Bhagyalakshmi: ಭಾಗ್ಯ- ತಾಂಡವ್‌ಗೆ ಮತ್ತೆ ಮದುವೆ ಮಾಡಲು ಹೊರಟ ಮಕ್ಕಳು; ಹೆತ್ತವರು ಒಂದಾಗುತ್ತಾರಾ?
ಭಾಗ್ಯ ಹಾಗೂ ತಾಂಡವ್ ಮಕ್ಕಳ ದೆಸೆಯಿಂದಾಗಿ ಇಬ್ಬರು ಒಂದಾಗಿ ಜೀವನ ನಡೆಸುವಂತೆ ಆಗಿದೆ. ವಿಚ್ಛೇದನ ತನಕ ತಾಂಡವ್ ಮುಂದುವರೆದು ಇರುತ್ತಾನೆ. ತಾಂಡವ್‌ಗೆ ತನ್ನ ಹೆಂಡತಿಗಿಂತ ಶ್ರೇಷ್ಠಾನೇ ಮುಖ್ಯ ಆಗಿ ಬಿಟ್ಟಳು. ಶ್ರೇಷ್ಠ ಇಲ್ಲದೇ ಬಿಟ್ಟಿರಲು ಆತನಿಂದ ಸಾಧ್ಯ ಆಗುತ್ತಿರಲಿಲ್ಲ. ಇದೀಗ ಮಕ್ಕಳಿಗೋಸ್ಕರ ತಾಂಡವ್, ಶ್ರೇಷ್ಠಳಿಂದ ಕೊಂಚ ದೂರ ಉಳಿದಿದ್ದಾನೆ.
ತಾಂಡವ್ ಎಲ್ಲೇ ಹೋದರೂ ಶ್ರೇಷ್ಠ ಹುಡುಕಿಕೊಂಡು ಬರುತ್ತಾಳೆ. ಈ ವಿಚಾರ ಸುನಂದಾಗೆ ಮಾತ್ರ ಬಹಳ ಕೋಪ ತರುತ್ತದೆ. ಈಗಾಗಲೇ ಅನೇಕ ಸಾರಿ ತಾಂಡವ್ ಜೊತೆಯಲ್ಲಿ ಇರಬಾರದೆಂದು ತಾಕೀತು ಬೇರೆ ಮಾಡಿದ್ದಳು. ಆದರೆ ಆಕೆಗೆ ಅದೆಲ್ಲ ನಾಟುತ್ತಿರಲಿಲ್ಲ. ಆಕೆಯ ಗುರಿ ಒಂದೇ ತಾಂಡವ್‌ನನ್ನು ಹೇಗಾದರೂ ನಾನು ಪಡೆದುಕೊಳ್ಳಲೆಬೇಕು.

ಹೇಗಾದರೂ ಮಾಡಿ ತಾಂಡವ್‌ನ ತನ್ನವನಾಗಿ ಮಾಡಿಕೊಳ್ಳುವುದು ಶ್ರೇಷ್ಠ ಆಲೋಚನೆ. ತಾಂಡವ್ ಹಾಗೂ ಭಾಗ್ಯ ಮಕ್ಕಳ ಜೊತೆ ಇದೀಗ ಖುಷಿಯಲ್ಲಿ ಕಾಲ ಕಳೆಯುತ್ತಾ ಇರುತ್ತಾರೆ. ತಾಂಡವ್, ಶ್ರೇಷ್ಠ ಮಾತು ಕೇಳಿ ಮಕ್ಕಳಿಗೆ ಕೊಂಚ ನಿರಾಸೆ ಮಾಡಲು ಹೊರಟಿರುತ್ತಾನೆ. ಆದರೆ ಆತನ ಮಕ್ಕಳು ಮಾತ್ರ ಅದಕ್ಕೆಲ್ಲ ಅವಕಾಶ ಕೊಡುವುದೇ ಇಲ್ಲ. ತಾಂಡವ್ ಏನೇ ನೆಪ ಹೇಳಿದರು ಅದಕ್ಕೆಲ್ಲ ಒಂದಲ್ಲ ಒಂದು ಸಬೂಬು ಹೇಳಿ ಗುಂಡಣ್ಣ ತಂದೆಯ ಬಾಯಿ ಮುಚ್ಚಿಸಿ ಬಿಡುತ್ತಾನೆ .
ಏನೇ ಮಾಡಿದರೂ ಮಕ್ಕಳ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ತಾಂಡವ್‌ಗೆ ಗೊತ್ತಾಗಿದೆ. ಆದರೂ ಮಾತಿಗೆ ಮಾತು ಬೆಳೆಸದೇ ಮಕ್ಕಳ ಆಸೆಗೆ ತಣ್ಣೀರು ಎರಚದೆ, ಎಲ್ಲದಕ್ಕೂ ಒಪ್ಪಿಗೆ ಕೊಟ್ಟು ಹೊರಗಡೆ ಕರೆದುಕೊಂಡು ಹೋಗಿ ಸುತ್ತಾಡಿಸುತ್ತಾನೆ. ಆ ದಿನ ಮಕ್ಕಳ ಮೊಗದಲ್ಲಿ ಬಹಳ ಖುಷಿ ಮೂಡಿ ಇರುತ್ತದೆ. ತನ್ನ ತಂದೆ ತಾಯಿ ಇಬ್ಬರೂ ವಿಚ್ಛೇದನ ತನಕ ಹೋಗಿದ್ದರು ಆದರೆ ಇದೀಗ ಎಲ್ಲಾ ಸರಿ ಹೋಯಿತಲ್ಲ ಎಂದು ಖುಷಿ ಪಡುತ್ತಾ ಇದ್ದರು.
ತಾಂಡವನ ಮನದಲ್ಲಿ ನೂರೆಂಟು ಪ್ರಶ್ನೆ
ತಾಂಡವ್ ಮನದಲ್ಲಿ ಮಾತ್ರ ಏನೇನೋ ಪ್ರಶ್ನೆಗಳು , ಆತ ಕೂಡ ಏನು ಮಾಡಬೇಕು ಎಂದು ತೋಚದೇ ಸುಮ್ಮನೆ ಇರುತ್ತಾನೆ. ಇದನ್ನೆಲ್ಲ ನೋಡಿದ ಶ್ರೇಷ್ಠಗೆ ಮಾತ್ರ ಬಹಳ ಕೋಪ ಬರುತ್ತದೆ. ತಾಂಡವ್ ನನ್ನ ಜೊತೆ ನನ್ನ ಮನೆಯಲ್ಲಿ ಇರುತ್ತಾನೆ ಎಂದುಕೊಂಡರೆ ಈ ರೀತಿ ಭಾಗ್ಯ ಹಾಗೂ ಆಕೆಯ ಮಕ್ಕಳನ್ನು ಕರೆದುಕೊಂಡು ಎಲ್ಲೆಲ್ಲೂ ಸುತ್ತುತ್ತಾ ಇದ್ದಾನಲ್ಲ ಎಂದು ಕೋಪದಲ್ಲಿ ಇರುತ್ತಾಳೆ.

