ ಹೇಳಿದ ಮಾತನ್ನು ಆಕೆಯ ಮುಂದೆ ಹೇಳುತ್ತಾನೆ. ಇದನ್ನು ಕೇಳಿದ ಭಾಗ್ಯಗೆ ಅಯ್ಯೋ ಅನ್ನಿಸದೇ ಇರದು.

ಮೌನಕ್ಕೆ ಜಾರಿದ ಭಾಗ್ಯ

ಗುಂಡಣ್ಣ ಮಾತ್ರ ಅಮ್ಮ ಮನೆಗೆ ಯಾವಾಗ ಬರುತ್ತೀಯಾ? ನೀನು ಯಾಕೆ ಅಜ್ಜಿ ಮನೆಗೆ ಹೋಗಿದ್ದಿಯಾ? ನೀನು ಇಲ್ಲದೇ ನನ್ನಿಂದ ಇರಲು ಸಾಧ್ಯ ಇಲ್ಲ. ದಯವಿಟ್ಟು ಈಗಲೇ ಮನೆಗೆ ಬಾ ಎಂದು ಹೇಳುತ್ತಾನೆ. ಆದರೆ ಗುಂಡಣ್ಣನನ್ನು ಸಮಾಧಾನ ಮಾಡಲು ಬಹಳ ಪೇಚಾಡುತ್ತಾಳೆ. ಮಾತನಾಡಲು ಸಾಧ್ಯವಾಗದೇ ಬೇಸರದಿಂದ ಗುಂಡಣ್ಣ ದಯವಿಟ್ಟು ನೀನು ಒಂದು ವಾರ ಅಡ್ಜಸ್ಟ್ ಮಾಡಿಕೊ ಎನ್ನುತ್ತಾಳೆ. ಗುಂಡಣ್ಣ ಬಹಳ ಕೋಪದಿಂದ ನೀನು ಬರುವವರೆಗೆ ಊಟ ತಿಂಡಿ ಏನು ಬೇಡ ಎಂದು ಕರೆ ಕಟ್ ಮಾಡುತ್ತಾನೆ. ಭಾಗ್ಯಗೆ ಏನು ಮಾಡಬೇಕು ಎಂದು ತಿಳಿಯದೇ ಶಾಕ್‌ನಲ್ಲಿ ಇರುತ್ತಾಳೆ.

More from Filmibeat

English summary
BhagyaLakshmi kannada serial today episode upadate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X