ಮಕ್ಕಳ ನಿರ್ಧಾರ ಕೇಳಿ ದಂಗಾದ ತಾಂಡವ್
ಗುಂಡಣ್ಣ ಹಾಗೂ ತನ್ವಿ ತಂದೆ ತಾಯಿಗೆ ಇನ್ನೊಮ್ಮೆ ಮದುವೆ ಮಾಡಬೇಕು ಎಂದು ಆಲೋಚನೆ ಮಾಡುತ್ತಾರೆ. ಇದನ್ನು ತಂದೆ ತಾಯಿ ಬಳಿ ಪ್ರಸ್ತಾಪ ಮಾಡುತ್ತಾರೆ. ಆಗ ತಾಂಡವ್‌ಗೆ ಏನು ಮಾಡಬೇಕು ಎಂದು ತಿಳಿಯದಂತಾಗುತ್ತದೆ. ಕೊನೆಗೆ ಒಪ್ಪಿಕೊಳ್ಳುತ್ತಾನೆ. ಇದನ್ನೆಲ್ಲ ನೋಡಿದ ಸುನಂದಾ ಮಾತ್ರ ಕುಸುಮಾ ಜೊತೆ ಬಹಳ ಜೋರಾಗಿ ಅಳುತ್ತಾಳೆ. ನನ್ನ ಮಗಳ ಜೀವನ ನೋಡಿ ನಾನು ಅದೆಷ್ಟೋ ಕಣ್ಣೀರು ಹಾಕಿಬಿಟ್ಟೆ, ನಾನು ಎಷ್ಟೇ ಕೆಟ್ಟವಳು ಇದ್ದರೂ ಮಗಳ ವಿಚಾರದಲ್ಲಿ ಮಾತ್ರ ನಾನು ಯಾವತ್ತೂ ಕೆಟ್ಟದ್ದನ್ನು ಬಯಸಿ ಇರಲಿಲ್ಲ ಎನ್ನುತ್ತಾಳೆ.
ಮನದ ನೋವು ಹೊರ ಹಾಕಿದ ಸುನಂದಾ
ಮಗಳು ಚೆನ್ನಾಗಿರಬೇಕು ಎನ್ನುವುದು ನನ್ನ ಆಸೆ. ಆದರೆ ಇದೀಗ ನನ್ನ ಮಗಳ ಜೀವನ ಸರಿ ಹೋಗುತ್ತಿದೆ. ನನಗೆ ಅದೇ ಖುಷಿ ಎಂದು ಹೇಳುತ್ತ ಇರುವಾಗಲೇ ಮೆಟ್ಟಿಲ ಬಳಿ ಬಂದು ನಿಂತ ಶ್ರೇಷ್ಠಗೆ ಬಹಳ ಕೋಪ ಬರುತ್ತದೆ. ಹಾಗೆಯೇ ತೋರಣ ಹಾಗೂ ಹೂವನ್ನು ಕಿತ್ತು ಹಾಕುತ್ತಾಳೆ. ಇದನ್ನು ನೋಡಿದ ಸುನಂದಾ ಬಹಳ ಕೋಪದಿಂದ ಇರುತ್ತಾಳೆ. ಹಾಗೆಯೇ ಆಕೆಯ ಜೊತೆ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾರೆ.
ಕುಸುಮಾ ಮಾತಿಗೆ ಶೇಷ್ಠಾ ಶಾಕ್
ಶ್ರೇಷ್ಠ ಬಳಿ ಹೋಗಿ ಕುಸುಮಾ ಆಕೆಗೆ ಹೂವು ಹಾಗೂ ಮಾವಿನ ಮರದ ಎಲೆ ಕೊಟ್ಟು ಇದನ್ನು ಜೋಡಿಸಿ ಮೇಲೆ ಕಟ್ಟಿ ಬಲಗಾಲಿಟ್ಟು ಒಳಗಡೆ ಬರಬಹುದು. ಅಲ್ಲಿತನಕ ಮನೆಯ ಒಳಗೆ ಬರಬೇಡ ಎಂದು ಹೊರಗೆ ಕಳುಹಿಸುತ್ತಾಳೆ.


Click it and Unblock the Notifications











